Raj Kundra: ಈ ನಗರದ ಡೀಲಕ್ಸ್ ಹೋಟೆಲ್‌ಗಳಲ್ಲಿ ಬ್ಲೂಫಿಲಂ ತೆಗೆಯುತ್ತಿದ್ದ ರಾಜ್‌ ಕುಂದ್ರಾ.!

Raj Kundra: ಉದ್ಯಮಿ ಮತ್ತು ಶಿಲ್ಪಾ ಶೆಟ್ಟಿ ಅವರ ಪತಿ ರಾಜ್ ಕುಂದ್ರಾ ಮತ್ತೆ ಸುದ್ದಿಯಲ್ಲಿದ್ದಾರೆ. ಮಹಾರಾಷ್ಟ್ರ ಸೈಬರ್ ಪೊಲೀಸರು ಉಪನಗರಗಳಲ್ಲಿನ ಎರಡು ಡೀಲಕ್ಸ್ ಹೋಟೆಲ್‌ಗಳಲ್ಲಿ ಅಶ್ಲೀಲ ವಿಡಿಯೋಗಳನ್ನು ಚಿತ್ರೀಕರಿಸಿದ ಆರೋಪದ ಮೇಲೆ ಚಾರ್ಜ್ ಶೀಟ್ ಸಲ್ಲಿಸಿದ್ದಾರೆ ಎಂದು ವರದಿಯಾಗಿದೆ. 

Written by - Chetana Devarmani | Last Updated : Nov 22, 2022, 02:04 PM IST
  • ಉದ್ಯಮಿ ಮತ್ತು ಶಿಲ್ಪಾ ಶೆಟ್ಟಿ ಅವರ ಪತಿ ರಾಜ್ ಕುಂದ್ರಾ
  • ಡೀಲಕ್ಸ್ ಹೋಟೆಲ್‌ಗಳಲ್ಲಿ ಬ್ಲೂಫಿಲಂ ತೆಗೆಯುತ್ತಿದ್ದ ರಾಜ್‌ ಕುಂದ್ರಾ
  • 450 ಪುಟಗಳ ಚಾರ್ಜ್‌ಶೀಟ್‌ನಲ್ಲಿ ಬಯಲಾದ ಸತ್ಯ
Raj Kundra: ಈ ನಗರದ ಡೀಲಕ್ಸ್ ಹೋಟೆಲ್‌ಗಳಲ್ಲಿ ಬ್ಲೂಫಿಲಂ ತೆಗೆಯುತ್ತಿದ್ದ ರಾಜ್‌ ಕುಂದ್ರಾ.!  title=
ಶಿಲ್ಪಾ ಶೆಟ್ಟಿ - ರಾಜ್ ಕುಂದ್ರಾ

Raj Kundra: ಉದ್ಯಮಿ ಮತ್ತು ಶಿಲ್ಪಾ ಶೆಟ್ಟಿ ಅವರ ಪತಿ ರಾಜ್ ಕುಂದ್ರಾ ಮತ್ತೆ ಸುದ್ದಿಯಲ್ಲಿದ್ದಾರೆ. ಮಹಾರಾಷ್ಟ್ರ ಸೈಬರ್ ಪೊಲೀಸರು ಉಪನಗರಗಳಲ್ಲಿನ ಎರಡು ಡೀಲಕ್ಸ್ ಹೋಟೆಲ್‌ಗಳಲ್ಲಿ ಅಶ್ಲೀಲ ವಿಡಿಯೋಗಳನ್ನು ಚಿತ್ರೀಕರಿಸಿದ ಆರೋಪದ ಮೇಲೆ ಚಾರ್ಜ್ ಶೀಟ್ ಸಲ್ಲಿಸಿದ್ದಾರೆ ಎಂದು ವರದಿಯಾಗಿದೆ. ಆರೋಪಪಟ್ಟಿ ಪ್ರಕಾರ, ಕುಂದ್ರಾ ಅವರೊಂದಿಗೆ ನಟಿಯರಾದ ಶೆರ್ಲಿನ್ ಚೋಪ್ರಾ, ಪೂನಂ ಪಾಂಡೆ, ಚಲನಚಿತ್ರ ನಿರ್ಮಾಪಕಿ ಮೀತಾ ಜುಂಜುನ್ವಾಲಾ ಮತ್ತು ಕ್ಯಾಮರಾಮನ್ ರಾಜು ದುಬೆ ಇದರಲ್ಲಿ ಭಾಗಿಯಾಗಿದ್ದಾರೆ. ಈ ಸಿನಿಮಾಗಳನ್ನು ಒಟಿಟಿ ಪ್ಲಾಟ್‌ಫಾರ್ಮ್‌ಗಳಲ್ಲಿ ವಿತರಿಸಲಾಗಿದೆ ಎಂದು ಆರೋಪಪಟ್ಟಿಯಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ : ದಿಶಾ ಪಟಾನಿ ಲುಕ್‌ ಕಂಡು ಚಳಿಯಲ್ಲೂ ಬೆವರಿದ ಗಂಡ ಹೈಕ್ಳು!

ಇದಕ್ಕೂ ಮೊದಲು, 2019 ರಲ್ಲಿ ಸೈಬರ್ ಪೊಲೀಸರು ಆರ್ಮ್ಸ್‌ಪ್ರೈಮ್ ಮೀಡಿಯಾ ಲಿಮಿಟೆಡ್‌ನ ನಿರ್ದೇಶಕ ರಾಜ್ ಕುಂದ್ರಾ ಅವರು ಕೆಲವು ವೆಬ್‌ಸೈಟ್‌ಗಳಲ್ಲಿ ಅಶ್ಲೀಲ ವಿಡಿಯೋಗಳನ್ನು ನಿರ್ಮಿಸಲು ಮತ್ತು ವಿತರಿಸಲು ತೊಡಗಿದ್ದಾರೆ ಎಂದು ಆರೋಪಿಸಿದ್ದರು. ರಾಜ್ ಕುಂದ್ರಾ ಅವರನ್ನು ಜುಲೈ 19, 2021 ರಂದು ಮುಂಬೈ ಪೊಲೀಸರು ಅಶ್ಲೀಲ ಚಲನಚಿತ್ರಗಳ ಸೃಷ್ಟಿಗೆ ಸಂಬಂಧಿಸಿದ ಆರೋಪದ ಮೇಲೆ ಇತರ 10 ಜನರೊಂದಿಗೆ ಬಂಧಿಸಿದರು. 

ಭಾರತೀಯ ದಂಡ ಸಂಹಿತೆ, ಮಾಹಿತಿ ತಂತ್ರಜ್ಞಾನ ಕಾಯ್ದೆ ಮತ್ತು ಮಹಿಳೆಯರ ಅಸಭ್ಯ ಪ್ರಾತಿನಿಧ್ಯ (ನಿಷೇಧ) ಕಾಯ್ದೆಯ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ನಂತರ, ಅವರನ್ನು ಜುಲೈ 23, 2021 ರವರೆಗೆ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಯಿತು. ಸೆಪ್ಟೆಂಬರ್‌ನಲ್ಲಿ, ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಈ ಪ್ರಕರಣದಲ್ಲಿ ರಾಜ್‌ ಕುಂದ್ರಾಗೆ ಜಾಮೀನು ನೀಡಿತು. 

ಇದನ್ನೂ ಓದಿ :  ಮೆಗಾಸ್ಟಾರ್‌ ಚಿರಂಜೀವಿ ಅವರನ್ನು ಅಭಿನಂದಿಸಿದ ಪ್ರಧಾನಿ ಮೋದಿ

‘ಪ್ರೇಮ್‌ ಪಗ್ಲಾನಿ’ ಎಂಬ ಅಶ್ಲೀಲ ವೆಬ್‌ಸೀರಿಸ್‌ ತಯಾರಿಸಿದ್ದ ರಾಜ್‌ ಕುಂದ್ರಾ, ಇದನ್ನು ಒಟಿಟಿಗೆ ಅಪ್‌ಲೋಡ್‌ ಮಾಡಿದ್ದರು. ‘ದ ಪೂನಂ ಪಾಂಡೆ’ ಎಂಬ ಸ್ವಂತ ಆ್ಯಪ್‌ ಅನ್ನು ಪೂನಂ ಪಾಂಡೆ ಹೊಂದಿದ್ದರು. ತನ್ನ ವಿಡಿಯೋಗಳನ್ನೆಲ್ಲ ಕುಂದ್ರಾ ಕಂಪನಿ ಸಹಾಯದಿಂದ ಪೂನಂ ಪಾಂಡೆ ಬಿಡುಗಡೆ ಮಾಡುತ್ತಿದ್ದರು. ಈ ಎಲ್ಲ ಮಾಹಿತಿಗಳನ್ನು 450 ಪುಟಗಳ ಚಾರ್ಜ್‌ಶೀಟ್‌ನಲ್ಲಿ ಹೇಳಲಾಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News