Ranveer-Deepika Divorce: ವಿಚ್ಛೇದನಕ್ಕೆ ಮುಂದಾಗಿದ್ದಾರಾ ರಣವೀರ್-ದೀಪಿಕಾ?

Ranveer-Deepika Divorce: ವಿವಾಹ ವಾರ್ಷಿಕೋತ್ಸವ, ದೀಪಾವಳಿ, ಹೊಸ ವರ್ಷದಂದೂ ಈ ಜೋಡಿ ಒಟ್ಟಿಗೆ ಇರುವ ಒಂದೂ ಫೋಟೋವನ್ನು ಹಂಚಿಕೊಂಡಿಲ್ಲ. ಇದಲ್ಲದೆ ದೀಪಿಕಾರ ಹುಟ್ಟುಹಬ್ಬದಂದು ರಣವೀರ್ ಯಾವುದೇ ಪೋಸ್ಟ್ ಹಂಚಿಕೊಳ್ಳಲಿಲ್ಲ. ಹೀಗಾಗಿ ಇವರಿಬ್ಬರ ನಡುವೆ ಏನೋ ನಡೆಯುತ್ತಿದೆ ಅನ್ನೋ ಗುಲ್ಲು ಕೇಳಿಬರುತ್ತಿದೆ. 

Written by - Puttaraj K Alur | Last Updated : Jan 6, 2023, 10:45 AM IST
  • ವಿಚ್ಛೇದನಕ್ಕೆ ಮುಂದಾದ್ರಾ ಬಾಲಿವುಡ್ ನಟ ರಣವೀರ್ ಸಿಂಗ್ ಹಾಗೂ ದೀಪಿಕಾ ಪಡುಕೋಣೆ?
  • ಸೋಷಿಯಲ್ ಮೀಡಿಯಾದಲ್ಲಿ ಒಟ್ಟಿಗೆ ಕಾಣಿಸಿಕೊಳ್ಳದ ಜೋಡಿ ಬಗ್ಗೆ ಗಾಳಿಸುದ್ದಿ
  • ಅಭಿಮಾನಗಳ ಅನುಮಾನಕ್ಕೆ ಸ್ಪಷ್ಟನೆ ನೀಡುತ್ತಾ ಬಾಲಿವುಡ್‍ನ ಸ್ಟಾರ್ ಜೋಡಿ?
Ranveer-Deepika Divorce: ವಿಚ್ಛೇದನಕ್ಕೆ ಮುಂದಾಗಿದ್ದಾರಾ ರಣವೀರ್-ದೀಪಿಕಾ? title=
ರಣವೀರ್-ದೀಪಿಕಾ ವಿಚ್ಛೇದನ?

ನವದೆಹಲಿ: ಬಾಲಿವುಡ್ ನಟ ರಣವೀರ್ ಸಿಂಗ್ ಹಾಗೂ ದೀಪಿಕಾ ಪಡುಕೋಣೆ ದಶಕಗಳ ಕಾಲ ಪರಸ್ಪರ ಡೇಟಿಂಗ್ ನಡೆಸಿ ಮದುವೆಯಾದರು. ಕೆಲ ಸಮಯದ ಹಿಂದೆ ರಣವೀರ್ ಮತ್ತು ದೀಪಿಕಾ ನಡುವಿನ ಸಂಬಂಧ ಹದಗೆಟ್ಟಿದ್ದು, ಬಹುಶಃ ಇಬ್ಬರು ಬೇರೆಯಾಗಲಿದ್ದಾರೆಂದು ವರದಿಯಾಗಿತ್ತು. ಆದರೆ ಈ ವರದಿಗಳ ಬಗ್ಗೆ ಇಬ್ಬರೂ ಪ್ರತಿಕ್ರಿಯಿಸಲಿಲ್ಲ.

ಸೋಷಿಯಲ್ ಮೀಡಿಯಾದಲ್ಲಿ ರಣವೀರ್-ದೀಪಿಕಾ Breakup ಬಗ್ಗೆ ದೊಡ್ಡ ಗುಲ್ಲು ಹಬ್ಬಿತ್ತು. ಕೆಲ ದಿನಗಳ ಬಳಿಕ ಈ ಜೋಡಿ ಒಟ್ಟಿಗೆ ಕಾರ್ಯಕ್ರಮಗಳಲ್ಲಿ ಖುಷಿ-ಖುಷಿಯಾಗಿಯೇ ಕಾಣಿಸಿಕೊಂಡಿತ್ತು. ಸೋಷಿಯಲ್ ಮೀಡಿಯಾದಲ್ಲಿ ಇಬ್ಬರೂ ಪರಸ್ಪರ ಪೋಸ್ಟ್ ಹಂಚಿಕೊಳ್ಳುವ ಮೂಲಕ ತಮ್ಮಿಬ್ಬರ ಸಂಬಂಧದ ಬಗ್ಗೆ ಸ್ಪಷ್ಟನೆ ನೀಡಿದ್ದರು. ಆದರೆ, ಅಭಿಮಾನಿಗಳ ಗಮನ ಬೇರೆಡೆ ಸೆಳೆಯಲು ಇದೆಲ್ಲಾ ಮಾಡಲಾಗುತ್ತಿದ್ದು, ವಾಸ್ತವದಲ್ಲಿ ರಣವೀರ್-ದೀಪಿಕಾ ಬೇರೆಯಾಗಲಿದ್ದಾರೆ ಅಂತಾ ಗಾಳಿಸುದ್ದಿಗಳು ಹರಿದಾಡಿದವು. ಇದಕ್ಕೆ ನಿದರ್ಶನವೆಂಬಂತೆ ನಟಿ-ನಟಿ ಕೆಲವು ಸುಳಿವುಗಳನ್ನು ನೀಡಿದ್ದರು.

ಇದನ್ನೂ ಓದಿ"ನಿಮಗಾಗಿ ವಿಭಿನ್ನವಾಗಿರೋದೆನನ್ನೋ ತರಲಿದ್ದೇನೆ" : ಯಶ್‌ ಕೊಡಲಿರುವ ಆ ಸರ್‌ಪ್ರೈಸ್‌ ಏನು?

ರಣವೀರ್-ದೀಪಿಕಾ ವಿಚ್ಛೇದನ ಸುದ್ದಿ ನಿಜನಾ?   

ರಣವೀರ್ ಮತ್ತು ದೀಪಿಕಾ ವಿಚ್ಛೇದನದ ಸುದ್ದಿ ಬಹಳ ದಿನಗಳಿಂದ ಹರಿದಾಡುತ್ತಿದ್ದು, ಶೀಘ್ರವೇ ಇಬ್ಬರೂ ಬೇರೆಯಾಗಲಿದ್ದಾರೆಂದು ಎಲ್ಲರೂ ಭಾವಿಸಿದ್ದರು. ಈ ವರದಿಗಳನ್ನು ರಣವೀರ್ ಮತ್ತು ದೀಪಿಕಾ ಒಪ್ಪಲಿಲ್ಲ ಅಥವಾ ನಿರಾಕರಿಸಲಿಲ್ಲ. ಆದರೆ ಈ ವರದಿಗಳ ನಂತರ ಈ ದಂಪತಿ ಒಟ್ಟಿಗೆ ಕ್ಯಾಮೆರಾದ ಮುಂದೆ ಕೈ ಕೈ ಹಿಡಿದುಕೊಂಡು ಪೋಸ್ ನೀಡಿದ್ದರು. ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್‌ಗಳನ್ನು ಹಂಚಿಕೊಂಡಿದ್ದರು. ಹೀಗಾಗಿ ವಿಚ್ಛೇದನದ ವದಂತಿಗಳನ್ನು ನಟ-ನಟಿ ನಿರಾಕರಿಸಿದ್ದಾರೆಂದೇ ಹೆಚ್ಚಿನ ಅಭಿಮಾನಿಗಳು ಭಾವಿಸಿದ್ದರು. ಬಹುಶಃ ಈ ವಿಚ್ಛೇದನದ ಸುದ್ದಿ ನಿಜವಾಗಿರುವುದರಿಂದಲೇ ಅವರು ಈ ರೀತಿ ನಡೆದುಕೊಂಡಿದ್ದಾರೆಂದು ಈಗ ತೋರುತ್ತಿದೆ.

ವಿಚ್ಛೇದನದತ್ತ ಸಾಗುತ್ತಿದ್ದೀರಾ ರಣವೀರ್-ದೀಪಿಕಾ?

ರಣವೀರ್ ಮತ್ತು ದೀಪಿಕಾ ಬಹುಶಃ ವಿಚ್ಛೇದನದತ್ತ ಸಾಗುತ್ತಿದ್ದಾರೆ. ಇದಕ್ಕೆ ಕಾರಣ ಇತ್ತೀಚಿಗೆ ಈ ಜೋಡಿ ಸೋಷಿಯಲ್ ಮೀಡಿಯಾದಲ್ಲಿ ಕಡಿಮೆ ಫೋಟೋಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಮೊದಲು ಜೊತೆ ಜೊತೆಯಾಗಿ ಅನೇಕ ಫೋಟೋಗಳನ್ನು ಹಂಚಿಕೊಳ್ಳುತ್ತಿದ್ದರು. ವಿಶೇಷ ಸಂದರ್ಭಗಳ ಫೋಟೋ ಹಂಚಿಕೊಳ್ಳದೆ ಸಾಮಾಜಿಕ ಮಾಧ್ಯಮದಿಂದ ಇಬ್ಬರೂ ದೂರವಿದ್ದಾರೆ. ವಿವಾಹ ವಾರ್ಷಿಕೋತ್ಸವ, ದೀಪಾವಳಿ, ಹೊಸ ವರ್ಷದಂದೂ ಈ ಜೋಡಿ ಒಟ್ಟಿಗೆ ಇರುವ ಒಂದೂ ಫೋಟೋವನ್ನು ಹಂಚಿಕೊಂಡಿಲ್ಲ. ಇದಲ್ಲದೆ ದೀಪಿಕಾರ ಹುಟ್ಟುಹಬ್ಬದಂದು ರಣವೀರ್ ಯಾವುದೇ ಪೋಸ್ಟ್ ಹಂಚಿಕೊಳ್ಳಲಿಲ್ಲ. ಹೀಗಾಗಿ ಇವರಿಬ್ಬರ ನಡುವೆ ಏನೋ ನಡೆಯುತ್ತಿದೆ ಅನ್ನೋ ಗುಲ್ಲು ಕೇಳಿಬರುತ್ತಿದೆ. ಹೀಗಾಗಿ ಈ ಜೋಡಿ ವಿಚ್ಛೇದನದತ್ತ ಸಾಗುತ್ತಿದೆ ಅನ್ನೋ ಗಾಳಿಸುದ್ದಿ ದಷ್ಟವಾಗುತ್ತಿವೆ.

ಇದನ್ನೂ ಓದಿ: ಸ್ಯಾಂಡಲ್‍ವುಡ್ ನಟರಿಂದ ರಿಲೀಸ್ ಆಯ್ತು ‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಚಿತ್ರದ ಮೊದಲ ಸಾಂಗ್

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News