Samantha:"ಉ ಅಂಟಾವಾ ಮಾವ..ಡ್ಯಾನ್ಸ್‌ ಮಾಡುವಾಗ ಕಂಫರ್ಟಬಲ್​ ಆಗಿರಲಿಲ್ಲ": ಸ್ಯಾಮ್‌ ಹೀಗಂದಿದ್ಯೇಕೆ?

Samantha Shares About Item Song: ದಕ್ಷಿಣ ಚಿತ್ರರಂಗದ ನಟಿ ಸಮಂತಾ ರುತ್‌ ಪ್ರಭು ಪುಷ್ಪ ಚಿತ್ರದ ‘ಉ ಅಂಟಾವಾ ಮಾವ..’ ಐಟಂ ಹಾಡಿಗೆ ಡ್ಯಾನ್ಸ್‌ ನಾಡುವಾಗ ಕಂಫರ್ಟಬಲ್‌ ಆಗಿರಲಿಲ್ಲವೆಂದು ಹೇಳಿದ್ದಾರೆ. ಹಾಗಾದೇ ಈ ನಟಿ ಹಿಂಗಂದಿದ್ಯಾಕೆ? ಅಲ್ಲಿ ನಡೆದಿದ್ದಾದರೂ ಏನು? ಇಲ್ಲಿದೆ ಸಂಪೂರ್ಣ ವಿವರ.  

Written by - Zee Kannada News Desk | Last Updated : Mar 18, 2024, 12:34 PM IST
  • 2021 ರಲ್ಲಿ ತೆರೆಕಂಡ ‘ಪುಷ್ಪ’ ಸಿನಿಮಾದಲ್ಲಿನ ‘ಉ ಅಂಟಾವಾ ಮಾವ..’ ಸಾಂಗ್‌ಗೆ ಕುಣಿದ ರೀತಿ ನೋಡಿದ ಸಿನಿಪ್ರಿಯರು ಅಚ್ಚರಿ ವ್ಯಕ್ತಪಡಿಸಿದ್ದರು.
  • ಬಹುಭಾಷಾ ನಟಿ ಸಮಂತಾ ರುತ್‌ ಇದೀಗ ‘ಉ ಅಂಟಾವಾ ಮಾವ..’ ಸಾಂಗ್‌ ಶೂಟಿಂಗ್​ ಸಂದರ್ಭ ತಾವು ಕಂಫರ್ಟಬಲ್​ ಆಗಿರಲಿಲ್ಲ ಎಂದು ಹೇಳಿದ್ದಾರೆ.
  • ಸಮಂತಾ ರುತ್‌ ಅಷ್ಟೇ ಅಲ್ಲದೇ ಈ ಸಾಂಗ್‌ನಲ್ಲಿ ಕುಣಿಯುವುದು ಅಷ್ಟು ಸುಲಭವಾಗಿರಲಿಲ್ಲ ಎಂದಿದ್ದಾರೆ.
Samantha:"ಉ ಅಂಟಾವಾ ಮಾವ..ಡ್ಯಾನ್ಸ್‌ ಮಾಡುವಾಗ ಕಂಫರ್ಟಬಲ್​ ಆಗಿರಲಿಲ್ಲ": ಸ್ಯಾಮ್‌ ಹೀಗಂದಿದ್ಯೇಕೆ? title=

Samantha Shares About Item Song In Pushpa: ಸೌತ್‌ ಸಿನಿರಂಗದ ಬಹುಬೇಡಿಕೆ ನಟಿ ಸಮಂತಾ ರುತ್​ ಪ್ರಭು ಹೀರೋಯಿನ್​ ಆಗಿ ಮಾತ್ರಲ್ಲದೇ ಐಟಂ ಹಾಡಿಗೆ ಡ್ಯಾನ್ಸ್‌ ಮಾಡುವುದರ ಮೂಲಕ ಪ್ರೇಕ್ಷಕರನ್ನು ರಂಜಿಸಿದ್ದಾರೆ. 2021 ರಲ್ಲಿ ತೆರೆಕಂಡ ‘ಪುಷ್ಪ’ ಸಿನಿಮಾದಲ್ಲಿನ ‘ಉ ಅಂಟಾವಾ ಮಾವ..’ ಸಾಂಗ್‌ಗೆ ಕುಣಿದ ರೀತಿ ನೋಡಿದ ಸಿನಿಪ್ರಿಯರು ಅಚ್ಚರಿ ವ್ಯಕ್ತಪಡಿಸಿದ್ದರು. ಈ ಹಾಡಿಗೆ ಅಲ್ಲು ಅರ್ಜುನ್​ ಮತ್ತು ಸಮಂತಾ ಮೈ ಚಳಿ ಬಿಟ್ಟು ಡ್ಯಾನ್ಸ್‌ ಮಾಡಿದ್ದರು. 

ಬಹುಭಾಷಾ ನಟಿ ಸಮಂತಾ ರುತ್‌ ಇದೀಗ ‘ಉ ಅಂಟಾವಾ ಮಾವ..’ ಸಾಂಗ್‌ ಶೂಟಿಂಗ್​ ಸಂದರ್ಭ ತಾವು ಕಂಫರ್ಟಬಲ್​ ಆಗಿರಲಿಲ್ಲ ಎಂದು ಹೇಳಿದ್ದಾರೆ. ಈ ಹಾಡಿನ ಚಿತ್ರೀಕರಣ ಹೇಗಿತ್ತೆಂಬುದನ್ನು ಬಾಯಿ ಬಿಟ್ಟಿದ್ದಾರೆ. ನಟಿ ಸಮಂತಾ ತುಂಬಾನೇ ಬೋಲ್ಡ್​ ಆಗಿದ್ದಂತಹ ಈ ಹಾಡನ್ನು ಒಪ್ಪಿಕೊಳ್ಳಲು ಬಹಳ ಯೋಚನೆ ಮಾಡಿದ್ದರು. ಇದಕ್ಕೆ ಕಾರಣ ಈ ನಟಿ ಅವಾಗ ತಾನೇ ನಾಗ ಚೈತನ್ಯ ಜೊತೆ ವಿಚ್ಛೇದನವನ್ನು ಪಡೆದುಕೊಂಡಿದ್ದರು.

ಇದನ್ನೂ ಓದಿ: ಒಂದು ಕಾಲದಲ್ಲಿ ಕಸಗೂಡಿಸುತ್ತಿದ್ದ ಈಕೆ.. ಒಂದೇ ಸಿನಿಮಾದಿಂದ ರಾತ್ರೋ ರಾತ್ರಿ ಸ್ಟಾರ್ ಹೀರೋಯಿನ್!

ನಟಿ ಸಮಂತಾ, "ನನಗೆ ಆ ಹಾಡಿನ ಆಫರ್ ಬಂದಾಗ ನಮ್ಮ ವಿಚ್ಛೇದನದ ಪ್ರಕ್ರಿಯೆ ಅರ್ಧದಲ್ಲಿತ್ತು. ಡಿವೋರ್ಸ್​ ಘೋಷಣೆ ಆದ ತಕ್ಷಣ ಅಂತಹ ಐಟಂ ಡ್ಯಾನ್ಸ್​ ಮಾಡುವುದು ಬೇಡ ಎಂದು ಕುಟುಂಬದವರು, ಆಪ್ತರು ಸಲಹೆ ನೀಡಿದರು. ಸ್ನೇಹಿತರು ಕೂಡ ಹಾಗೆಯೇ ಹೇಳಿದರು. ಆದರೆ ನಾನು ಐಟಂ ಡ್ಯಾನ್ಸ್​ ಮಾಡುವ ನಿರ್ಧಾರ ತೆಗೆದುಕೊಂಡೆ" ಎಂದು ಹೇಳಿದ್ದಾರೆ. ಅಷ್ಟೇ ಅಲ್ಲದೇ ಈ ಸಾಂಗ್‌ನಲ್ಲಿ ಕುಣಿಯುವುದು ಅಷ್ಟು ಸುಲಭವಾಗಿರಲಿಲ್ಲ ಎಂದಿದ್ದಾರೆ. 

ಸಮಂತಾ, "ನನ್ನ ಪಾಲಿಗೆ ಅದು ದೊಡ್ಡ ಸವಾಲಾಗಿತ್ತು. ಉ ಅಂಟಾವ ಹಾಡಿನ ಮೊದಲ ಶಾಟ್​ ತೆಗೆಯುವಾಗ ನಾನು ಭಯದಿಂದ ನಡುಗುತ್ತಿದ್ದೆ. ಯಾಕೆಂದರೆ, ಸೆಕ್ಸಿಯಾಗಿ ಕಾಣುವುದು ನನಗೆ ಹೊಂದುವಂಥದಲ್ಲ. ಆದರೆ ನಾನು ನನ್ನನ್ನು ಕಷ್ಟಕ್ಕೆ ನೂಕಿಕೊಂಡು, ಅದರ ವಿರುದ್ಧ ಹೋರಾಡಿ ಹೊರಬರುವ ವ್ಯಕ್ತಿತ್ವದವಳು" ಎಂದು ಈ ಹಾಡನ್ನು ಸವಾಲಾಗಿ ಸ್ವೀಕರಿಸಿದ್ದಾಗಿ ಹೇಳಿಕೊಂಡಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 

Trending News