Darling Krishna : ʼಹ್ಯಾಪಿ ಬರ್ತಡೇ ಮೈ ಡಾರ್ಲಿಂಗ್ ಕೃಷ್ಣ; ಆದಿಗೆ ಶುಭಕೋರಿದ ‘ಲವ್ ಮಾಕ್ಟೇಲ್ ನಿಧಿಮಾ!

Darling Krishna Birthday: ಹುಟ್ಟು ಹಬ್ಬದ ಸಂಭ್ರಮದಲ್ಲಿರುವ ಡಾರ್ಲಿಂಗ್​ ಕೃಷ್ಣನಿಗೆ ಪತ್ನಿ ಮಿಲನಾ ನಾಗರಾಜ್ ವಿಭಿನ್ನವಾಗಿ ಶುಭಕೋರಿ ಪತಿ ಬಗೆಗಿನ ತಮ್ಮ ಮನದಾಳದ ಮಾತನ್ನು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. 

Written by - Zee Kannada News Desk | Last Updated : Jun 12, 2023, 12:54 PM IST
  • ಹುಟ್ಟು ಹಬ್ಬದ ಸಂಭ್ರಮದಲ್ಲಿರುವ ಡಾರ್ಲಿಂಗ್​ ಕೃಷ್ಣ
  • ಡಾರ್ಲಿಂಗ್​ ಕೃಷ್ಣ ವಿಭಿನ್ನವಾಗಿ ಶುಭಕೋರಿದ ಪತ್ನಿ ಮಿಲನಾ ನಾಗರಾಜ್
  • ಚಿತ್ರರಂಗದಲ್ಲಿ ಹತ್ತು ವರ್ಷ ಪೂರೈಸಿದ ಡಾರ್ಲಿಂಗ್​ ಕೃಷ್ಣ
Darling Krishna : ʼಹ್ಯಾಪಿ ಬರ್ತಡೇ ಮೈ ಡಾರ್ಲಿಂಗ್ ಕೃಷ್ಣ; ಆದಿಗೆ ಶುಭಕೋರಿದ ‘ಲವ್ ಮಾಕ್ಟೇಲ್ ನಿಧಿಮಾ! title=

ಬೆಂಗಳೂರು: ಹುಟ್ಟು ಹಬ್ಬದ ಸಂಭ್ರಮದಲ್ಲಿರುವ  ಡಾರ್ಲಿಂಗ್​ ಕೃಷ್ಣ. ಮದರಂಗಿ’ ಸಿನಿಮಾ ಮೂಲಕ 2010ರಲ್ಲಿ ಸಿನಿಮಾರಂಗಕ್ಕೆ ಕಾಲಿಟ್ಟ ಕೃಷ್ಣ ಅಷ್ಟಾಗಿ ಖ್ಯಾತಿಗಳಿಸಿರಲಿಲ್ಲ. ಆದ್ರೆ ಇವರು ಛಲ ಬಿಡದೇ ತಮ್ಮ ಪ್ರತಿಭೆಯನ್ನು ಹೊರ ಹಾಕುತ್ತಲೇ ಇದ್ದರು.

ಬಳಿಕ ‘ಲವ್ ಮಾಕ್ಟೇಲ್​’ ಸಿನಿಮಾದ ಯಶಸ್ಸು ಅವರ ಜೀವನವನ್ನೇ ಬದಲಾಯಿಸಿತು. ಇಂದು ಡಾರ್ಲಿಂಗ್​ ಕೃಷ್ಣ ಅವರಿಗೆ ಹುಟ್ಟು ಹಬ್ಬದ ಸಂಭ್ರಮ ಮಾತ್ರವಲ್ಲದೇ ಇಂದು ನಟ ಚಿತ್ರರಂಗಕ್ಕೆ ಕಾಲಿಟ್ಟು ಹತ್ತು ವರ್ಷದ ಸಂಭ್ರಮ.

ಇದನ್ನೂ ಓದಿ: Bharjari Bachelors: ʼನಮಗೆಲ್ಲಾ ಯಾರ್ ಬೀಳ್ತಾರೆ ಗುರು‌ʼ ಅನ್ನೋರಿಗೆ ಬರ್ತಿದೆ 'ಭರ್ಜರಿ ಬ್ಯಾಚುಲರ್ಸ್' ಹೊಸ ರಿಯಾಲಿಟಿ ಶೋ !

ಇದೀಗ ಬರ್ತಡೇ ಪ್ರಯಕ್ತ ಡಾರ್ಲಿಂಗ್‌ ಕೃಷ್ಣ ಮಡದಿ ಮಿಲನಾ ನಾಗರಾಜ್​, ‘ನನ್ನ ಡಾರ್ಲಿಂಗ್​ಗೆ ಹ್ಯಾಪಿ ಬರ್ತ್​ಡೇ. ಒಂದು ಅಸಾಧಾರಣವಾದ ಪಯಣ ಮತ್ತು 10 ವರ್ಷ ಅನ್ನೋದು ಆರಂಭ ಅಷ್ಟೇ. ಯಶಸ್ಸು ಮತ್ತು ಸೋಲನ್ನು ನೀವು ಚೆನ್ನಾಗಿ ನಿಭಾಯಿಸುತ್ತೀರಿ. ನಾನು ಭೇಟಿ ಆದಾಗಿನಿಂದ ಈ 10 ವರ್ಷಗಳಲ್ಲಿ ನೀವು ಅದೇ ರೀತಿ ಇದ್ದೀರಿ.

ಪರಿಶ್ರಮದಿಂದ ನೀವು ಲಕ್ಷಾಂತರ ಹೃದಯಗಳನ್ನು ಗೆಲ್ಲುವಂತಾಗಲಿ. ನಿಮ್ಮ ಬದ್ಧತೆ ನಮಗೆ ಸ್ಫೂರ್ತಿ ನೀಡುತ್ತದೆ. ನಿಮ್ಮ ಸಿನಿಮಾ ಪಯಣದಲ್ಲಿ ಮತ್ತು ಜೀವನದ ಭಾಗವಾಗಿ ನಾನು ಇರುವುದಕ್ಕೆ ಖುಷಿ ಆಗುತ್ತದೆ. ನಿಮ್ಮ ನಿರ್ದೇಶನದ ಮುಂದಿನ ಸಿನಿಮಾಗಾಗಿ ಕಾಯುತ್ತಿದ್ದೇನೆ’ ಎಂದು ಮಿಲನಾ ನಾಗರಾಜ್​ ಪೋಸ್ಟ್​ ಮಾಡಿದ್ದಾರೆ.

ಇದನ್ನೂ ಓದಿ: Bollywood Actors : ಇವ್ರೆ ನೋಡಿ ಅಂತರರಾಷ್ಟ್ರೀಯ ಟಾಕ್ ಶೋಗಳಲ್ಲಿ ʼಸೈ ಎನಿಸಿಕೊಂಡ ಬಾಲಿವುಡ್ ಸ್ಟಾರ್ಸ್‌..!

ಮಿಲನಾ ನಾಗರಾಜ್​ ಮತ್ತು ಡಾರ್ಲಿಂಗ್​ ಕೃಷ್ಣ ಅವರು ಹಲವು ವರ್ಷಗಳಿಂದ ಪರಸ್ಪರ ಪ್ರೀತಿಸಿ  2021ರಲ್ಲಿ ಅವರು ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಬಳಿಕ ಇವರಿಬ್ಬರು ಜೊತೆಯಾಗಿ ‘ಲವ್​ ಮಾಕ್ಟೇಲ್​’ ಸಿನಿಮಾದಲ್ಲಿ ʼಆದಿ - ನಿಧಿಮಾʼ ಆಗಿ ಖ್ಯಾತಿ ಪಡೆದರು. ಸಿನಿಮಾದಲ್ಲೂ, ರಿಯಲ್​ ಲೈಫ್​ನಲ್ಲೂ ಈ ಜೋಡಿಗಳೆಂದರೆ ಅಭಿಮಾನಿಗಳಿಗೆ ತುಂಬ ಇಷ್ಟ. ಡಾರ್ಲಿಂಗ್​ ಕೃಷ್ಣ ರವರಿಗೆ ಸ್ಯಾಂಡಲ್ವುಡ್‌ ನಟರಿಂದ ಅಭಿಮಾನಿಗಳಿಂದ ಶುಭಾಶಯ ಬರ ಪೂರ ಹರಿದು ಬರುತ್ತಿದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News