"ಪವನ್ ಕಲ್ಯಾಣ್ ತಮ್ಮ 3ನೇ ಪತ್ನಿಗೂ ಡಿವೋರ್ಸ್ ಕೊಡ್ತಾರೆ": ವೇಣುಸ್ವಾಮಿ ಭವಿಷ್ಯ!

Pawan Kalyan: ಟಾಲಿವುಡ್ ನಟ, ಜನಸೇನಾ ಪಕ್ಷದ ಅಧ್ಯಕ್ಷ ಪವನ್ ಕಲ್ಯಾಣ್ ಒಂದಿಲ್ಲೊಂದು ಕಾರಣಕ್ಕೆ ಸುದ್ದಿಯಲ್ಲಿ ಇರುತ್ತಿದ್ದು, ಸದ್ಯ ಈ ನಟ ತಮ್ಮ 3ನೇ ಪತ್ನಿಗೆ ಡಿವೋರ್ಸ್ ನೀಡುತ್ತಾರೆ ಎಂದು ಸೆಲೆಬ್ರೆಟಿ ಜ್ಯೋತಿಷಿ ವೇಣುಸ್ವಾಮಿ ಭವಿಷ್ಯ ನುಡಿದಿದ್ದಾರೆ. ಇಲ್ಲಿದೆ ಕಂಪ್ಲೀಟ್‌ ಸ್ಟೋರಿ.

Written by - Zee Kannada News Desk | Last Updated : Jan 5, 2024, 01:05 PM IST
  • ಪವನ್‌ ಕಲ್ಯಾಣ್‌ ಸದಾ ಒಂದಲ್ಲ ಇನ್ನೊಂದು ಸುದ್ದಿಯಲ್ಲಿರುತ್ತಿದ್ದು, ಸದ್ಯ ಮುಂದಿನ ಆಂಧ್ರ ಚುನಾವಣೆ ಕಡೆ ಗಮನ ಹರಿಸಿರುವ ಜನಸೇನಾನಿ ಸಿನಿಮಾಗಳಲ್ಲಿ ನಟಿಸೋದು ಕಮ್ಮಿ ಮಾಡಿದ್ದಾರೆ.
  • ಪವನ್‌ ಕಲ್ಯಾಣ್‌ ಈಗಾಗಲೇ ಇಬ್ಬರಿಗೆ ಡಿವೋರ್ಸ್ ಕೊಟ್ಟು ರಷ್ಯಾ ಮೂಲದ ಅನ್ನಾ ಲೆಜ್ನೆವಾ ಎಂಬುವವರ ಕೈ ಹಿಡಿದಿದ್ದು, ಈ ವರ್ಷವೇ ಆಕೆಗೂ ಪವನ್ ಡಿವೋರ್ಸ್ ನೀಡುತ್ತಾರೆ ಎಂದು ಸೆಲೆಬ್ರೆಟಿ ಜ್ಯೋತಿಷಿ ವೇಣುಸ್ವಾಮಿ ಭವಿಷ್ಯ ನುಡಿದಿದ್ದಾರೆ.
  • ಕೆಲ ದಿನಗಳ ಹಿಂದೆ 'ಸಲಾರ್' ಸಿನಿಮಾ ಕೂಡ ಸೋಲುತ್ತದೆ ಎಂದು ವೇಣುಸ್ವಾಮಿ ಹೇಳಿದ್ದು, ಇದು ಪ್ರಭಾಸ್ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿತ್ತು.
"ಪವನ್ ಕಲ್ಯಾಣ್ ತಮ್ಮ 3ನೇ ಪತ್ನಿಗೂ ಡಿವೋರ್ಸ್ ಕೊಡ್ತಾರೆ": ವೇಣುಸ್ವಾಮಿ ಭವಿಷ್ಯ!  title=

Astrologer Venuswamy Predicts Pawan Kalyan Future: ಟಾಲಿವುಡ್‌ ಪವರ್‌ ಸ್ಟಾರ್‌ ಹಾಗೂ ಜನಸೇನ ಪಕ್ಷದ ಅಧ್ಯಕ್ಷ ಪವನ್‌ ಕಲ್ಯಾಣ್‌ ಸದಾ ಒಂದಲ್ಲ ಇನ್ನೊಂದು ಸುದ್ದಿಯಲ್ಲಿರುತ್ತಿದ್ದು, ಸದ್ಯ ಮುಂದಿನ ಆಂಧ್ರ ಚುನಾವಣೆ ಕಡೆ ಗಮನ ಹರಿಸಿರುವ ಜನಸೇನಾನಿ ಸಿನಿಮಾಗಳಲ್ಲಿ ನಟಿಸೋದು ಕಮ್ಮಿ ಮಾಡಿದ್ದಾರೆ. ಇತ್ತ ಪಕ್ಷ ಸಂಘಟನೆಯತ್ತ ಮುಖ ಮಾಡಿರುವರು, ಇದೀಗ ಪವನ್ ವೈಯಕ್ತಿಕ ಜೀವನದ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿರುತ್ತದೆ. ಈ ಹಿಂದೆ ಎದುರಾಳಿ ಪಕ್ಷಗಳು ಪವನ್ ಕಲ್ಯಾಣ್ 3 ಮದುವೆ ಆಗಿದ್ದಾರೆ ಎನ್ನುವ ವಿಚಾರವನ್ನೇ ದಾಳವಾಗಿಸಿಕೊಂಡು ವಾಗ್ದಾಳಿ ನಡೆಸುತ್ತಾ ಬರುತ್ತಿದ್ದು, ಅದಕ್ಕೆಲ್ಲಾ ಪವರ್ ಸ್ಟಾರ್ ತಿರುಗೇಟು ನೀಡುವ ಪ್ರಯತ್ನವನ್ನು ಮಾಡುತ್ತಿದ್ದಾರೆ. 

ಪವನ್‌ ಕಲ್ಯಾಣ್‌ ಈಗಾಗಲೇ ಇಬ್ಬರಿಗೆ ಡಿವೋರ್ಸ್ ಕೊಟ್ಟು ರಷ್ಯಾ ಮೂಲದ ಅನ್ನಾ ಲೆಜ್ನೆವಾ ಎಂಬುವವರ ಕೈ ಹಿಡಿದಿದ್ದು, ಈ ವರ್ಷವೇ ಆಕೆಗೂ ಪವನ್ ಡಿವೋರ್ಸ್ ನೀಡುತ್ತಾರೆ ಎಂದು ಸೆಲೆಬ್ರೆಟಿ ಜ್ಯೋತಿಷಿ ವೇಣುಸ್ವಾಮಿ ಭವಿಷ್ಯ ನುಡಿದಿದ್ದಾರೆ. ಸೆಲೆಬ್ರಿಟಿಗಳ ವೃತ್ತಿ ಹಾಗೂ ವೈಯಕ್ತಿಕ ವಿಚಾರಗಳ ಬಗ್ಗೆ ಮಾತನಾಡಿ ವೇಣುಸ್ವಾಮಿ ಜನಪ್ರಿಯತೆ ಗಳಿಸಿದ್ದವರು, ಕೆಲವೊಮ್ಮೆ ವಿವಾದಾತ್ಮಕ ಹೇಳಿಕೆಗಳಿಂದಲೂ ಸುದ್ದಿಯಾಗಿದ್ದಾರೆ. ಸೆಲೆಬ್ರೆಟಿಗಳಾದ ನಾಗಚೈತನ್ಯಾ, ಸಮಂತಾ, ಪವನ್ ಕಲ್ಯಾಣ್, ರಶ್ಮಿಕಾ ಮಂದಣ್ಣ, ಪ್ರಭಾಸ್ ಸೇರಿದಂತೆ ಹಲವರ ಬಗ್ಗೆ ವೇಣುಸ್ವಾಮಿ ಮಾತನಾಡಿ ಚರ್ಚಗೆ ಗ್ರಾಸವಾಗಿದ್ದರು. ಆದರೆ ಆತ ಹೇಳಿದ್ದರಲ್ಲಿ ಒಂದಷ್ಟು ವಿಚಾರಗಳು ನಿಜವಾಗಿವೆ. 

ಇದನ್ನೂ ಓದಿ: ಮ್ಯಾಕ್ಸ್‌ ಕ್ಲೈಮ್ಯಾಕ್ಸ್‌ ಲುಕ್‌ ಔಟ್‌: ಸುದೀಪ್‌ ಸ್ಟೈಲ್‌ ರಿವೀಲ್!

ಹಲವಾರು ನಟಿಯರಾದ ರಶ್ಮಿಕಾ ಮಂದಣ್ಣ, ನಿಧಿ ಅಗರ್‌ವಾಲ್, ಡಿಂಪುಲ್ ಹಯಾತಿ ವೇಣುಸ್ವಾಮಿಯನ್ನು ನಂಬುತ್ತಿದ್ದು, ಆತನ ಸೂಚನೆಯಂತೆ ಪೂಜೆಗಳನ್ನು ನೆರವೇರಿಸಿದ್ದಾರೆ. ಇನ್ನು ನಾಗಚೈತನ್ಯಾ ಹಾಗೂ ಸಮಂತಾ ಡಿವೋರ್ಸ್ ಪಡೆಯುತ್ತಾರೆ ಎಂದು ವೇಣು ಸ್ವಾಮಿ ಹಿಂದೆಯೇ ಹೇಳಿದ್ದು, ಅದು ನಿಜವಾದ ಬಳಿಕ ಕೆಲವರು ಆತನ ಮಾತನ್ನು ನಂಬಲು ಆರಂಭಿಸಿದರು. ಇದೀಗ 2024ರಲ್ಲಿ ಟಾಲಿವುಡ್ ಸೆಲೆಬ್ರೆಟಿಗಳ ಭವಿಷ್ಯ ಏನೆಲ್ಲಾ ಆಗುತ್ತದೆ ಎಂದು ವೇಣುಸ್ವಾಮಿ ವಿವರಿಸಿದ್ದಾರೆ. 

ಕೆಲ ದಿನಗಳ ಹಿಂದೆ 'ಸಲಾರ್' ಸಿನಿಮಾ ಕೂಡ ಸೋಲುತ್ತದೆ ಎಂದು ವೇಣುಸ್ವಾಮಿ ಹೇಳಿದ್ದು, ಇದು ಪ್ರಭಾಸ್ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿತ್ತು. ಆದರೆ ಸಿನಿಮಾ ಸಕ್ಸಸ್ ಕಂಡಿದೆ. ಇದೀಗ ಪವನ್ ಕಲ್ಯಾಣ್ ವೈಯಕ್ತಿಕ ಜೀವನದ ಬಗ್ಗೆ ಮಾತನಾಡಿ ವೇಣುಸ್ವಾಮಿ ಮತ್ತೆ ಸುದ್ದಿಯಲ್ಲಿದ್ದು, ಪವನ್ ಕಲ್ಯಾಣ್ ಮತ್ತೆ ಡಿವೋರ್ಸ್ ಪಡೆಯುತ್ತಾರೆ ಎಂದು ಹೇಳಿ ಶಾಕ್ ಕೊಟ್ಟಿದ್ದಾರೆ. ಚಿತ್ರರಂಗದಲ್ಲಿ ಪವರ್‌ ಸ್ಟಾರ್‌ಗೆ ಒಳ್ಳೆ ಭವಿಷ್ಯ ಇದೆ. ಆದರೆ ವೈಯಕ್ತಿಕ ವಿಚಾರಗಳಲ್ಲಿ ವಿವಾದಗಳು ಎದುರಾಗುತ್ತದೆ. ಅದನ್ನು ಪವನ್ ಕಲ್ಯಾಣ್‌ ಎದುರಿಸಲೇಬೇಕು ಎಂದಿದ್ದಾರೆ. 

ಇದನ್ನೂ ಓದಿ: ದೀಪಿಕಾ, ಪ್ರಿಯಾಂಕಾ ಇಬ್ಬರೂ ಅಲ್ಲ.. ಅತ್ಯಧಿಕ OTT ಸಂಭಾವನೆ ಪಡೆಯುವ ನಟಿ ಈಕೆ!

ಪವನ್ ಕಲ್ಯಾಣ್‌ಗೆ ತಿಳಿ ಹೇಳುವವರು ಯಾರು ಇಲ್ಲ. ಹಾಗಾಗಿ ರಾಜಕೀಯರಂಗಕ್ಕಿಳಿದು ಭವಿಷ್ಯ ಹಾಳು ಮಾಡಿಕೊಳ್ಳುತ್ತಿದ್ದಾರೆ. ಆತ ಬರೀ ನಿರ್ದೇಶಕ ತ್ರಿವಿಕ್ರಮ್ ಶ್ರೀನಿವಾಸ್ ಮಾತುಗಳನ್ನು ಮಾತ್ರ ಕೇಳುತ್ತಾರೆ. ಆದರೆ ಪವನ್ ವೈಯಕ್ತಿಕ ಜೀವನದ ಬಗ್ಗೆ ತ್ರಿವಿಕ್ರಮ್ ಶ್ರೀನಿವಾಸ್ ತಿಳಿಹೇಳುವ ಗೋಜಿಗೆ ಹೋಗುವುದಿಲ್ಲ. ಪವನ್ ಇನ್ನಾದರೂ ಎಚ್ಚೆತ್ತುಕೊಳ್ಳಬೇಕು, ಏನು ಮಾಡಿದರೆ ಮುಖ್ಯಮಂತ್ರಿ ಆಗ್ತೀನಿ ಎನ್ನುವ ಬಗ್ಗೆ ಚಿಂತಿಸಬೇಕು. ಅವರನ್ನು ಮುಖ್ಯಮಂತ್ರಿಯಾಗಿ ನೋಡಲು ನಾನು ಕಾಯುತ್ತಿದ್ದೇನೆ ಎಂದು ವೇಣುಸ್ವಾಮಿ ಹೇಳಿದ್ದಾರೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News