Samantha: ಸಂಭಾವನೆ ದುಪ್ಪಟ್ಟು ಮಾಡಿದ ಸಮಂತಾ.. ಎಷ್ಟು ಕೋಟಿ ಬೇಡಿಕೆ ಇಡ್ತಿದ್ದಾರಂತೆ ಗೊತ್ತಾ?

Samantha Remuneration: ಕೆಲವು ವರ್ಷಗಳ ಹಿಂದೆ ಮಯೋಸಿಟಿಸ್ ನಿಂದ ಬಳಲುತ್ತಿದ್ದ ಸಮಂತಾ ಈಗ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದಾರೆ. ಆದರೆ ಇನ್ನೂ ಯಾವುದೇ ಸಿನಿಮಾ ಶುರು ಮಾಡಿಲ್ಲ.   

Written by - Chetana Devarmani | Last Updated : Mar 21, 2024, 03:16 PM IST
    • ಮಯೋಸಿಟಿಸ್ ನಿಂದ ಚೇತರಿಸಿಕೊಂಡ ಸಮಂತಾ
    • ಚರ್ಚೆ ಹುಟ್ಟುಹಾಕಿದ ಸಮಂತಾ ಸಂಭಾವನೆ ?
    • ಸಂಭಾವನೆ ದುಪ್ಪಟ್ಟು ಮಾಡಿದ ಸಮಂತಾ ?
Samantha: ಸಂಭಾವನೆ ದುಪ್ಪಟ್ಟು ಮಾಡಿದ ಸಮಂತಾ.. ಎಷ್ಟು ಕೋಟಿ ಬೇಡಿಕೆ ಇಡ್ತಿದ್ದಾರಂತೆ ಗೊತ್ತಾ? title=

Samantha Remuneration: ಕೆಲವು ವರ್ಷಗಳ ಹಿಂದೆ ಮಯೋಸಿಟಿಸ್ ನಿಂದ ಬಳಲುತ್ತಿದ್ದ ಸಮಂತಾ ಈಗ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದಾರೆ. ಆದರೆ ಇನ್ನೂ ಯಾವುದೇ ಸಿನಿಮಾ ಶುರು ಮಾಡಿಲ್ಲ. ಪ್ರಸ್ತುತ ಜಾಹೀರಾತುಗಳಲ್ಲಿ ನಿರತರಾಗಿದ್ದಾರೆ. ಮತ್ತೊಂದೆಡೆ ಅವರು ನಟಿಸಿದ ವೆಬ್ ಸರಣಿ ಶೀಘ್ರದಲ್ಲೇ ಬಿಡುಗಡೆಯಾಗಲಿದೆ. ಇದೆಲ್ಲವನ್ನು ಬದಿಗಿಟ್ಟು ಮತ್ತೊಮ್ಮೆ ಸಮಂತಾ ಸಂಭಾವನೆಯ ಟಾಪಿಕ್ ಚರ್ಚೆಯಾಗುತ್ತಿದೆ. ಒಂದೇ ಬಾರಿ ತಮ್ಮ ಸಂಭಾವನೆಯನ್ನು ಸಮಂತಾ ದುಪ್ಪಟ್ಟು ಮಾಡಿದ್ದಾರೆ ಎಂಬ ಮಾತು ಕೇಳಿಬರುತ್ತಿವೆ. 

ಇದನ್ನೂ ಓದಿ: Rajamouli: '28ನೇ ಮಹಡಿಯಲ್ಲಿದ್ದೆವು, ಭೂಮಿ ಕಂಪಿಸತೊಡಗಿತು' - ಜಪಾನ್‌ ಭೂಕಂಪದ ಅನುಭವ ಬಿಚ್ಚಿಟ್ಟ ರಾಜಮೌಳಿ 

ಹತ್ತು ವರ್ಷಕ್ಕೂ ಹೆಚ್ಚು ಕಾಲ ಇಂಡಸ್ಟ್ರಿಯಲ್ಲಿರುವ ಸಮಂತಾ ದಕ್ಷಿಣದ ಬಹುತೇಕ ಎಲ್ಲಾ ಸ್ಟಾರ್ ಹೀರೋಗಳ ಜೊತೆ ನಟಿಸಿದ್ದಾರೆ. 'ಫ್ಯಾಮಿಲಿ ಮ್ಯಾನ್' ವೆಬ್ ಸೀರೀಸ್‌ನಲ್ಲಿ ವಿಲನ್ ಪಾತ್ರದ ಮೂಲಕ ಎಲ್ಲರಿಗೂ ಶಾಕ್ ನೀಡಿದ್ದಾರೆ. ರಾಜ್-ಡಿಕೆ ನಿರ್ದೇಶನದ 'ಸಿಟಾಡೆಲ್' ಭಾರತೀಯ ಆವೃತ್ತಿಯಲ್ಲಿ ಸಮಂತಾ ಪ್ರಮುಖ ಪಾತ್ರವನ್ನು ನಿರ್ವಹಿಸಿದ್ದಾರೆ. ಆದರೆ ಇದಕ್ಕೆ ಅವರು ಪಡೆದ ಸಂಭಾವನೆ ಜನರನ್ನು ಅಚ್ಚರಿಗೊಳಿಸಿದೆ. ಇದಕ್ಕೆ ಸಮಂತಾ ಬರೋಬ್ಬರಿ 10 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರಂತೆ ಎನ್ನಲಾಗಿದೆ. 

ಸಮಂತಾ ಈಗ ಯಾವುದೇ ಚಿತ್ರಗಳನ್ನು ಮಾಡುತ್ತಿಲ್ಲವಾದರೂ, ಅವರು ತಮ್ಮ ಪ್ರತಿ ಹೊಸ ಯೋಜನೆಗೆ 6 ಕೋಟಿ ರೂ.ವರೆಗೆ ಬೇಡಿಕೆಯಿಡುತ್ತಿದ್ದಾರೆ ಎಂಬ ಸುದ್ದಿ ಟಾಲಿವುಡ್‌ ಅಂಗಳದಲ್ಲಿ ಹರಿದಾಡುತ್ತಿದೆ. ಅಲ್ಲದೇ ಪ್ರತಿ ಜಾಹೀರಾತಿಗೆ ಒಂದೂವರೆ ಕೋಟಿ ರೂಪಾಯಿವರೆಗೂ ಸಂಭಾವನೆ ಪಡೆಯುತ್ತಿದ್ದಾರೆ. ಇದು ನಿಜವಾದರೆ ಸಮಂತಾ ಅತಿ ಹೆಚ್ಚು ಸಂಭಾವನೆ ಪಡೆಯುವ ನಾಯಕಿಯರಲ್ಲಿ ಒಬ್ಬರಾಗೋದು ಖಚಿತವಾಗಿದೆ. 

ಇದನ್ನೂ ಓದಿ: Allu Arjun : ಸೌತ್ ಫಿಲ್ಮ್ ಇಂಡಸ್ಟ್ರಿಯಲ್ಲಿ ಹೊಸ ದಾಖಲೆ ಬರೆದ ಅಲ್ಲು ಅರ್ಜುನ್..!‌ 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News