ರಣಬೀರ್ ಕಪೂರ್ ರಾಮಾಯಣಕ್ಕೆ ವೇದಿಕೆ ಸಜ್ಜಾಗಿದೆ.. ಇದು ಮೊದಲ ಭಾಗದ ಕಥೆ!

Ranbir Kapoor Starrer Ramayan: ನಿರ್ದೇಶಕ ನಿತೀಶ್ ತಿವಾರಿಯ ರಾಮಾಯಣ ಸಿನಿಮಾ ಮೇಲೆ ಜನರ ನಿರೀಕ್ಷೆ ಹೆಚ್ಚಾಗಿದೆ. ಇದರಲ್ಲಿ ರಣಬೀರ್‌ ಕಪೂರ್‌ ರಾಮನಾಗಿ ನಟಿಸುತ್ತಿದ್ದಾರೆ.     

Written by - Chetana Devarmani | Last Updated : Mar 10, 2024, 12:58 PM IST
  • ನಿರ್ದೇಶಕ ನಿತೀಶ್ ತಿವಾರಿಯ ರಾಮಾಯಣ ಸಿನಿಮಾ
  • ರಾಮನಾಗಿ ರಣಬೀರ್ ಕಪೂರ್ ಮತ್ತು ಸೀತೆಯಾಗಿ ಸಾಯಿ ಪಲ್ಲವಿ
  • ರಾಮಾಯಣದಲ್ಲಿನ ರಾವಣನ ಪಾತ್ರದಲ್ಲಿ ಯಶ್! ‌
ರಣಬೀರ್ ಕಪೂರ್ ರಾಮಾಯಣಕ್ಕೆ ವೇದಿಕೆ ಸಜ್ಜಾಗಿದೆ.. ಇದು ಮೊದಲ ಭಾಗದ ಕಥೆ! title=

Ramayan movie first part : ರಾಮಾಯಣ.. ಇದು ರಾಮನ ಕಥೆ.. ಸುಂದರ ಕಾವ್ಯ. ರಾಮಾಯಣವನ್ನು ಬಾಲಿವುಡ್ ಹಾಗೂ ಭಾರತದಲ್ಲಿ ಹಿಂದೆಂದೂ ಕಂಡಿರದ ಅದ್ಬುತ ದೃಶ್ಯಕಾವ್ಯವಾಗಿ ಚಿತ್ರಿಸಲು ನಿತೀಶ್ ತಿವಾರಿ ತಯಾರಿ ನಡೆಸಿದ್ದಾರೆ. ಈ ಸಿನಿಮಾದಲ್ಲಿ ರಾಮನಾಗಿ ರಣಬೀರ್ ಕಪೂರ್ ಮತ್ತು ಸೀತೆಯಾಗಿ ಸಾಯಿ ಪಲ್ಲವಿ ನಟಿಸಲಿದ್ದಾರೆ. ರಾಮಾಯಣದಲ್ಲಿ ರಾಮನ ಪಾತ್ರದ ಜೊತೆಗೆ ರಾವಣಾಸುರನ ಮತ್ತೊಂದು ಪ್ರಮುಖವಾಗಿದೆ.

ರಾಕಿಂಗ್‌ ಸ್ಟಾರ್‌ ಯಶ್ ಅವರನ್ನು ರಾಮಾಯಣದಲ್ಲಿನ ರಾವಣನ ಪಾತ್ರದಲ್ಲಿ ನಟಿಸಲಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ. ಈ ಬಗ್ಗೆ ಈಗಾಗಲೇ ಅವರ ಜೊತೆ ಮಾತುಕತೆ ನಡೆದಿದೆ. ಈ ಪಾತ್ರ ಮಾಡಲು ಒಪ್ಪಿಕೊಂಡಿದ್ದಾರೆ ಎಂದು ಹೇಳಲಾಗ್ತಿದೆ. ಆದರೆ ಈ ಬಗ್ಗೆ ಯಶ್ ಕಡೆಯಿಂದ ಇನ್ನೂ ಅಧಿಕೃತ ಸ್ಪಷ್ಟನೆ ಬಂದಿಲ್ಲ. ಉಳಿದ ಪಾತ್ರಗಳಿಗೆ ಯಾರನ್ನು ಆಯ್ಕೆ ಮಾಡುತ್ತಾರೆ ಎಂಬುದಕ್ಕೆ ಉತ್ತರ ಸದ್ಯಕ್ಕೆ ಸಸ್ಪೆನ್ಸ್ ಆಗಿದೆ.

ಇದನ್ನೂ ಓದಿ : Krystyna Pyszkova: ವಿಶ್ವ ಸುಂದರಿ ವಿಜೇತೆ ಕ್ರಿಸ್ಟೇನಾ ವಿದ್ಯಾಭಾಸವೇನು ಗೊತ್ತೇ..??

ಈ ಸಿನಿಮಾವನ್ನು ಮುಂದಿನ ತಿಂಗಳು ಏಪ್ರಿಲ್ 17 ರಂದು ಲಾಂಚ್ ಮಾಡಲು ಚಿತ್ರತಂಡ ತಯಾರಿ ನಡೆಸಿದೆಯಂತೆ. ಈ ಕುರಿತ ಕೆಲವು ಪ್ರಮುಖ ವಿವರಗಳು ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ರಾಮಾಯಣ ಸಿನಿಮಾ ಮೂರು ಭಾಗಗಳಲ್ಲಿ ತಯಾರಾಗಲಿದೆ. ಮೊದಲ ಭಾಗ ಅಯೋಧ್ಯಾಕಾಂಡ.. ರಾಮನ ಪರಿಚಯ, ಸೀತೆಯ ಸ್ವಯಂವರ, ನಂತರ ವನವಾಸದಿಂದ ಪ್ರಾರಂಭವಾಗಿ ಕಥೆಯನ್ನು ನಿಧಾನವಾಗಿ ಮುಂದಕ್ಕೆ ಕೊಂಡೊಯ್ಯಲಿದ್ದಾರೆ. ಕಾಡಿನಲ್ಲಿ ರಾವಣಾಸುರ ಸೀತೆಯ ಅಪಹರಣ, ಹನುಮಂತನ ಪ್ರವೇಶ, ವಾಲಿ ವಧೆ ಹೀಗೆ ಎಲ್ಲ ಘಟನೆಗಳನ್ನು ರಾಮಾಯಣದ ಎರಡನೇ ಭಾಗದಲ್ಲಿ ಕಾಣುತ್ತೇವೆ.

ಈ ಸಿನಿಮಾದ ವಿಶುವಲ್ ಎಫೆಕ್ಟ್ ಬಗ್ಗೆ ಸಾಕಷ್ಟು ಕಾಳಜಿ ವಹಿಸಲಾಗುತ್ತಿದೆ ಎನ್ನಲಾಗಿದೆ. ಸನ್ನಿ ಡಿಯೋಲ್ ಮತ್ತು ರಾಕುಲ್ ಪ್ರೀತ್ ಸಿಂಗ್ ಸೇರಿದಂತೆ ಈ ಚಿತ್ರದಲ್ಲಿ ದೊಡ್ಡ ತಾರಾಗಣವೇ ಇದೆ.  

ಈ ಸಿನಿಮಾವನ್ನು 2025ರಲ್ಲಿ ಬಿಡುಗಡೆ ಮಾಡಲು ಚಿತ್ರತಂಡ ಮುಂದಾಗಿದೆ. ಈ ಸಿನಿಮಾ ಲಾಂಚ್‌ ಮಾಡಲು ಪ್ರಧಾನಿ ಮೋದಿಯವರನ್ನು ಮುಖ್ಯ ಅತಿಥಿಯಾಗಿ ಕರೆಯಲು ಚಿತ್ರತಂಡ ಚಿಂತನೆ ನಡೆಸಿದೆ. ಇದು ಚುನಾವಣಾ ಸಮಯವಾದ್ದರಿಂದ ಪ್ರಧಾನಿಯವರ ಡೇಟ್ಸ್ ಎಲ್ಲಿಯವರೆಗೆ ಸಿಗಲಿದೆ ಎಂಬುದು ಸ್ಪಷ್ಟವಾಗಿಲ್ಲ. ರಾಮನಿಗೆ ಸಂಬಂಧಿಸಿದ ಸಿನಿಮಾ ಆಗಿರುವುದರಿಂದ ಪ್ರಧಾನಿ ಎಷ್ಟೇ ಬ್ಯುಸಿ ಇದ್ದರೂ ಬೇಡ ಎನ್ನುವುದಿಲ್ಲ ಎಂಬ ನಿರೀಕ್ಷೆ ಇದೆ. ಈ ಹಿನ್ನಲೆಯಲ್ಲಿ ರಣಬೀರ್ ಕಪೂರ್ ಅವರನ್ನು ರಾಮನಾಗಿ ಹೇಗೆ ತೋರಿಸುತ್ತಾರೆ ಎಂಬ ಚರ್ಚೆಯೂ ನಡೆಯುತ್ತಿದೆ. 

ಇದನ್ನೂ ಓದಿ : ನಿತೀಶ್ ತಿವಾರಿ ʼರಾಮಾಯಣʼದಲ್ಲಿ ಸಾಯಿ ಪಲ್ಲವಿ ʼಸೀತೆʼ ರಣಬೀರ್‌ ʼರಾಮʼ..! ಯಶ್‌ ರಾವಣ..?

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News