ಆನೆದಂತ ಸ್ವಾಧೀನ ಪ್ರಕರಣ: ಖ್ಯಾತ ನಟ ಮೋಹನ್ ಲಾಲ್ ಗೆ ಸಂಕಷ್ಟ..!

ಜೂನ್ 2012ರಲ್ಲಿ ನಟ ಮೋಹನ್ ಲಾಲ್ ನಿವಾಸದ ಮೇಲೆ ದಾಳಿ ನಡೆಸಿದ್ದಆದಾಯ ತೆರಿಗೆ ಅಧಿಕಾರಿಗಳು ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ 4 ದಂತಗಳನ್ನು ಜಪ್ತಿ ಮಾಡಿದ್ದರು.

Written by - Puttaraj K Alur | Last Updated : Jun 11, 2022, 12:15 PM IST
  • ಅಕ್ರಮವಾಗಿ ಆನೆದಂತಗಳನ್ನು ಇರಿಸಿಕೊಂಡಿದ್ದ ಆರೋಪ ಪ್ರಕರಣ
  • ಸಂಕಷ್ಟಕ್ಕೆ ಸಿಲುಕಿದ ದಕ್ಷಿಣ ಭಾರತದ ಖ್ಯಾತ ನಟ ಮೋಹನ್‌ಲಾಲ್
  • ಪ್ರಕರಣದ ವಿಚಾರಣೆ ಎದುರಿಸುವ ಅನಿವಾರ್ಯಕ್ಕೆ ಸಿಲುಕಿದ ನಟ
ಆನೆದಂತ ಸ್ವಾಧೀನ ಪ್ರಕರಣ: ಖ್ಯಾತ ನಟ ಮೋಹನ್ ಲಾಲ್ ಗೆ ಸಂಕಷ್ಟ..!  title=
ಸಂಕಷ್ಟಕ್ಕೆ ಸಿಲುಕಿದ ನಟ ಮೋಹನ್‌ಲಾಲ್

ಕೊಚ್ಚಿ: ಎರಡು ಜೊತೆ ಆನೆದಂತಗಳನ್ನು ಅಕ್ರಮವಾಗಿ ಇರಿಸಿಕೊಂಡಿದ್ದ ಆರೋಪ ಪ್ರಕರಣದಲ್ಲಿ ದಕ್ಷಿಣ ಭಾರತದ ಖ್ಯಾತ ನಟ ಮೋಹನ್‌ಲಾಲ್ ಸಂಕಷ್ಟಕ್ಕೆ ಸಿಲುಕಿದ್ದಾರೆ. ಮಲಯಾಳಂ ನಟನ ವಿರುದ್ಧ ವನ್ಯಜೀವಿ ಅಪರಾಧ ಕಾಯ್ದೆಯಡಿ ದಾಖಲಿಸಲಾಗಿದ್ದ ಪ್ರಕರಣವನ್ನು ಹಿಂತೆಗೆದುಕೊಳ್ಳಬೇಕೆಂಬ ಕೇರಳ ಸರ್ಕಾರದ ಮನವಿಯನ್ನು ಇಲ್ಲಿನ ವಿಚಾರಣಾ ನ್ಯಾಯಾಲಯ ತಿರಸ್ಕರಿಸಿದೆ. ಹೀಗಾಗಿ ಈ ಪ್ರಕರಣದಲ್ಲಿ ಅವರು ವಿಚಾರಣೆಯನ್ನು ಎದುರಿಸಬೇಕಾಗಿದೆ ಬಂದಿದೆ.  ಪೆರುಂಬವೂರ್ ಪ್ರಥಮ ದರ್ಜೆ ಮ್ಯಾಜಿಸ್ಟ್ರೇಟ್ ಕೋರ್ಟ್ ಅರ್ಜಿಯನ್ನು ವಜಾಗೊಳಿಸಿದೆ.

ಈ ಪ್ರಕರಣವನ್ನು ಮುಕ್ತಾಯಗೊಳಿಸುವಂತೆ ಕೇರಳ ಸರ್ಕಾರವು ಮನವಿ ಮಾಡಿತ್ತು, ಕೇರಳ ಸರ್ಕಾರಕ್ಕೆ ಸಲ್ಲಿಸಿದ ಅರ್ಜಿಯಲ್ಲಿ ಈ ವಿಷಯವು ಆಧಾರರಹಿತವಾಗಿದೆ ಎಂದು ಹೇಳಿ, ಪ್ರಕರಣವನ್ನು ಮುಕ್ತಾಯಗೊಳಿಸುವಂತೆ ನ್ಯಾಯಾಲಯಕ್ಕೆ ಒತ್ತಾಯಿಸಲಾಗಿತ್ತು. ಅಸಿಸ್ಟೆಂಟ್ ಪಬ್ಲಿಕ್ ಪ್ರಾಸಿಕ್ಯೂಟರ್ (ಎಪಿಪಿ) ಪ್ರಕರಣವನ್ನು ಮುಂದುವರಿಸುವುದು ವ್ಯರ್ಥ ಕಸರತ್ತು ಮತ್ತು ನ್ಯಾಯಾಲಯದ ಅಮೂಲ್ಯ ಸಮಯವನ್ನು ವ್ಯರ್ಥ ಮಾಡುತ್ತದೆ ಎಂದು ವಾದಿಸಿದ್ದರು.

ಇದನ್ನೂ ಓದಿ: ಶುಭಾಶಯಗಳ ನಡುವೆ ನೋಟೀಸ್‌: ನಟಿ ನಯನತಾರಾಗೆ ಮದುವೆ ಮರುದಿನವೇ ಶಾಕ್‌!

ವಕೀಲ ಅಬ್ರಹಾಂ ಪಿ ಮೆಂಚಿಕರ ಅವರು ಪ್ರಾಸಿಕ್ಯೂಷನ್ ಹಿಂಪಡೆಯುವಿಕೆಯನ್ನು ವಿರೋಧಿಸಿದರು. ಮೋಹನ್‌ಲಾಲ್‌ಗೆ ನೀಡಲಾದ ದಂತದ ಮಾಲೀಕತ್ವ ಪ್ರಮಾಣಪತ್ರವು ಅನೂರ್ಜಿತವಾಗಿದೆ, ಇದನ್ನು ಪ್ರಕರಣ ಹಿಂಪಡೆಯಲು ಆಧಾರವಾಗಿ ಪರಿಗಣಿಸಲಾಗುವುದಿಲ್ಲವೆಂದು ವಾದಿಸಿದರು. ಎರಡು ಜೋಡಿ ದಂತಗಳು ಪತ್ತೆಯಾಗಿವೆ. ಆದರೆ, 13 ದಂತ ಕಲಾಕೃತಿಗಳಿಗೆ ನಟನ ವಿರುದ್ಧ ಯಾವುದೇ ಪ್ರಕರಣ ದಾಖಲಿಸಿಲ್ಲವೆಂದು ಅವರು ಹೇಳಿದ್ದಾರೆ.

ಜೂನ್ 2012ರಲ್ಲಿ ನಟ ಮೋಹನ್ ಲಾಲ್ ನಿವಾಸದ ಮೇಲೆ ದಾಳಿ ನಡೆಸಿದ್ದ ಆದಾಯ ತೆರಿಗೆ ಅಧಿಕಾರಿಗಳು ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ 4 ದಂತಗಳನ್ನು ಜಪ್ತಿ ಮಾಡಿದ್ದರು. ನಂತರ ಅವರ ವಿರುದ್ಧ ಅರಣ್ಯ ಇಲಾಖೆಯು ಪ್ರಕರಣ ದಾಖಲಿಸಿಕೊಂಡಿತ್ತು.

ಇದನ್ನೂ ಓದಿ: Viral Video: ಸೈಕಲ್ ರೈಡ್ ಮಾಡುತ್ತಾ ಕೆಳಗೆ ಬಿದ್ದ ಗೋರಿಲ್ಲಾ..!

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News