Rashmika Mandanna: ರಶ್ಮಿಕಾ ಮಂದಣ್ಣಗೆ ಮ್ಯಾನೇಜರ್‌ನಿಂದಲೇ ಮೋಸ!! ಏನಿದು ವಿಷಯ?

Rashmika Mandanna: ನ್ಯಾಷನಲ್‌ ಕ್ರಶ್ ರಶ್ಮಿಕಾ ಮಂದಣ್ಣಗೆ ಮ್ಯಾನೇಜರ್‌ನಿಂದಲೇ ಮೋಸ ಆಗಿದೆ ಎಂಬ ವಿಚಾರ ಬಿ ಟೌನ್‌ನಲ್ಲಿ ಸಖತ್‌ ಸುದ್ದಿಯಲ್ಲಿದೆ. ಬಹಳ ದಿನಗಳಿಂದ ರಶ್ಮಿಕಾ ಜೊತೆ ಕೆಲಸ ಮಾಡ್ತಿದ್ದ ಈ ಮ್ಯಾನೇಜರ್‌ ಅವರಿಗೆ ತಿಳಿಯದಂತೆ ಹಣ ನುಂಗಿದ್ದಾರೆ ಎನ್ನಲಾಗ್ತಿದೆ.  

Written by - Chetana Devarmani | Last Updated : Jun 18, 2023, 04:03 PM IST
  • ನ್ಯಾಷನಲ್‌ ಕ್ರಶ್ ರಶ್ಮಿಕಾ ಮಂದಣ್ಣ
  • ರಶ್ಮಿಕಾ ಮಂದಣ್ಣಗೆ ಮ್ಯಾನೇಜರ್‌ನಿಂದಲೇ ಮೋಸ!!
  • ತಿಳಿಯದಂತೆ ಹಣ ನುಂಗಿದ್ದಾರೆ ಎನ್ನಲಾಗ್ತಿದೆ
Rashmika Mandanna: ರಶ್ಮಿಕಾ ಮಂದಣ್ಣಗೆ ಮ್ಯಾನೇಜರ್‌ನಿಂದಲೇ ಮೋಸ!! ಏನಿದು ವಿಷಯ?    title=
Rashmika Mandanna

Rashmika Mandanna: ನಟಿ ರಶ್ಮಿಕಾ ಮಂದಣ್ಣ ಸದ್ಯ ದೇಶದ ಬಹುಬೇಡಿಕೆಯ ನಟಿಯರಲ್ಲಿ ಒಬ್ಬರು. ಸಾಲು ಸಾಲು ಸಿನಿಮಾಗಳಲ್ಲಿ ರಶ್ಮಿಕಾ ಮಂದಣ್ಣ ಬ್ಯುಸಿಯಾಗಿದ್ದಾರೆ. ಅವರ ಅಭಿಮಾನಿಗಳಿಂದ ನ್ಯಾಷನಲ್‌ ಕ್ರಶ್ ಎಂಬ ಖ್ಯಾತಿ ಪಡೆದಿದ್ದಾರೆ. ರಶ್ಮಿಕಾ ಅವರು ಪ್ರಸ್ತುತ ಎರಡು ದೊಡ್ಡ ಸಿನಿಮಾಗಳ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ. ರಣಬೀರ್ ಕಪೂರ್ ಜೊತೆ ಅನಿಮಲ್ ಮತ್ತು ಅಲ್ಲು ಅರ್ಜುನ್ ಜೊತೆ ಪುಷ್ಪಾ 2 ಸಿನಿಮಾ ಚಿತ್ರೀಕರಣ ನಡೆಯುತ್ತಿದೆ. ಈ ಎರಡೂ ಚಿತ್ರಗಳು ಸೂಪರ್ ಹೈ ಬಜೆಟ್‌ನಲ್ಲಿ ತಯಾರಾಗುತ್ತಿವೆ. 

ಎಷ್ಟೇ ಬದಯುಸಿಯಿದ್ದರೂ ಸೋಷಿಯಲ್‌ ಮೀಡಿಯಾ ಮೂಲಕ ತಮ್ಮ ಅಭಿಮಾನಿಗಳ ಜೊತೆ ಸಂಪರ್ಕದಲ್ಲಿರುತ್ತಾರೆ. ರಶ್ಮಿಕಾ ತಮ್ಮ ಏರ್‌ಪೋರ್ಟ್‌ ಲುಕ್‌, ಟ್ರಿಪ್‌ ಸೇರಿದಂತೆ ಸಾಕಷ್ಟು ಕ್ರೇಜಿ ಫೋಟೋಗಳನ್ನು ಸೋಷಿಯಲ್‌ ಮೀಡಿಯಾದಲ್ಲಿ ಶೇರ್‌ ಮಾಡುತ್ತಾರೆ. ಈ ಮೂಲಕ ಸದಾ ಸುದ್ದಿಯಲ್ಲಿರುತ್ತಾರೆ. ಇದೀಗ ಶನಿವಾರ ದುರದೃಷ್ಟಕರ ಘಟನೆಯೊಂದರಿಂದ ರಶ್ಮಿಕಾ ಸುದ್ದಿಯಲ್ಲಿದ್ದಾರೆ. 

ಇದನ್ನೂ ಓದಿ: Adipurush: ಹನುಮಂತನಿಗೆ ಮೀಸಲಿಟ್ಟ ಆಸನದಲ್ಲಿ ಕೂರಲು ಯತ್ನ.. ವ್ಯಕ್ತಿಗೆ ಹಿಗ್ಗಾಮುಗ್ಗ ಥಳಿತ!?

ಮಾಹಿತಿಯ ಪ್ರಕಾರ, ನಟಿ ತಮ್ಮ ಮ್ಯಾನೇಜರ್‌ನಿಂದಲೇ ವಂಚನೆಗೆ ಒಳಗಾಗಿದ್ದಾರೆ ಎಂದು ವರದಿಯಾಗಿದೆ. ರಶ್ಮಿಕಾ ಮಂದಣ್ಣ ಅವರಿಗೆ ಸುಮಾರು 80 ಲಕ್ಷ ರೂ. ಪಂಗನಾಮ ಹಾಕಿದ್ದಾರೆ ಎನ್ನಲಾಗಿದೆ. ಈ ಸಂಗತಿ ಅರಿತ ತಕ್ಷಣ ಕೋಪಗೊಂಡ ರಶ್ಮಿಕಾ ತನ್ನ ಮ್ಯಾನೇಜರ್‌ ನನ್ನು ಕೆಲಸದಿಂದ ವಜಾಗೊಳಿಸಿದ್ದಾರೆ ಎಂದು ಹೇಳಲಾಗುತ್ತದೆ. ಹೊಸ  ಮ್ಯಾನೇಜರ್ ನೇಮಕ ಮಾಡಿಕೊಳ್ಳಲಾಗಿದೆ ಎಂದು ಕೂಡ ಹೇಳಲಾಗ್ತಿದೆ. ಬಹಳ ದಿನಗಳಿಂದ ರಶ್ಮಿಕಾ ಜೊತೆ ಕೆಲಸ ಮಾಡ್ತಿದ್ದ ಈ ಮ್ಯಾನೇಜರ್‌ ಅವರಿಗೆ ತಿಳಿಯದಂತೆ ಹಣ ನುಂಗಿದ್ದಾರೆ ಎನ್ನಲಾಗ್ತಿದೆ. ಆದರೆ ಈ ವಿಚಾರವಾಗಿ ರಶ್ಮಿಕಾ ಮಂದಣ್ಣ ಇದುವರೆಗೆ ಯಾವುದೇ ಮಾಹಿತಿ ಅಥವಾ ಸ್ಪಷ್ಟನೆ ನೀಡಲಿಲ್ಲ. 

ಕನ್ನಡದ ಕಿರಿಕ್‌ ಪಾರ್ಟಿ ಮೂಲಕ ಸಿನಿ ಲೋಕಕ್ಕೆ ಕಾಲಿಟ್ಟ ರಶ್ಮಿಕಾ ಮಂದಣ್ಣ, ಗುಡ್‌ಬೈ ಸಿನಿಮಾ ಮೂಲಕ ಮೊದಲ ಬಾರಿಗೆ ಬಾಲಿವುಡ್‌ಗೆ ಎಂಟ್ರಿ ಕೊಟ್ಟರು.ಮಿಷನ್ ಮಜ್ನು ಅವರ ಎರಡನೇ ಬಾಲಿವುಡ್‌ ಸಿನಿಮಾ. ಇದೀಗ ರಣಬೀರ್ ಕಪೂರ್ ಜೊತೆ ಅನಿಮಲ್ ಸಿನಿಮಾದಲ್ಲಿ ರಶ್ಮಿಕಾ ಕಾಣಿಸಿಕೊಳ್ಳಲಿದ್ದಾರೆ. ಅಮಿತಾಭ್ ಬಚ್ಚನ್, ಸಿದ್ಧಾರ್ಥ್ ಮಲ್ಹೋತ್ರ ಮತ್ತು ರಣಬೀರ್ ಕಪೂರ್ ಜೊತೆ ಸ್ಕ್ರೀನ್‌ ಶೇರ್‌ ಮಾಡಿರುವ ಬೆಡಗಿ ರಶ್ಮಿಕಾ ಮಂದಣ್ಣ, ಇದೀಗ ವಿಕ್ಕಿ ಕೌಶಲ್ ಜೊತೆ ಸಿನಿಮಾ ಮಾಡುತ್ತಿದ್ದಾರೆ ಎನ್ನಲಾಗಿದೆ. 

ಇದನ್ನೂ ಓದಿ: Tamannaah: ತಮನ್ನಾ ತೊಡೆ ಮೇಲೆ ವಿಜಯ್‌ ವರ್ಮಾ... ಹಾಟ್‌ ಫೋಟೋಸ್‌ ವೈರಲ್!

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News