ರಶ್ಮಿಕಾ - ವಿಜಯ್ ಒಂದೇ ಮನೆಯಲ್ಲಿ ವಾಸ..! ಗುಟ್ಟು ರಟ್ಟು ಮಾಡಿದ ಫೋಟೋಸ್‌

Rashmika mandanna vijay devarakonda marriage : ಟಾಲಿವುಡ್‌ ನಟ ವಿಜಯ್ ದೇವರಕೊಂಡ ಮತ್ತು ಕನ್ನಡ ನಟಿ ರಶ್ಮಿಕಾ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವದಂತಿಗಳು ಹಲವು ವರ್ಷಗಳಿಂದ ಹಾರಿದಾಡುತ್ತಿವೆ. ಅಭಿಮಾನಿಗಳು ಹಲವೆಡೆ ಅದನ್ನು ಗಮನಿಸಿ ಸಾಕ್ಷಿ ಸಮೇತ ಟ್ರೋಲ್‌ ಮಾಡುತ್ತಿರುವುದು ಎಲ್ಲರಿಗೂ ತಿಳಿದಿದೆ. ಇದೀಗ ಹೊಸ ವಿಚಾರವೊಂದು ಮುನ್ನೆಲೆಗೆ ಬಂದಿದೆ.. ಈ ಕುರಿತು ಕಂಪ್ಲೀಟ್‌ ಡಿಟೈಲ್ ಇಲ್ಲಿದೆ ನೋಡಿ..

Written by - Krishna N K | Last Updated : Sep 6, 2023, 06:05 PM IST
  • ವಿಜಯ್ ದೇವರಕೊಂಡ ಮತ್ತು ಕನ್ನಡ ನಟಿ ರಶ್ಮಿಕಾ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವದಂತಿ ಇದೆ.
  • ಅಭಿಮಾನಿಗಳು ಹಲವೆಡೆ ಅದನ್ನು ಗಮನಿಸಿ ಸಾಕ್ಷಿ ಸಮೇತ ಟ್ರೋಲ್‌ ಮಾಡುತ್ತಿರುವುದು ಎಲ್ಲರಿಗೂ ತಿಳಿದಿದೆ.
  • ಇದೀಗ ಹೊಸ ವಿಚಾರವೊಂದು ಮುನ್ನೆಲೆಗೆ ಬಂದಿದೆ.. ಈ ಕುರಿತು ಕಂಪ್ಲೀಟ್‌ ಡಿಟೈಲ್ ಇಲ್ಲಿದೆ ನೋಡಿ..
ರಶ್ಮಿಕಾ - ವಿಜಯ್ ಒಂದೇ ಮನೆಯಲ್ಲಿ ವಾಸ..! ಗುಟ್ಟು ರಟ್ಟು ಮಾಡಿದ ಫೋಟೋಸ್‌ title=

Rashmika Vijay devarakonda dating : ತೆಲುಗು ನಟ ನಟ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಲವ್‌ ಮ್ಯಾಟರ್‌ ದಿನದಿಂದ ದಿನಕ್ಕೆ ಒಂದೊಂದು ತಿರುವು ಪಡೆಯುತ್ತಿದೆ. ಇಬ್ಬರು ಇದುವರೆಗೂ ಎಲ್ಲಿಯೂ ತಾವು ಪ್ರೀತಿಸುತ್ತಿರುವುದಾಗಿ ಒಂದೇ ಒಂದು ಮಾತು ಹೇಳಿಲ್ಲ. ಆದ್ರೆ, ಅವರ ಫ್ಯಾನ್ಸ್‌ ಮಾತ್ರ ಇಲ್ಲ ಸಲ್ಲದ ಕಥೆ ಕಟ್ಟುತ್ತಿದ್ದಾರೆ. ಇದೀಗ ಈ ಜೋಡಿ ಒಂದೇ ಮನೆಯಲ್ಲಿ ವಾಸಿಸುತ್ತಿದ್ದಾರೆ ಎಂಬ ಸುದ್ದಿ ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿದೆ.

ಹೌದು.. ವಿಜಯ್ ಮತ್ತು ರಶ್ಮಿಕಾ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವದಂತಿ ಹಲವು ವರ್ಷಗಳಿಂದ ಕೇಳಿ ಬರುತ್ತಿದೆ. ಅಭಿಮಾನಿಗಳು ಸಹ ಸಾಕ್ಷಿ ಪ್ರಕಟಿಸಿ ಇಬ್ಬರು ಡೇಟಿಂಗ್‌ ಮಾಡುತ್ತಿದ್ದಾರೆ ಅಂತ ವಾದಿಸುತ್ತಲೇ ಬಂದಿದ್ದಾರೆ. ಇದೀಗ ಇಂತಹುದೇ ಒಂದು ಫೋಟೋ ಇಟ್ಟುಕೊಂಡು ಇಬ್ಬರು ಒಂದೇ ಮನೆಯಲ್ಲಿ ವಾಸಿಸುತ್ತಿದ್ದಾರೆ ಅಂತ ಟ್ರೋಲರ್ಸ್‌ ಟ್ರೋಲ್‌ ಮಾಡುತ್ತಿದ್ದಾರೆ.

ಇದನ್ನೂ ಓದಿ: ಪರಿಣಿತಿ- ರಾಘವ್ ಚಡ್ಡಾ ಮದುವೆ ಡೇಟ್‌ ಫಿಕ್ಸ್‌ : ಉದಯಪುರದಲ್ಲಿ ಅದ್ಧೂರಿ ವಿವಾಹ

ಸದ್ಯ ರಶ್ಮಿಕಾ ಮತ್ತು ವಿಜಯ್ ದೇವರಕೊಂಡ ಲಿವ್ ಇನ್ ರಿಲೇಶನ್ ಶಿಪ್‌ನಲ್ಲಿದ್ದಾರೆ ಎಂದು ಅಭಿಮಾನಿಗಳು ಗುಸುಗುಸು ಮಾತನಾಡಿಕೊಳ್ಳುತ್ತಿದ್ದಾರೆ. ಅವರು ಪ್ರತ್ಯೇಕವಾಗಿ ಪೋಸ್ಟ್ ಮಾಡಿರುವ ಫೋಟೋಗಳನ್ನಟ್ಟಿಕೊಂಡು ತುಲನೆ ಮಾಡಿ ಒಂದೇ ಸ್ಥಳದಲ್ಲಿ ತೆಗೆದ ಚಿತ್ರಗಳಿವು ಅಂತ ವಾದಿಸುತ್ತಿದ್ದಾರೆ.

ಅಭಿಮಾನಿಗಳು ಈ ರೀತಿಯ ಸಾಕ್ಷ್ಯವನ್ನು ಬಿಡುಗಡೆ ಮಾಡುತ್ತಿರುವುದು ಇದೇ ಮೊದಲಲ್ಲ. ಜನವರಿ 1 ರಂದು ಇಬ್ಬರೂ ಒಟ್ಟಿಗೆ ಹೊಸ ವರ್ಷವನ್ನು ಆಚರಿಸುತ್ತಿದ್ದಾರೆ ಎಂದು ಕೆಲವು ಫೋಟೋಗಳನ್ನು ಶೇರ್‌ ಮಾಡಿದ್ದರು. ಇದೀಗ ಇಬ್ಬರು ಒಂದೇ ಮನೆಯಲ್ಲಿ ವಾಸಿಸುತ್ತಿದ್ದಾರೆ ಅಂತ ಫೋಟೋ ಮೂಲಕ ಮ್ಯಾಟರ್‌ ರಿಲೀವಿಲ್‌ ಮಾಡಿದ್ದಾರೆ.

ಇದನ್ನೂ ಓದಿ: ʼಶ್ರೀಕೃಷ್ಣ ಜನ್ಮಾಷ್ಟಮಿʼ ಪ್ರಯುಕ್ತ ಪ್ರೇಕ್ಷಕರಿಗೆ ʼಜೀ ಕನ್ನಡʼ ಬಿಗ್‌ ಗಿಫ್ಟ್‌ : 1 ಗಂಟೆ, 5 ಧಾರಾವಾಹಿಗಳ ಮಹಾಸಂಚಿಕೆ ನೋಡಿ

ಇದೆಲ್ಲವೂ ಸಾಕಾಗುವುದಿಲ್ಲ ಎಂಬಂತೆ ಕಳೆದ ಕೆಲವು ದಿನಗಳ ಹಿಂದೆ ವಿಜಯ್ ದೇವರಕೊಂಡ ಸಹ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಹಿಳೆಯ ಕೈ ಹಿಡಿದ ಫೋಟೋವನ್ನು ಪೋಸ್ಟ್‌ ಮಾಡಿದ್ದರು. ಉರಿಯುವ ಬೆಂಕಿಗೆ ತುಪ್ಪ ಎನ್ನುವಂತೆ ಇದೇ ಪೋಸ್ಟ್‌ ಇಟ್ಟುಕೊಂಡು, ಅದು ರಶ್ಮಿಕಾ ಕೈ ಅಂತ ಕೆಲವರು ಹೇಳಿದ್ರೆ ಇನ್ನೂ ಕೆಲವರು ಒಂದು ಹೆಜ್ಜೆ ಮುಂದೆ ಹೋಗಿ ಅದು ಸಮಂತಾ ಕೈ ಅಂತ ವಾದ ಮಾಡಿದ್ದರು.

ಒಟ್ಟಾರೆಯಾಗಿ ಅವರವರ ನಡುವೆ ಯಾವ ರೀತಿ ಸಂಬಂಧ ಇದೆಯೋ ಗೊತ್ತಿಲ್ಲ. ಅಭಿಮಾನಿಗಳು ಮಾತ್ರ ತಮ್ಮದೇ ಸಂಬಂಧಗಳ ಬೆಸುಗೆ ಹಣೆಯುತ್ತಿದ್ದಾರೆ. ಇದು ಎಲ್ಲಿಯವರೆಗೂ ಹೋಗಿ ಮುಟ್ಟುತ್ತೊ ಅಂತ ಕಾಯ್ದು ನೋಡಬೇಕಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News