Rashmika Mandanna: ಅನಿಮಲ್‌ ನಂತರ ಸಂಭಾವನೆ ಹೆಚ್ಚಿಸಿಕೊಂಡ ರಶ್ಮಿಕಾ.. ಒಂದು ಚಿತ್ರಕ್ಕೆ ಎಷ್ಟು ಚಾರ್ಜ್‌ ಮಾಡ್ತಾರೆ ಗೊತ್ತಾ?

Rashmika Mandanna Remuneration: ಸ್ಟಾರ್ ಹೀರೋಯಿನ್ ರಶ್ಮಿಕಾ ಮಂದಣ್ಣ ಸದ್ಯ ಹಿಟ್ ಚಿತ್ರಗಳಲ್ಲಿ ನಟಿಸುತ್ತಿದ್ದು.. ಇತ್ತೀಚಿನ ಬ್ಲಾಕ್‌ಬಸ್ಟರ್ ನಂತರ ನಟಿಯ ಸಂಭಾವನೆ ಭಾರೀ ಹೆಚ್ಚಾಗಿದೆಯಂತೆ. 

Written by - Savita M B | Last Updated : Feb 7, 2024, 12:11 PM IST
  • ನ್ಯಾಶನಲ್ ಕ್ರಶ್ ರಶ್ಮಿಕಾ ಮಂದಣ್ಣ ಸದ್ಯ ಸೌತ್ ಮತ್ತು ನಾರ್ತ್ ಸಿನಿಮಾಗಳ ಮೂಲಕ ರಂಜಿಸುತ್ತಿದ್ದಾರೆ.
  • ಸೌತ್‌ನಂತೆ ಬಾಲಿವುಡ್‌ನಲ್ಲೂ ನಟಿಗೆ ಆಫರ್‌ಗಳು ಬರುತ್ತಿವೆ
  • ತಮ್ಮ ಅಧ್ಬುತ ಅಭಿನಯದಿಂದ ಪ್ರೇಕ್ಷಕರಿಗೆ ಹತ್ತಿರವಾಗುತ್ತಿದ್ದಾರೆ..
Rashmika Mandanna: ಅನಿಮಲ್‌ ನಂತರ ಸಂಭಾವನೆ ಹೆಚ್ಚಿಸಿಕೊಂಡ ರಶ್ಮಿಕಾ.. ಒಂದು ಚಿತ್ರಕ್ಕೆ ಎಷ್ಟು ಚಾರ್ಜ್‌ ಮಾಡ್ತಾರೆ ಗೊತ್ತಾ?  title=

Rashmika Mandanna: ನ್ಯಾಶನಲ್ ಕ್ರಶ್ ರಶ್ಮಿಕಾ ಮಂದಣ್ಣ ಸದ್ಯ ಸೌತ್ ಮತ್ತು ನಾರ್ತ್ ಸಿನಿಮಾಗಳ ಮೂಲಕ ರಂಜಿಸುತ್ತಿದ್ದಾರೆ. ಸೌತ್‌ನಂತೆ ಬಾಲಿವುಡ್‌ನಲ್ಲೂ ನಟಿಗೆ ಆಫರ್‌ಗಳು ಬರುತ್ತಿದ್ದು.. ತಮ್ಮ ಅಧ್ಬುತ ಅಭಿನಯದಿಂದ ಪ್ರೇಕ್ಷಕರಿಗೆ ಹತ್ತಿರವಾಗುತ್ತಿದ್ದಾರೆ.. 

ಇತ್ತೀಚೆಗೆ ಬಾಲಿವುಡ್ ಸ್ಟಾರ್ ಹೀರೋ ರಣಬೀರ್ ಕಪೂರ್ ಜೊತೆ 'ಅನಿಮಲ್' ಚಿತ್ರದಲ್ಲಿ ನಟಿಸಿದ್ದು ಗೊತ್ತೇ ಇದೆ. ದಿಟ್ಟ ಅಭಿನಯದ ಜತೆಗೆ ಬೋಲ್ಡ್‌ ಪಾತ್ರದಲ್ಲಿ ಜನರ ಮನಸೆಳೆದಿದ್ದಾರೆ...ಅಲ್ಲದೇ ಇದೇ ಚಿತ್ರದಿಂದಲೇ ನಟಿ ರಶ್ಮಿಕಾ ಬಾಲಿವುಡ್‌ನಲ್ಲಿಯೂ ಒಳ್ಳೆಯ ಫಾರ್ಮ್‌ ಪಡೆದಿದ್ದಾರೆ.. ಸದ್ಯ ದಕ್ಷಿಣದಲ್ಲಿಯೂ ರಶ್ಮಿಕಾ ಮಂದಣ್ಣ ಕ್ರೇಜ್ ಹೆಚ್ಚಾಗಿದ್ದು.. ಅವರಿಗೆ ಮತ್ತೆ ಒಳ್ಳೆಯ ಸಿನಿಮಾ ಆಫರ್ ಗಳು ಬರುತ್ತಿವೆ. 

ಇದನ್ನೂ ಓದಿ-Esha Deol divorce: ಹೇಮಾ ಮಾಲಿನಿ ಪುತ್ರಿ ದಾಂಪತ್ಯ ಅಂತ್ಯ, ಇಶಾ ಡಿಯೋಲ್-ಭರತ್ ತಖ್ತಾನಿ ಡಿವೋರ್ಸ್!‌

ಆದರೆ ಸದ್ಯ ನಟಿ ರಶ್ಮಿಕಾ ತಮ್ಮ ಸಂಭಾವನೆಯನ್ನು ಶೇಕಡಾ ಇಪ್ಪತ್ತೈದು ಹೆಚ್ಚಿಸಸಿದ್ದಾರೆ ಎನ್ನಲಾಗುತ್ತಿದೆ.. ಈಗಾಗಲೇ ಉತ್ತಮ ಪ್ರಾಜೆಕ್ಟ್‌ಗಳಲ್ಲಿ ಕೆಲಸ ಮಾಡುತ್ತಿರುವ ರಶ್ಮಿಕಾ ಮಂದಣ್ಣ ಮುಂದಿನ ಚಿತ್ರಕ್ಕಾಗಿ ರು. 3 ಕೋಟಿ ಸಂಭಾವನೆ ಪಡೆಯುತ್ತಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ..

ಇದನ್ನೂ ಓದಿ-The Kerala Story On OTT: ಒಟಿಟಿಗೆ ಲಗ್ಗೆಯಿಟ್ಟ ದಿ ಕೇರಳ ಸ್ಟೋರಿ.. ಎಲ್ಲಿ ಯಾವಾಗ ಸ್ಟ್ರೀಮಿಂಗ್‌?

ಇತ್ತೀಚೆಗೆ ಸಹಿ ಮಾಡಿದ ಚಿತ್ರಕ್ಕೆ ರಶ್ಮಿಕಾ ಮಂದಣ್ಣ ರೂ. 4 ಕೋಟಿವರೆಗೂ ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿದೆ. ಮುಂದಿನ ಚಿತ್ರಗಳಾದ ಪುಷ್ಪ 2, ದಿ ಗರ್ಲ್ಸ್ ಫ್ರೆಂಡ್ ಮತ್ತು ರೈನ್ ಬೋ ರಿಸಲ್ಟ್‌ನಿಂದ  ಸಂಭಾವನೆಯನ್ನು ಇನ್ನೂ ಹೆಚ್ಚಿಸಲಿದ್ದಾರೆ ಎಂದು ಹೇಳಲಾಗಿದೆ. 

ಪೂಜಾ ಹೆಗಡೆ, ಅನುಷ್ಕಾ, ಸಮಂತಾ ಮುಂತಾದ ಸ್ಟಾರ್ ಹೀರೋಯಿನ್ ಗಳು ಚಿತ್ರವೊಂದಕ್ಕೆ ಮೂರು ಕೋಟಿ ರೂಪಾಯಿ ಪಡೆಯುತ್ತಿರುವಾಗ ರಶ್ಮಿಕಾ ಸಂಭಾವನೆ ಹೆಚ್ಚಿಸಿರುವುದು ಇಂಡಸ್ಟ್ರಿಯಲ್ಲಿ ಚರ್ಚೆಗೆ ಗ್ರಾಸವಾಗಿದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

 

Trending News