ಧರ್ಮ ಧರ್ಮದ ನಡುವೆ ಜಗಳ ಹಚ್ಚಬೇಡ ರೀಲ್ಸ್‌ ರಾಣಿ..! ಪ್ರಿಯಾ ವಿರುದ್ಧ ಗುಡುಗಿದ ಮುಸ್ಲಿಂ ಯುವತಿ

Priya savadi on Neha hiremath : ಪ್ರಿಯಾ ಹೇಳಿಕೆಗೆ ಸೋಷಿಯಲ್‌ ಮೀಡಿಯಾದಲ್ಲಿ ಭಾರಿ ವಿರೋಧ ವ್ಯಕ್ತವಾಗುತ್ತಿದೆ. ಒಬ್ಬ ವ್ಯಕ್ತಿ ಮಾಡಿದ ತಪ್ಪಿಗೆ ಒಂದು ಸಮುದಾಯದ ಮೇಲೆ ಕಿಡಿಕಾರುವುದು ಎಷ್ಟು ಸರಿ ಅಂತ ಪ್ರಶ್ನೆ ಮಾಡುತ್ತಿದ್ದಾರೆ. ನ್ಯಾಯಕ್ಕಾಗಿ ಹೋರಾಡೋಣ ಆದರೆ ಜಾತಿ ಜಾತಿಗಳ ನಡುವೆ ಜಗಳ ಬೇಡ ಅಂತ ಹೇಳುತ್ತಿದ್ದಾರೆ.

Written by - Krishna N K | Last Updated : Apr 21, 2024, 11:39 AM IST
    • ಪ್ರಿಯಾ ಹೇಳಿಕೆಗೆ ಸೋಷಿಯಲ್‌ ಮೀಡಿಯಾದಲ್ಲಿ ಭಾರಿ ವಿರೋಧ ವ್ಯಕ್ತವಾಗುತ್ತಿದೆ.
    • ಬಿವಿಬಿ ಕಾಲೇಜು ಮೈದಾನದಲ್ಲಿ ನಡೆದ ವಿದ್ಯಾರ್ಥಿನಿ ನೇಹಾ ಭೀಕರ ಹತ್ಯೆ ಪ್ರಕರಣ ಕುರಿತ ಪ್ರಿಯಾ ಹೇಳಿಕೆ
    • ಬುರ್ಕಾ ಹಾಕಿ ಮನೆಯಲ್ಲಿ ಇಟ್ಟು ನಮ್ಮ ಮನೆ ಹೆಣ್ಣು ಮಕ್ಕಳನ್ನ ಸಾಯಿಸ್ತಾರೆ ಅಂತ ಆಕ್ರೋಶ ಹೊರಹಾಕಿದ್ದ ಪ್ರಿಯಾ
ಧರ್ಮ ಧರ್ಮದ ನಡುವೆ ಜಗಳ ಹಚ್ಚಬೇಡ ರೀಲ್ಸ್‌ ರಾಣಿ..! ಪ್ರಿಯಾ ವಿರುದ್ಧ ಗುಡುಗಿದ ಮುಸ್ಲಿಂ ಯುವತಿ title=

Neha hiremath news : ಕಳೆದ ಕೆಲವು ದಿನಗಳ ಹಿಂದೆ ಹುಬ್ಬಳ್ಳಿಯ ಪ್ರತಿಷ್ಟಿತ ಬಿವಿಬಿ ಕಾಲೇಜು ಮೈದಾನದಲ್ಲಿ ನಡೆದ ವಿದ್ಯಾರ್ಥಿನಿ ನೇಹಾ ಭೀಕರ ಹತ್ಯೆ ಪ್ರಕರಣ ರಾಜ್ಯದಲ್ಲಿ ಸಂಚಲನ ಸೃಷ್ಠಿಸುತ್ತಿದೆ. ಇದೇ ವೇಳೆ ಸೋಷಿಯಲ್‌ ಮೀಡಿಯಾದಲ್ಲೂ ಆರೋಪಿಗೆ ತಕ್ಕ ಶಿಕ್ಷೆಯಾಗಬೇಕು ಎನ್ನು ಕೂಗು ಕೇಳಿ ಬರುತ್ತಿದೆ.

ಇತ್ತೀಚಿಗೆ ನೇಹಾ ಸಾವಿನ ಕುರಿತು ನಟಿ, ಸೋಷಿಯಲ್‌ ಮೀಡಿಯಾ ಸ್ಟಾರ್‌ ಪ್ರಿಯಾ ಸವದಿ ಮಾತನಾಡಿದ್ದರು. ಈ ವೇಳೆ ಅವರು, ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಬೇಕು, ಇಲ್ಲದಿದ್ದರೆ ಮುಂದೊಂದು ದಿನ ನಾವು ಕುಂಕುಮ ತೆಗೆದು ಬುರ್ಖಾ ಹಾಕಿಕೊಂಡು ಅಡ್ಡಾಡಬೇಕಾಗುತ್ತದೆ. ಅಲ್ಲದೆ, ಅವರು ತಮ್ಮ ಹೆಣ್ಣು ಮಕ್ಕಳನ್ನ ಬುರ್ಕಾ ಹಾಕಿ ಮನೆಯಲ್ಲಿ ಇಟ್ಟು ನಮ್ಮ ಮನೆ ಹೆಣ್ಣು ಮಕ್ಕಳನ್ನ ಸಾಯಿಸ್ತಾರೆ ಅಂತ ಆಕ್ರೋಶ ಹೊರಹಾಕಿದ್ದಾರೆ.

ಇದನ್ನೂ ಓದಿ: ಸಲಾರ್ ಸಿನಿಮಾದಲ್ಲಿ ಪ್ರಭಾಸ್‌ ಬಳಸಿದ ಬೈಕ್‌ ಬೇಕಾ..? ಹಾಗಿದ್ರೆ ತಕ್ಷಣ ಹೀಗೆ ಮಾಡಿ

ಇದೀಗ ಪ್ರಿಯಾ ಹೇಳಿಕೆಗೆ ಸೋಷಿಯಲ್‌ ಮೀಡಿಯಾದಲ್ಲಿ ಭಾರಿ ವಿರೋಧ ವ್ಯಕ್ತವಾಗುತ್ತಿದೆ. ಒಬ್ಬ ವ್ಯಕ್ತಿ ಮಾಡಿದ ತಪ್ಪಿಗೆ ಒಂದು ಸಮುದಾಯದ ಮೇಲೆ ಕಿಡಿಕಾರುವುದು ಎಷ್ಟು ಸರಿ ಅಂತ ಪ್ರಶ್ನೆ ಮಾಡುತ್ತಿದ್ದಾರೆ. ನ್ಯಾಯಕ್ಕಾಗಿ ಹೋರಾಡೋಣ ಆದರೆ ಜಾತಿ ಜಾತಿಗಳ ನಡುವೆ ಜಗಳ ಬೇಡ ಅಂತ ಹೇಳುತ್ತಿದ್ದಾರೆ.

 

ಅಲ್ಲದೆ, ಪ್ರಿಯಾ ಹೇಳಿಕೆಗೆ ಮುಸ್ಲಿಂ ಯುವತಿಯೊಬ್ಬಳು ಆಕ್ರೋಶ ಹೊರಹಾಕಿದ್ದು, ಧರ್ಮ ಧರ್ಮದ ನಡುವೆ ಜಗಳ ಹಚ್ಚಬೇಡಿ, ನೀನು ರೀಲ್ಸ್‌ ರಾಣಿ, ಡ್ರಾಮಾ ಮಾಡು ತಾಯಿ ಅಂತ ವಾಗ್ದಾಳಿ ನಡೆಸಿದ್ದಾಳೆ. ಅಲ್ಲದೆ, ಯಾರಾದರೂ ಪೆಮೆಂಟ್‌ ಕೊಟ್ಟು ಕಳಿಸಿರಬೇಕು, ನೀನು ಮಾತನಾಡುವ ಮಾತಿಗೂ ನೇಹಾ ಸಾವಿಗೂ ಯಾವುದೇ ಅರ್ಥವಿಲ್ಲ ಅಂತ ಕಿಡಿಕಾರಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News