Rakhi Sawant: ಬಾಲಿವುಡ್‌ ಡ್ರಾಮಾ ಕ್ವೀನ್‌ಗೆ ಜಾಮೀನು ಅರ್ಜಿ ರದ್ದು: ಜೈಲು ಸೇರುತ್ತಾರಾ ರಾಖಿ..!

Rakhi Sawant Case: ಬಾಲಿವುಡ್‌ ಡ್ರಾಮಾ ಕ್ವೀನ್‌ ರಾಖಿ ಸಾವಂತ್ ವಿರುದ್ದ ಈಕೆಯ ಪತಿ ಆದಿಲ್ ಶಾ ದೂರು ದಾಖಲಿಸಿದ್ದು, ಈಕೆಯ ಜಾಮೀನು ಅರ್ಜಿಯನ್ನು ಮುಂಬೈ ಕೋರ್ಟ್‌ ತಿರಸ್ಕರಿಸಿದೆ. ಹಾಗಿದ್ರೇ ಈ ನಟಿ ಜೈಲು ಶಿಕ್ಷೆಗೆ ಗುರುಯಾಗುತ್ತಾರಾ? ಇಲ್ಲಿದೆ ಸಂಪೂರ್ಣ ವಿವರ.  

Written by - Zee Kannada News Desk | Last Updated : Apr 22, 2024, 10:58 AM IST
  • ನಟಿ ರಾಖಿ ಸಾವಂತ್ ಮದುವೆಯಾದ ಒಂದೇ ತಿಂಗಳಲ್ಲಿ ಈಕೆಯ ಸಂಸಾರ ಪೊಲೀಸ್​ ಠಾಣೆ ಮೆಟ್ಟಿಲೇರಿದೆ.ಈ ನಟಿಯ ಪತಿ ಆದಿಲ್ ಈಕೆಯ ವಿರುದ್ಧ ಗಂಭೀರ ಆರೋಪ ಮಾಡಿ ಮಾಡಿದ್ದಾರೆ.
  • ಆದಿಲ್ ದುರಾನಿಯ ಖಾಸಗಿ ವಿಡಿಯೋಗಳನ್ನು ಪ್ರಸಾರ ಮಾಡುತ್ತಿದ್ದು, ಈ ವಿಡಿಯೋದ ಲಿಂಕ್‌ಗಳನ್ನು ವಾಟ್ಸಾಪ್ ಗ್ರೂಪ್‌ಗಳಲ್ಲಿ ಶೇರ್‌ ಮಾಡಲಾಗಿದೆ ಎಂದು ರಾಖಿಯ ವಿರುದ್ಧ ಆರೋಪಿಸಿದ್ದಾರೆ.
  • ಸದ್ಯ ರಾಖಿ ಸಾವಂತ್‌ ಪತಿಯ ಆರೋಪದ ಹಿನ್ನಲೆ ವಿಚಾರಣೆ ಕೂಡ ನಡೆಯುತ್ತಿದ್ದು, ಇದೇ ವಿಚಾರವಾಗಿ ಈ ನಟಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿ ನಿರೀಕ್ಷಣಾ ಜಾಮೀನು ಕೋರಿದ್ದಾರೆ.
Rakhi Sawant: ಬಾಲಿವುಡ್‌ ಡ್ರಾಮಾ ಕ್ವೀನ್‌ಗೆ ಜಾಮೀನು ಅರ್ಜಿ ರದ್ದು: ಜೈಲು ಸೇರುತ್ತಾರಾ ರಾಖಿ..! title=

Rakhi Sawant Anticipatory Bail Rejected: ಬಾಲಿವುಡ್‌ ಬೆಡಗಿ ರಾಖಿ ಸಾವಂತ್ ಆದಿಲ್ ಶಾ ಅವರನ್ನು ಮದುವೆಯಾದ ನಂತರ ಭಾರಿ ಸುದ್ದಿಯಾಗಿದ್ದ ನಟಿ, ಇದೀಗ ಮತ್ತೊಂದು ಸಂಕಷ್ಟಕ್ಕೆ ಸಿಲುಕಿಕೊಂಡಿದ್ದಾರೆ. ನಟಿ ರಾಖಿ ಸಾವಂತ್ ಮದುವೆಯಾದ ಒಂದೇ ತಿಂಗಳಲ್ಲಿ ಈಕೆಯ ಸಂಸಾರ ಪೊಲೀಸ್​ ಠಾಣೆ ಮೆಟ್ಟಿಲೇರಿದೆ. ಈ ನಟಿಯ ಪತಿ ಆದಿಲ್ ಈಕೆಯ ವಿರುದ್ಧ ಗಂಭೀರ ಆರೋಪ ಮಾಡಿ ಮಾಡಿದ್ದಾರೆ.ಇದೀಗ ಈ ನಟಿಗೆ ಜಾಮೀನು ಅರ್ಜಿ ರದ್ದು ಆಗಿದೆ. 

ಆದಿಲ್  ದುರಾನಿಯ ಖಾಸಗಿ ವಿಡಿಯೋಗಳನ್ನು ಪ್ರಸಾರ ಮಾಡುತ್ತಿದ್ದು, ಈ ವಿಡಿಯೋದ ಲಿಂಕ್‌ಗಳನ್ನು ವಾಟ್ಸಾಪ್ ಗ್ರೂಪ್‌ಗಳಲ್ಲಿ ಶೇರ್‌ ಮಾಡಲಾಗಿದೆ ಎಂದು ರಾಖಿಯ ವಿರುದ್ಧ ಆರೋಪಿಸಿದ್ದಾರೆ. ಈ ನಟಿ 29 ನಿಮಿಷ 25 ಸೆಕೆಂಡ್ 23 ನಿಮಿಷ 22 ಸೆಕೆಂಡ್ ಗಳ ರನ್‌ ಟೈಮ್‌ಗಳೊಂದಿಗೆ ಅದಿಲ್‌ನ ಎರಡುಯ ವಿಡಿಯೋಗಳನ್ನು ಪ್ರದರ್ಶಿಸಿದ್ದಾರೆ ಎನ್ನಲಾಗ್ತಿದೆ. ಕಳೆದ ವರ್ಷ ಆಗಸ್ಟ್ 25 ರಂದು ರಾಖಿ ಸಾವಂತ್ ಟಿವಿ ಕಾರ್ಯಕ್ರಮವೊಂದರಲ್ಲಿ ತನ್ನ ಮೊಬೈಲ್ ಫೋನ್ ನಲ್ಲಿ ಅಶ್ಲೀಲ ಸಂದೇಶಗಳನ್ನು ತೋರಿಸಿದ್ದಾರೆ ಎಂದು ಅದಿಲ್‌ ದೂರು ಸಲ್ಲಿಸಿದರು.

ಇದನ್ನೂ ಓದಿ: Shine Shetty: ಧಿಡೀರನೇ ಮದುವೆ ಪೋಟೋ ಶೇರ್‌ ಮಾಡಿದ ಬಿಗ್‌ ಬಾಸ್‌ ವಿನ್ನರ್:‌ ಶೈನ್‌-ಅಂಕಿತಾ ಮದ್ವೆಯಾದ್ರಾ?

ಸದ್ಯ ರಾಖಿ ಸಾವಂತ್‌ ಪತಿಯ ಆರೋಪದ ಹಿನ್ನಲೆ ವಿಚಾರಣೆ ಕೂಡ ನಡೆಯುತ್ತಿದ್ದು, ಇದೇ ವಿಚಾರವಾಗಿ ಈ ನಟಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿ ನಿರೀಕ್ಷಣಾ ಜಾಮೀನು ಕೋರಿದ್ದಾರೆ. ನಟಿ ರಾಖಿ ಸಾವಂತ್‌ಬಾಂಬೆ ಹೈಕೋರ್ಟ್‌ನ ತೀರ್ಪು ಮತ್ತು ಬಂಧನದಿಂದ ತಪ್ಪಿಸಿಕೊಳ್ಳಲು ಕೋರ್ಟ್‌ ಮೊರೆ ಹೋಗಿದ್ದಾರೆ. ಸದ್ಯ ಈ ಪ್ರಕರಣದಲ್ಲಿ ನಟಿಯು ಬಂಧನಕ್ಕೆ ಒಳಗಾಗಬಹುದೆಂದು, ತಪ್ಪಿಸಿಕೊಳ್ಳಲು ಬಾಂಬೆ ಹೈಕೋರ್ಟ್‌ನಲ್ಲಿ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು. ಆದರೆ ಈಕೆಯ ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿತು. ಆದರಿಂದ ಈ ನಟಿ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದಾರೆ.

ನಟಿ ರಾಖಿ ಸಾವಂತ್‌ ಅರ್ಜಿಯಲ್ಲಿ ತನ್ನನ್ನು ಸುಳ್ಳು ಪ್ರಕರಣದಲ್ಲಿ ಸಿಲುಕಿಸಲಾಗಿದೆ ಎಂದು ತಿಳಿಸಿದ್ದಾರೆ. ಸದ್ಯ ಇಂದು ಏಪ್ರಿಲ್ 22 ರಂದು ಸುಪ್ರೀಂ ಕೋರ್ಟ್‌ನಲ್ಲಿಈ ನಟಿಯ ಅರ್ಜಿಯ ವಿಚಾರಣೆ ನಡೆಯಲಿದ್ದು, ಆಕೆ ಬಂಧನದಿಂದ ಮುಕ್ತಿ ಪಡೆಯುತ್ತಾರೋ ಅಥವಾ ಜೈಲು ಶಿಕ್ಷೆಗೆ ಗುರಿಯಾಗುತ್ತಾರೋ ಎಂಬುದನ್ನು ಕಾದು ನೋಡಬೇಕಾಗಿದೆ. ಆದಿಲ್ ದೂರಿನ ಮೇರೆಗೆ ರಾಖಿ ವಿರುದ್ಧ ಐಪಿಸಿ ಸೆಕ್ಷನ್ 500, 34 ಮತ್ತು ಸೆಕ್ಷನ್ 67ಎ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News