Animal collection : ಬಾಕ್ಸ್‌ ಆಫೀಸ್‌ನಲ್ಲಿ ದಾಖಲೆ ಬರೆದ ರಣಬೀರ್‌-ರಶ್ಮಿಕಾ ʼಅನಿಮಲ್‌ʼ.! ಫಸ್ಟ್‌ ಡೇ ‌ಚಿತ್ರ ಗಳಿಸಿದ್ದೇಷ್ಟು..?

Animal box office collection : ʼಅನಿಮಲ್‌ʼ ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ. ದೇಶದೆಲ್ಲೆಡೆ ರಣಬೀರ್‌ ಕಪೂರ್‌ ಮತ್ತು ರಶ್ಮಿಕಾ ನಟನೆಯ ಈ ಸಿನಿಮಾ ಭರ್ಜರಿ ಕಲೆಕ್ಷನ್ಸ್ ಮಾಡುತ್ತಿದೆ. ಫಸ್ಟ್‌ ಡೇ ಸಿನಿಮಾ ಗಳಿಸಿದ್ದೇಷ್ಟು..? ಈ ಕುರಿತು ಕಂಪ್ಲೀಟ್‌ ಡಿಟೈಲ್ಸ್‌ ಇಲ್ಲಿದ ನೋಡಿ..

Written by - Krishna N K | Last Updated : Dec 2, 2023, 01:14 PM IST
  • ʼಅನಿಮಲ್‌ʼ ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ.
  • ಬಾಕ್ಸ್‌ ಆಫೀಸ್‌ನಲ್ಲಿ ಅನಿಮಲ್‌ ಉತ್ತಮ ಗಳಿಕೆ ಕಂಡಿದೆ.
  • ಅನಿಮಲ್‌ ಸಿನಿಮಾದ ಮೊದಲ ದಿನ ಕಲೇಕ್ಷನ ಇಲ್ಲಿದೆ.
Animal collection : ಬಾಕ್ಸ್‌ ಆಫೀಸ್‌ನಲ್ಲಿ ದಾಖಲೆ ಬರೆದ ರಣಬೀರ್‌-ರಶ್ಮಿಕಾ ʼಅನಿಮಲ್‌ʼ.! ಫಸ್ಟ್‌ ಡೇ ‌ಚಿತ್ರ ಗಳಿಸಿದ್ದೇಷ್ಟು..? title=

Animal movie day 1 collection : ಟಾಲಿವುಡ್ ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ಅವರ 'ಅನಿಮಲ್' ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ದಾಖಲೆಗಳನ್ನು ಕ್ರಿಯೇಟ್‌ ಮಾಡುತ್ತಿದೆ. ನಿನ್ನೆ ಬಿಡುಗಡೆಯಾದ ಈ ಸಿನಿಮಾಗೆ ಪ್ರೇಕ್ಷಕ ಫಿದಾ ಆಗಿದ್ದು, ಉತ್ತಮ ಪ್ರದರ್ಶನ ಕಾಣುತ್ತಿದೆ. ಹಾಗಿದ್ರೆ ರಣಬೀರ್‌ ಕಪೂರ್‌ ಮತ್ತು ರಶ್ಮಿಕಾ ಮಂದಣ್ಣ ನಟನೆಯ ಅನಿಮಲ್‌ ಫಸ್ಟ್‌ ಡೇ ಗಳಿಸಿದ್ದೇಷ್ಟು..? ಬನ್ನಿ ನೋಡೋಣ

ಚಿತ್ರಮಂದಿರಗಳಲ್ಲಿ ʼಅನಿಮಲ್‌ʼ ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ. ದೇಶದೆಲ್ಲೆಡೆ ರಣಬೀರ್‌ ಕಪೂರ್‌ ಮತ್ತು ರಶ್ಮಿಕಾ ನಟನೆಯ ಈ ಸಿನಿಮಾ ಭರ್ಜರಿ ಕಲೆಕ್ಷನ್ಸ್ ಮಾಡುತ್ತಿದೆ. ಭಾರೀ ನಿರೀಕ್ಷೆಗಳ ನಡುವೆ ಡಿಸೆಂಬರ್ 1 ರಂದು ತೆರೆಗೆ ಅಪ್ಪಳಿಸಿರುವ ಸಿನಿಮಾ ಮೊದಲ ಶೋನಿಂದಲೇ ಸೂಪರ್ ಹಿಟ್ ಪಡೆದುಕೊಂಡಿದ್ದು, ದಾಖಲೆ ಕಲೆಕ್ಷನ್ ಮಾಡಿದೆ.

ಇದನ್ನೂ ಓದಿ:ಪಂಕಜ್‌ ತ್ರಿಪಾಠಿ ಜೊತೆ ಅಭಿನಯಿಸಲಿದ್ದಾರೆ ಬಾಂಗ್ಲದೇಶದ ನಟಿ: ಬಾಲಿವುಡ್‌ಗೆ ಎಂಟ್ರೀಯಾಗುತ್ತಿರುವ ಆ ನಟಿ ಯಾರು?

ಮುಂಗಡ ಬುಕ್ಕಿಂಗ್‌ನಲ್ಲೇ ‘ಅನಿಮಲ್‌’ ಸಿನಿಮಾ ಮೊದಲ ದಿನವೇ 100 ಕೋಟಿ ಗಡಿ ದಾಟಿತು. ರಣಬೀರ್ ಕೆರಿಯರ್ ನಲ್ಲಿ ಅತಿ ಹೆಚ್ಚು ಓಪನಿಂಗ್ ಪಡೆದ ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಮೊದಲ ದಿನ ವಿಶ್ವಾದ್ಯಂತ ರೂ. 116 ಕೋಟಿ ಸಂಗ್ರಹಿಸಿದೆ. ಭಾರತದಲ್ಲಿ ರೂ.70 ಕೋಟಿಗೂ ಹೆಚ್ಚು ಒಟ್ಟು ಸಂಗ್ರಹವಾಗಿದೆ ಎಂದು ಅಂದಾಜಿಸಲಾಗಿದೆ.

'ಅನಿಮಲ್‌' ಚಿತ್ರ ಹಿಂದಿಯಲ್ಲಿ 50 ಕೋಟಿ, ತೆಲುಗು, ಕನ್ನಡ, ತಮಿಳು, ಮಲಯಾಳಂನಲ್ಲಿ 10 ಕೋಟಿ. ಸಾಗರೋತ್ತರ ಮಾರುಕಟ್ಟೆ ಸೇರಿದರೆ ಒಟ್ಟು ಮತ್ತೊಂದು ರೂ. 60 ಕೋಟಿಗೂ ಹೆಚ್ಚು ನೆಟ್ ಕಲೆಕ್ಷನ್ ಪಡೆದಿದೆ ಎನ್ನಲಾಗಿದೆ. 200 ಕೋಟಿ ಬಜೆಟ್‌ನಲ್ಲಿ ನಿರ್ಮಾಣವಾದ ಈ ಸಿನಿಮಾ ಮೊದಲ ದಿನವೇ 100 ಕೋಟಿ ಬಾಚಿಕೊಂಡಿದೆ.

ಇದನ್ನೂ ಓದಿ: BBK10: ಎಂಟು ಜನರಲ್ಲಿ ಈ ವಾರ ಮನೆಯಿಂದ ಹೊರ ನಡೆದವರು ಯಾರು?

210 ಕೋಟಿ ರೂ. ಗುರಿ ಇಟ್ಟುಕೊಂಡು ಈ ಸಿನಿಮಾ ಪ್ರೇಕ್ಷಕರ ಮುಂದೆ ಬಂದಿತ್ತು. ಬಾಕ್ಸ್ ಆಫೀಸ್ ನಲ್ಲಿ 'ಅನಿಮಲ್‌' ಸಾಗುತ್ತಿರುವ ವೇಗವನ್ನು ನೋಡಿದರೆ ಈ ವಾರಾಂತ್ಯದಲ್ಲಿ 210 ಕೋಟಿ ರೂ. ಗಳಿಕೆ ಮಾಡುವ ಎಲ್ಲಾ ಲಕ್ಷಣಗಳು ಗೋಚರವಾಗುತ್ತಿವೆ. ಅಲ್ಲದೆ, 'ಕಬೀರ್ ಸಿಂಗ್' ಚಿತ್ರದ  (400 ಕೋಟಿ ರೂ.) ದಾಖಲೆಗಳನ್ನು ಈ ಸಿನಿಮಾ ಮುರಿಯಲಿದೆ ಎನ್ನಲಾಗಿದೆ.

ಅನಿಮಲ್‌ ಸಿನಿಮಾ ತೆಲುಗು, ತಮಿಳು, ಹಿಂದಿ, ಕನ್ನಡ ಮತ್ತು ಮಲಯಾಳಂ ಭಾಷೆಗಳಲ್ಲಿ ಬಿಡುಗಡೆಯಾಗಿದೆ. ರಣಬೀರ್‌, ರಶ್ಮಿಕಾ ಮಂದಣ್ಣ, ಅನಿಲ್ ಕಪೂರ್, ಬಬ್ಲು ಪೃಥ್ವಿರಾಜ್ ಮತ್ತು ಬಾಬಿ ಡಿಯೋಲ್ ಈ ಚಿತ್ರದಲ್ಲಿದ್ದಾರೆ. ಬಾಲಿವುಡ್‌ನ ಟಾಪ್ ಪ್ರೊಡಕ್ಷನ್ ಕಂಪನಿ ಟಿ ಸೀರೀಸ್ ಈ ಚಿತ್ರವನ್ನು ನಿರ್ಮಾಣ ಮಾಡಿದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News