ರಶ್ಮಿಕಾ DeepFake ವಿಡಿಯೋ ವೈರಲ್‌! ನ್ಯಾಷನಲ್‌ ಕ್ರಶ್‌ಗೆ ನಾಗ ಚೈತನ್ಯ ಬೆಂಬಲ

Nag Chaitanya on Rashmika Viral Vdeo: ರಶ್ಮಿಕಾ ಮಂದಣ್ಣ ಅವರ ಡೀಪ್ ಫೇಕ್ ವಿಡಿಯೋ ವೈರಲ್ ಆದ ನಂತರ ಸಿನಿ ಸೆಲೆಬ್ರಿಟಿಗಳು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸುತ್ತಿದ್ದಾರೆ. ಇದೀಗ ಯುವ ನಾಯಕ ನಾಗ ಚೈತನ್ಯ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ..    

Written by - Savita M B | Last Updated : Nov 7, 2023, 10:48 AM IST
  • ಟಾಲಿವುಡ್ ಸ್ಟಾರ್ ಹೀರೋಯಿನ್ ರಶ್ಮಿಕಾ ಮಂದಣ್ಣ
  • ಸದ್ಯ ಸೋಷಿಯಲ್‌ ಮಿಡಿಯಾದಲ್ಲಿ ರಶ್ಮಿಕಾ ಡೀಪ್‌ ಫೇಕ್‌ ವಿಡಿಯೋ ವೈರಲ್‌ ಆಗಿದೆ
  • ಇದೀಗ ವಿಡಿಯೋ ಕುರಿತಾಗಿ ಆಕ್ರೋಶಗಳ ಮಹಾಪೂರವೇ ಹರಿದು ಬರುತ್ತಿದೆ
ರಶ್ಮಿಕಾ DeepFake ವಿಡಿಯೋ ವೈರಲ್‌! ನ್ಯಾಷನಲ್‌ ಕ್ರಶ್‌ಗೆ ನಾಗ ಚೈತನ್ಯ ಬೆಂಬಲ title=

Rashmika Deep Fake Video: ಟಾಲಿವುಡ್ ಸ್ಟಾರ್ ಹೀರೋಯಿನ್ ರಶ್ಮಿಕಾ ಮಂದಣ್ಣ ತುಂಬಾ ಕ್ರೇಜ್ ಹೊಂದಿರುವುದು ಗೊತ್ತೇ ಇದೆ. ಚಿತ್ರರಂಗದಲ್ಲಿ ಟಾಪ್ ಹೀರೋಯಿನ್ ಆಗಿ ಮುಂದುವರಿದ ಈಕೆ ಅಭಿನಯಕ್ಕಾಗಿ ಅನೇಕ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಅಂತಹ ನಾಯಕಿಗೆ ಇದೀಗ ಆಘಾತವೆನಿಸುವ ಘಟನೆಯೊಂದು ನಡೆದಿದೆ. 

ಹೌದು ಇತ್ತೀಚೆಗೆ, AIನಿಂದ ರಚಿಸಲಾದ ಡೀಪ್‌ ಫೆಕ್ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಸದ್ಯ ಇದಕ್ಕೆ ಸಿನಿಮಾ ಸೆಲೆಬ್ರಿಟಿಗಳು, ನೆಟ್ಟಿಗರು ಮತ್ತು ಅಭಿಮಾನಿಗಳಿಂದ ಆಕ್ರೋಶಗಳ ಮಹಾಪೂರವೇ ಹರಿದು ಬರುತ್ತಿದೆ. 

ಇದನ್ನೂ ಓದಿ-ಆಸ್ತಿಯಲ್ಲಿ ವರುಣ್‌ತೇಜ್‌ ಅವರನ್ನೇ ಮೀರಿಸ್ತಾರೆ ಲಾವಣ್ಯ! ಮೆಗಾ ಸೊಸೆ ಎಷ್ಟು ಕೋಟಿಯ ಒಡತಿ ಗೊತ್ತಾ?

ಇದೇ ವೈರಲ್‌ ವಿಡಿಯೋ ಕುರಿತಾಗಿ ಇತ್ತೀಚೆಗೆ ಅಕ್ಕಿನೇನಿ ಯಂಗ್ ಹೀರೋ ನಾಗ ಚೈತನ್ಯ ಪ್ರತಿಕ್ರಿಯಿಸಿದ್ದಾರೆ. ಮಂದಣ್ಣ ಅವರನ್ನು ಬೆಂಬಲಿಸಿ ರಶ್ಮಿಕಾ ಟ್ವೀಟ್ ಮಾಡಿದ್ದಾರೆ. 'ತಂತ್ರಜ್ಞಾನವನ್ನು ಈ ರೀತಿ ದುರುಪಯೋಗಪಡಿಸಿಕೊಳ್ಳುತ್ತಿರುವುದು ನಿಜಕ್ಕೂ ಬೇಸರದ ಸಂಗತಿ. ಭವಿಷ್ಯದಲ್ಲಿ ಇದು ಹೇಗೆ ಮುಂದುವರಿಯುತ್ತದೆ ಎಂಬ ಆಲೋಚನೆ ಭಯಾನಕವಾಗಿದೆ. ಸಂತ್ರಸ್ತರ ರಕ್ಷಣೆಗೆ ಕ್ರಮಕೈಗೊಳ್ಳಬೇಕು. ಕಠಿಣ ಕಾನೂನು ಜಾರಿಯಾಗಬೇಕು. ಆಗ ಮಾತ್ರ ಅವರಿಗೆ ಶಕ್ತಿ ಬರುತ್ತದೆ’ ಎಂದು ಟ್ವೀಟ್‌ನಲ್ಲಿ ತಿಳಿಸಿದ್ದಾರೆ. 

ಇದನ್ನೂ ಓದಿ-ಈ ಪುಟ್ಟ ಬಾಲಕ ಇಂದು ದಿಗ್ಗಜ ನಟ.. 1 ಕೋಟಿ ಸಂಭಾವನೆ ಪಡೆದ ಮೊದಲ ಹೀರೋ, 5 ಭಾಷೆಗಳ ಸೂಪರ್‌ ಸ್ಟಾರ್!

ರಶ್ಮಿಕಾ ಮಂದಣ್ಣ ಅವರ ಟ್ವೀಟ್ ಅನ್ನು ರಿಟ್ವೀಟ್ ಮಾಡುವ ಮೂಲಕ ನಾಗ ಚೈತನ್ಯ ಪ್ರತಿಕ್ರಿಯಿಸಿದ ರೀತಿ ಚರ್ಚೆಯ ವಿಷಯವಾಗಿದೆ. ಮತ್ತೊಂದೆಡೆ, ತಂತ್ರಜ್ಞಾನವನ್ನು ದುರುಪಯೋಗಪಡಿಸಿಕೊಳ್ಳುವವರ ವಿರುದ್ಧ ನೆಟಿಜನ್‌ಗಳು ಕೋಪಗೊಂಡಿದ್ದಾರೆ. ಅಲ್ಲದೇ ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ಮತ್ತು ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಕೂಡ ಇದನ್ನೂ ತೀವ್ರವಾಗಿ ಖಂಡಿಸಿದ್ದಾರೆ. 

ಅಲ್ಲದೆ ರಶ್ಮಿಕಾ ಮಂದಣ್ಣ ಕೂಡ ತಮ್ಮ ಡೀಪ್ ಫೇಕ್ ವಿಡಿಯೋ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಓದುವ ಸಮಯದಲ್ಲಿ ಇಂತಹ ವಿಡಿಯೋ ಬಂದರೆ ತಮ್ಮ ಪರಿಸ್ಥಿತಿ ಏನಾಗಬಹುದು,, ಇದು ಭಯಾನಕವಾಗಿದೆ. ತಂತ್ರಜ್ಞಾನವನ್ನು ಈ ರೀತಿ ಬಳಸಲಾಗುತ್ತಿದೆ ಎಂದಾದರೆ ಕಾನೂನು ಜಾರಿಯಾಗಲೇಬೇಕು ಎಂದು ಪ್ರತಿಕ್ರಿಯಿಸಿದ್ದಾರೆ.. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News