Rakhi Sawant ಮೇಲೆ ಅಶ್ಲೀಲ ವಿಡಿಯೋ ಸೋರಿಕೆ ಮಾಡಿದ ಆರೋಪ! ಸುಪ್ರೀಂ ಕೋರ್ಟ್ ತಲುಪಿದ ಪ್ರಕರಣ

Rakhi Sawant Video Leak Case: ರಾಖಿ ಸಾವಂತ್ ತನ್ನ ಮಾಜಿ ಪತಿ ಆದಿಲ್ ದುರಾನಿ ಮಾಡಿರುವ ಅಶ್ಲೀಲ ವೀಡಿಯೊಗಳನ್ನು ಸೋರಿಕೆ ಮಾಡಿದ ಆರೋಪದಿಂದ ಮತ್ತೊಮ್ಮೆ ವಿವಾದಕ್ಕೆ ಒಳಗಾಗಿದ್ದರು. ರಾಖಿ ಪತಿ ಕೂಡ ಆಕೆಯ ವಿರುದ್ಧ ಎಫ್‌ಐಆರ್ ದಾಖಲಿಸಿದ್ದರು. ಆದರೆ, ಅದನ್ನು ತಪ್ಪಿಸಲು ರಾಖಿ ಕೂಡ ಫೈಟ್ ಮಾಡಲು ಸಾಕಷ್ಟು ಪ್ರಯತ್ನಿಸುತ್ತಿದ್ದಾರೆ.  

Written by - Nitin Tabib | Last Updated : Apr 21, 2024, 07:30 PM IST
  • ರಾಖಿ ಸಾವಂತ್ ವಿರುದ್ಧದ ಈ ಆರೋಪಗಳ ವಿಚಾರಣೆ ಏಪ್ರಿಲ್ 22 ರಂದು ನಡೆಯಲಿದೆ.
  • ಇದೀಗ ಈ ನಿರ್ಧಾರ ಯಾರ ಪರವಾಗಿ ಹೊರಬರಲಿದೆ ಎಂಬುದು ಕಾಲವೇ ನಿರ್ಧರಿಸಲಿದೆ.
  • ಸದ್ಯ, ಸದಾ ಖುಷಿಯಾಗಿ, ಬಬ್ಲಿಯಾಗಿರುವ ರಾಖಿ ಸಾವಂತ್ ಪ್ರಕರಣದಿಂದ ಸಾಕಷ್ಟು ನೊಂದು ಹೋಗಿದ್ದಾರೆ ಎಂದರೆ ತಪ್ಪಾಗಲಾರದು.
Rakhi Sawant ಮೇಲೆ ಅಶ್ಲೀಲ ವಿಡಿಯೋ ಸೋರಿಕೆ ಮಾಡಿದ ಆರೋಪ! ಸುಪ್ರೀಂ ಕೋರ್ಟ್ ತಲುಪಿದ ಪ್ರಕರಣ title=

Defamation Case Against Rakhi Sawant: ಇತ್ತೀಚೆಗಷ್ಟೇ ರಾಖಿ ಸಾವಂತ್ ಬಾಂಬೆ ಹೈಕೋರ್ಟ್ ಮೆಟ್ಟಿಲೇರಿದ್ದರು, ಆದರೆ ಅಶ್ಲೀಲ ವಿಡಿಯೋ ಪ್ರಕರಣದಲ್ಲಿ ಅವರು ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಲಾಗಿದೆ. ಹೀಗಿರುವಾಗ ರಾಖಿ ಮತ್ತೆ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ.
ರಾಖಿ ಮತ್ತು ಆದಿಲ್ ನಡುವಿನ ವಿವಾದ ನಿಲ್ಲುವ ಮಾತೆ ಎತ್ತುತ್ತಿಲ್ಲ. ವಿಚ್ಛೇದನದ ಬಳಿಕ ಇಬ್ಬರೂ ಪರಸ್ಪರ ಗಂಭೀರ ಆರೋಪಗಳನ್ನು ಮಾಡುತ್ತಲೇ ಇದ್ದಾರೆ. ಆದಿಲ್ ದುರಾನಿ ಅವರು ರಾಖಿ ಸಾವಂತ್ ಕೆಲ ಖಾಸಗಿ ವಿಡಿಯೋಗಳನ್ನು ಸೋರಿಕೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ರಾಖಿ ವಿರುದ್ಧ ಎಫ್‌ಐಆರ್ ಕೂಡ ದಾಖಲಿಸಿದಾರೆ. ಆದರೆ ರಾಖಿ ತನ್ನ ರಕ್ಷಣೆಯಲ್ಲಿ  ಬಾಂಬೆ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದಾಳೆ.

ಇದನ್ನೂ ಓದಿ-Bollywood Actress: ದಾವೂದ್ ಇಬ್ರಾಹಿಂ ಜೊತೆ ಸಂಪರ್ಕದಲ್ಲಿದ್ದರಾ Akshay Kumar ಪತ್ನಿ? ಮೌನ ಮುರಿದ ಟ್ವಿಂಕಲ್ ಖನ್ನಾ ಹೇಳಿದ್ದೇನು?

ಇದಾದ ಬಳಿಕ ಬಾಂಬೆ ಹೈಕೋರ್ಟ್ ರಾಖಿ ಅರ್ಜಿಯನ್ನು ತಿರಸ್ಕರಿಸಿತ್ತು. ಇದೀಗ ಬಂಧನದಿಂದ ಪಾರಾಗಲು ರಾಖಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ. ಹೀಗಾಗಿ ಈ ಪ್ರಕರಣದ ವಿಚಾರಣೆ ಏಪ್ರಿಲ್ 22 ರಂದು ನಡೆಯಲಿದೆ.
ಆದಿಲ್ ರಾಖಿ ಸಾವಂತ್ ವಿರುದ್ಧ ಹಲವು ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಭಾರತೀಯ ದಂಡ ಸಂಹಿತೆಯ ಸೆಕ್ಷನ್ 500 ರ ಅಡಿಯಲ್ಲಿ ರಾಖಿ ವಿರುದ್ಧ ಅವರು ಮಾನನಷ್ಟ ಆರೋಪ ಹೂಡಿದ್ದಾರೆ ಮತ್ತು ಸೆಕ್ಷನ್ 34 ರ ಅಡಿಯಲ್ಲಿ ಅಪರಾಧ ಮಾಡುವ ಉದ್ದೇಶದಿಂದ ಸಂಗಾತಿಯಾಗಿದ್ದಾರೆ ಎಂದು ಆರೋಪಿಸಿದ್ದಾರೆ.

ಇದನ್ನೂ ಓದಿ-Bollywood Actress: ಹನಿಮೂನ್ ವೇಳೆ ನಡೆದ ಆ ಘಟನೆಯ ಬಳಿಕ ನನಗೆ ವಿವಾಹದ ಮನವರಿಕೆಯಾಯಿತು ಎಂದ ಖ್ಯಾತ ನಟಿ

ರಾಖಿ ಸಾವಂತ್ ವಿರುದ್ಧದ ಈ ಆರೋಪಗಳ ವಿಚಾರಣೆ ಏಪ್ರಿಲ್ 22 ರಂದು ನಡೆಯಲಿದೆ. ಇದೀಗ ಈ ನಿರ್ಧಾರ ಯಾರ ಪರವಾಗಿ ಹೊರಬರಲಿದೆ ಎಂಬುದು ಕಾಲವೇ ನಿರ್ಧರಿಸಲಿದೆ. ಸದ್ಯ, ಸದಾ ಖುಷಿಯಾಗಿ, ಬಬ್ಲಿಯಾಗಿರುವ ರಾಖಿ ಸಾವಂತ್ ಪ್ರಕರಣದಿಂದ ಸಾಕಷ್ಟು ನೊಂದು ಹೋಗಿದ್ದಾರೆ ಎಂದರೆ ತಪ್ಪಾಗಲಾರದು. 

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News