Rakul Preet Singh : ಡಬಲ್‌ ಕಾಂಡೋಮ್‌ ಹಾಕ್ಕೊಂಡ್ರೆ ಸರಿಯಲ್ಲ, ನೋವಾಗುತ್ತದೆ..!

ಬಹುಭಾಷಾ ನಟಿ ರಾಕುಲ್ ಪ್ರೀತ್ ಸಿಂಗ್ ನಟನೆಯ ಇತ್ತೀಚಿಗೆ ಬಿಡುಗಡೆಯಾದ ಛತ್ರಿವಾಲಿ ಸಿನಿಮಾ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ. ಯುವಜನತೆಗೆ ಲೈಗಿಂಗ ಶಿಕ್ಷಣದ ಅರಿವು ಮೂಡಿಸುವ ಕಥಾ ಹಂದರ ಈ ಚಿತ್ರದಲ್ಲಿದೆ. ಇದು ತೇಜಸ್ ದಿಯೋಸ್ಕರ್ ಅವರ ಸಾಮಾಜಿಕ ಕಳಕಳಿಯ ಸಿನಿಮಾ. ಇದೀಗ ರಾಕುಲ್‌ ಅವರ ಹೊಸ ವೀಡಿಯೊ ಒಂದು ವೈರಲ್‌ ಆಗಿದ್ದು, ಇದರಲ್ಲಿ ಅವರು ಲೈಂಗಿಕ ಸುರಕ್ಷತೆಯ ಬಗ್ಗೆ ಒಪನ್‌ ಆಗಿ ಮಾತನಾಡಿದ್ದಾರೆ.

Written by - Krishna N K | Last Updated : Feb 15, 2023, 02:55 PM IST
  • ನಟಿ ರಾಕುಲ್ ಪ್ರೀತ್ ಸಿಂಗ್ ಛತ್ರಿವಾಲಿ ಸಿನಿಮಾ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ.
  • ಯುವಜನತೆಗೆ ಲೈಗಿಂಗ ಶಿಕ್ಷಣದ ಅರಿವು ಮೂಡಿಸುವ ಕಥಾ ಹಂದರ ಈ ಚಿತ್ರದಲ್ಲಿದೆ.
  • ಇದೀಗ ರಾಕುಲ್‌ ಡಬಲ್‌ ಕಾಂಡೋಮ್‌ ಬಳಕೆ ಬಗ್ಗೆ ಮಾತನಾಡಿರುವ ವಿಡಿಯೋ ವೈರಲ್‌ ಆಗಿದೆ.
Rakul Preet Singh : ಡಬಲ್‌ ಕಾಂಡೋಮ್‌ ಹಾಕ್ಕೊಂಡ್ರೆ ಸರಿಯಲ್ಲ, ನೋವಾಗುತ್ತದೆ..! title=

Rakul Preet Singh : ಬಹುಭಾಷಾ ನಟಿ ರಾಕುಲ್ ಪ್ರೀತ್ ಸಿಂಗ್ ನಟನೆಯ ಇತ್ತೀಚಿಗೆ ಬಿಡುಗಡೆಯಾದ ಛತ್ರಿವಾಲಿ ಸಿನಿಮಾ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ. ಯುವಜನತೆಗೆ ಲೈಗಿಂಗ ಶಿಕ್ಷಣದ ಅರಿವು ಮೂಡಿಸುವ ಕಥಾ ಹಂದರ ಈ ಚಿತ್ರದಲ್ಲಿದೆ. ಇದು ತೇಜಸ್ ದಿಯೋಸ್ಕರ್ ಅವರ ಸಾಮಾಜಿಕ ಕಳಕಳಿಯ ಸಿನಿಮಾ. ಇದೀಗ ರಾಕುಲ್‌ ಅವರ ಹೊಸ ವೀಡಿಯೊ ಒಂದು ವೈರಲ್‌ ಆಗಿದ್ದು, ಇದರಲ್ಲಿ ಅವರು ಲೈಂಗಿಕ ಸುರಕ್ಷತೆಯ ಬಗ್ಗೆ ಒಪನ್‌ ಆಗಿ ಮಾತನಾಡಿದ್ದಾರೆ.

ಟ್ವೀಕ್ ಇಂಡಿಯಾಗೆ ನೀಡಿದ ಸಂದರ್ಶನದ ಕ್ಲಿಪ್‌ ಒಂದು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ಇದರಲ್ಲಿ, ಅವರು ಹೆಚ್ಚು ರಕ್ಷಣೆಗಾಗಿ ಪುರುಷರು ಡಬಲ್‌ ಕಾಂಡೋಮ್‌ಗಳನ್ನು ಬಳಸುವ ವಿಚಾರವಾಗಿ ಮಾತನಾಡಿದ್ದಾರೆ. ʼಇದು ಒಳ್ಳೆಯ ಆಲೋಚನೆಯಲ್ಲ, ತುಂಬಾ ಕೆಟ್ಟ ಕಲ್ಪನೆ. ಏಕೆಂದರೆ ಎರಡು ಕಾಂಡೋಮ್‌ಗಳನ್ನು ಬಳಸುವುದರಿಂದ ಲೈಂಗಿಕ ಕ್ರಿಯೆಯ ವೇಳೆ ನೋವಿಗೆ ಕಾರಣವಾಗಬಹದು. ಆದ್ದರಿಂದ, ನೀವು ನಿಜವಾಗಿಯೂ ಜಾಗರೂಕರಾಗಿರಲು ಬಯಸಿದರೆ, IUD ಗಳು ಅಥವಾ ಮೌಖಿಕ ಗರ್ಭನಿರೋಧಕ ಇಲ್ಲವೇ ಸ್ತ್ರೀ ಕಾಂಡೋಮ್‌ಗಳಂತಹ ಎರಡನೇ ರೀತಿಯ ಗರ್ಭನಿರೋಧಕವನ್ನು ಬಳಸಿ.ʼ ಎಂದು ಸಲಹೆ ನೀಡಿದ್ದಾರೆ.

 

ಇದನ್ನೂ ಓದಿ: ಶಿವರಾತ್ರಿಯಂದು ದಿ ಡಿವೈನ್‌ ಬ್ಲಾಕ್ಬಸ್ಟರ್‌ ʼಕಾಂತಾರʼ ರಿ ರಿಲೀಸ್‌...!

ಇನ್ನು ʼಮಹಿಳೆಯೊಬ್ಬರು ಮಲವಿಸರ್ಜನೆ ಮಾಡಲು ಬಾತ್ ರೂಮಿಗೆ ಹೋದಾಗ, ಮಗುವಿಗೆ ಜನ್ಮ ನೀಡಿದ್ದರು' ಎಂಬ ಸುದ್ದಿಯ ಶೀರ್ಷಿಕೆಯನ್ನು ರಾಕುಲ್ ಓದುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಇದಕ್ಕೆ ಪ್ರತಿಕ್ರಿಯಿಸಿದ ನಟಿ, ʼಅವಳು ಗರ್ಭಿಣಿ ಎಂದು ತಿಳಿದಿರಲಿಲ್ಲವೇ? ಅದು ಹೇಗೆ ಸಾಧ್ಯ? ನಂತರ, ನಿಗೂಢ ಗರ್ಭಧಾರಣೆಯ ಕಾರಣದಿಂದಾಗಿ ಇದು ಸಂಭವಿಸಬಹುದು ಎಂದು ವಿವರಣೆ ನೀಡಿದ್ದರು. ʼನೀವು ಪಾಲಿಸಿಸ್ಟಿಕ್ ಓವರಿ ಸಿಂಡ್ರೋಮ್ (ಪಿಸಿಓಎಸ್), ತೂಕದ ಏರಿಳಿತ ಮತ್ತು ದೀರ್ಘಕಾಲದ ಒತ್ತಡದ ಸಮಸ್ಯೆ ಹೊಂದಿದ್ದರೆ ಈ ರೀತಿಯೂ ಸಂಭವಿಸಬಹುದು ಎಂದು ರಾಕುಲ್ ಹೇಳಿದ್ದಾರೆ.

ಮತ್ತೋಂದು ಕ್ಲೀಪ್‌ನಲ್ಲಿ ವಿರ್ಯದ ಘನೀಕರಣದ ಬಗ್ಗೆ ಮಾತನಾಡುತ್ತ.. ಯಾರಾದರೂ ದಂಪತಿ ಬಹುಬೇಗನೇ ಮಗುವನ್ನು ಹೊಂದಲು ಸಿದ್ಧವಾಗಿಲ್ಲದಿದ್ದರೆ, ಅವರು ನಂತರ ಜೀವನದಲ್ಲಿ ಮಗು ಪಡೆಯಲು ಯೋಚಿಸಿದರ ವಿರ್ಯದ ಘನೀಕರಣದ ಬಗ್ಗೆ ಯೋಚಿಸಿಬಹುದು. ಇದು ಉತ್ತಮ ವಿಧಾನವಾಗಿದೆ ಎಂದು ರಾಹುಲ್‌ ತಿಳಿಸಿದರು. ಸದ್ಯ ಛತ್ರಿವಾಲಿ ಸಿನಿಮಾ Zee5 OTT ಪ್ಲಾಟ್‌ಫಾರ್ಮ್‌ನಲ್ಲಿ ಸ್ಟ್ರೀಮ್ ಆಗುತ್ತಿದೆ.

 

 

Trending News