Porn Film Case: ನಟಿ Gehana Vasisht ನಿರೀಕ್ಷಣಾ ಜಾಮೀನು ಅರ್ಜಿ ವಜಾಗೊಳಿಸಿದ Bombay HC

Porn Film Case - ಅಶ್ಲೀಲ ಚಿತ್ರ ನಿರ್ಮಾಣ  (Porn Film Case) ಪ್ರಕರಣದಲ್ಲಿ Bollywood ನಟಿ ಗೆಹನಾ ವಶಿಷ್ಠ್ ಅವರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಬಾಂಬೆ ಹೈಕೋರ್ಟ್ (Bombay HC) ತಿರಸ್ಕರಿಸಿದೆ. ಗೆಹ್ನಾ ವಶಿಷ್ಠ್  (Gehana Vasisht)ಅಶ್ಲೀಲ ಚಿತ್ರಗಳಲ್ಲಿ ನಟನೆಗಾಗಿ ಮಹಿಳೆಯರಿಗೆ ಬೆದರಿಸಿ ಹಣದ ಹಣದ ಆಮೀಶವೊಡ್ಡಿದ ಆರೋಪವಿದೆ. 

Written by - Nitin Tabib | Last Updated : Sep 7, 2021, 06:14 PM IST
  • ಅಶ್ಲೀಲ ಚಿತ್ರ ನಿರ್ಮಾಣ ಪ್ರಕರಣ.
  • ನಟಿ ಗೆಹನಾ ವಸಿಷ್ಠ ಜಾಮೀನು ಅರ್ಜಿಯನ್ನು ತಿರಸ್ಕರಿಸಿದ ಬಾಂಬೆ ಹೈಕೋರ್ಟ್.
  • ಈಗಾಗಲೇ ಪೊಲೀಸರು ಗೆಹನಾ ಸಾಕ್ಷ ಪಡೆದಿರುವುದಾಗಿ ವಾದ ಮಂಡಿಸಿದ ಗೆಹನ ಪರ ವಕೀಲ.
Porn Film Case: ನಟಿ Gehana Vasisht ನಿರೀಕ್ಷಣಾ ಜಾಮೀನು ಅರ್ಜಿ ವಜಾಗೊಳಿಸಿದ Bombay HC title=
Porn Film Case (File Photo)

Porn Film Case - ಅಶ್ಲೀಲ ಚಿತ್ರ ನಿರ್ಮಾಣ  (Porn Film Case) ಪ್ರಕರಣದಲ್ಲಿ Bollywood ನಟಿ ಗೆಹನಾ ವಶಿಷ್ಠ್ ಅವರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಬಾಂಬೆ ಹೈಕೋರ್ಟ್ (Bombay HC) ತಿರಸ್ಕರಿಸಿದೆ. ಗೆಹ್ನಾ ವಶಿಷ್ಠ್  (Gehana Vasisht)ಅಶ್ಲೀಲ ಚಿತ್ರಗಳಲ್ಲಿ ನಟನೆಗಾಗಿ ಮಹಿಳೆಯರಿಗೆ ಬೆದರಿಸಿ ಹಣದ ಹಣದ ಆಮೀಶವೊಡ್ಡಿದ ಆರೋಪವಿದೆ. ಆಕೆಯ ಅರ್ಜಿಯನ್ನು ಆಲಿಸಿದ ಹೈಕೋರ್ಟ್ ನ್ಯಾಯಾಧೀಶರಾದ ನ್ಯಾಯಮೂರ್ತಿ ಎಸ್ ಕೆ ಶಿಂಧೆ ಅವರ ಪೀಠವು ಜಾಮೀನು ನೀಡಲು ನಿರಾಕರಿಸಿದೆ. ಈ ಪ್ರಕರಣದಲ್ಲಿ ಬಂಧನದಿಂದ  ತಪ್ಪಿಸಿಕೊಳ್ಳಲು ಗೆಹನಾ ವಶಿಷ್ಠ ಕಳೆದ ತಿಂಗಳು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಮಹಿಳೆಯರ ಗೌಪ್ಯತೆ ಉಲ್ಲಂಘನೆಗಾಗಿ ಸೆಕ್ಷನ್ 354-ಸಿ ಅಡಿಯಲ್ಲಿ ಗೆಹ್ನಾ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಇದಲ್ಲದೇ, ಆಕ್ಷೇಪಾರ್ಹ ಸಾಮಗ್ರಿಗಳನ್ನು ಮಾರಾಟ ಮಾಡಿದ್ದಕ್ಕಾಗಿ ಆಕೆಯ ವಿರುದ್ಧ ಐಪಿಸಿ ಸೆಕ್ಷನ್ 292 ಮತ್ತು 293 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಐಟಿ ಕಾಯಿದೆಯ ಸೆಕ್ಷನ್ 66 ಇ, 67, 67 ಎ ಅಡಿಯಲ್ಲಿ ಗೆಹನಾ ವಶಿಷ್ಟಳನ್ನು ಆರೋಪಿಯನ್ನಾಗಿ ಮಾಡಲಾಗಿದೆ. ಮುಂಬೈ ಪೊಲೀಸರು ಇತ್ತೀಚೆಗೆ ಪಾರ್ನ್ ಫಿಲ್ಮ್ ಮಾಡುವ ರಾಕೆಟ್ ನಡೆಸಿದ್ದಕ್ಕಾಗಿ ವಿವಿಧ ಜನರ ವಿರುದ್ಧ ಮೂರು ಪ್ರಕರಣಗಳನ್ನು ದಾಖಲಿಸಿದ್ದರು. ಈ ಆರೋಪಿಗಳಲ್ಲಿ ಖ್ಯಾತ Bollywood ನಟಿ ಶಿಲ್ಪಾ ಶೆಟ್ಟಿಯವರ (Shilpa Shetty) ಪತಿ ರಾಜ್ ಕುಂದ್ರಾ (Raj Kundra) ಕೂಡ ಶಾಮೀಲಾಗಿದ್ದಾರೆ. ಉದ್ಯಮಿ ರಾಜ್ ಕುಂದ್ರಾ ಅವರನ್ನು ಜುಲೈ 19 ರಂದು ಪೊಲೀಸರು ಬಂಧಿಸಿದ್ದರು. ಸದ್ಯ ಆತ ನ್ಯಾಯಾಂಗ ಬಂಧನದಲ್ಲಿದ್ದಾನೆ.

ಇದನ್ನೂ ಓದಿ-Deepika Padukone: ಬೆಂಗಳೂರಿನಲ್ಲಿ 7 ಕೋಟಿ ರೂ. ಮೌಲ್ಯದ ಫ್ಲ್ಯಾಟ್‌ ಖರೀದಿಸಿದ ದೀಪಿಕಾ ಪಡುಕೋಣೆ

ಇಂತಹುದೇ ಮತ್ತೊಂದು ಎಫ್‌ಐಆರ್‌ನಲ್ಲಿ, ಸಣ್ಣ ನಟನೆಯ ದೃಶ್ಯಗಳಿಗೆ ಕೆಲಸ ನೀಡುವ ನೆಪದಲ್ಲಿ ಪೋರ್ನ್ ಚಿತ್ರಗಳಲ್ಲಿ ಕೆಲಸ ಮಾಡಲು ಹೇಳುವ ಆರೋಪ  ಗೆಹನಾ ವಶಿಷ್ಟ ಮೇಲಿದೆ. ಹಾಟ್ ಶಾಟ್ಸ್ (Hot Shots)ಹೆಸರಿನ ಮೊಬೈಲ್ ಆಪ್ ನಲ್ಲಿ ಅಪ್ ಲೋಡ್ ಮಾಡುವ ಮೂಲಕ ಈ ಸಿನಿಮಾಗಳನ್ನು ಮಾರಾಟ ಮಾಡಿದ ಆರೋಪ ಆಕೆಯ ಮೇಲಿದೆ ಈ ಮೊಬೈಲ್ ಆಪ್ ನ ಮಾಲೀಕತ್ವ ರಾಜ್ ಕುಂದ್ರಾ ಬಳಿ ಇದೆ ಎಂದು ಆರೋಪಿಸಲಾಗಿದೆ. ಸೆಕ್ಷನ್ 370 ರ ಅಡಿಯಲ್ಲಿ ಗೆಹನಾ ವಶಿಷ್ಠ ವಿರುದ್ಧ ಪ್ರಕರಣ ದಾಖಲಿಸಲು ಪೊಲೀಸರು ಕೆಳ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಗೆಹನಾ ಅವರ ಅರ್ಜಿಯ ವಿಚಾರಣೆಯ ಸಮಯದಲ್ಲಿ, ಆಕೆಯ ವಕೀಲ ಅಭಿಷೇಕ್ ಯೆಂಡೆ ಅವರು ಈಗಾಗಲೇ ಪೊಲೀಸರು ಆಕೆಯಿಂದ ಸಾಕ್ಷ್ಯವನ್ನು ಪಡೆದ ಕಾರಣ ಆಕೆಯನ್ನು ಪ್ರಕರಣದಲ್ಲಿ ಬಂಧಿಸುವ ಅಗತ್ಯವಿಲ್ಲ ಎಂದು ವಾದಿಸಿದ್ದಾರೆ. 

ಇದನ್ನೂ ಓದಿ-Sruthi Hariharan: ಡಾಲಿ ಧನಂಜಯ್ ‘ಹೆಡ್ ಬುಷ್’ ಸಿನಿಮಾಗೆ ಶ್ರುತಿ ಹರಿಹರನ್ ಎಂಟ್ರಿ..!

ಆದರೆ, ಗೆಹನಾ ವಸಿಷ್ಠ ಪರ ವಕೀಲರು ಮಂಡಿಸಿದ ವಾದವನ್ನು ಆಲಿಸಿದ ನ್ಯಾಯಾಧೀಶರು ಕೊನೆಗೆ ಗೆಹನಾ ಸಲ್ಲಿಸಿರುವ ನಿರೀಕ್ಷಣಾ ಜಾಮೀನು ಅರ್ಜಿಯನ್ನು ತಿರಸ್ಕರಿಸಿದ್ದಾರೆ.

ಇದನ್ನೂ ಓದಿ-Extortion case: ದಕ್ಷಿಣ ಭಾರತದ ನಟಿ ಲೀನಾ ಪೌಲ್ ರನ್ನು ಬಂಧಿಸಿದ ದೆಹಲಿ ಪೊಲೀಸರು

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News