Ashika Rangnath: ಪಟಾಕಿ ಪೋರಿಯ ಜಬರ್ದಸ್ತ್‌ ವರ್ಕೌಟ್: ವೈರಲ್‌ ವಿಡಿಯೋ!

Ashika Rangnath Workout: ಸ್ಯಾಂಡಲ್‌ವುಡ್‌ ಪಟಾಕಿ ಪೋರಿ ನಟಿ ಆಶಿಕಾ ರಂಗನಾಥ್‌ ಜಿಮ್‌ನಲ್ಲಿ ವರ್ಕೌಟ್‌ ಮಾಡುತ್ತಿರುವ ವಿಡಿಯೋ ಸೋಷಿಯಲ್‌ ಮಿಡಿಯಾದಲ್ಲಿ ವೈರಲ್‌ ಆಗಿದೆ. ಈಕೆಯ ಈ ವಿಡಿಯೋಗೆ ನೆಟ್ಟಿಗರ ಗಮನ ಸೆಳೆಯುವುದರ ಜೊತೆಗೆ ಮೆಚ್ಚುಗೆಯನ್ನು ಪಡೆದುಕೊಂಡಿದ್ದಾರೆ.  

Written by - Zee Kannada News Desk | Last Updated : Feb 22, 2024, 09:45 AM IST
  • ಅಶಿಕಾ ತಮ್ಮ ಫಿಟ್‌ನೆಸ್‌ ಕಪಾಡಿಕೊಳ್ಳಲು ಪ್ರತಿನಿತ್ಯ ವರ್ಕೌಟ್ ಮಾಡ್ತಾರೆ.
  • ನಟಿ ಅಶಿಕಾ ವರ್ಕೌಟ್‌ ಮಾಡುತ್ತಿರುವ ವಿಡಿಯೋ ನೋಡಿದರೇ ಈಕೆ ಹೆವಿ ವರ್ಕೌಟ್ ಮಾಡಿದರೆ ಸುಸ್ತು ಆಗೋದಿಲ್ವ ಅನ್ನೋ ರೀತಿ ಕಾಣುತ್ತಾರೆ.
  • ನಟಿ ಅಶಿಕಾ ರಂಗನಾಥ್‌ ಈಕೆ ಒಳ್ಳೆಯ ನಟಿ ಮಾತ್ರವಲ್ಲದೇ ಒಳ್ಳೆ ಡ್ಯಾನ್ಸರ್ ಕೂಡು ಹೌದು.
Ashika Rangnath: ಪಟಾಕಿ ಪೋರಿಯ ಜಬರ್ದಸ್ತ್‌ ವರ್ಕೌಟ್: ವೈರಲ್‌ ವಿಡಿಯೋ! title=

Ashika Rangnath Workout Video Viral: ಚಂದನವನದಲ್ಲಿ ಚುಟು ಚುಟು ಸಾಂಗ್‌ ಮೂಲಕ ಕನ್ನಡಿಗರ ಮನವೊಲಿಸಿಕೊಂಡ ನಟಿ ಆಶಿಕಾ ರಂಗನಾಥ್ ಸಖತ್ ಫಿಟ್‌ನೆಸ್‌ ಫ್ರೀಕ್‌. ಈ ಬೆಡಗಿ ಎಂತಹದ್ದೇ ಪಾತ್ರವನ್ನು ಕೊಟ್ಟರೂ ಅಚ್ಚುಕಟ್ಟಾ ನಿರ್ವಹಿಸುತ್ತಾರೆ. ಅಶಿಕಾ  ತಮ್ಮ ಫಿಟ್‌ನೆಸ್‌ ಕಪಾಡಿಕೊಳ್ಳಲು ಪ್ರತಿನಿತ್ಯ  ವರ್ಕೌಟ್ ಮಾಡ್ತಾರೆ. ಈಕೆ ತನ್ನ ಜಿಮ್‌ ಇನ್‌ಸ್ಟ್ರಕ್ಟರ್‌ ಯಾವ ರೀತಿ ಸೂಚನೆ ನೀಡುತ್ತಾರೋ ಹಾಗೇನೆ ವೇಟ್ ಲಿಫ್ಟ್ , ಜಾಕ್ ಮತ್ತು ಸ್ಕಾಡ್ ಹೊಡೆಯುತ್ತಾರೆ.

ಇದಕ್ಕೆ ಸಾಕ್ಷಿಯಾಗಿ ನಟಿ ಅಶಿಕಾ ರಂಗನಾಥ್‌ ಇತ್ತೀಚೆಗೆ ಸೋಷಿಯಲ್‌ ಮಿಡಿಯಾದಲ್ಲಿ ಶೇರ್‌ ಮಾಡಿರುವ ವರ್ಕೌಟ್ ವಿಡಿಯೋ ಸಖತ್‌ ವೈರಲ್‌ ಆಗಿರುವುದು. ನಟಿ ಅಶಿಕಾ ವರ್ಕೌಟ್‌ ಮಾಡುತ್ತಿರುವ ವಿಡಿಯೋ ನೋಡಿದರೇ ಈಕೆ ಹೆವಿ ವರ್ಕೌಟ್ ಮಾಡಿದರೆ ಸುಸ್ತು ಆಗೋದಿಲ್ವ ಅನ್ನೋ ರೀತಿ ಕಾಣುತ್ತಾರೆ. ಆದರೆ ಈ ನಟಿ ವರ್ಕೌಟ್‌ ಮಾಡಿ ಸುಸ್ತಾದಾಗ ಮೊದಲು ಸ್ವಲ್ಪ ಹೊತ್ತು ರೆಸ್ಟ್ ತೆಗೆದುಕೊಂಡು, ಬಳಿಕ ಒಂದು ಎಳೆ ನೀರು ಕುಡಿಯುತ್ತಾರೆ. ತದನಂತರ ಮತ್ತೆ ವರ್ಕೌಟ್‌ ಪ್ರಾರಂಭಿಸುತ್ತಾರೆ.

 
 
 
 

 
 
 
 
 
 
 
 
 
 
 

A post shared by Ashika Ranganath (@ashika_rangnath)

ಇದನ್ನೂ ಓದಿ: Ashika Ranganath : 'ನಾ ಸಾಮಿ ರಂಗಾ ' ಚಿತ್ರದ ವರಲಕ್ಷ್ಮೀ ಲುಕ್ : ಫೋಟೋಸ್ ಇಲ್ಲಿವೆ ನೋಡಿ

ನಟಿ ಅಶಿಕಾ ರಂಗನಾಥ್‌ ಈಕೆ ಒಳ್ಳೆಯ ನಟಿ ಮಾತ್ರವಲ್ಲದೇ ಒಳ್ಳೆ ಡ್ಯಾನ್ಸರ್ ಕೂಡು ಹೌದು. ಈ ನಟಿ ವರ್ಕೌಟ್ ಜೊತೆಗೆ ಆಗಾಗಾ ಡ್ಯಾನ್ಸ್‌ ಪ್ರ್ಯಾಕ್ಟೀಸ್ ಕೂಡ ಮಾಡುತ್ತಿರುತ್ತಾರೆ. ಅಶಿಕಾ ಚಿತ್ರರಂಗಕ್ಕೆ ನಟಿಯಾಗಿ ಪದಾರ್ಪಣೆ ಮಾಡುವು ಮೊದಲು ಈಕೆ ಒಳ್ಳೆಯ ಡ್ಯಾನ್ಸರ್‌ ಆಗಿದ್ದು, ಹಲವಾರು ಶೋಗಳಲ್ಲಿ ನೃತ್ಯ ಮಾಡಿದ್ದಾರೆ. ಈ ನಟಿ ಜಿಮ್‌, ಡ್ಯಾನ್ಸ್‌ ಅಂತ ಪ್ರತಿದಿನ ಅಭ್ಯಾಸ ಮಾಡುತ್ತಿರುವುದರಿಂದ ಫಿಟ್ ಆ್ಯಂಡ್ ಫೈನ್ ಆಗಿಯೇ ಕಾಣಿಸುತ್ತಾರೆ.

ಅಶಿಕಾ ರಂಗನಾಥ್‌ ಹೀಗೆ ನಿತ್ಯವೂ ಸಿನಿಮಾಗಳ ಮಧ್ಯೆ ವರ್ಕೌಟ್‌ಗೂ ಕೂಡ ತಮ್ಮ ಸಮಯವನ್ನು ಮೀಸಲಿಡುತ್ತಾರೆ. ಹಾಗೆಯೇ ಸಖತ್ ಹಾರ್ಡ್ ಅನ್ಸೋ ತರಹ ಕಸರತ್ತು ಮಾಡಿ ತಮ್ಮ ದೇಹವನ್ನು ತುಂಬಾ  ಗಟ್ಟಿಮುಟ್ಟಾಗಿ ಇಟ್ಟುಕೊಂಡಿದ್ದಾರೆ. ಸದ್ಯ ಈ ವಿಡಿಯೋ ಸೋಷಿಯಲ್‌ ಮಿಡಯಾದಲ್ಲಿ ವೈರಲ್‌ ಆಗುವುದರ ಜೊತೆಗೆ ಸಿಕ್ಕಾಪಟ್ಟೆ ನೆಟ್ಟಿಗರ ಗಮನ ಸೆಳೆದಿದೆ. ಇನ್ನೂ ಹೇಳುವುದಾದರೇ ಈ ನಟಿಯ ವರ್ಕೌಟ್‌ ವಿಡಿಯೋ ಇತರರಿಗೂ ಫಿಟ್‌ನೆಸ್‌ ಮೇನ್‌ಟೇನ್‌ ಮಾಡಲು ಸ್ಪೂರ್ತಿದಾಯಕವಾಗಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News