ಫೋಟೋಗ್ರಾಫರ್‌ ಹೆಗಲಿಗೆ ಕೈ ಹಾಕಿದ ಕೆಜಿಎಫ್‌ ರಮೀಕಾ:‌ ರವೀನಾ ವೈರಲ್‌ ವಿಡಿಯೋ!

Raveena Tandon: ಇತ್ತೀಚೆಗೆ ಬಾಲಿವುಡ್‌ ನಟಿ ರವೀನಾ ತಂಡನ್‌ ಸೆಂಟರ್‌ ಸೆಂಟರ್‌ ಅಂತ ಬೊಬ್ಬೆ ಹೊಡೆಯುತ್ತಿದ್ದ ಪಾಪರಾಜಿಯ ಹೆಗಲ ಮೇಲೆ ಕೈ ಹಾಕಿ ಜೆಫ್ಟ್‌ ರೈಟ್‌ ಅಮತ ಹೇಳಿ ಕೊಟ್ಟಿರುವ ವಿಡಿಯೋ ಸೋಷಿಯಲ್‌ ಮಿಡಿಯಾದಲ್ಲಿ ವೈರಲ್‌ ಆಗುತ್ತಿದೆ.

Written by - Zee Kannada News Desk | Last Updated : Jan 14, 2024, 04:16 PM IST
  • ಸ್ಟಾರ್‌ಗಳು ಏರ್‌ಪೋರ್ಟ್‌ನಲ್ಲಿ ಇರಲಿ, ಜಿಮ್ ಇರಲಿ, ಸೆಲೂನ್ ಇರಲಿ, ಮಾಲ್‌ಗಳಲ್ಲಿರುವ ಶೋ ರೂಮ್‌ಗಳಿರಲಿ ಎಲ್ಲೆಂದರಲ್ಲಿ ಈ ಫೋಟೋಗ್ರಾಫರ್ಸ್‌ ಒಂದು ಕಣ್ಣಿಟ್ಟಿರ್ತಾರೆ.
  • ಇತ್ತೀಚೆಗೆ ಪಪಾರಾಜಿಗಳ ಕೈಗೆ ಬಾಲಿವುಡ್‌ ನಟಿ ರವೀನಾ ಟಂಡನ್ ಸಿಕ್ಕಿದ್ದು, ಈ ವೇಳೆ ಸೆಂಟರ್ ಸೆಂಟರ್ ಎಂದು ಕೂಗುತ್ತಿದ್ದ ಫೋಟೋಗ್ರಾಫರ್ ಒಬ್ಬರನ್ನು ಹತ್ತಿರ ಕರೆದು ಲೆಫ್ಟ್ ರೈಟ್ ಕೂಡ ತೋರಿಸಿದ್ದಾರೆ.
  • ಈ ಮುದ್ದಾದ ವೀಡಿಯೋ ಸದ್ಯ ಸೋಷಿಯಲ್‌ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಈ ವೀಡಿಯೋ ನೋಡಿದ ಫ್ಯಾನ್ಸ್ ರವೀನಾ ಮತ್ತೆ ಮಗುವಾಗಿದ್ದಾರೆ ಎಂದು ಕಾಮೆಂಟ್ ಮಾಡಿದ್ದಾರೆ
ಫೋಟೋಗ್ರಾಫರ್‌  ಹೆಗಲಿಗೆ ಕೈ ಹಾಕಿದ ಕೆಜಿಎಫ್‌ ರಮೀಕಾ:‌ ರವೀನಾ ವೈರಲ್‌ ವಿಡಿಯೋ!  title=

Raveena Tandon Viral Video: ಸಾಮಾನ್ಯವಾಗಿ ಸಿನಿಮಾ ನಟ ನಟಿಯರು ಅಥವಾ ಸೆಲೆಬ್ರಿಟಿಗಳ ಹಿಂದೆಯೇ ಫೋಟೋಗ್ರಾಫರ್‌ಗಳು ಓಡಾಡುತ್ತಿದ್ದು, ಸೆಲೆಬ್ರೆಟಿಗಳು ಕುಳಿತರು ನಿಂತರು ಓಡಾಡಿದರು ವೀಡಿಯೋ ಮಾಡಿ ಸೋಷಿಯಲ್‌ ಮಿಡಿಯಾದಲ್ಲಿ ಅಪ್‌ಲೋಡ್‌ ಮಾಡುತ್ತಲೇ ಇರ್ತಾರೆ. ಸ್ಟಾರ್‌ಗಳು ಏರ್‌ಪೋರ್ಟ್‌ನಲ್ಲಿ ಇರಲಿ, ಜಿಮ್ ಇರಲಿ, ಸೆಲೂನ್ ಇರಲಿ, ಮಾಲ್‌ಗಳಲ್ಲಿರುವ ಶೋ ರೂಮ್‌ಗಳಿರಲಿ ಎಲ್ಲೆಂದರಲ್ಲಿ ಈ ಫೋಟೋಗ್ರಾಫರ್ಸ್‌ ಒಂದು ಕಣ್ಣಿಟ್ಟಿರ್ತಾರೆ. 

ಫೋಟೋಗ್ರಾಫರ್‌ಗಳು ಕಾವಲು ನಾಯಿಯಂತೆ ಸೆಲೆಬ್ರಿಟಿಗಳನ್ನು ಕಾಯುತ್ತಾ, ಇವರು ಕಂಡ ಕೂಡಲೇ ಜೋರಾಗಿ ಅವರ ಹೆಸರು ಕರೆದು ಫೋಟೋಗೆ ಫೋಸ್ ನೀಡುವಂತೆ ಬೊಬ್ಬೆ ಹೊಡೆಯುತ್ತಾರೆ. ಸೆಲೆಬ್ರಿಟಿಗಳಿಗೂ ಇದು ಅಭ್ಯಾಸವಾಗಿದ್ದು, ಸ್ಥಳ ಯಾವುದೇ ಇರಲಿ ಫೋಟೋ ಹಾಗೂ ವಿಡಿಯೋಗ್ರಾಫರ್ಸ್‌ಗೆ  ಪೋಸ್ ನೀಡಿ ಬಾಯ್ ಹೇಳಿ ಮುಂದೆ ಸಾಗುತ್ತಾರೆ. ಇತ್ತೀಚೆಗೆ ಪಪಾರಾಜಿಗಳ ಕೈಗೆ   ಬಾಲಿವುಡ್‌ ನಟಿ ರವೀನಾ ಟಂಡನ್ ಸಿಕ್ಕಿದ್ದು, ಈ ವೇಳೆ ಸೆಂಟರ್ ಸೆಂಟರ್ ಎಂದು ಕೂಗುತ್ತಿದ್ದ  ಫೋಟೋಗ್ರಾಫರ್ ಒಬ್ಬರನ್ನು ಹತ್ತಿರ ಕರೆದು ಲೆಫ್ಟ್ ರೈಟ್ ಕೂಡ ತೋರಿಸಿದ್ದಾರೆ. 

 
 
 
 

 
 
 
 
 
 
 
 
 
 
 

A post shared by Varinder Chawla (@varindertchawla)

ಇದನ್ನೂ ಓದಿ: 55 ಲಕ್ಷ ಮೊತ್ತದಲ್ಲಿ ಲೀಲಮ್ಮನ ಸ್ಮಾರಕ: ಗುದ್ದಲಿ ಪೂಜೆ ನೆರವೇರಿಸಿದ ವಿನೋದ್ ರಾಜ್!

ಹೌದು. ನಟಿ ರವೀನಾ ತಂಡನ್‌ ನೇರಳೆ ಬಣ್ಣದ ಜೆಮ್ ಸೂಟ್‌ನಂತಹ ಉಡುಗೆ ಧರಿಸಿ ಬರುತ್ತಿದ್ದು,  ಆಗ ಫೋಟೋಗ್ರಾಫರ್‌ ಆಕೆಯನ್ನು ಸೆಂಟರ್ ಸೆಂಟರ್ ಎಂದು ಕರೆದಿದ್ದಾರೆ. ಹೀಗೆ ಬೊಬ್ಬೆ ಹೊಡೆಯುತ್ತಿದ್ದ ಫೋಟೋಗ್ರಾಫರ್‌ ಅನ್ನು ಹತ್ತಿರ  ಇಲ್ಲಿ ಬಾ ಇಲ್ಲಿ ಬಾ ಎಂದು ಹತ್ತಿರ ಕರೆದ,  ಆತನ ಹೆಗಲುಗಳನ್ನು ಹಿಡಿದು ಲೆಫ್ಟ್ ಹಾಗೂ ರೈಟ್‌ನ ಅರ್ಥ ಏನು ಎಂದು ಕೇಳಿದ್ದಾರೆ. ಆಗ ಫೋಟೋಗ್ರಾಫರ್ ಈ ಕಡೆ ರೈಟ್ ಆ ಕಡೆ ಲೆಫ್ಟ್ ಅಂತ ಎಡಬಲವನ್ನು ತೋರಿಸಿದ್ದಾನೆ. 

ಆವೇಳೆ ರವೀನಾ ಮತ್ತೇಕೆ ಸೆಂಟರ್ ಸೆಂಟರ್ ಎಂದು ಬೊಬ್ಬೆ ಹೊಡೆಯುವೆ ಎಂದು ಕೇಳಿದಲ್ಲದೇ ಈ ಕಡೆ ಇದ್ದರೆ ಲೆಫ್ಟ್ ಆ ಕಡೆ ಇದ್ದರೆ ರೈಟ್ ಎಂದು ಹೇಳಿಕೊಟ್ಟಿದ್ದಾರೆ. ಅದಕ್ಕೆ ಆತ ತಾನು ಮರಾಠಿ ಮೀಡಿಯಾಂನಲ್ಲಿ ಓದಿದ್ದಾಗಿ ಹೇಳಿದ್ದಾನೆ. ಆಗ ಈ ನಟಿ ಮುದ್ದಾಗಿ ಆತನ ಬೆನ್ನಿಗೆ ಹೊಡೆದು ಮುಂದೆ ಸಾಗಿದ್ದಾರೆ. ಈ ಮುದ್ದಾದ ವೀಡಿಯೋ ಸದ್ಯ ಸೋಷಿಯಲ್‌ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಈ ವೀಡಿಯೋ ನೋಡಿದ ಫ್ಯಾನ್ಸ್ ರವೀನಾ ಮತ್ತೆ ಮಗುವಾಗಿದ್ದಾರೆ ಎಂದು ಕಾಮೆಂಟ್ ಮಾಡಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News