ತ್ರಿಶಾ ವಿರುದ್ದ ಮೊಕದ್ದಮೆ ಹೂಡಲು ಮುಂದಾದ ಖಳನಟ: ಮನ್ಸೂರ್‌ ಅಲಿ ಖಾನ್‌ಗೆ ಮದ್ರಾಸ್‌ ಹೈಕೋರ್ಟ್‌ನಿಂದ ದಂಡ!

Mansoor Ali Khan: ಇತ್ತೀಚೆಗೆ  ನಟ ಮನ್ಸೂರ್ ಅಲಿ ಖಾನ್, ಲಿಯೋ ಚಿತ್ರದಲ್ಲಿ ನಟಿ ತ್ರಿಶಾ ಜೊತೆ 'ಬೆಡ್‌ರೂಮ್ ಸೀನ್ ಇಲ್ಲ' ಎಂದು ಹೇಳಿ, ವಿವಾದಕಕ್ಕೆ ಗುರಿಯಾಗಿ, ಮತ್ತೆ ನಟಿ ತ್ರಿಶಾ, ರೋಜಾ, ಖುಷ್ಬೂ ವಿರುದ್ಧ ನಾಲಿಗೆ ಹರಿಬಿಟ್ಟು ಸಕತ್ ಸುದ್ದಿಯಲ್ಲಿದ್ದಾರೆ. ಇದೀಗ ಮದ್ರಾಸ್ ಹೈಕೋರ್ಟ್ ಈತನ ಬಾಲ ಕತ್ತರಿಸಿದೆ. ಇಲ್ಲಿದೆ ಕಂಪ್ಲೀಟ್‌ ಸ್ಟೋರಿ.  

Written by - Zee Kannada News Desk | Last Updated : Dec 23, 2023, 10:50 AM IST
  • ಮನ್ಸೂರ್‌ ಅಲಿ ಖಾನ್‌ ಲಿಯೋ ಚಿತ್ರದ ಬಿಡುಗಡೆ ಬಳಿಕ ಸುದ್ದಿಗೋಷ್ಠಿಯಲ್ಲಿ ನಟಿ ತ್ರಿಶಾ ಜೊತೆಗೆ 'ಬೆಡ್ ರೂಮ್ ದೃಶ್ಯ' ಮಾಡುವ ಅವಕಾಶವನ್ನು ಕಳೆದುಕೊಂಡೆ ಎಂದು ಬೇಸರ ಹೊರಹಾಕಿದ್ದರು.
  • ಕಲಾವಿದರಾ ತ್ರಿಶಾ ಕೃಷ್ಣನ್, ಚಿರಂಜೀವಿ ಮತ್ತು ಖುಷ್ಬೂ ಸುಂದರ್ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ತಮಿಳು ನಟ ಮನ್ಸೂರ್ ಅಲಿಖಾನ್ ಹಲವು ದಿನಗಳ ಹಿಂದೆ ಹೇಳಿದ್ದರು.
  • ಡಿಸೆಂಬರ್ 12 ರಂದು, ನ್ಯಾಯಮೂರ್ತಿ ಎನ್ ಸತೀಶ್ ಕುಮಾರ್, ತ್ರಿಶಾ ವಿರುದ್ಧ ಅಸಬ್ಯ ಕಾಮೆಂಟ್ ಮಾಡಿದ್ದಕ್ಕಾಗಿ ನಟ ಮನ್ಸೂರ್ ಅಲಿ ಖಾನ್‌ಗೆ ಛೀಮಾರಿ ಹಾಕಿದರು.
ತ್ರಿಶಾ ವಿರುದ್ದ ಮೊಕದ್ದಮೆ ಹೂಡಲು ಮುಂದಾದ ಖಳನಟ: ಮನ್ಸೂರ್‌ ಅಲಿ ಖಾನ್‌ಗೆ ಮದ್ರಾಸ್‌ ಹೈಕೋರ್ಟ್‌ನಿಂದ ದಂಡ! title=

Madras High Court Slaps Fine On Mansoor Ali Khan: ಲಿಯೋ ಸಿನಿಮಾದಲ್ಲಿ ಖಳನಟನಾಗಿ ಕಾಣಿಸಿಕೊಂಡಿದ್ದ ಮನ್ಸೂರ್‌ ಅಲಿ ಖಾನ್‌ , ಚಿತ್ರದ ಬಿಡುಗಡೆ ಬಳಿಕ ಸುದ್ದಿಗೋಷ್ಠಿಯಲ್ಲಿ ನಟಿ ತ್ರಿಶಾ ಜೊತೆಗೆ 'ಬೆಡ್ ರೂಮ್ ದೃಶ್ಯ' ಮಾಡುವ ಅವಕಾಶವನ್ನು ಕಳೆದುಕೊಂಡೆ ಎಂದು ಬೇಸರ ಹೊರಹಾಕಿದ್ದರು. ಈ ವಿಡಿಯೋ ವೈರಲ್ ಆಗುತ್ತಿದ್ದ ಹಾಗೆ ಸಾಕಷ್ಟು ಟೀಕೆಗಳನ್ನು ಎದುರಿಸಿದಾಗ, ಚಿತ್ರರಂಗದ ಹಲಾವರು ನಟ, ನಟಿಯರು ತ್ರಿಶಾ ಬೆಂಬಲಕ್ಕೆ ನಿಂತಿದ್ದರು. ಬಳಿಕ ಮನ್ಸೂರ್ ಅಲಿ ಖಾನ್ ಹೇಳಿಕೆ ನೀಡಿ ತ್ರಿಶಾ ಬಳಿ ಕ್ಷಮೆಯಾಚಿಸಿದರೂ, ಆದರೆ, ಅದು ಕ್ಷಮೆಯಾಚನೆಯಲ್ಲ ಎಂದು ಹೇಳಿ ತ್ರಿಶಾ, ನಟಿಗೆ ಬೆಂಬಲ ನೀಡಿದ ನಟ ಚಿರಂಜೀವಿ ಮತ್ತು ಖುಷ್ಬೂ ಸುಂದರ್ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಹೇಳಿದ್ದರು. ಅದಕ್ಕೆ ನ್ಯಾಯಾಲಯ ಅನುಮತಿ ನಿರಾಕರಿಸಿ ದಂಡ ವಿಧಿಸಿದೆ.

ಕಲಾವಿದರಾ ತ್ರಿಶಾ ಕೃಷ್ಣನ್, ಚಿರಂಜೀವಿ ಮತ್ತು ಖುಷ್ಬೂ ಸುಂದರ್ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ತಮಿಳು ನಟ ಮನ್ಸೂರ್ ಅಲಿಖಾನ್ ಹಲವು ದಿನಗಳ ಹಿಂದೆ ಹೇಳಿದ್ದು, ಇದಕ್ಕೆ ಮದ್ರಾಸ್ ಹೈಕೋರ್ಟ್ ಡಿಸೆಂಬರ್ 22 ರಂದು ಮೊಕದ್ದಮೆಯನ್ನು ಮುಂದುವರಿಸಲು ಅನುಮತಿ ನೀಡಲು ನಿರಾಕರಿಸಿದೆ. ಮನ್ಸೂರ್ ಅಲಿ ಖಾನ್ ಈ ನಟರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಲು ಹೊರಡಿರುವುದು ಬರಿ 'ಪಬ್ಲಿಸಿಟಿ ಸ್ಟಂಟ್' ಎಂದು ಕಿಡಿಕಾರಿದ್ದು, ಜೊತೆಗೆ ನ್ಯಾಯಾಲಯವು ನಟನಿಗೆ 1 ಲಕ್ಷ ರೂಪಾಯಿ ದಂಡವನ್ನು ವಿಧಿಸಿದೆ. 

ಇದನ್ನೂ ಓದಿ: Salaar Leaked: ಸಲಾರ್ ತಂಡಕ್ಕೆ ಬಿಗ್‌ ಶಾಕ್.. ಫುಲ್‌ ಸಿನಿಮಾ HD ಪ್ರಿಂಟ್ ಆನ್‌ಲೈನ್‌ನಲ್ಲಿ ಲೀಕ್‌!

ಈ ಹಿಂದೆಯೇ ‍ಮೊಕದ್ದಮೆ ಹೂಡುವುದಾಗಿ ತಿಳಿಸಿದ್ದಾಗ ಕೋರ್ಟ್ ಛೀಮಾರಿ ಹಾಕಿತ್ತು. ಅದನ್ನು ಮೀರಿ ಮತ್ತೆ ನ್ಯಾಯಾಲಯದ ಮುಂದೆ ಬಂದು ದಂಡಕ್ಕೆ ಗುರಿಯಾಗಿದ್ದಾರೆ. ಡಿಸೆಂಬರ್ 12 ರಂದು, ನ್ಯಾಯಮೂರ್ತಿ ಎನ್ ಸತೀಶ್ ಕುಮಾರ್, ತ್ರಿಶಾ ವಿರುದ್ಧ ಅಸಬ್ಯ ಕಾಮೆಂಟ್ ಮಾಡಿದ್ದಕ್ಕಾಗಿ ನಟ ಮನ್ಸೂರ್ ಅಲಿ ಖಾನ್‌ಗೆ ಛೀಮಾರಿ ಹಾಕಿದರು. ಮನ್ಸೂರ್ ಅಲಿ ಖಾನ್ ಸಾರ್ವಜನಿಕವಾಗಿ ಹೇಗೆ ವರ್ತಿಸಬೇಕು ಎಂದು ತಿಳಿದಿರಬೇಕು, ವಿಶೇಷವಾಗಿ ನಟರನ್ನು ಜನರು ತಮ್ಮ ಮಾಡೆಲ್‌ಗಳು ಎಂದು ನೋಡುವ ವೇಳೆ ಇಂತಹ ಎಚ್ಚರಿಕೆ ಅಗತ್ಯ ಎಂದು ಹೇಳಿತ್ತು.  

ಪ್ರಕರಣದ ಬಗ್ಗೆ ವರದಿ ಮಾಡಿರುವ 'ಬಾರ್ ಮತ್ತು ಬೆಂಚ್' ಪ್ರಕಾರ, ಮದ್ರಾಸ್ ಹೈಕೋರ್ಟ್ ಮನ್ಸೂರ್ ಅಲಿ ಖಾನ್ ಅವರಿಗೆ 1 ಲಕ್ಷ ರೂಪಾಯಿ ದಂಡ ವಿಧಿಸಿದೆ. ಚೆನ್ನೈನ ಅಡ್ಯಾರ್ ಕ್ಯಾನ್ಸರ್ ಇನ್‌ಸ್ಟಿಟ್ಯೂಟ್‌ಗೆ ಹಣವನ್ನು ಕಟ್ಟುವಂತೆ ನಟನಿಗೆ ನ್ಯಾಯಾಲಯ ನಿರ್ದೇಶನ ನೀಡಿದೆ. ಜೊತೆಗೆ ಮನ್ಸೂರ್ ಅಲಿ ಖಾನ್ ಹೇಳಿಕೆಗೆ ಯಾವುದೇ ನಟ, ನಟಿಯರು ಪ್ರತಿಕ್ರಿಯಿಸಿದ್ದನ್ನು ಉಲ್ಲೇಖಿಸಿರುವ ನ್ಯಾಯಾಲಯ, ಯಾವುದೇ ಒಬ್ಬ ಸಾಮಾನ್ಯ ವ್ಯಕ್ತಿ ಕೂಡ ಹೀಗೆ ಪ್ರತಿಕ್ರಿಯೆ ನೀಡುತ್ತಾನೆ ಎಂದು ಹೇಳಿದೆ. 

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News