Rashmika Mandanna: ತಮ್ಮ ಅರೆಬೆತ್ತಲೆ ವಿಡಿಯೋ ಬಗ್ಗೆ ಪ್ರತಿಕ್ರಿಯಿಸಿದ ಕಿರಿಕ್‌ ಬೆಡಗಿ..!

Rashmika Mandanna on Her Fake Video: ನಟಿ ರಶ್ಮಿಕಾ ಮಂದಣ್ಣ ಅವರ ಅರೆಬೆತ್ತಲೆ ವಿಡಿಯೋವೊಂದು ಸೋಷಿಯಲ್‌ ಮಿಡಿಯಾದಲ್ಲಿ ಸಖತ್‌ ವೈರಲ್‌ ಆಗಿತ್ತು.. ಇದೀಗ ಈ ಸಂಬಂಧ ರಶ್ಮಿಕಾ ಪ್ರತಿಕ್ರಿಯಿಸಿದ್ದಾರೆ.

Written by - Savita M B | Last Updated : Nov 6, 2023, 05:56 PM IST
  • ರಶ್ಮಿಕಾ ಮಂದಣ್ಣ ಅವರ ತಿರುಚಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದ ತುಂಬೆಲ್ಲ ಹರಿದಾಡತ್ತಿತ್ತು
  • ಇದೀಗ ಈ ವಿಚಾರಚಾಗಿ ಪ್ರತಿಕ್ರಿಯಿಸಿದ ರಶ್ಮಿಕಾ
  • ಸದ್ಯ ಈ ವೈರಲ್‌ ವಿಡಿಯೋ ಕುರಿತು ಟ್ವೀಟ್‌ ಮಾಡಿರುವ ರಶ್ಮಿಕಾ
Rashmika Mandanna: ತಮ್ಮ ಅರೆಬೆತ್ತಲೆ ವಿಡಿಯೋ ಬಗ್ಗೆ ಪ್ರತಿಕ್ರಿಯಿಸಿದ ಕಿರಿಕ್‌ ಬೆಡಗಿ..!  title=

Rashmika Mandanna: ನ್ಯಾಷನಲ್‌ ಕ್ರಷ್‌ ರಶ್ಮಿಕಾ ಮಂದಣ್ಣ ಅವರ ತಿರುಚಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದ ತುಂಬೆಲ್ಲ ಹರಿದಾಡತ್ತಿತ್ತು.. ಇದೀಗ ಈ ವಿಚಾರಚಾಗಿ ಪ್ರತಿಕ್ರಿಯಿಸಿದ ರಶ್ಮಿಕಾ "ತಂತ್ರಜ್ಞಾನವನ್ನು ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ ಕಾರಣ ಇದನ್ನು ಒಟ್ಟಾಗಿ ಪರಿಹರಿಸಬೇಕಾಗಿದೆ" ಎಂದು.. ತನ್ನ ಕುಟುಂಬ, ಸ್ನೇಹಿತರು ಮತ್ತು ಹಿತೈಷಿಗಳಿಗೆ ಧನ್ಯವಾದ ತಿಳಿಸಿದ್ದಾರೆ.. 

ಸದ್ಯ ಈ ವೈರಲ್‌ ವಿಡಿಯೋ ಕುರಿತು ಟ್ವೀಟ್‌ ಮಾಡಿರುವ ರಶ್ಮಿಕಾ "ಇದರ ಬಗ್ಗೆ ಹೇಳಿಕೊಳ್ಳಲು ನನಗೆ ತುಂಬಾ ನೋವಾಗಿದೆ ಮತ್ತು ನಾನು ಆನ್‌ಲೈನ್‌ನಲ್ಲಿ ಹರಡಿರುವ ಡೀಪ್‌ಫೇಕ್ ವಿಡಿಯೋದ ಬಗ್ಗೆ ಮಾತನಾಡಲೇಬೇಕಿದೆ.. ಪ್ರಾಮಾಣಿಕವಾಗಿ ಹೇಳುವುದಾದರೆ, ಇದು ಕೇವಲ ನನಗೆ ಮಾತ್ರವಲ್ಲ, ಪ್ರತಿಯೊಬ್ಬರಿಗೂ ತುಂಬಾ ಭಯಾನಕವಾದ ವಿಚಾರವಾಗಿದೆ... ತಂತ್ರಜ್ಞಾನವನ್ನು ಹೀಗೆ ದುರುಪಯೋಗಪಡಿಸಿಕೊಳ್ಳುತಿವುದರಿಂದಲೇ ನಾವು ಹಾನಿಗೆ ಗುರಿಯಾಗುತ್ತಿದ್ದೇವೆ" ಎಂದಿದ್ದಾರೆ..

ಇದನ್ನೂ ಓದಿ-ತಮಿಳುನಾಡಿನಿಂದ 34,300 ಕಿಮೀ ಸೈಕಲ್‌ಗಳನ್ನು ಓಡಿಸಿದ ಪುನೀತ್ ರಾಜ್‌ಕುಮಾರ್ ಫ್ಯಾನ್ : ನೆಚ್ಚಿನ ಸ್ಟಾರ್‌ಗೆ ಟ್ರಿಬ್ಯೂಟ್‌

ಇನ್ನು ಆ ವೈರಲ್‌ ವಿಡಿಯೋದಲ್ಲಿ ಕಪ್ಪು ಬಟ್ಟೆ ಧರಿಸಿರುವ ಬ್ರಿಟಿಷ್-ಭಾರತೀಯ ಮಹಿಳೆಯೊಬ್ಬರು ಲಿಫ್ಟ್‌ನೊಳಗೆ ಬರುತ್ತಿದ್ದಾಳೆ.. ಅದೇ ವಿಡಿಯೋಗೆ ರಶ್ಮಿಕಾ ಅವರ ಹಾಗೇ ಕಾಣುವಂತೆ ಕೃತಕ ಬುದ್ಧಿಮತ್ತೆ (ಎಐ) ಬಳಸಿ ಎಡಿಟ್ ಮಾಡಿ, ಸೋಷಿಯಲ್‌ ಮಿಡಿಯಾದಲ್ಲಿ ವೈರಲ್‌ ಮಾಡಲಾಗಿದೆ. 

ಮುಂದುವರೆದು.. "ನನ್ನ ರಕ್ಷಣೆ ಮತ್ತು ಬೆಂಬಲವಾಗಿರುವ ನನ್ನ ಕುಟುಂಬ, ಸ್ನೇಹಿತರು ಮತ್ತು ಹಿತೈಷಿಗಳಿಗೆ ಇಂದು, ಮಹಿಳೆಯಾಗಿ ಮತ್ತು ನಟಿಯಾಗಿ ನಾನು ತುಂಬಾ ಕೃತಜ್ಞಳಾಗಿದ್ದೇನೆ. ಆದರೆ ನಾನು ಶಾಲೆ ಅಥವಾ ಕಾಲೇಜಿನಲ್ಲಿದ್ದಾಗ ಈ ರೀತಿಯ ಘಟನೆ ನಡೆದಿದ್ದರೆ ಇದನ್ನು ಹೇಗೆ ನಿಭಾಯಿಸುತ್ತಿದ್ದೆ ಎಂಬುದನ್ನು ಊಹಿಸಲು ಆಗುತ್ತಿಲ್ಲ.. ನಮ್ಮಲ್ಲಿ ಹೆಚ್ಚಿನ ಮಹಿಳೆಯರು ಇಂತಹ ಕೃತ್ಯಕ್ಕೆ ಬಲಿಯಾಗುವ ಮುನ್ನ ಇದನ್ನು ಒಟ್ಟಾಗಿ ಆದಷ್ಟೂ ಬೇಗ ಪರಿಹರಿಸಬೇಕಾಗಿದೆ" ಎಂದು ಬರೆದುಕೊಂಡಿದ್ದಾರೆ.. ಅಲ್ಲದೇ ರಶ್ಮಿಕಾ ಅವರು ಪೋಸ್ಟ್‌ನ ಕೆಳಗೆ ಸೈಬರಾಬಾದ್ ಪೋಲೀಸ್ ಮತ್ತು ಮಹಾರಾಷ್ಟ್ರದ ಸೈಬರ್ ಸೆಕ್ಯೂರಿಟಿ ಮತ್ತು ಮಹಾರಾಷ್ಟ್ರ ಸೈಬರ್‌ನ ಅಧಿಕೃತ ಎಕ್ಸ್ ಖಾತೆಗಳನ್ನು ಟ್ಯಾಗ್ ಮಾಡಿಕೊಂಡಿದ್ದಾರೆ. 

ಇದನ್ನೂ ಓದಿ-Priya Prakash: ಸಾಂಪ್ರದಾಯಿಕ ಲುಕ್ ನಲ್ಲಿಯೂ ಹಾಟ್‌ನೆಸ್ ಎಕ್ಸ್ ಪೋಸ್ ಮಾಡುವ ಕಣ್ಸನ್ನೆ ಸುಂದರಿ..!

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News