Ramayana budget : 'ರಾಮಾಯಣ' ದೇಶದ ಅತ್ಯಂತ ದುಬಾರಿ ಚಿತ್ರ.. ಈ ಬಜೆಟ್‌ನಲ್ಲಿ ಕೆಜಿಎಫ್ 2 ಸಿನಿಮಾವನ್ನು 8 ಬಾರಿ ನಿರ್ಮಿಸಬಹುದು!

Ramayana movie budget: ರಣಬೀರ್ ಕಪೂರ್ ಅಭಿನಯದ ರಾಮಾಯಣ ಚಿತ್ರ ದೇಶದ ಅತ್ಯಂತ ದುಬಾರಿ ಚಿತ್ರವಾಗಲಿದೆ ಎಂದು ವರದಿಯಾಗಿದೆ. 

Written by - Chetana Devarmani | Last Updated : May 14, 2024, 09:08 AM IST
  • ರಣಬೀರ್‌ ಕಪೂರ್‌ ನಟನೆಯ ರಾಮಾಯಣ ಸಿನಿಮಾ
  • 'ರಾಮಾಯಣ' ದೇಶದ ಅತ್ಯಂತ ದುಬಾರಿ ಚಿತ್ರ
  • ರಾಮಾಯಣ ಸಿನಿಮಾ ಮೊದಲ ಭಾಗದ ಬಜೆಟ್‌ ಎಷ್ಟು?
Ramayana budget : 'ರಾಮಾಯಣ' ದೇಶದ ಅತ್ಯಂತ ದುಬಾರಿ ಚಿತ್ರ.. ಈ ಬಜೆಟ್‌ನಲ್ಲಿ ಕೆಜಿಎಫ್ 2 ಸಿನಿಮಾವನ್ನು 8 ಬಾರಿ ನಿರ್ಮಿಸಬಹುದು!  title=

Ramayana budget: ರಣಬೀರ್‌ ಕಪೂರ್‌ ನಟನೆಯ ನಿತೇಶ್ ತಿವಾರಿ ನಿರ್ದೇಶನದ ರಾಮಾಯಣ ಸಿನಿಮಾ ಸಿಕ್ಕಾಪಟ್ಟೆ ಹೈಪ್‌ ಕ್ರಿಯೇಟ್‌ ಮಾಡಿದೆ. ಚಿತ್ರದ ಮೇಲೆ ಜನರ ನಿರೀಕ್ಷೆಗಳು ದುಪ್ಪಟ್ಟಾಗಿವೆ. ಈ ಚಿತ್ರ ಕಳೆದ ಒಂದೂವರೆ ವರ್ಷಗಳಿಂದ ಸುದ್ದಿಯಲ್ಲಿದೆ. ಈಗಾಗಲೇ ಶೂಟಿಂಗ್‌ ಆರಂಭವಾಗಿದ್ದು, ಚಿತ್ರದ ಸೆಟ್‌ಗಳಿಂದ ಫೋಟೋಗಳು ಸಹ ಲೀಕ್‌ ಆಗಿವೆ. 

ರಾಮಾಯಣ ಚಿತ್ರಕ್ಕೆ ಸಂಬಂಧಿಸಿದಂತೆ ಇದೀಗ ದೊಡ್ಡ ಅಪ್‌ಡೇಟ್ ಹೊರಬಂದಿದೆ. ಇದನ್ನು ತಿಳಿದರೆ ಎಲ್ಲರಿಗೂ ಆಶ್ಚರ್ಯವಾಗುತ್ತದೆ. ರಾಮಾಯಣದ ಬಜೆಟ್‌ನಲ್ಲಿ ಯಶ್ ಅವರ ಕೆಜಿಎಫ್ 2 ಅನ್ನು 8 ಬಾರಿ ಮಾಡಬಹುದು. 

ರಣಬೀರ್ ಕಪೂರ್ ಅಭಿನಯದ ರಾಮಾಯಣ ಚಿತ್ರ ದೇಶದ ಅತ್ಯಂತ ದುಬಾರಿ ಚಿತ್ರವಾಗಲಿದೆ ಎಂದು ವರದಿಯಾಗಿದೆ. ರಾಮಾಯಣ ಚಿತ್ರವನ್ನು ನಿರ್ಮಿಸಲು ನಿರ್ಮಾಪಕರು ನೀರಿನಂತೆ ಹಣವನ್ನು ಖರ್ಚು ಮಾಡುತ್ತಾರೆ. ವರದಿಯ ಪ್ರಕಾರ, ನಿರ್ಮಾಪಕರು ರಾಮಾಯಣದ ಮೊದಲ ಭಾಗಕ್ಕೆ 100 ಮಿಲಿಯನ್ ಡಾಲರ್ ಅಂದರೆ ಸುಮಾರು 835 ಕೋಟಿ ರೂಪಾಯಿಗಳ ಬಜೆಟ್ ಅನ್ನು ಅಂತಿಮಗೊಳಿಸಿದ್ದಾರೆ ಎಂದು ಹೇಳಲಾಗಿದೆ.

ಇದನ್ನೂ ಓದಿ: ವಿದ್ಯಾರ್ಥಿ ವಿದ್ಯಾರ್ಥಿನಿಯರೇ: ಟ್ರೈಲರ್ ಮೂಲಕ ದುಮ್ಮಿಕ್ಕಿತು ಹರೆಯದ ತೊರೆ! 

ರಾಮಾಯಣದ ಮೇಲೆ ಸಿನಿಮಾ ಮಾಡುವುದು ಯಾವ ಚಿತ್ರ ನಿರ್ಮಾಪಕರಿಗೂ ಸುಲಭವಲ್ಲ. ಹೀಗಿರುವಾಗ ಚಿತ್ರದಲ್ಲಿ ಒಂದಿಷ್ಟು ಕೊರತೆಯೂ ಆಗದಂತೆ ನೋಡಿಕೊಳ್ಳಲು ನಿರ್ಮಾಪಕರು ಸಂಪೂರ್ಣ ಸಿದ್ಧತೆ ನಡೆಸಿದ್ದಾರೆ. ರಾಮಾಯಣ ಚಿತ್ರದಲ್ಲಿ ರಣಬೀರ್ ಕಪೂರ್ ಭಗವಾನ್ ರಾಮನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಪ್ರೇಕ್ಷಕರು ಈ ಚಿತ್ರವನ್ನು ನೋಡಿದಾಗ ಅದರಲ್ಲಿ ಯಾವುದೇ ಲೋಪ ಕಾಣಿಸಬಾರದು ಎಂಬುದು ನಿರ್ಮಾಪಕರ ಬಯಕೆ. ರಾಮಾಯಣ ಭಾಗ 1 ರ ಬಜೆಟ್ ಇದಾಗಿದೆ. 

ವರದಿಯ ಪ್ರಕಾರ, ರಜನಿಕಾಂತ್ ಮತ್ತು ಅಕ್ಷಯ್ ಕುಮಾರ್ ಅಭಿನಯದ ಚಿತ್ರ 2.0 ದೇಶದ ಅತ್ಯಂತ ದುಬಾರಿ ಚಿತ್ರವಾಗಿದೆ. ಇದರ ಬಜೆಟ್ 570 ಕೋಟಿ ಎಂದು ಹೇಳಲಾಗಿದೆ. ಇದರ ನಂತರ ಎಸ್ಎಸ್ ರಾಜಮೌಳಿ ಅವರ RRR, ಇದರ ಬಜೆಟ್ 550 ಕೋಟಿ ರೂಪಾಯಿ ಆಗಿತ್ತು. ನಟ ಪ್ರಭಾಸ್ ಅವರ ಆದಿಪುರುಷ 500 ಕೋಟಿ ಬಜೆಟ್‌ನೊಂದಿಗೆ ಮೂರನೇ ಸ್ಥಾನದಲ್ಲಿದ್ದರೆ, ಮಣಿರತ್ನಂ ಅವರ ಪೊನ್ನಿಯಿನ್ ಸೆಲ್ವನ್ ಭಾಗ - 1 ಬಜೆಟ್‌ನೊಂದಿಗೆ  500 ಕೋಟಿ ಆಗಿದ್ದು, ನಾಲ್ಕನೇ ಸ್ಥಾನದಲ್ಲಿದೆ. ಐದನೇ ಸ್ಥಾನದಲ್ಲಿ ಸಾಹೋ 230 ಕೋಟಿ ರೂಪಾಯಿ ಮತ್ತು 600 ಕೋಟಿ ಬಜೆಟ್‌ನಲ್ಲಿ ಕಲ್ಕಿ ನಿರ್ಮಾಣವಾಗುತ್ತಿದೆ. 

ರಾಮಾಯಣಕ್ಕಿಂತ ಮೊದಲು, ಪ್ರಭಾಸ್ ಅವರ ಕಲ್ಕಿ 2898 AD ದೇಶದ ಅತ್ಯಂತ ದುಬಾರಿ ಚಿತ್ರವಾಗಿತ್ತು. ನಾಗ್ ಅಶ್ವಿನ್ ಅವರ ಈ ಚಿತ್ರದ ಬಜೆಟ್ ಸುಮಾರು 600 ಕೋಟಿ ರೂಪಾಯಿ ಎಂದು ವರದಿಯಲ್ಲಿ ಹೇಳಲಾಗಿದೆ.  

ಇದನ್ನೂ ಓದಿ:Legal notice Kareena Kapoor: ಆ ಪದ ಬಳಸಿದ್ದಕ್ಕಾಗಿ ಕರೀನಾ ಕಪೂರ್‌ಗೆ ಕೋರ್ಟ್ ನೋಟೀಸ್ !

ರಣಬೀರ್ ಕಪೂರ್ ಅವರ ಬ್ರಹ್ಮಾಸ್ತ್ರ ಭಾಗ 1 ತಯಾರಿಸಲು ತಯಾರಕರು ಸುಮಾರು 300 ಕೋಟಿ ರೂಪಾಯಿಗಳನ್ನು ಖರ್ಚು ಮಾಡಿದ್ದಾರೆ ಎಂಬುದು ಗಮನಾರ್ಹ. ಒಂದು ಕಾಲದಲ್ಲಿ ಇದು ಅತ್ಯಂತ ದುಬಾರಿ ಹಿಂದಿ ಚಿತ್ರವಾಗಿತ್ತು. 

ಇದೀಗ ರಾಮಾಯಣ ಸಿನಿಮಾ ಮೂಲಕ ಭಾರತೀಯ ಚಿತ್ರರಂಗವನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯುವ ಯೋಜನೆ ಇದೆ ಎನ್ನಲಾಗಿದೆ. ಯಶ್ ಅವರ ಕೆಜಿಎಫ್ 2 ತಯಾರಿಸಲು ನಿರ್ಮಾಪಕರು ಸುಮಾರು 100 ಕೋಟಿ ರೂಪಾಯಿ ಖರ್ಚು ಮಾಡಿದ್ದಾರೆ. ಆದರೆ ಇದೀಗ ರಣಬೀರ್‌ ಕಪೂರ್‌ ಅವರ ರಾಮಾಯಣ ಸಿನಿಮಾ 835 ಕೋಟಿ ರೂಪಾಯಿ ಬಜೆಟ್‌ನಲ್ಲಿ ತಯಾರಾಗುತ್ತಿದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News