ವರುಣ್ ತೇಜ್ ಮದುವೆಯಲ್ಲಿ ರಾಮ್ ಚರಣ್ ಧರಿಸಿದ್ದ ವಾಚ್ ಬೆಲೆ ಎಷ್ಟು ಗೊತ್ತೆ..? ಶಾಕ್‌ ಆಗ್ತೀರಾ..!

Ram Charan : ನಟ ರಾಮ್ ಚರಣ್ ವರುಣ್ ತೇಜ್ ಅವರ ಮದುವೆ ಕಾರ್ಯಕ್ರಮದಲ್ಲಿ ಬ್ಯುಸಿಯಾಗಿದ್ದಾರೆ. ಸೊಷಿಯಲ್‌ ಮಿಡಿಯಾದಲ್ಲಿ ಈ ಕುರಿತು ಫೊಟೋಗಳು ವೈರಲ್‌ ಆಗುತ್ತಲೇ ಇವೆ. ಈ ಪೈಕಿ ಪವನ್ ಕಲ್ಯಾಣ್ ಜೊತೆ ರಾಮ್‌ ತೆಗೆಸಿಕೊಂಡಿರುವ ಫೋಟೋ ಮೆಗಾ ಅಭಿಮಾನಿಗಳ ಗಮನ ಸೆಳೆದಿದೆ. ಈ ಫೋಟೋದಲ್ಲಿ ರಾಮ್ ಚರಣ್ ಧರಿಸಿರುವ ವಾಚ್ ಕುರಿತ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಅಚ್ಚರಿ ಮೂಡಿಸಿದೆ.

Written by - Krishna N K | Last Updated : Nov 3, 2023, 09:33 PM IST
  • ನಟ ರಾಮ್ ಚರಣ್ ವರುಣ್ ತೇಜ್ ಅವರ ಮದುವೆ ಕಾರ್ಯಕ್ರಮದಲ್ಲಿ ಬ್ಯುಸಿ
  • ಸೊಷಿಯಲ್‌ ಮಿಡಿಯಾದಲ್ಲಿ ಈ ಕುರಿತು ಫೊಟೋಗಳು ವೈರಲ್‌ ಆಗುತ್ತಲೇ ಇವೆ
  • ರಾಮ್ ಚರಣ್ ಧರಿಸಿದ್ದ ವಾಚ್ ಕುರಿತ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಅಚ್ಚರಿ ಮೂಡಿಸಿದೆ
ವರುಣ್ ತೇಜ್ ಮದುವೆಯಲ್ಲಿ ರಾಮ್ ಚರಣ್ ಧರಿಸಿದ್ದ ವಾಚ್ ಬೆಲೆ ಎಷ್ಟು ಗೊತ್ತೆ..? ಶಾಕ್‌ ಆಗ್ತೀರಾ..! title=

Ram Charan watch : ರಾಜಮೌಳಿ ನಿರ್ದೇಶನದ RRR ಚಿತ್ರದ ನಂತರ ರಾಮ್ ಚರಣ್ ಪ್ಯಾನ್‌ ವರ್ಲ್ಡ್‌ ಹಿರೋ ಆಗಿ ಮಿಂಚುತ್ತಿದ್ದಾರೆ. ಮೆಗಾ ಹೀರೋ ರಾಮ್‌ ಗೊತ್ತಿಲ್ಲದವರೇ ಇಲ್ಲ ಅಂದ್ರೆ ತಪ್ಪಾಗಲ್ಲ. ಸಧ್ಯ ನಟ ತಮ್ಮ ಕಿರಿಯ ಸಹೋದರ ವರುಣ್ ತೇಜ್ ಮದುವೆ ಸಂಭ್ರಮದಲ್ಲಿ ಬ್ಯುಸಿಯಾಗಿದ್ದು, ಕುಟುಂಬ ಸಮೇತ ಇಟಲಿಗೆ ತೆರಳಿದ್ದಾರೆ. ಇದರ ನಡುವೆ ರಾಮ್‌ ಧರಿಸಿದ್ದ ವಾಚ್‌ನ ಬೆಲೆ ಕುರಿತು ಸೋಷಿಯಲ್‌ ಮಿಡಿಯಾದಲ್ಲಿ ಚರ್ಚೆ ನಡೆಯುತ್ತಿದೆ. 

ಹೌದು.. ವರುಣ್ ತೇಜ್ ಮತ್ತು ಲಾವಣ್ಯ ತ್ರಿಪಾಠಿ ಮದುವೆ ಬುಧವಾರ ಇಟಲಿಯ ಟಸ್ಕನಿಯಲ್ಲಿ ನಡೆಯಿತು. ಈ ಮದುವೆ ಸಮಾರಂಭದಲ್ಲಿ ಮೆಗಾ ಮತ್ತು ಅಲ್ಲು ಕುಟುಂಬ ಭಾಗಿಯಾಗಿತ್ತು. ಸದ್ಯ ಈ ಮದುವೆಗೆ ಸಂಬಂಧಿಸಿದ ಹಲವು ಫೋಟೋಗಳು ಮಾಧ್ಯಮಗಳಲ್ಲಿ ವೈರಲ್ ಆಗಿವೆ. 

ಇದನ್ನೂ ಓದಿ: ಖ್ಯಾತ ತೆಲುಗು ನಟನೊಂದಿಗೆ 'ಸೀತಾ ರಾಮಂ' ನಟಿ ಮೃಣಾಲ್ ಮದುವೆ..! 

ಆದರೆ ಈ ಎಲ್ಲಾ ಫೋಟೋಗಳಿಗಿಂತ ಪವನ್ ಕಲ್ಯಾಣ್ ಜೊತೆ ರಾಮ್ ಚರಣ್ ತೆಗೆಸಿಕೊಂಡಿರುವ ಫೋಟೋ ಅತ್ಯಂತ ಆಕರ್ಷಕವಾಗಿದೆ. ಇವರಿಬ್ಬರೂ ಒಟ್ಟಿಗೆ ಇರುವ ಚಿತ್ರಗಳು ತೀರಾ ಕಡಿಮೆ, ಚಿಕ್ಕಪ್ಪನ ಜೊತೆ ರಾಮ್‌ ನಗುತ್ತ ಕ್ಯಾಮರಾಗೆ ಪೋಸ್‌ ನೀಡಿರುವ ಚಿತ್ರ ಮೆಗಾ ಅಭಿಮಾನಿಗಳಿಗೆ ತುಂಬಾ ಇಷ್ಟವಾಗಿದೆ. 

ಆ ಚಿತ್ರದಲ್ಲಿ ರಾಮ್‌ ಧರಿಸಿದ್ದ ಬಟ್ಟೆಗಳ ಬಗ್ಗೆ ನೆಟ್ಟಿಗರು ಮಾತನಾಡಿಕೊಳ್ಳುತ್ತಿದ್ದಾರೆ. ಹೆಚ್ಚಾಗಿ ಗಮನಸೆಳೆದಿದ್ದು ಮಾತ್ರ ವಾಚ್. ಯಾವು ಆ ವಾಚ್‌ ಅಂತ ಚೆಕ್‌ ಮಾಡಿದವರೆಲ್ಲೂ ಬೆಚ್ಚಿ ಬೀಳುತ್ತಿದ್ದಾರೆ. ರಾಮ್ ಚರಣ್ ಧರಿಸಿರುವ ವಾಚ್ ಪೆಟಕ್ ಫಿಲಿಪ್ ಮಾಡೆಲ್ ಆಗಿದೆ. ಇದರ ಬೆಲೆ 285000 ಡಾಲರ್. ಅಂದರೆ ನಮ್ಮ ಭಾರತೀಯ ಕರೆನ್ಸಿ ಪ್ರಕಾರ 2 ಕೋಟಿ 85 ಲಕ್ಷಗಳು. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News