Rashmika Mandanna: ಈ ನಟನ ಜೊತೆ ಫೋಟೋ ಹಂಚಿಕೊಂಡ ರಶ್ಮಿಕಾ ಮಂದಣ್ಣ, ಮತ್ತೆ ಶುರುವಾಯ್ತು ಗುಸುಪಿಸು!?

Rashmika Mandanna: ನಟಿ ರಶ್ಮಿಕಾ ಮಂದಣ್ಣ ಸದ್ಯ ರೇನ್ಬೋ ಸಿನಿಮಾ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ. ಶೂಟಿಂಗ್ ಸ್ಥಳದಲ್ಲಿನ ಕೆಲವು ಫೋಟೋಗಳನ್ನು ರಶ್ಮಿಕಾ ತಮ್ಮ ಸೋಶಿಯಲ್‌ ಮೀಡಿಯಾದಲ್ಲಿ ಶೇರ್‌ ಮಾಡಿದ್ದಾರೆ.   

Written by - Chetana Devarmani | Last Updated : Apr 29, 2023, 08:19 PM IST
  • ಈ ನಟನ ಜೊತೆ ಫೋಟೋ ಹಂಚಿಕೊಂಡ ರಶ್ಮಿಕಾ ಮಂದಣ್ಣ
  • ರೇನ್ಬೋ ಸಿನಿಮಾ ಶೂಟಿಂಗ್‌ನಲ್ಲಿ ಬ್ಯುಸಿಯಾಗಿರುವ ಕಿರಿಕ್‌ ಬೆಡಗಿ
  • ಸಿನಿಮಾ ಶೂಟಿಂಗ್ ನಡೆಯುತ್ತಿದ್ದ ಸ್ಥಳದ ಫೋಟೋಗಳು
Rashmika Mandanna: ಈ ನಟನ ಜೊತೆ ಫೋಟೋ ಹಂಚಿಕೊಂಡ ರಶ್ಮಿಕಾ ಮಂದಣ್ಣ, ಮತ್ತೆ ಶುರುವಾಯ್ತು ಗುಸುಪಿಸು!? title=
Rashmika Mandanna

Rashmika Mandanna: ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಪುಷ್ಪ 2 ಸಿನಿಮಾ ಜೊತೆಗೆ ನಟಿ ರಶ್ಮಿಕಾ ರೇನ್ಬೋ ಸಿನಿಮಾದಲ್ಲಿ ಸಹ ನಟಿಸುತ್ತಿದ್ದಾರೆ. ಸಿನಿಮಾ ಶೂಟಿಂಗ್ ನಡೆಯುತ್ತಿದ್ದ ಸ್ಥಳದಲ್ಲಿ ನಡೆದ ಘಟನೆಗಳನ್ನು ತಮ್ಮ ಇನ್‌ಸ್ಟಾಗ್ರಾಮ್‌ ಮೂಲಕ ಫ್ಯಾನ್ಸ್‌ ಜೊತೆ ಶೇರ್‌ ಮಾಡ್ತಾರೆ. ಇದೀಗ ನಟಿ ರಶ್ಮಿಕಾ ಮಂದಣ್ಣ ತಮ್ಮ ಅಭಿಮಾನಿಗಳೊಂದಿಗೆ ಸರಣಿ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ತನ್ನ ಶೀರ್ಷಿಕೆಯಲ್ಲಿ, ಯಾವುದೇ ನೆಟ್‌ವರ್ಕ್ ಕವರೇಜ್ ಇಲ್ಲದ ಪ್ರದೇಶಗಳಲ್ಲಿ ಚಿತ್ರೀಕರಣದ ಕಾರಣ ಸಾಮಾಜಿಕ ಮಾಧ್ಯಮಕ್ಕೆ ಗೈರುಹಾಜರಾಗಿದ್ದಕ್ಕಾಗಿ ಕ್ಷಮೆಯಾಚಿಸಿದ್ದಾರೆ. ಅದೇ ವೇಳೆ ಒಂದು ಫೋಟೋ ಮೇಲೆ ನೆಟ್ಟಿಗರ ಕಣ್ಣು ನೆಟ್ಟಿದೆ.

ಇದನ್ನೂ ಓದಿ: ಬಹುನಿರೀಕ್ಷಿತ 'ಪೊನ್ನಿಯಿನ್ ಸೆಲ್ವನ್-2' ಚಿತ್ರ ಮೊದಲ ದಿನ ಗಳಿಸಿದ್ದೇಷ್ಟು...?

ಮಲಯಾಳಂ ನಟ ದೇವ್ ಮೋಹನ್ ಅವರೊಂದಿಗೆ ನಟಿ ರಶ್ಮಿಕಾ ಮಂದಣ್ಣ ಸೆಲ್ಫಿ ತೆಗೆದುಕೊಂಡಿದ್ದಾರೆ. ಮೊದಲಿಗೆ ರಕ್ಷಿತ್‌ ಶೆಟ್ಟಿ ಅವರ ಜೊತೆ ಪ್ರೀತಿಸಿ, ಎಂಗೇಜ್‌ಮೆಂಟ್‌ ಮಾಡಿಕೊಂಡಿದ್ದ ರಶ್ಮಿಕಾ ಆ ಬಳಿಕ ಮದುವೆ ಮುರಿದುಕೊಂಡರು. ನಂತರ ತೆಲುಗು ನಟ ವಿಜಯ್‌ ದೇವರಕೊಂಡ ಸಿನಿಮಾದಲ್ಲಿ ರಶ್ಮಿಕಾ ಅಭಿನಯಿಸಿದರು. ಆಗ ಅವರ ಹೆಸರು ವಿಜಯ್‌ ದೇವರಕೊಂಡ ಜೊತೆ ತಳಕು ಹಾಕಿಕೊಂಡಿತು. ಆ ಬಳಿಕ ಇಬ್ಬರ ಬ್ರೇಕಪ್‌ ಗಾಸಿಪ್‌ ಹಬ್ಬಿತು. ಇದೀಗ ದೇವ್ ಮೋಹನ್ ಜೊತೆ ರಶ್ಮಿಕಾ ಫೋಟೋ ಶೇರ್‌ ಮಾಡಿದ್ದು, ಟ್ರೋಲಿಗರಿಗೆ ಮತ್ತೆ ಹೂರಣವಾದಂತಿದೆ. 

 

 

ರೇನ್ಬೋ ಸಿನಿಮಾ ಮಹಿಳಾ ಪ್ರಧಾನ ಸಿನಿಮಾ ಆಗಿದ್ದು, ರಶ್ಮಿಕಾ ಮಂದಣ್ಣ ಪಾತ್ರಕ್ಕೆ ಹೆಚ್ಚು ಪ್ರಾಮುಖ್ಯತೆ ಇದೆ ಎನ್ನಲಾಗ್ತಿದೆ. ರೇನ್ಬೋ ಮೊದಲ ಶೂಟಿಂಗ್‌ನಲ್ಲಿ ಇಡೀ ಚಿತ್ರತಂಡ ಸದ್ಯ ಬ್ಯುಸಿಯಾಗಿದೆ. ಬಹುದಿನಗಳ ಬಳಿಕ ಹೀಗೆ ಸಿನಿಮಾ ಸೆಟ್‌ನಿಂದ ರಶ್ಮಿಕಾ ಮಂದಣ್ಣ ಫೋಟೋ ಶೇರ್‌ ಮಾಡಿದ್ದಾರೆ. 

ಇದನ್ನೂ ಓದಿ: ಪೊನ್ನಿಯಿನ್ ಸೆಲ್ವನ್ 2 ಸಂಪೂರ್ಣ ಚಿತ್ರ ಡೌನ್‌ಲೋಡ್ ಲಿಂಕ್ ಸೋರಿಕೆ!!

ಗೆಳೆಯರೇ ಕ್ಷಮಿಸಿ ನಾನು ಸ್ವಲ್ಪ ಸಮಯದವರೆಗೆ ಕಾಣೆಯಾಗಿದ್ದೇನೆ. ಏಕೆಂದರೆ ನಾವು ನೋ ನೆಟ್‌ವರ್ಕ್‌ ಪ್ರದೇಶದಲ್ಲಿದ್ದೇವೆ. ನೆಟ್‌ವರ್ಕ್ ಇಲ್ಲದ ಪ್ರದೇಶಗಳಲ್ಲಿ ಶೂಟಿಂಗ್ ಮಾಡುತ್ತಿದ್ದೆವು ಎಂದು ಪೋಸ್ಟ್‌ಗೆ ಶೀರ್ಷಿಕೆ ನೀಡಿದ್ದಾರೆ.

ವಿವಿಧ ಸ್ಥಳಗಳಲ್ಲಿ ತನ್ನ ಶೂಟಿಂಗ್ ಅನುಭವದ ಬಗ್ಗೆ ಕೆಲವು ಸುಳಿವುಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಅವರು ಮುನ್ನಾರ್ ಅನ್ನು ಸುಂದರವಾದ ಸ್ಥಳ ಎಂದು ವಿವರಿಸಿದರು ಮತ್ತು ಅವರ ಕೋಣೆಯಿಂದ ಡ್ರೀಮ್‌ ಲುಕ್‌ನ್ನು ಹಂಚಿಕೊಂಡಿದ್ದರು. ಈ ಹಿಂದೆ ನಟಿ ಕೊಡೈಕೆನಾಲ್‌ನಲ್ಲಿ ಸಿನಿಮಾ ಚಿತ್ರೀಕರಣದ ಚಿತ್ರಗಳನ್ನು ಹಂಚಿಕೊಂಡಿದ್ದರು. ತನ್ನ ಬಾಲ್ಕನಿಯಿಂದ ಸೂರ್ಯೋದಯದ ಫೋಟೋವನ್ನು ಶೇರ್‌ ಮಾಡಿದ್ದರು. ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ರಶ್ಮಿಕಾ ತನ್ನ ತಾಯಿ ಮತ್ತು ಸಹೋದರಿಯ ಫೋಟೋಗಳನ್ನು ಸಹ ಸೇರಿಸಿದ್ದಾರೆ. 

ಇದನ್ನೂ ಓದಿ: ಬಾಜಿರಾವ್ ಮಸ್ತಾನಿಯಲ್ಲಿ ದೀಪಿಕಾ-ರಣವೀರ್ ಅಲ್ಲ.. ಸಲ್ಮಾನ್-ಐಶ್ವರ್ಯಾ ನಟಿಸಬೇಕಿತ್ತಂತೆ!

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಆಧ್ಯಾತ್ಮ, ಜೀವನಶೈಲಿ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News