Rashmika Mandanna: ಇವರೇ ನೋಡಿ ರಶ್ಮಿಕಾ ಮಂದಣ್ಣ ಫೇವರೆಟ್ ಕ್ರಿಕೆಟರ್ ಹಾಗೂ IPL ತಂಡ

Rashmika Mandanna: ರಶ್ಮಿಕಾ ಮಂದಣ್ಣ ತಮ್ಮ ನೆಚ್ಚಿನ ಐಪಿಎಲ್ ಬ್ಯಾಟ್ಸ್‌ಮನ್ ಮತ್ತು ತಂಡ ಯಾವುದೆಂದು ಬಹಿರಂಗಪಡಿಸಿದ್ದಾರೆ. ಭಾರತದಲ್ಲಿ ಐಪಿಎಲ್‌ ಫೀವರ್‌ ಮಧ್ಯೆ ರಶ್ಮಿಕಾ ಮಂದಣ್ಣ ಅವರ ಈ ಮಾತುಗಳು ಅಭಿಮಾನಿಗಳಲ್ಲಿ ಜೋಷ್‌ ಹುಟ್ಟುಹಾಕಿದೆ.   

Written by - Chetana Devarmani | Last Updated : May 3, 2023, 04:24 PM IST
  • ನ್ಯಾಷನಲ್‌ ಕ್ರಷ್‌ ರಶ್ಮಿಕಾ ಮಂದಣ್ಣ
  • ರಶ್ಮಿಕಾ ಮಂದಣ್ಣ ಫೇವರೆಟ್ ಕ್ರಿಕೆಟರ್ ಇವರೇ
  • IPL ನಲ್ಲಿ ರಶ್ಮಿಕಾ ಅವರ ನೆಚ್ಚಿನ ತಂಡ ಇದೇ
Rashmika Mandanna: ಇವರೇ ನೋಡಿ ರಶ್ಮಿಕಾ ಮಂದಣ್ಣ ಫೇವರೆಟ್ ಕ್ರಿಕೆಟರ್ ಹಾಗೂ IPL ತಂಡ  title=
Rashmika Mandanna

Rashmika Mandanna: ರಶ್ಮಿಕಾ ಮಂದಣ್ಣ ಸದ್ಯ ಟಾಪ್‌ ನಟಿಯರಲ್ಲಿ ಒಬ್ಬರು. ಅಲ್ಲದೇ ಅತ್ಯಂತ ಜನಪ್ರಿಯ ನಟಿಯೂ ಹೌದು. ರಶ್ಮಿಕಾ ಅಂದ ಮತ್ತು ಅದ್ಭುತ ನಟನಾ ಸಾಮರ್ಥ್ಯದಿಂದ ದೊಡ್ಡ ಅಭಿಮಾನಿ ಬಳಗವನ್ನು ಗಳಿಸಿದ್ದಾರೆ. ಸದ್ಯ ಭಾರತದಲ್ಲಿ ಐಪಿಎಲ್‌ ಫೀವರ್‌ ಜೋರಾಗಿದೆ. ಇಂಡಿಯನ್ ಪ್ರೀಮಿಯರ್ ಲೀಗ್ ಹಣಾಹಣಿಯ ಮಧ್ಯೆ ರಶ್ಮಿಕಾ ಮಂದಣ್ಣ ತಮ್ಮ ನೆಚ್ಚಿನ ಟೀಂ ಮತ್ತು ಕ್ರಿಕೆಟರ್‌ ಯಾರೆಂದು ಬಹಿರಂಗಪಡಿಸಿದ್ದಾರೆ.  

ನ್ಯಾಷನಲ್‌ ಕ್ರಷ್‌ ರಶ್ಮಿಕಾ ಮಂದಣ್ಣ ಅವರು ಸ್ಟಾರ್ ಸ್ಪೋರ್ಟ್ಸ್‌ ಜೊತೆ ಮಾತನಾಡುತ್ತಾ, ವಿರಾಟ್ ಕೊಹ್ಲಿಯನ್ನು ತಮ್ಮ ನೆಚ್ಚಿನ ಕ್ರಿಕೆಟಿಗ ಎಂದು ಹೇಳಿದ್ದಾರೆ. ಅಲ್ಲದೇ ಕೊಹ್ಲಿ ಸಾಧನೆ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಅವರ ಆತ್ಮವಿಶ್ವಾಸವನ್ನು ಹೊಗಳಿದ್ದಾರೆ. ತಮ್ಮ ನೆಚ್ಚಿನ ಕ್ರಿಕೆಟಿಗ ವಿರಾಟ್ ಕೊಹ್ಲಿ, ಅವರೊಂದು ಅದ್ಭುತ ಎಂದು ರಶ್ಮಿಕಾ ಹೇಳಿದ್ದಾರೆ. 

ಇದನ್ನೂ ಓದಿ: ಖ್ಯಾತ ತಮಿಳು ಹಾಸ್ಯ ನಟ ಮನೋಬಾಲಾ ನಿಧನ..!

ಮೂಲತಃ ಕರ್ನಾಟಕದವರಾದ ರಶ್ಮಿಕಾ ಐಪಿಎಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಉತ್ಸಾಹದಿಂದ ಬೆಂಬಲಿಸುತ್ತಾರೆ. "ನಾನು ಬೆಂಗಳೂರಿನವಳು, ನಾನು ಕರ್ನಾಟಕದವಳು ಮತ್ತು ನಮ್ಮಲ್ಲಿ ʻಈ ಸಲ ಕಪ್ ನಮ್ದೆʼ ಕೂಗು ಜೋರಾಗಿದೆ. ಹಾಗಾಗಿ ಅದನ್ನು ಮುಂದುವರಿಸಲು ನಾನೂ ಬಯಸುತ್ತೇನೆ" ಎಂದು ರಶ್ಮಿಕಾ ಹೇಳಿದ್ದಾರೆ. ರಶ್ಮಿಕಾ ಮಂದಣ್ಣ ಈ ಮೂಲಕ ತಮ್ಮ ನೆಚ್ಚಿನ ಕ್ರಿಕೆಟರ್‌ ಕೊಹ್ಲಿ ಹಾಗೂ ಫೆವರೇಟ್‌ ಟೀಂ ಆರ್‌ಸಿಬಿ ಎಂದಿದ್ದಾರೆ. 

ರಶ್ಮಿಕಾ ಮಂದಣ್ಣ, ತಮನ್ನಾ ಭಾಟಿಯಾ ಮತ್ತು ಅರ್ಜಿತ್ ಸಿಂಗ್ ಅವರು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2023 ರ ಉದ್ಘಾಟನಾ ಸಮಾರಂಭದಲ್ಲಿ ಭಾಗಿಯಾಗಿದ್ದರು.  

ಇದನ್ನೂ ಓದಿ: 'ನೀನಿಲ್ಲದೆ ಎಲ್ಲವೂ ಖಾಲಿ ಖಾಲಿ' : ಅಮ್ಮನ ನೆನೆದು ಭಾವುಕರಾದ ನಟಿ ಮಾನ್ವಿತಾ ಕಾಮತ್

ರಶ್ಮಿಕಾ ಮಂದಣ್ಣ ಇತ್ತೀಚೆಗೆ ಮಿಷನ್ ಮಜ್ನು ಚಿತ್ರದಲ್ಲಿ ಸಿದ್ಧಾರ್ಥ್ ಮಲ್ಹೋತ್ರಾ ಜೊತೆ ಕಾಣಿಸಿಕೊಂಡಿದ್ದರು. ಶಂತನು ಬಾಗ್ಚಿ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಇದು ಜನವರಿ 20 ರಂದು ನೆಟ್‌ಫ್ಲಿಕ್ಸ್‌ನಲ್ಲಿ ರಿಲೀಸ್‌ ಆಗಿದೆ. ಇದು ಸಿದ್ಧಾರ್ಥ್ ಮಲ್ಹೋತ್ರಾ ಅವರೊಂದಿಗಿನ ಅವರ ಮೊದಲ ಸಹಯೋಗವಾಗಿತ್ತು. ನಟಿ ಈಗ ರಣಬೀರ್ ಕಪೂರ್ ಅಭಿನಯದ ಮುಂಬರುವ ಚಿತ್ರದ ತಯಾರಿಯಲ್ಲಿದ್ದಾರೆ. ಸಂದೀಪ್ ವಂಗ ಅವರು ಉಸ್ತುವಾರಿ ವಹಿಸಿದ್ದಾರೆ.

ಅದರ ಹೊರತಾಗಿ, ಅವರು ಅಲ್ಲು ಅರ್ಜುನ್ ಜೊತೆ ಪುಷ್ಪಾ 2 ಸಿನಿಮಾದಲ್ಲೂ ರಶ್ಮಿಕಾ ಕೆಲಸ ಮಾಡುತ್ತಿದ್ದಾರೆ. ಮಾಸ್ ಎಂಟರ್‌ಟೈನರ್ ಸಿನಿಮಾ ಈಗ ನಿರ್ಮಾಣ ಹಂತದಲ್ಲಿದೆ. ವರದಿಗಳ ಪ್ರಕಾರ, ಆಕ್ಷನ್-ಡ್ರಾಮಾ ಚಿತ್ರದಲ್ಲಿ ಸಾಯಿ ಪಲ್ಲವಿ ಕೂಡ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ. 

ಇದನ್ನೂ ಓದಿ: ಸಮಂತಾ ಜೊತೆ ವಿಚ್ಛೇದನದ ಬಳಿಕ ಎಷ್ಟು ಜನರಿಗೆ ಕಿಸ್‌ ಮಾಡಿದ್ದಾರೆ ಗೊತ್ತಾ ನಾಗ ಚೈತನ್ಯ?

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಆಧ್ಯಾತ್ಮ, ಜೀವನಶೈಲಿ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News