‌Rashmika Mandanna: ವಿದೇಶದಲ್ಲಿ ರಶ್ಮಿಕಾ ಕ್ರೇಜ್.. ನ್ಯಾಷನಲ್‌ ಕ್ರಷ್‌ಗೆ ಅದ್ಧೂರಿ ಸ್ವಾಗತ ನೀಡಿದ ಜಪಾನ್ ಫ್ಯಾನ್ಸ್!

Grand Welcome to Rashmika Mandanna: ನಟಿ ರಶ್ಮಿಕಾ ಮಂದಣ್ಣ ಅವರ ಬಗ್ಗೆ ಹೊಸ ಪರಿಚಯದ ಅಗತ್ಯವಿಲ್ಲ. ಸದ್ಯ ನಮ್ಮ ದೇಶದಲ್ಲಿ ಪ್ಯಾನ್ ಇಂಡಿಯಾ ಸ್ಟಾರ್‌ ಆಗಿ ಮಿಂಚುತ್ತಿರುವ ರಶ್ಮಿಕಾ ಕ್ರೇಜ್ ಈಗ ವಿದೇಶದಲ್ಲಿಯೂ ಪಸರಿಸಿದೆ..   

Written by - Savita M B | Last Updated : Mar 2, 2024, 01:13 PM IST
  • ಸ್ಯಾಂಡಲ್‌ವುಡ್, ಟಾಲಿವುಡ್ ಮತ್ತು ಕಾಲಿವುಡ್‌ನಿಂದ ಸದ್ಯ ಬಾಲಿವುಡ್ ಹಾದಿಯಲ್ಲಿರುವ ರಶ್ಮಿಕಾ ಮಂದಣ್ಣ
  • ರಶ್ಮಿಕಾ ಮಂದಣ್ಣ ತಾನು ನಟಿಸಿದ ಎಲ್ಲಾ ಭಾಷೆಗಳಲ್ಲೂ ಬ್ಲಾಕ್ ಬಸ್ಟರ್ ಪಡೆದಿರುವ ನಾಯಕಿ
  • ರಶ್ಮಿಕಾ ಮಂದಣ್ಣ ಕ್ರಂಚಿ ರೋಲ್ ಅನಿಮೆ ಅವಾರ್ಡ್ಸ್ ಭಾಗವಾಗಿ ಭಾರತವನ್ನು ಪ್ರತಿನಿಧಿಸಲು ಜಪಾನ್‌ನ ಟೋಕಿಯೊಗೆ ತೆರಳಿದ್ದಾರೆ
 ‌Rashmika Mandanna: ವಿದೇಶದಲ್ಲಿ ರಶ್ಮಿಕಾ ಕ್ರೇಜ್.. ನ್ಯಾಷನಲ್‌ ಕ್ರಷ್‌ಗೆ ಅದ್ಧೂರಿ ಸ್ವಾಗತ ನೀಡಿದ ಜಪಾನ್ ಫ್ಯಾನ್ಸ್! title=

Rashmika Mandanna: ಸ್ಯಾಂಡಲ್‌ವುಡ್, ಟಾಲಿವುಡ್ ಮತ್ತು ಕಾಲಿವುಡ್‌ನಿಂದ ಸದ್ಯ ಬಾಲಿವುಡ್ ಹಾದಿಯಲ್ಲಿರುವ ರಶ್ಮಿಕಾ ಮಂದಣ್ಣ ತಾನು ನಟಿಸಿದ ಎಲ್ಲಾ ಭಾಷೆಗಳಲ್ಲೂ ಬ್ಲಾಕ್ ಬಸ್ಟರ್ ಪಡೆದಿರುವ ನಾಯಕಿ.. ಕಳೆದ ವರ್ಷದ ಆರಂಭದಲ್ಲಿ, 'ಮಿಷನ್ ಮಜ್ನು' ಮತ್ತು 'ಅನಿಮಲ್' ಚಿತ್ರದಲ್ಲಿ ಮಿಂಚಿ ಪ್ಯಾನ್-ಇಂಡಿಯಾ ಮಟ್ಟದಲ್ಲಿರುವ ನಟಿಯ ಸಾಮರ್ಥ್ಯ ಏನು ಎಂಬುದನ್ನು ತೋರಿಸಿದ್ದಾರೆ... 

ಇತ್ತೀಚೆಗೆ, ರಶ್ಮಿಕಾ ಮಂದಣ್ಣ ಕ್ರಂಚಿ ರೋಲ್ ಅನಿಮೆ ಅವಾರ್ಡ್ಸ್ ಭಾಗವಾಗಿ ಭಾರತವನ್ನು ಪ್ರತಿನಿಧಿಸಲು ಜಪಾನ್‌ನ ಟೋಕಿಯೊಗೆ ತೆರಳಿದ್ದಾರೆ... ಈ ಕಾರ್ಯಕ್ರಮ ನಾಳೆ ಟೋಕಿಯೋದಲ್ಲಿ ಅದ್ಧೂರಿಯಾಗಿ ನಡೆಯಲಿದ್ದು.. ಪ್ರಶಸ್ತಿ ಕಾರ್ಯಕ್ರಮದಲ್ಲಿ ಪಾಲ್ಗೋಳ್ಳಲು ನಟಿ ಜಪಾನ್‌ಗೆ ಆಗಮಿಸಿದಾಗ ಅವರಿಗೆ ಅದ್ಧೂರಿ ಸ್ವಾಗತ ದೊರಕಿದೆ.. 

ಇದನ್ನೂ ಓದಿ-ನಾಗ ಚೈತನ್ಯ ಅಲ್ಲ.. ಸಮಂತಾ ಮೊದಲು ಪ್ರೀತಿಸಿದ್ದು ಈತನನ್ನು!

ಹೌದು ನಟಿ ರಶ್ಮಿಕಾ ಮಂದಣ್ಣ ಭಾರತದಲ್ಲಿ ಮಾತ್ರವಲ್ಲ.. ವಿದೇಶದಲ್ಲೂ ಫ್ಯಾನ್‌ ಪಾಲೋಯಿಂಗ್‌ ಹೊಂದಿದ್ದಾರೆ.. ಟೋಕಿಯೋ ವಿಮಾನ ನಿಲ್ದಾಣದಲ್ಲಿ ಅಭಿಮಾನಿಗಳು ನೀಡಿದ ಸ್ವಾಗತದಿಂದ ರಶ್ಮಿಕಾ  ಆಶ್ಚರ್ಯಚಕಿತರಾಗಿದ್ದಾರೆ..

ಇನ್ನು ನಟಿ ರಶ್ಮಿಕಾ ಪುಷ್ಪ ಮತ್ತು ಡಿಯರ್ ಕಾಮ್ರೇಡ್‌ನಂತಹ ಸಿನಿಮಾಗಳಿಂದ ರಾಷ್ಟ್ರಮಟ್ಟದಲ್ಲಿ ಮಾತ್ರವಲ್ಲದೆ ಗ್ಲೋಬಲ್‌ ಸ್ಟಾರ್‌ ಆಗಿ ಲಕ್ಷಾಂತರ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಸದ್ಯ ರಶ್ಮಿಕಾಗೆ ಜಪಾನ್‌ನಲ್ಲೂ ಅಭಿಮಾನಿಗಳಿದ್ದಾರೆ ಎನ್ನುವುದು ತಿಳಿದುಬಂದಿದೆ...  ರಶ್ಮಿಕಾ ಮಂದಣ್ಣ ಸಿನಿಮಾಗಳ ವಿಚಾರಕ್ಕೆ ಬಂದರೆ ಸದ್ಯ ಅವರ ಕೈಯಲ್ಲಿ ದೊಡ್ಡ ದೊಡ್ಡ ಪ್ರಾಜೆಕ್ಟ್‌ಗಳಿವೆ.. 

ಇದನ್ನೂ ಓದಿ-ಶರಣ್ ಅಭಿನಯದ ಬಹು ನಿರೀಕ್ಷಿತ ʻಛೂ ಮಂತರ್ʼ ರಿಲೀಸ್‌ ಡೇಟ್‌ ಫಿಕ್ಸ್‌

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

 

Trending News