Rashmika Mandanna: ವರ್ಷಗಳ ಹಿಂದೆ ರಶ್ಮಿಕಾ ಮಂದಣ್ಣ ನಿಶ್ಚಿತಾರ್ಥ ಮುರಿದುಬಿದ್ದಿದ್ದಕ್ಕೆ ಇದೇ ಕಾರಣವಂತೆ!

Rashmika Mandanna Breakup Reason: ಇತ್ತೀಚಿನ ಸೂಪರ್‌ ಹಿಟ್‌ ಸಿನಿಮಾ ಅನಿಮಲ್‌ನಲ್ಲಿ ನಟಿಸಿರುವ ನಟಿ ರಶ್ಮಿಕಾ ಮಂದಣ್ಣ ಇದೀಗ ವೈಯಕ್ತಿಕ ವಿಚಾರವಾಗಿ ಸುದ್ದಿಯಲ್ಲಿದ್ದಾರೆ..   

Written by - Savita M B | Last Updated : Jan 9, 2024, 12:58 PM IST
  • ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಅವರ ನಿಶ್ಚಿತಾರ್ಥದ ಸುದ್ದಿ ಎಲ್ಲೆಡೆ ಹರಿದಾಡುತ್ತಿದೆ
  • ಇನ್ನೂ ಅಧಿಕೃತವಾಗಿ ಯಾವ ಮಾಹಿತಿಯೂ ಹೊರಬಿದ್ದಿಲ್ಲ
  • ಆದರೆ ವಿಜಯ್ ಅವರಿಗೂ ಮೊದಲೇ ರಶ್ಮಿಕಾ ಹೃದಯ ಬೇರೆಯವರಿಗಾಗಿ ಮಿಡಿದಿತ್ತು
Rashmika Mandanna: ವರ್ಷಗಳ ಹಿಂದೆ ರಶ್ಮಿಕಾ ಮಂದಣ್ಣ ನಿಶ್ಚಿತಾರ್ಥ ಮುರಿದುಬಿದ್ದಿದ್ದಕ್ಕೆ ಇದೇ ಕಾರಣವಂತೆ!  title=

Rashmika-Vijay Devarakonda: ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಅವರ ನಿಶ್ಚಿತಾರ್ಥದ ಸುದ್ದಿ ಎಲ್ಲೆಡೆ ಹರಿದಾಡುತ್ತಿದೆ.. ಆದರೆ, ಇನ್ನೂ ಅಧಿಕೃತವಾಗಿ ಯಾವ ಮಾಹಿತಿಯೂ ಹೊರಬಿದ್ದಿಲ್ಲ.. ಆದರೆ ವಿಜಯ್ ಅವರಿಗೂ ಮೊದಲೇ ರಶ್ಮಿಕಾ ಹೃದಯ ಬೇರೆಯವರಿಗಾಗಿ ಮಿಡಿದಿತ್ತು.. ಅವರೇ ಕನ್ನಡದ ನಟ ರಕ್ಷಿತ್‌ ಶೆಟ್ಟಿ.. ಇವರೊಂದಿಗೆ ನಟಿ ನಿಶ್ಚಿತಾರ್ಥವನ್ನೂ ಮಾಡಿಕೊಂಡಿದ್ದರು.. ಆದರೆ ಆ ಸಂಬಂಧ ಮುರಿದುಬಿದ್ದಿತ್ತು.. 

ಮಾಧ್ಯಮ ವರದಿಗಳ ಪ್ರಕಾರ, ರಶ್ಮಿಕಾ ಮತ್ತು ರಕ್ಷಿತ್ ಸಂಬಂಧ ಮುರಿಯಲು ಕಾರಣ ಅವರ ಹೊಂದಾಣಿಕೆಯಲ್ಲಿನ ಸಮಸ್ಯೆಗಳು. ಈ 14 ತಿಂಗಳ ಅವಧಿಯಲ್ಲಿ ಇಬ್ಬರ ನಡುವೆ ಸಾಕಷ್ಟು ಸಮಸ್ಯೆಗಳು ಶುರುವಾದ ಸುದ್ದಿಗಳೂ ಇದ್ದವು.. ಬಳಿಕ ಇಬ್ಬರೂ ಒಪ್ಪಿಗೆಯ ಮೇರೆಗೆ ಬೇರೆಯಾಗಲು ನಿರ್ಧರಿಸಿದ್ದರು ಎನ್ನಲಾಗಿದೆ.. 

ಇದನ್ನೂ ಓದಿ-ಐಎಂಡಿಬಿ ಘೋಷಿಸಿರುವ 2024ರ ಬಹುನಿರೀಕ್ಷಿತ ಭಾರತೀಯ ಚಿತ್ರಗಳಿವು!

ಇನ್ನು ಇದೀಗ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ರಿಲೇಷನ್‌ಶಿಪ್‌ ಸುದ್ದಿ ಸೋಷಿಯಲ್‌ ಮಿಡಿಯಾದಲ್ಲಿ ವೈರಲ್‌ ಆಗುತ್ತಿದೆ.. ಮಾಧ್ಯಮ ವರದಿಗಳ ಪ್ರಕಾರ, ಈ ಇಬ್ಬರು ತಾರೆಯರು ಮುಂದಿನ ತಿಂಗಳು ಅಂದರೆ ಫೆಬ್ರವರಿಯಲ್ಲಿ ನಿಶ್ಚಿತಾರ್ಥ ಮಾಡಿಕೊಳ್ಳಬಹುದು ಎನ್ನಲಾಗುತ್ತಿದೆ.. ಆದರೆ, ಈ ಬಗ್ಗೆ ಇಬ್ಬರೂ ಅಧಿಕೃತವಾಗಿ ಏನನ್ನೂ ಹೇಳಿಲ್ಲ. 

ರಶ್ಮಿಕಾ ಮಂದಣ್ಣ ದಕ್ಷಿಣದಿಂದ ಬಾಲಿವುಡ್ ಇಂಡಸ್ಟ್ರಿಗೆ ಸಾಕಷ್ಟು ಹೆಸರು ಗಳಿಸಿದ ನಟಿ. ಇತ್ತೀಚೆಗೆ ಬಿಡುಗಡೆಯಾದ ಅನಿಮಲ್‌ ಚಿತ್ರದಲ್ಲಿ ಬೋಲ್ಡ್‌ ಆಗಿ ನಟಿಸುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.. ಅಲ್ಲದೇ ಅಲ್ಲು ಅರ್ಜುನ್‌ ಅಭಿನಯದ ‘ಪುಷ್ಪ’ ಚಿತ್ರದಲ್ಲಿ ಶ್ರೀವಲ್ಲಿಯಾಗಿ ನಟಿಸುವ ಮೂಲಕ ಅಭಿಮಾನಿಗಳ ಮನ ಗೆದ್ದಿದ್ದಾರೆ.. 

ಇದನ್ನೂ ಓದಿ-BBK10: ದೊಡ್ಮನೆಯೊಳಗೆ ಜೋರಾದ ಪೈಪೋಟಿ...! ಫಿನಾಲೆ ಹೊಸ್ತಿಲಲ್ಲಿ ಸ್ಪರ್ಧಿಗಳ ಎದೆಗೆ ನಾಮಿನೇಷನ್‌ ಚೂರಿ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News