ರಶ್ಮಿಕಾ ಮಂದಣ್ಣ ಡೀಪ್‌ಫೇಕ್ ವಿಡಿಯೋ ಪ್ರಕರಣ; ಬಿಹಾರ ಯುವಕನ ಬಂಧನ..!

Rashmika Deep Fake Video: ನ್ಯಾಶನಲ್ ಕ್ರಶ್, ಟಾಲಿವುಡ್ ನಾಯಕಿ ರಶ್ಮಿಕಾ ಮಂದಣ್ಣ ಡೀಪ್‌ ಫೇಕ್‌ ವೈರಲ್ ವೀಡಿಯೋ ಬಗ್ಗೆ ಕೇಂದ್ರ ಸಚಿವರು ಗಂಭೀರವಾಗಿದ್ದು, ಇತ್ತೀಚೆಗೆ ಈ ವಿಚಾರವಾಗಿ ಓರ್ವ ಯುವಕನನ್ನು ಬಂಧಿಸಲಾಗಿದೆ..  

Written by - Savita M B | Last Updated : Nov 17, 2023, 12:17 AM IST
  • ರಶ್ಮಿಕಾ ಮಂದಣ್ಣ ಡೀಪ್‌ಫೇಕ್ ವಿಡಿಯೋ ಪ್ರಕರಣ
  • ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ತೀವ್ರ ತನಿಖೆ ಆಂಭವಾಗಿದೆ
  • ಸದ್ಯ ಬಿಹಾರದ ಯುವಕನನ್ನು ಬಂಧಿಸಲಾಗಿದೆ
ರಶ್ಮಿಕಾ ಮಂದಣ್ಣ ಡೀಪ್‌ಫೇಕ್ ವಿಡಿಯೋ ಪ್ರಕರಣ; ಬಿಹಾರ ಯುವಕನ ಬಂಧನ..!  title=

Rashmika Mandanna: ನ್ಯಾಶನಲ್ ಕ್ರಶ್ ರಶ್ಮಿಕಾ ಮಂದಣ್ಣ ಅವರ ಮಾರ್ಫಿಂಗ್ ವಿಡಿಯೋ ಅಂತರ್ಜಾಲದಲ್ಲಿ ವೈರಲ್ ಆಗುತ್ತಿದ್ದಂತೆ... ಈ ಬಗ್ಗೆ ಅನೇಕ ಸಿನಿಮಾ ಮತ್ತು ರಾಜಕೀಯ ಗಣ್ಯರು ಪ್ರತಿಕ್ರಿಯೆ ನೀಡಿದ್ದಾರೆ.. 

ಎಐ ಆಧಾರದಲ್ಲಿ ಮಾಡಿರುವ ಈ ವಿಡಿಯೋಗೆ ದೊಡ್ಡ ಮಟ್ಟದ ಟೀಕೆಗಳು ಹರಿದು ಬರುತ್ತಿವೆ. ಬ್ರಿಟಿಷ್ ಇಂಡಿಯನ್ ಮತ್ತು ಇನ್‌ಸ್ಟಾಗ್ರಾಮ್ ಪ್ರಭಾವಿ ಜಾರಾ ಪಟೇಲ್ ಅವರ ಮೂಲ ವೀಡಿಯೊವನ್ನು ರಶ್ಮಿಕಾ ಅವರ ಮುಖದೊಂದಿಗೆ ಮಾರ್ಫ್ ಮಾಡಿ.. ಸಾಮಾಜಿಕ ಮಾಧ್ಯಮದಲ್ಲಿ ಅಪ್‌ಲೋಡ್ ಮಾಡಲಾಗಿದೆ. ಆದರೆ ಈ ವಿಡಿಯೋದ ಮಾರ್ಫಿಂಗ್‌ನಲ್ಲಿ ಭಾಗಿಯಾಗಿಲ್ಲ ಎಂದು Instagram ಬಹಿರಂಗಪಡಿಸಿದೆ. 

ಇದನ್ನೂ ಓದಿ-Tiger 3: ಥಿಯೇಟರ್ ಒಳಗೆ ಪಟಾಕಿ..! ಅಭಿಮಾನಿಗಳ ಕೃತ್ಯಕ್ಕೆ ಪ್ರತಿಕ್ರಿಯಿಸಿದ ಸಲ್ಮಾನ್ ಖಾನ್

ಸದ್ಯ ತನಿಖೆಗೆ ವಿಶೇಷ ತಂಡ ರಚಿಸಲಾಗಿದ್ದು, ಈ ಪ್ರಕರಣದಲ್ಲಿ ಖಾಕಿಗಳು ಮಹತ್ವದ ಪ್ರಗತಿ ಸಾಧಿಸಿದ್ದಾರೆ. ಮೊದಲ ಬಾರಿಗೆ, ಈ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ ಖಾತೆಯನ್ನು ಪೊಲೀಸರು ಗುರುತಿಸಿದ್ದಾರೆ ಮತ್ತು ರಶ್ಮಿಕಾ ಅವರ ನಕಲಿ ವೀಡಿಯೊವನ್ನು ಅಪ್‌ಲೋಡ್ ಮಾಡಿದ ಬಗ್ಗೆ ವಿವರಗಳನ್ನು ನೀಡುವಂತೆ ಪೊಲೀಸರು ಫೇಸ್‌ಬುಕ್‌ನ ಮಾತೃ ಸಂಸ್ಥೆ ಮೆಟಾಗೆ ಪತ್ರ ಬರೆದಿದ್ದಾರೆ.

ಈ ವಿಡಿಯೋ ಶೇರ್ ಮಾಡಿದವರ ವಿವರ ನೀಡುವಂತೆ ಮಾಡಿದ ಮನವಿಗೆ ಫೇಸ್ ಬುಕ್ ಮಾಲೀಕರು ಸಮ್ಮತಿಸಿದ್ದು, ಇತ್ತೀಚೆಗಷ್ಟೇ ಮೊದಲ ಬಾರಿಗೆ ಈ ವಿಡಿಯೋ ಶೇರ್ ಮಾಡಿದವರ ವಿವರವನ್ನು ಪೊಲೀಸರಿಗೆ ನೀಡಿದ್ದಾರೆ.

ಇದನ್ನೂ ಓದಿ-Tamannah: ತಮನ್ನಾ ಮದುವೆ.. ಚಿತ್ರರಂಗ ಬಿಡುವ ಸುಳಿವು ಕೊಟ್ರಾ ಮಿಲ್ಕಿ ಬ್ಯೂಟಿ?

ನೀಡಿರುವ ಮಾಹಿತಿಯಂತೆ ಬಿಹಾರದ 19 ವರ್ಷದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ ಮತ್ತು ರಶ್ಮಿಕಾ ನಕಲಿ ವೀಡಿಯೊವನ್ನು ಮೊದಲು ಅವರ ಖಾತೆಯಿಂದ ನೆಟ್‌ನಲ್ಲಿ ಹಂಚಿಕೊಳ್ಳಲಾಗಿದೆ ಎಂದು ಕಂಡುಬಂದಿದ್ದು, ಅದರ ನಂತರ, ವೀಡಿಯೊವನ್ನು ಅನೇಕ ಜನರು ಹಂಚಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ..

ಈ ವಿಡಿಯೋವನ್ನು ಬೇರೊಂದು ಸಾಮಾಜಿಕ ಜಾಲತಾಣದಿಂದ ಡೌನ್‌ಲೋಡ್ ಮಾಡಿ ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿರುವುದಾಗಿ ಬಂಧಿತ ಯುವಕ ಒಪ್ಪಿಕೊಂಡಿದ್ದಾನೆ. ಆದರೆ, ಈ ಪ್ರಕರಣದಲ್ಲಿ ಇದುವರೆಗೆ ಯಾರನ್ನೂ ಬಂಧಿಸಿಲ್ಲ, ತನಿಖೆಯಷ್ಟೇ ನಡೆಸಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

 

Trending News