Samantha: ಅಭಿಮಾನಿಗಳ ಜೊತೆ ಸ್ಯಾಮ್‌ ಸಂವಾದ: ಫ್ಯಾನ್ಸ್‌ ಅಭಿಮಾನಕ್ಕೆ ತೆಲೆಬಾಗಿದ ನಟಿ!

Samantha Meet & Greet: ಸೌತ್‌ ಚಿತ್ರರಂಗದ ನಟಿ ಸಮಂತಾ ರುತ್‌ ಪ್ರಭು ಅಭಿಮಾನಿಗಳ ಆಸೆಯಂತೆ ಮೀಟ್‌ ಆಂಡ್‌ ಗ್ರೀಟ್‌ ಕಾರ್ಯಕ್ರಮವನ್ನು ಹಮ್ಮಿಕೊಂಡು ಅಂದು ಫ್ಯಾನ್ಸ್‌ ಜೊತೆಗೆ ಕೆಲ ಕಾಲ ಸಮಯವನ್ನು ಕಳೆದಿದ್ದಾರೆ. ಅಭಿಮಾನಿಗಳ ಅಭಿಮಾನಕ್ಕೆ ಈ ನಟಿ ಭಾವುಕರಾಗಿ ತೆಲೆಬಾಗಿದ್ದಾರೆ.

Written by - Zee Kannada News Desk | Last Updated : Mar 25, 2024, 12:02 PM IST
  • ಸಮಂತಾ ಸಮಸ್ಯೆಗಳನ್ನು ಸಹಿಸಲು ಸಾಧ್ಯವಾದಾಗ ಕಣ್ಣೀರು ಹಾಕಿದಾಗ ಈಕೆಗೆ ಕಣ್ಣೀರಾದ ಅನೇಕ ಅಭಿಮಾನಿಗಳ ಉದಾಹರಣೆ ಇದೆ.
  • ಸಮಂತಾ ಅಭಿಮಾನಿಗಳ ಅಭಿಮಾನದ ಮಾತುಗಳನ್ನ ಕೇಳಿ ಮೊದಲೇ ಭಾವುಕರಾಗಿದ್ದಾರೆ.
  • ಸಮಂತಾ ಹನಿ ಬನಿಯ ವೆಬ್‌ ಸೀರಿಸ್‌ ಪ್ರಚಾರ ಶುರು ಮಾಡುವ ಮೊದಲು ಫ್ಯಾನ್ಸ್‌ ಜೊತೆಗೆ ತಮ್ಮ ಸಮಯವನ್ನು ಕಳೆದಿದ್ದಾರೆ.
Samantha: ಅಭಿಮಾನಿಗಳ ಜೊತೆ ಸ್ಯಾಮ್‌ ಸಂವಾದ: ಫ್ಯಾನ್ಸ್‌  ಅಭಿಮಾನಕ್ಕೆ ತೆಲೆಬಾಗಿದ ನಟಿ! title=

Samantha Interacted With Her Fans: ಸೌತ್‌ ನಟಿ ಸಮಂತಾ ರುತ್‌ ಪ್ರಭು ಎಲ್ಲಾ ಕೆಲಸದ ಒತ್ತಡದ ನಡುವೆಯೇ ಬಿಡುವು ಮಾಡಿಕೊಂಡು ತಮ್ಮ ಅಚ್ಚು ಮೆಚ್ಚಿನ ಅಭಿಮಾನಿಗಳನ್ನು ಭೇಟಿ ಮಾಡಿದ್ದಾರೆ. ಈ ನಟಿ ಮೈಯೋಸಿಟಿಸ್ ಕಾಯಿಲೆ, ನಾಗ ಚೈತನ್ಯ ಜೊತೆಗೆ ವಿಚ್ಚೇದನ, ಹೀಗೆ ವ್ಯೆಯಕ್ತಿಕ ಬದುಕಿನಲ್ಲಿಏರಿಳಿತವಾಗಿದೆ. ಈ ಹಿಂದೆ ಸಮಂತಾ ಸಮಸ್ಯೆಗಳನ್ನು ಸಹಿಸಲು ಸಾಧ್ಯವಾದಾಗ ಕಣ್ಣೀರು ಹಾಕಿದಾಗ ಈಕೆಗೆ ಕಣ್ಣೀರಾದ ಅನೇಕ ಅಭಿಮಾನಿಗಳ  ಉದಾಹರಣೆ ಇದೆ. 

ನಟಿ ಸಮಂತಾ ಅಭಿಮಾನಿಗಳನ್ನು ಭೇಟಿ ಮಾಡಿದಾಗ ಗಂಟೆ ಗಟ್ಟಲೆ ಕುಳಿತು ಹರಟೆ ಹೊಡೆದಿದ್ದಾರೆ. ಈಕೆಯ ಫ್ಯಾನ್ಸ್‌ ಪ್ರೀತಿಯಿಂದ ತಂದಿದ್ದ ಉಡುಗೊರೆಗಳನ್ನ ಸ್ವೀಕರಿಸಿ ಕೇಕ್‌ ಕಟ್‌ ಮಾಡಿ ಸಡಗರ ಪಟ್ಟಿದ್ದಾರೆ. ಸಮಂತಾ ಅಭಿಮಾನಿಗಳ ಅಭಿಮಾನದ ಮಾತುಗಳನ್ನ ಕೇಳಿ ಮೊದಲೇ ಭಾವುಕರಾಗಿದ್ದಾರೆ. ಹಾಗೆಯೇ ಅಲ್ಲಿದ್ದ ಮಹಿಳಾ ಫ್ಯಾನ್‌ ಒಬ್ಬರು ಕೂಡ ಭಾವುಕರಾಗಿದ್ದಾರೆ. ಆಗ ಈ ನಟಿಯನ್ನು ತಬ್ಬಿಕೊಂಡು ಆ ಅಭಿಮಾನಿ ಕಣ್ಣೀರು ಹಾಕಿದ್ದಾರೆ.

ಇದನ್ನೂ ಓದಿ: 19 ನೇ ವಯಸ್ಸಿನಲ್ಲಿ ಮದುವೆ.. ಮದ್ಯವ್ಯಸನಿಯಾಗಿದ್ದ ಪತಿ.. ಇಬ್ಬರು ಹೆಣ್ಣುಮಕ್ಕಳ ತಾಯಿಯಾಗಿ ಕಾಸ್ಟಿಂಗ್‌ ಕೌಚ್‌ಗೆ ಬಲಿಯಾದ ನಟಿ ಈಕೆ!!

ಸಮಂತಾ ತಮ್ಮ ವೈಯಕ್ತಿಕ ಜೀವನದಲ್ಲಿ ಹಲವಾರು ತೊಂದರೆ, ತೊಡಕುಗಳಿಂದ ಕೆಂಗೆಟ್ಟಿದರೂ, ಈ ನಟಿಗೆ ಫ್ಯಾನ್ಸ್‌ ಇಂತಹದೊಂದು ಮೀಟ್‌ ಆಂಡ್‌ ಗ್ರೀಟ್‌ ಕಾರ್ಯಕ್ರಮದ ಬೇಡಿಕೆ ಇಡುತ್ತಾ ಬಂದಿದ್ದರು. ಅಭಿಮಾನಿಗಳ ತರಹ ಸಮಂತಾ ಆಸೆ ಕೂಡ ಅದೇ ಆಗಿತ್ತು. ಅದಕ್ಕೆ ಈ ನಟಿ ಹನಿ ಬನಿಯ ವೆಬ್‌ ಸೀರಿಸ್‌  ಪ್ರಚಾರ ಶುರು ಮಾಡುವ ಮೊದಲು ಫ್ಯಾನ್ಸ್‌ ಜೊತೆಗೆ ತಮ್ಮ ಸಮಯವನ್ನು ಕಳೆದಿದ್ದಾರೆ.

ಸ್ಯಾಮ್‌ ಕೆಲ ಹೊತ್ತು ತಮ್ಮ ಬದುಕಿನ ಎಲ್ಲಾ ನೋವನ್ನು ಅಭಿಮಾನಿಗಳಿಗಾಗಿ ಆಯೋಜಿಸಿದ ಮೀಟ್‌ ಆಂಡ್‌ ಗ್ರೀಟ್‌ ಕಾರ್ಯಕ್ರಮದಲ್ಲಿ  ಮರೆಯುವ ಪ್ರಯತ್ನ ಪಟ್ಟಿದ್ದಾರೆ. ನಟಿ ಸಮಂತಾ ಹಮ್ಮಿಕೊಂಡ ಸಮಾರಂಭದಲ್ಲಿ ಭಾಗಿಯಾಗಿದ್ದ ಅಭಿಮಾನಿಗಳ ಅಭಿಮಾನವನ್ನು ಕಂಡು ತಲೆ ಬಾಗಿ, ಎಲ್ಲರ ಜೊತೆಗೂ ಆತ್ಮೀಯವಾಗಿ ಮಾತನಾಡಿ ಕಳುಹಿಸಿ ಕೊಟ್ಟಿದ್ದಾರೆ. ಆ ಸುಂದರ ಕ್ಷಣಗಳು ನೆನಪಿನಲ್ಲಿ ಉಳಿಯುವಂಥ ಫೋಟೋಗಳನ್ನು ಸಹ ತೆಗೆಸಿಕೊಂಡಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News