ಈ ಕ್ರಿಕೆಟಿಗನ ಪ್ರೀತಿ ನಂಬಿ 30ನೇ ವಯಸ್ಸಿಗೆ ಮದುವೆಯಾಗದೆ ಗರ್ಭಿಣಿಯಾದ ನಟಿ..!

ಬಾಲಿವುಡ್‌ ಸ್ಟಾರ್‌ ನಟಿಯೊಬ್ಬರು ಕ್ರಿಕೆಟಿಗನ ಪ್ರೀತಿಯನ್ನು ನಂಬಿ ಅವನಿಂದ ಗರ್ಭಿಣಿಯಾಗಿದ್ದರು. ಅಲ್ಲದೆ ನಟಿ ತನ್ನ 30ನೇ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಇದರಿಂದಾಗಿ ಅವರ ಸನಿ ಜೀವನವೇ ನಾಶವಾಗಿತ್ತು. ಯಾರು ಆ ನಟಿ..? ಇಲ್ಲಿದೆ ಸಂಪೂರ್ಣ ವಿವರ

Written by - Krishna N K | Last Updated : Dec 8, 2023, 05:11 PM IST
  • ಕ್ರಿಕೆಟಿಗನ ಪ್ರೀತಿಯನ್ನು ನಂಬಿ ಅವನಿಂದ ಗರ್ಭಿಣಿಯಾದ ನಟಿ
  • 30ನೇ ಹೆಣ್ಣು ಮಗುವಿಗೆ ಜನ್ಮ ನೀಡಿದ ಬಾಲಿವುಡ್‌ ಸ್ಟಾರ್‌ ನಟಿ
  • ಯಾರು ಆ ನಟಿ, ಏನ್‌ ಕಥೆ..? ಇಲ್ಲಿದೆ ನೋಡಿ
ಈ ಕ್ರಿಕೆಟಿಗನ ಪ್ರೀತಿ ನಂಬಿ 30ನೇ ವಯಸ್ಸಿಗೆ ಮದುವೆಯಾಗದೆ ಗರ್ಭಿಣಿಯಾದ ನಟಿ..! title=

Neena Gupta : ಸಿನಿಮಾಗಳಂತೆ ಕೆಲವು ನಟ ನಟಿಯರ ಜೀವನ ಬಹಳ ನೋವಿನಿಂದ, ಕುತೂಹಲದಿಂದ ಕೂಡಿರುತ್ತದೆ. ಕೆಲವೊಂದಿಷ್ಟು ಬಹಿರಂಗವಾದರೆ ಇನ್ನೂ ಕೆಲವೊಂದಿಷ್ಟು ಅವರ ಮನದಲ್ಲಿಯೇ ಉಳಿದುಕೊಂಡಿರುತ್ತವೆ. ಈ ಪೈಕಿ ನಟಿಯೊಬ್ಬರು ಕ್ರಿಕೆಟಿಗನ ಪ್ರೀತಿಯ ಬಲೆಗೆ ಬಿದ್ದು, ಮದುವೆಯಾಗದೇ ಗರ್ಭಿಣಿಯಾಗಿ ಮಗುವಿನ ಜನ್ಮ ನೀಡಿದ್ದರು. ಯಾರು ಆ ನಟಿ, ಏನ್‌ ಕಥೆ..? ಇಲ್ಲಿದೆ ನೋಡಿ

ಹಿರಿಯ ನಟಿ ನೀನಾ ಗುಪ್ತಾ ಅವರ ವೈಯಕ್ತಿಕ ಜೀವನ ಬಹಳ ರೋಚಕ. 80ರ ದಶಕದಲ್ಲಿ, ನಟಿ ಎಲ್ಲರಿಗೂ ಆಘಾತ ನೀಡುವ ನಿರ್ಧಾರವನ್ನು ತೆಗೆದುಕೊಂಡಿದ್ದರು. ಅದರ ನಂತರ, ಅವರು ಮದುವೆಯಿಲ್ಲದೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಅವರ ಈ ನಿರ್ಧಾರಕ್ಕೆ ಕುಟುಂಬಸ್ಥರು ಕೂಡ ತೀವ್ರ ವಿರೋಧ ವ್ಯಕ್ತಪಡಿಸಿದ್ದರು.

ಇದನ್ನೂ ಓದಿ: BK 10 : ‘ಕೃಷ್ಣ ಜನ್ಮಸ್ಥಾನಕ್ಕೆ ಹೋಗ್ತಿದೀನಪ್ಪಾ’..! ಖೈದಿಗಳ ಬಟ್ಟೆ ಧರಿಸಿ ಜೈಲು ಸೇರಿದ ಕಾರ್ತಿಕ್‌

ಹೌದು.. ಬಾಲಿವುಡ್‌ನ ಹಿರಿಯ ನಟಿ ನೀನಾ ಗುಪ್ತಾ ಮದುವೆಯಾಗದೇ ಗರ್ಭಿಣಿಯಾಗಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದನ್ನು ಬಹಿರಂಗವಾಗಿಯೇ ಹೇಳಿಕೊಂಡಿದ್ದರು. ಅದಕ್ಕಾಗಿಯೇ ಅನಿಸುತ್ತೆ ಅವರು ಇಂದಿಗೂ ತಮ್ಮ ನೇರ ಮತ್ತು ಸ್ಪಷ್ಟ ಮಾತುಗಳಿಂದ ಜನಮನದಲ್ಲಿ ಉಳಿದಿದ್ದಾಳೆ.

ವೆಸ್ಟ್ ಇಂಡೀಸ್ ಕ್ರಿಕೆಟಿಗ ವಿವಿಯನ್ ರಿಚರ್ಡ್ ಜೊತೆ ನೀನಾ ಗುಪ್ತಾ ಅಫೇರ್ ಹೊಂದಿದ್ದರು. ವಿವಿಯನ್‌ಗೆ ಮುಂಚೆಯೇ ಮದುವೆಯಾಗಿದ್ದ ಕಾರಣ ನೀನಾಳನ್ನು ಮದುವೆಯಾಗಲು ಅವರು ನಿರಾಕರಿಸಿದರು. ವಿವಿಯನ್ ಮದುವೆಗೆ ಬೇಡ ಅಂದ್ರೂ ಸಹ ನೀನಾ ತನ್ನ ಗರ್ಭಾವಸ್ಥೆಯನ್ನು ಮುಂದುವರೆಸಿದ್ದರು. 

ಇದನ್ನೂ ಓದಿ: ಯಶ್‌ ಟಾಕ್ಸಿಕ್‌ ಸಿನಿಮಾದಲ್ಲಿ ʼಜೋಕರ್‌ʼ ಈ ಮಲಯಾಳಂ ಸ್ಟಾರ್‌ ನಟ..! ಯಾರದು ಗೊತ್ತೆ..?

ತಾನು ಗರ್ಭಿಣಿಯಾಗಿದ್ದಾಗಿ ವಿವಿಯನ್‌ಗೂ ಸಹ ತಿಳಿಸಿದ್ದರಂತೆ. ಇನ್ನು ನೀನಾಗೂ ಸಹ ಈ ಮಗು ಬೇಕಿತ್ತು. ಅದಕ್ಕಾಗಿ ಅವರು ಸಮಾಜದ ನಾಲ್ಕು ಜನರ ಬಗ್ಗೆ ಯೋಚಿಸದೆ ತನ್ನ ಮತ್ತು ತನ್ನ ಭವಿಷ್ಯದ ಮಗುವಿನ ಬಗ್ಗೆ ಯೋಚಿಸಿ 1989 ರಲ್ಲಿ ʼಮಸಾಬಾʼ ಎಂಬ ಹೆಣ್ಣು ಮಗುವಿಗೆ ಜನ್ಮ ನೀಡಿ ಸಿಂಗಲ್ ಪೇರೆಂಟ್ ಆಗಿ ಬೆಳೆಸಿದರು. ಅವರ ಈ ನಿರ್ಧಾರವನ್ನು ಕುಟುಂಬಸ್ಥರು ವಿರೋಧಿಸಿದ್ದರೂ ಸಹ ಅವರ ತಂದೆ ಅವರ ನಿರ್ಧಾರವನ್ನು ಬೆಂಬಲಿಸಿದರು ಎಂದು ನಟಿ ನೀನಾ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News