Rashmika Mandanna: ವಿಜಯ್ ಜೊತೆ ರಶ್ಮಿಕಾ ಡೇಟಿಂಗ್.. ಒಂದೇ ಮನೆಯಲ್ಲಿ ವಾಸ! ಅದೊಂದು ಸಾಕ್ಷಿ ಸಮೇತ ಸಿಕ್ಕಿಬಿದ್ದ ನ್ಯಾಷನಲ್ ಕ್ರಶ್!

Rashmika Mandanna: ಇತ್ತೀಚೆಗೆ ರಶ್ಮಿಕಾ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ತಮ್ಮ ಹುಟ್ಟುಹಬ್ಬಕ್ಕೆ ಶುಭಾಶಯಗಳನ್ನು ತಿಳಿಸಿದ ಅಭಿಮಾನಿಗಳು ಮತ್ತು ಪ್ರೇಕ್ಷಕರಿಗೆ ಧನ್ಯವಾದ ಅರ್ಪಿಸುವ ವೀಡಿಯೊವನ್ನು ಪೋಸ್ಟ್ ಮಾಡಿದ್ದರೆ. ಆದರೆ ವಿಜಯ್ ದೇವರಕೊಂಡ ಹಳೆ ಫೋಟೋ ಶೇರ್ ಮಾಡಿರುವ ಜಾಗ ಮತ್ತು ರಶ್ಮಿಕಾ ಈಗ ವಿಡಿಯೋ ಹಾಕಿರುವ ಜಾಗ ಒಂದೇ ಆಗಿದೆ

Written by - Bhavishya Shetty | Last Updated : Apr 7, 2023, 06:25 PM IST
    • ರಶ್ಮಿಕಾ ಮಂದಣ್ಣ ಮತ್ತು ನಟ ವಿಜಯ್ ದೇವರಕೊಂಡ ಎರಡು ಸಿನಿಮಾಗಳಲ್ಲಿ ಒಟ್ಟಿಗೆ ನಟಿಸಿದ್ದಾರೆ.
    • ಅವರ ನಡುವೆ ಉತ್ತಮ ಸ್ನೇಹವಿದೆ ಎಂಬುದು ಎಲ್ಲರಿಗೂ ತಿಳಿದ ವಿಚಾರ.
    • ಈ ಬೆನ್ನಲ್ಲೇ ಇಬ್ಬರೂ ಡೇಟಿಂಗ್ ಮಾಡುತ್ತಿದ್ದಾರೆ ಮತ್ತು ಪ್ರೀತಿಸುತ್ತಿದ್ದಾರೆ ಎಂಬ ಊಹಾಪೋಹಗಳು ಹರಿದಾಡಿತು.
Rashmika Mandanna: ವಿಜಯ್ ಜೊತೆ ರಶ್ಮಿಕಾ ಡೇಟಿಂಗ್.. ಒಂದೇ ಮನೆಯಲ್ಲಿ ವಾಸ! ಅದೊಂದು ಸಾಕ್ಷಿ ಸಮೇತ ಸಿಕ್ಕಿಬಿದ್ದ ನ್ಯಾಷನಲ್ ಕ್ರಶ್! title=
Rashmika Mandanna

Rashmika Mandanna: ನ್ಯಾಶನಲ್ ಕ್ರಶ್ ರಶ್ಮಿಕಾ ಮಂದಣ್ಣ ಮತ್ತು ನಟ ವಿಜಯ್ ದೇವರಕೊಂಡ ಎರಡು ಸಿನಿಮಾಗಳಲ್ಲಿ ಒಟ್ಟಿಗೆ ನಟಿಸಿದ್ದಾರೆ. ಗೀತ ಗೋವಿಂದಂ ಸಿನಿಮಾ ಸೂಪರ್ ಹಿಟ್ ಆಗಿದ್ದರೆ, ಡಿಯರ್ ಕಾಮ್ರೇಡ್ ಸಿನಿಮಾ ಫ್ಲಾಪ್ ಆಗಿತ್ತು. ಆದರೆ ಅವರ ನಡುವೆ ಉತ್ತಮ ಸ್ನೇಹವಿದೆ ಎಂಬುದು ಎಲ್ಲರಿಗೂ ತಿಳಿದ ವಿಚಾರ. ಕೆಲ ದಿನಗಳ ಹಿಂದೆ ಇಬ್ಬರೂ ಮುಂಬೈನಲ್ಲಿ ಒಟ್ಟಿಗೆ ಸುತ್ತಾಡುತ್ತಿದ್ದು, ಒಟ್ಟಿಗೆ ಮಾಲ್ಡೀವ್ಸ್‌’ಗೆ ಹೋಗಿದ್ದು ಸಿಕ್ಕಾಪಟ್ಟೆ ಸುದ್ದಿಯಾಗಿತ್ತು. ಈ ಬೆನ್ನಲ್ಲೇ ಇಬ್ಬರೂ ಡೇಟಿಂಗ್ ಮಾಡುತ್ತಿದ್ದಾರೆ ಮತ್ತು ಪ್ರೀತಿಸುತ್ತಿದ್ದಾರೆ ಎಂಬ ಊಹಾಪೋಹಗಳು ಹರಿದಾಡಿತು.

ಇದನ್ನೂ ಓದಿ: IPL 2023: ಹೀನಾಯ ಸೋಲಿನ ಬಳಿಕ RCBಯಿಂದ ಹೊರಬಿದ್ದ ಆಟಗಾರ: ಈ ಮಾರಕ ಬೌಲರ್ ಗ್ರ್ಯಾಂಡ್ ಎಂಟ್ರಿ!

ಈ ಬಗ್ಗೆ ಇಬ್ಬರೂ ಅಧಿಕೃತವಾಗಿ ಪ್ರತಿಕ್ರಿಯಿಸಿಲ್ಲ. ಆದರೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ರಶ್ಮಿಕಾ ಪರೋಕ್ಷವಾಗಿ ನಮ್ಮ ನಡುವೆ ಏನೂ ಇಲ್ಲ, ನಾವು ಒಳ್ಳೆಯ ಸ್ನೇಹಿತರು ಎಂದು ಹೇಳಿದ್ದಾರೆ. ಆದರೆ, ಆ ನಂತರವೂ ರಶ್ಮಿಕಾ ವಿಜಯ್ ಮನೆಗೆ ಹಬ್ಬ ಆಚರಿಸಿ ಹೋಗಿ, ಬಳಿಕ ಒಟ್ಟಿಗೆ ಸುತ್ತಾಡಲು ಹೋಗಿದ್ದಾರೆ. ಇದನ್ನು ಕಂಡ ನೆಟಿಜನ್‌’ಗಳು ಸಾಮಾಜಿಕ ಜಾಲತಾಣಗಳಲ್ಲಿ ಅವರಿಬ್ಬರು ಇನ್ನೂ ಡೇಟಿಂಗ್ ಮಾಡುತ್ತಿದ್ದಾರೆ ಎಂದು ಭಾವಿಸಿದ್ದಾರೆ.

ಇನ್ನು ಇತ್ತೀಚೆಗೆ ರಶ್ಮಿಕಾ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ತಮ್ಮ ಹುಟ್ಟುಹಬ್ಬಕ್ಕೆ ಶುಭಾಶಯಗಳನ್ನು ತಿಳಿಸಿದ ಅಭಿಮಾನಿಗಳು ಮತ್ತು ಪ್ರೇಕ್ಷಕರಿಗೆ ಧನ್ಯವಾದ ಅರ್ಪಿಸುವ ವೀಡಿಯೊವನ್ನು ಪೋಸ್ಟ್ ಮಾಡಿದ್ದರೆ. ಆದರೆ ವಿಜಯ್ ದೇವರಕೊಂಡ ಹಳೆ ಫೋಟೋ ಶೇರ್ ಮಾಡಿರುವ ಜಾಗ ಮತ್ತು ರಶ್ಮಿಕಾ ಈಗ ವಿಡಿಯೋ ಹಾಕಿರುವ ಜಾಗ ಒಂದೇ ಆಗಿದ್ದು, ಇಬ್ಬರೂ ಒಂದೇ ಜಾಗದಲ್ಲಿ ಇದ್ದಾರಾ? ಅವರು ನಿಜವಾಗಿಯೂ ಪ್ರೀತಿಸುತ್ತಿದ್ದಾರೋ ಅಥವಾ ಡೇಟಿಂಗ್ ಮಾಡುತ್ತಿದ್ದಾರೋ ಎಂದು ಹಲವರು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದಾರೆ. ರಶ್ಮಿಕಾ ಅವರ ವಿಡಿಯೋ ಮತ್ತು ವಿಜಯ್ ಅವರ ಫೋಟೋವನ್ನು ನೋಡಿದಾಗ ಅದು ಒಂದೇ ಸ್ಥಳವಲ್ಲವೇ? ಎಂಬ ಗೊಂದಲ ಎಲ್ಲರಲ್ಲೂ ಮೂಡಿದೆ.  

ಆದರೆ ನೆಟ್ಟಿಗರೊಬ್ಬರು ಇದನ್ನು ಪೋಸ್ಟ್ ಮಾಡಿ ರಶ್ಮಿಕಾ ಅವರನ್ನು ಟ್ಯಾಗ್ ಮಾಡಿದಾಗ, ರಶ್ಮಿಕಾ ಇದಕ್ಕೆ ಉತ್ತರಿಸಿದ್ದಾರೆ. ಸದ್ಯ ರಶ್ಮಿಕಾ ಟ್ವೀಟ್ ವೈರಲ್ ಆಗಿದೆ.

ಇದನ್ನೂ ಓದಿ: Good Signs: ಈ ಶುಭ ಸಂಕೇತಗಳು ಶನಿದೇವನ ಕೃಪೆಯಿದೆ ಎಂಬುದರ ಸೂಚಕ: ದಿಢೀರ್ ಧನಪ್ರಾಪ್ತಿಗೈಯುವನು ಛಾಯಾಪುತ್ರ!

ಆದರೆ ಈ ಟ್ವೀಟ್ ಸ್ಪಷ್ಟನೆ ನೀಡುವಿಕೆಯೇ ಅಥವಾ ಇಲ್ಲವೇ? ಅವರು ಡೇಟ್‌ನಲ್ಲಿದ್ದಾರೆ ಎಂದು ಹೇಳುತ್ತದೆಯೇ? ಎಂಬುದು ಮತ್ತಷ್ಟು ಗೊಂದಲಕ್ಕೆ ಕಾರಣವಾಗಿದೆ. ಇನ್ನು ಇಬ್ಬರ ನಡುವೆ ಏನೂ ಇಲ್ಲ ಅಂದ್ರೆ ಇದೇ ವೇಳೆ ಸ್ಪಷ್ಟನೆ ನೀಡುತ್ತೀರಾ ಎಂದು ನೆಟ್ಟಿಗರು ಕೇಳುತ್ತಿದ್ದಾರೆ. ಆದರೆ ನಮ್ಮಿಬ್ಬರ ನಡುವೆ ಏನೂ ಇಲ್ಲ, ಜಾಸ್ತಿ ಯೋಚನೆ ಮಾಡಬೇಡಿ ಎಂದು ರಶ್ಮಿಕಾ ಕಾಮೆಂಟ್ ಮಾಡಿದ್ದಾರೆ ಎಂದು ಹಲವು ನೆಟ್ಟಿಗರು ಹೇಳುತ್ತಿದ್ದಾರೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News