ಸಾಯಿ ಪಲ್ಲವಿ ಸ್ಪರ್ಧಿಯಾಗಿದ್ದ ಡ್ಯಾನ್ಸ್‌ ಶೋಗೆ ಸಮಂತಾ ವಿಶೇಷ ಅತಿಥಿ, ನ್ಯಾಚುರಲ್‌ ಬ್ಯೂಟಿ ಹಳೆಯ ವಿಡಿಯೋ ವೈರಲ್!

Sai Pallavi - Samantha Viral Video: ನಟಿ ಸಾಯಿ ಪಲ್ಲವಿ ಮತ್ತು ಸಮಂತಾ ಅವರ ಹಳೆಯ ವಿಡಿಯೋ ಸದ್ಯ ಸಖತ್‌ ವೈರಲ್ ಆಗಿದೆ. 

Written by - Chetana Devarmani | Last Updated : Feb 23, 2024, 04:00 PM IST
  • ನಟಿ ಸಾಯಿ ಪಲ್ಲವಿ ಮತ್ತು ಸಮಂತಾ ಹಳೆಯ ವಿಡಿಯೋ
  • ಸಾಯಿ‌ ಪಲ್ಲವಿ ಡ್ಯಾನ್ಸ್ ಶೋ ವಿಡಿಯೋ ಸಖತ್‌ ವೈರಲ್‌
  • ಡ್ಯಾನ್ಸ್‌ ಶೋಗೆ ಸಮಂತಾ ವಿಶೇಷ ಅತಿಥಿ
ಸಾಯಿ ಪಲ್ಲವಿ ಸ್ಪರ್ಧಿಯಾಗಿದ್ದ ಡ್ಯಾನ್ಸ್‌ ಶೋಗೆ ಸಮಂತಾ ವಿಶೇಷ ಅತಿಥಿ, ನ್ಯಾಚುರಲ್‌ ಬ್ಯೂಟಿ ಹಳೆಯ ವಿಡಿಯೋ ವೈರಲ್!  title=

Sai Pallavi Old Video: ನ್ಯಾಚುರಲ್‌ ಬ್ಯೂಟಿ ಸಾಯಿ ಪಲ್ಲವಿ ಸಿನಿಮಾಗಳಲ್ಲಿ ನಾಯಕಿಯಾಗುವ ಮುನ್ನ ಟಿವಿ ಶೋ, ಸ್ಟೇಜ್ ಶೋಗಳಲ್ಲಿ ಭಾಗವಹಿಸುತ್ತಿದ್ದರು. ಆಗ ತೆಗೆದ ವಿಡಿಯೋ ಕ್ಲಿಪ್‌ ಒಂದು ಈಗ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ. ನೈಸರ್ಗಿಕ ಸೌಂದರ್ಯ ಮತ್ತು ಉತ್ತಮ ನಟನಾ ಕೌಶಲ್ಯವನ್ನು ಹೊಂದಿರುವ ನಟಿ ಸಾಯಿ ಪಲ್ಲವಿ. ಮಲಯಾಳಂ ಚಿತ್ರ ‘ಪ್ರೇಮಂ’ ಮೂಲಕ ಸಿನಿ ಜರ್ನಿ ಶುರುವಾಯಿತು. .

ಸಾಯಿ ಪಲ್ಲವಿ ನಟಿಯಾಗುವ ಮೊದಲು ಹಲವಾರು ಟಿವಿ ಶೋಗಳಲ್ಲಿ ಭಾಗವಹಿಸಿದ್ದಾರೆ. ನೃತ್ಯದಲ್ಲಿ ಹೆಚ್ಚಿನ ಆಸಕ್ತಿ ಹೊಂದಿದ್ದ ಅವರು ಹೆಚ್ಚಾಗಿ ಡ್ಯಾನ್ಸ್‌ ಶೋಗಳಲ್ಲಿ ಭಾಗವಹಿಸುತ್ತಿದ್ದರು. ಕೆಲವು ವರ್ಷಗಳ ಹಿಂದೆ ಪ್ರಸಾರವಾದ ತಮಿಳಿನ ಜನಪ್ರಿಯ ಟಿವಿ ಶೋ ಒಂದರಲ್ಲಿ ಸ್ಪರ್ಧಿಯಾಗಿದ್ದರು.  

ಇದನ್ನೂ ಓದಿ: ಇಂದು ಸಂಜೆ ಖ್ಯಾತ ನಿರೂಪಕಿ ಅನುಶ್ರೀ ಕೊಡಲಿದ್ದಾರೆ Exclusive ಮಾಹಿತಿ... ಮದುವೆನಾ? ಸಿನಿಮಾನಾ? 

ತಮಿಳಿನಲ್ಲಿ ಮಾತ್ರವಲ್ಲದೆ ಇತರ ಭಾಷೆಗಳ ಡ್ಯಾನ್ಸ್‌ ಶೋಗಳಲ್ಲಿಯೂ ಸಾಯಿ ಪಲ್ಲವಿ ಭಾಗವಹಿಸಿದ್ದಾರೆ. ಹಾಗಾಗಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ವೇಳೆ ಸಾಯಿ ಪಲ್ಲವಿಯನ್ನು ನಟಿ ಸಮಂತಾ ಹೊಗಳಿದ ಸಂದರ್ಭದ ಈ ವಿಡಿಯೋ ಸದ್ಯ ಸೋಷಿಯಲ್‌ ಮೀಡಿಯಾದಲ್ಲಿ ಟ್ರೆಂಡಿಂಗ್ ಆಗಿದೆ.

 

 

ಸಾಯಿ ಪಲ್ಲವಿ ಭಾಗವಹಿಸಿದ್ದ ಡ್ಯಾನ್ಸ್ ಶೋಗೆ ವಿಶೇಷ ಅತಿಥಿಯಾಗಿ ಆಗಮಿಸಿದ ಸಮಂತಾ, ನಿಮ್ಮ ಡ್ಯಾನ್ಸ್ ನೋಡಿ ಬೆರಗಾದೆ. ಎಲ್ಲರೂ ನಿಮ್ಮಂತೆ ಸುಂದರವಾಗಿ ಕುಣಿಯಲು ಸಾಧ್ಯವಾದರೆ ತುಂಬಾ ಚೆನ್ನಾಗಿರುತ್ತದೆ ಎಂದು ಹೇಳುತ್ತಾರೆ. ಸಾಯಿ ಪಲ್ಲವಿ ಮುಗುಳ್ನಗುತ್ತಾರೆ ಮತ್ತು ಅವರಿಗೆ ಧನ್ಯವಾದ ತಿಳಿಸುತ್ತಾರೆ. 

ಇದನ್ನೂ ಓದಿ: ಈ ನಟಿ ಮಾಡಿದ ಆ ಒಂದು ತಪ್ಪು ʻಶ್ರೀದೇವಿʼಗೆ ಸ್ಟಾರ್ ಪಟ್ಟ ನೀಡಿತು.!

ಅಂದು ಸಾಯಿ ಪಲ್ಲವಿಯವರ ಡ್ಯಾನ್ಸ್ ಶೋಗೆ ವಿಶೇಷ ಅತಿಥಿಯಾಗಿ ಬಂದಿದ್ದ ಸಮಂತಾ ಈಗ ಅವರಿಗೆ ಸಹನಟಿ. ಸಮಂತಾ ತೆಲುಗು, ಹಿಂದಿ ಮತ್ತು ತಮಿಳು ತ್ರಿಭಾಷಾ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಸಾಯಿ ಪಲ್ಲವಿ ಮಲಯಾಳಂ, ತೆಲುಗು ಮತ್ತು ತಮಿಳು ಭಾಷೆಯ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಸದ್ಯದಲ್ಲೇ ಬಾಲಿವುಡ್‌ಗೆ ಕಾಲಿಡಲಿದ್ದಾರೆ ಎನ್ನಲಾಗಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News