ಲವ್‌ ಫೆಲ್ಯೂರ್‌ ʼಬೇಬಿʼ ಸಿನಿಮಾ ನೋಡಿ ಕಣ್ಣೀರಿಟ್ಟ ರಶ್ಮಿಕಾ..! ಕಾರಣ ಗೊತ್ತಾ..?

Baby Movie : ಸಾಯಿ ರಾಜೇಶ್ ನಿರ್ದೇಶನದ ಆನಂದ್ ದೇವರಕೊಂಡ ಮತ್ತು ವೈಷ್ಣವಿ ಚೈತನ್ಯ ಅಭಿನಯದ 'ಬೇಬಿ'. ಈ ಸಿನಿಮಾ ನೋಡಿ ರಶ್ಮಿಕಾ ಮಂದಣ್ಣ ಭಾವುಕರಾದರು. ಈ ಕುರಿತು ನ್ಯಾಷುನಲ್‌ ಕ್ರಷ್‌ ಹೇಳಿಕೆ ನೀಡಿದ್ದು, ಸಖತ್‌ ವೈರಲ್‌ ಆಗುತ್ತಿದೆ.

Written by - Krishna N K | Last Updated : Jul 16, 2023, 10:55 PM IST
  • ಆನಂದ್ ದೇವರಕೊಂಡ ಅಭಿನಯದ 'ಬೇಬಿ' ಸಿನಿಮಾ ಉತ್ತಮ ಪ್ರದರ್ಶನ ಕಾಣುತ್ತಿದೆ.
  • ಮೊದಲ ಪ್ರದರ್ಶನದಿಂದಲೇ ಈ ಚಿತ್ರಕ್ಕೆ ಸಾಕಷ್ಟು ಪಾಸಿಟಿವ್ ರೆಸ್ಪಾನ್ಸ್ ಸಿಕ್ಕಿದೆ.
  • ಬೇಬಿ ಸಿನಿಮಾ ನೋಡಿ ನ್ಯಾಷನಲ್‌ ಕ್ರಷ್‌ ನಟಿ ರಶ್ಮಿಕಾ ಮಂದಣ್ಣ ಕಣ್ಣೀರು ಹಾಕಿದೆ.
ಲವ್‌ ಫೆಲ್ಯೂರ್‌ ʼಬೇಬಿʼ ಸಿನಿಮಾ ನೋಡಿ ಕಣ್ಣೀರಿಟ್ಟ ರಶ್ಮಿಕಾ..! ಕಾರಣ ಗೊತ್ತಾ..? title=

Rashmika mandanna on Baby Movie : ಟಾಲಿವುಡ್ ಯಂಗ್ ಹೀರೋ ಆನಂದ್ ದೇವರಕೊಂಡ ಮತ್ತು ವೈಷ್ಣವಿ ಚೈತನ್ಯ ಅಭಿನಯದ 'ಬೇಬಿ' ಸಿನಿಮಾ ಉತ್ತಮ ಪ್ರದರ್ಶನ ಕಾಣುತ್ತಿದೆ. ಮಾಸ್ ಮೂವೀ ಮೇಕರ್ಸ್ ಬ್ಯಾನರ್ ಅಡಿಯಲ್ಲಿ ನಿರ್ದೇಶಕ ಮಾರುತಿ ಅವರ ಬ್ಯಾನರ್ ಅಡಿಯಲ್ಲಿ ಯುವ ನಿರ್ಮಾಪಕ ಎಸ್‌ಕೆಎನ್ ನಿರ್ಮಿಸಿರುವ ಈ ಚಿತ್ರವು ಜುಲೈ 14 ತೆರೆಗೆ ಅಪ್ಪಳಿಸಿದೆ.

ಮೊದಲ ಪ್ರದರ್ಶನದಿಂದಲೇ ಈ ಚಿತ್ರಕ್ಕೆ ಸಾಕಷ್ಟು ಪಾಸಿಟಿವ್ ರೆಸ್ಪಾನ್ಸ್ ಸಿಕ್ಕಿದೆ. ಕಲರ್ ಫೋಟೋದಂತಹ ರಾಷ್ಟ್ರ ಪ್ರಶಸ್ತಿ ವಿಜೇತ ಚಿತ್ರಕ್ಕೆ ಕಥೆ ಬರೆದಿರುವ ಸಾಯಿ ರಾಜೇಶ್ ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. ಲವ್ ಮತ್ತು ಎಮೋಷನಲ್ ಡ್ರಾಮಾ ಸಿನಿಮಾ ಸದ್ಯ ಥಿಯೇಟರ್‌ನಲ್ಲಿ ಪ್ರೇಕ್ಷಕರ ಮನಸೂರೆಗೊಳ್ಳುತ್ತಿದೆ.

ಇದನ್ನೂ ಓದಿ: ಎನ್‌ಟಿಆರ್‌ 'ದೇವರ' ಚಿತ್ರದ ರೋಚಕ ಸಾಹಸ ದೃಶ್ಯಗಳ ಶೂಟಿಂಗ್‌ ಕಂಪ್ಲೀಟ್..! ಫೋಟೋ ವೈರಲ್‌

ಇತ್ತೀಚೆಗಷ್ಟೇ ವಿಜಯ್ ದೇವರಕೊಂಡ ಜೊತೆ ‘ಬೇಬಿ’ ಸಿನಿಮಾವನ್ನು ವೀಕ್ಷಿಸಿದ ರಶ್ಮಿಕಾ ಸಿನಿಮಾದ ಬಗ್ಗೆ ತಮ್ಮ ವಿಮರ್ಶೆಯನ್ನು ನೀಡಿದ್ದಾರೆ. ಈ ಸಿನಿಮಾ ನೋಡುವಾಗ ಕಣ್ಣೀರು ಬಂತು ಎಂದು ಹೇಳಿದ್ದಾರೆ. ಕೆಲವು ದೃಶ್ಯಗಳು ತಮ್ಮನ್ನು ಕದಲಿದವು ಎಂದು ಬಹಿರಂಗಪಡಿಸಿದ್ದಾರೆ. ‘ಬೇಬಿ ಸಿನಿಮಾ ನೋಡಿದ್ದೇನೆ. ಈ ಸಿನಿಮಾ ನೋಡಿ ಕಣ್ಣೀರು ಹಾಕಿದೆ. ಈ ಚಿತ್ರದ ದೃಶ್ಯಗಳು ನನ್ನ ಹೃದಯದಲ್ಲಿ ಚಿರಕಾಲ ಉಳಿಯುತ್ತದೆ’ ಎಂದು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ ರಶ್ಮಿಕಾ.

ಅಲ್ಲದೆ ತಮ್ಮನ ಸಿನಿಮಾ ಕುರಿತು ವಿಜಯ್ ದೇರಕೊಂಡ ಮಾತನಾಡಿದ್ದು, ಚಿತ್ರತಂಡವನ್ನು ಶ್ಲಾಘಿಸಿದ್ದಾರೆ. ''ಬೇಬಿ ಚಿತ್ರದ ಬಗ್ಗೆ ಹೆಚ್ಚು ಮಾತನಾಡಲು ನಾನು ಬಯಸುವುದಿಲ್ಲ. ಮೊದಲನೆಯದಾಗಿ, ಪ್ರೀಮಿಯರ್ ವೀಕ್ಷಿಸಲು ಇಲ್ಲಿಗೆ ಬಂದಿದ್ದಕ್ಕಾಗಿ ಎಲ್ಲಾ ಪ್ರೇಕ್ಷಕರಿಗೆ ಧನ್ಯವಾದಗಳು. 3-4 ದಿನಗಳ ನಂತರ ಇನ್ನೊಂದು ಸಮಾರಂಭದಲ್ಲಿ ಚಿತ್ರದ ಬಗ್ಗೆ ಮಾತನಾಡುತ್ತೇನೆ ಎಂದರು.  

ಇದನ್ನೂ ಓದಿ:  ಶ್ರೇಯಸ್ ಚಿಂಗಾ ನಟಿಸಿ, ನಿರ್ದೇಶಿಸಿರುವ "ಡೇವಿಡ್" ಚಿತ್ರದ ರಿಲೀಸ್‌ ಡೇಟ್‌ ಫೀಕ್ಸ್‌..!

ಒಟ್ಟಿನಲ್ಲಿ ಯೂತ್ ಫುಲ್ ಕಂಟೆಂಟ್ ನೊಂದಿಗೆ ಬಂದಿರುವ 'ಬೇಬಿ' ಚಿತ್ರ ಭಾವನಾತ್ಮಕವಾಗಿ ಪ್ರೇಕ್ಷಕರಿಗೆ ಹೆಚ್ಚಾಗಿ ಯುಥ್‌ಗೆ ಕನೆಕ್ಟ್ ಆಗುತ್ತಿದೆ. ಆನಂದ್ ದೇವರಕೊಂಡ ತುಂಬಾ ಚೆನ್ನಾಗಿ ನಟಿಸಿದ್ದಾರೆ. ಸೋಷಿಯಲ್‌ ಮೀಡಿಯಾದಲ್ಲಿ ಮಿಂಚಿದ್ದ ವೈಷ್ಣವಿ ಚೈತನ್ಯ ತಮ್ಮ ಚೊಚ್ಚಲ ಪ್ರವೇಶದ ಮೂಲಕ ಸಿನಿ ರಸಿಕರ ಗಮನಸೆಳೆದಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News