Rashmika Mandanna: ʼವಿಡಿ ನನ್ನ ಭಾವಿ ಪತಿʼ.. ಕ್ಲ್ಯಾರಿಟಿ ಕೊಟ್ಟ ರಶ್ಮಿಕಾ! ಶೀಘ್ರದಲ್ಲೇ ಮದುವೆ ಘೋಷಣೆ?

Rashmika Mandanna Comment: ಹಲವು ವರ್ಷಗಳಿಂದ ಅಫೇರ್ ವದಂತಿಗಳಿಗೆ ತಳುಕು ಹಾಕಿಕೊಳ್ಳುತ್ತಿರುವ ರಶ್ಮಿಕಾ ಸದ್ಯ ತನ್ನ ಭಾವಿ ಪತಿ ಯಾರು ಎನ್ನುವುದನ್ನು ನೇರವಾಗಿ ಹೇಳಿದ್ದಾರೆ..

Written by - Savita M B | Last Updated : Feb 27, 2024, 01:18 PM IST
  • ಸ್ಯಾಂಡಲ್‌ವುಡ್‌ನಿಂದ ಟಾಲಿವುಡ್‌, ಬಾಲಿವುಡ್‌ ನಲ್ಲಿಯೂ ಸೌಂಡ್‌ ಮಾಡುತ್ತಿರುವ ನ್ಯಾಷನಲ್‌ ಕ್ರಷ್‌
  • ನ್ಯಾಷನಲ್‌ ಕ್ರಷ್‌ ರಶ್ಮಿಕಾ ಮಂದಣ್ಣ ಸದ್ಯ ಪ್ಯಾನ್‌ ಇಂಡಿಯಾ ಹಿರೋಯಿನ್‌ ಆಗಿ ಮಿಂಚುತ್ತಿದ್ದಾರೆ..
  • ಇತ್ತೀಚೆಗೆ ನಟಿ ಒಂದು ಪೋಸ್ಟ್‌ಗೆ ಪರೋಕ್ಷವಾಗಿ ಪ್ರತಿಕ್ರಿಯಿದ್ದಾರೆ..
Rashmika Mandanna: ʼವಿಡಿ ನನ್ನ ಭಾವಿ ಪತಿʼ.. ಕ್ಲ್ಯಾರಿಟಿ ಕೊಟ್ಟ ರಶ್ಮಿಕಾ! ಶೀಘ್ರದಲ್ಲೇ ಮದುವೆ ಘೋಷಣೆ?  title=

Rashmika Mandanna: ಸ್ಯಾಂಡಲ್‌ವುಡ್‌ನಿಂದ ಟಾಲಿವುಡ್‌, ಬಾಲಿವುಡ್‌ ನಲ್ಲಿಯೂ ಸೌಂಡ್‌ ಮಾಡುತ್ತಿರುವ ನ್ಯಾಷನಲ್‌ ಕ್ರಷ್‌ ರಶ್ಮಿಕಾ ಮಂದಣ್ಣ ಸದ್ಯ ಪ್ಯಾನ್‌ ಇಂಡಿಯಾ ಹಿರೋಯಿನ್‌ ಆಗಿ ಮಿಂಚುತ್ತಿದ್ದಾರೆ.. ಟಾಲಿವುಡ್‌ಗೆ ಎಂಟ್ರಿ ಕೊಟ್ಟಾಗಿನಿಂದಲೂ ನಟಿಯ ಅಫೇರ್ ವದಂತಿಗಳು ಸಾಕಷ್ಟು ಹಬ್ಬಿವೆ.. ಆದರೆ ಅದ್ಯಾವುದಕ್ಕೂ ರಶ್ಮಿಕಾ ಪ್ರತಿಕ್ರಿಯಿಸಿಲ್ಲ.. ಆದರೆ ಇತ್ತೀಚೆಗೆ ನಟಿ ಒಂದು ಪೋಸ್ಟ್‌ಗೆ ಪರೋಕ್ಷವಾಗಿ ಪ್ರತಿಕ್ರಿಯಿದ್ದಾರೆ..

ನಟಿ ರಶ್ಮಿಕಾ ಮಂದಣ್ಣ ಸಿನಿರಂಗಕ್ಕೆ ಎಂಟ್ರಿ ಕೊಟ್ಟ ನಂತರ ಮೊದಲ ಸಿನಿಮಾದಲ್ಲಿ ನಟಿಸಿದ ಕೋ ಸ್ಟಾರ್‌ ರಕ್ಷಿತ್‌ ಶೆಟ್ಟಿ ಅವರೊಂದಿಗೆ ಪ್ರೀತಿಯಲ್ಲಿ ಬಿದ್ದು.. ಎಂಗೇಜ್‌ಮೆಂಟ್ ಸಹ ಮಾಡಿಕೊಂಡಿದ್ದರು.. ಆದರೆ ಕೆಲದಿನಗಳ ನಂತರ ಕಾರಣಾಂತರಗಳಿಂದ ಇಬ್ಬರೂ ದೂವಾದರು.. 

ಇದನ್ನೂ ಓದಿ-ʼಚುಕ್ಕಿತಾರೆʼಯಾಗಿ ಮಿಂಚುತ್ತಿರುವ ನವೀನ್‌ ಸಜ್ಜು ಅಭಿನಯಕ್ಕೆ ಸಿನಿಪ್ರೇಮಿಗಳಿಂದ ಬಹುಪರಾಕ್!

ಟಾಲಿವುಡ್‌ಗೆ ಪದಾರ್ಪಣೆ ಮಾಡಿದ ನಂತರ ಗೀತ ಗೋವಿಂದಂ ಚಿತ್ರದಲ್ಲಿ ವಿಜಯ್‌ ದೇವರಕೊಂಡ ಜೊತೆ ನಟಿಸಿದ್ದರು.. ಈ ಸಿನಿಮಾದಲ್ಲಿ ಇವರಿಬ್ಬರ ಆನ್‌ಸ್ಕ್ರೀನ್‌ ಕೆಮಿಸ್ಟ್ರೀ ಅಭಿಮಾನಿಗಳಿಗೆ ಸಖತ್‌ ಇಷ್ಟವಾಗಿತ್ತು.. ಹೀಗೆ ಒಂದೆರಡು ಸಿನಿಮಾಗಳಲ್ಲಿ ಒಟ್ಟಿಗೆ ನಟಿಸಿದ ಇವರಿಬ್ಬರೂ ರಿಲೇಷನ್‌ಶಿಪ್‌ನಲ್ಲಿದ್ದಾರೆ ಎನ್ನುವ ವದಂತಿಗಳು ಇಲ್ಲಿಯವರೆಗೂ ಹರಡುತ್ತಲೇ ಇವೆ..

ಇದನ್ನೂ ಓದಿ-Pankaj Udhas Death : ಖ್ಯಾತ ಗಜಲ್ ಗಾಯಕ ಪಂಕಜ್ ಉದಾಸ್ ಇನ್ನಿಲ್ಲ

ಆದರೆ ಯಾವುದೇ ವದಂತಿಗಳಿಗೂ ಪ್ರತಿಕ್ರಿಯಿಸದ ರಶ್ಮಿಕಾ ಇತ್ತೀಚೆಗೆ ದೆಹಲಿ ಫ್ಯಾನ್ಸ್ ಎಕ್ಸ್ (ಟ್ವಿಟ್ಟರ್) ಖಾತೆಯಲ್ಲಿ ಹಂಚಿಕೊಂಡಿದ್ದ ತಮ್ಮ ಪೋಸ್ಟ್‌ಗೆ ರಿಯಾಕ್ಟ್‌ ಮಾಡಿದ್ದಾರೆ.. ಆ ಪೋಸ್ಟ್‌ನಲ್ಲಿ "ರಶ್ಮಿಕಾ ಭಾವಿ ಪತಿ ವಿಡಿಯಂತಿರಬೇಕು..ನನ್ನ ಪ್ರಕಾರ ವಿಡಿ ಎಂದರೆ ವೆರಿ ಡೇರಿಂಗ್.. ಕ್ವೀನ್‌ ಎಂದು ಕರೆಸಿಕೊಳ್ಳುವ ರಶ್ಮಿಕಾಗೆ ಅವನೇ ರಾಜನಾಗಿರಬೇಕು" ಎಂದು ಬರೆದುಕೊಂಡಿದ್ದಾರೆ.. ಇದಕ್ಕೆ  ರಶ್ಮಿಕಾ ಮಂದಣ್ಣ, 'ಹೌದು, ಇದು ನಿಜ' ಎಂದು ಕಾಮೆಂಟ್ ಮಾಡಿದ್ದಾರೆ.. 

ಆದರೆ ಇಲ್ಲಿ ವೈರಲ್‌ ಆಗುತ್ತಿರುವುದು ವಿಡಿ ಎನ್ನುವ ಪದ ಮಾತ್ರ ಏಕೆಂದರೆ ವಿಜಯ್‌ ದೇವರಕೊಂಡ ಅವರನ್ನು ಶಾರ್ಟ್‌ ಆಗಿ ವಿಡಿ ಎಂತಲೂ ಕರೆಯುತ್ತಾರೆ,, ಹಾಗಾಗಿ ಅಭಿಮಾನಿಗಳು ಫುಲ್‌ ಖುಷ್‌ ಆಗಿದ್ದು.. ಮದುವೆ ಘೋಷಣೆ ಯಾವಾಗ ಬೇಕಾದರೂ ಆಗಬಹುದು ಎಂದು ಕಾಮೆಂಟ್ ಮಾಡುತ್ತಿದ್ದಾರೆ.. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

 

Trending News