Komal: ಕಾಲಿವುಡ್‌ಗೆ ಕಾಲಿಟ್ಟ ಕೋಮಲ್: ಲೆಜೆಂಡ್ರಿ ಆ್ಯಕ್ಟರ್ ಪುತ್ರನ ಜೊತೆಗೆ ಕನ್ನಡದ ಹಾಸ್ಯನಟ!

Komal In Tamil Movie: ಕನ್ನಡದ ಹಾಸ್ಯನಟ ಕೋಮಲ್‌ ಇದೇ ಮೊದಲ ಬಾರಿಗೆ ತಮಿಳು ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ಕೋಮಲ್‌ ಕಾಲಿವುಡ್‌ನ ಲೆಜೆಂಡ್ರಿ ಪುತ್ರನ ಜೊತೆಗೆ ತೆರೆ ಹಂಚಿಕೊಳ್ಳುತಿದ್ದಾರೆ. ಹಾಗಾದ್ರೇ  ನಟ ಕೋಮಲ್‌ ಯಾರ ಜೊತೆಗೆ ಅಭಿನಯಿಸುತ್ತಿದ್ದಾರೆ? ಇಲ್ಲಿದೆ ಸಂಪೂರ್ಣ ವಿವರ.   

Written by - Zee Kannada News Desk | Last Updated : Mar 11, 2024, 10:46 AM IST
  • ಅವಾಗ ತಾನು ನೋಡುವುದರಕ್ಕೆ ತಮಿಳಿನ ವಿಜಯಕಾಂತ್ ತರಹನೇ ಕಾಣ್ತಾ ಇದ್ದೇನೆ ಅಂತ ಆ ಸಿನಿಮಾ ನಿಂತು ಹೋಗಿತ್ತು ಎಂದು ಕಳೆದ ವರ್ಷ ಕೋಮಲ್‌ ಹೇಳಿಕೊಂಡಿದ್ದರು.
  • ಆದರೆ ನಟ ಕೋಮಲ್‌ ತಮಿಳು ಸಿನಿಮಾದಲ್ಲಿ ಲೆಜೆಂಡ್ರಿ ಆ್ಯಕ್ಟರ್ ಶಿವಾಜಿ ಗಣೇಶನ್ ಪುತ್ರ ಪ್ರಭು ಜೊತೆಗೆ ನಟಿಸುತಿದ್ದಾರೆ.
  • ಹಾಸ್ಯನಟ ಕೋಮಲ್‌ ಸೋಶಿಯಲ್‌ ಮಿಡಿಯಾದಲ್ಲಿ ನಟ ಪ್ರಭು ಜೊತೆಗೆ ಸುಮಾರು ಹೊತ್ತು ಮಾತನಾಡ್ತಿರೋ ಈ ವಿಡಿಯೋವನ್ನು ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಶೇರ್‌ ಮಾಡಿದ್ದಾರೆ.
Komal: ಕಾಲಿವುಡ್‌ಗೆ ಕಾಲಿಟ್ಟ ಕೋಮಲ್: ಲೆಜೆಂಡ್ರಿ ಆ್ಯಕ್ಟರ್ ಪುತ್ರನ ಜೊತೆಗೆ ಕನ್ನಡದ ಹಾಸ್ಯನಟ! title=

Komal Entry To Kollywood Industry: ಸ್ಯಾಂಡಲ್‌ವುಡ್‌ನ ಹಾಸ್ಯನಟ ಕೋಮಲ್‌ ಮೊದಲ ಬಾರಿಗೆ ಕಾಲಿವುಡ್‌ಗೆ ಹೆಜ್ಜೆಹಾಕಿದ್ದಾರೆ. ಈ ನಟ ಇದಕ್ಕೂ ಮುನ್ನ ಒಂದು ತಮಿಳು ಚಿತ್ರ ಮಾಡುತ್ತಾಯಿದ್ದು, ಆ ಸಂದರ್ಭದಲ್ಲಿ ಸ್ವಲ್ಪ ಜಾಸ್ತಿನೆ ದಪ್ಪ ಇದ್ದರು. ಅವಾಗ ತಾನು ನೋಡುವುದರಕ್ಕೆ ತಮಿಳಿನ ವಿಜಯಕಾಂತ್ ತರಹನೇ ಕಾಣ್ತಾ ಇದ್ದೇನೆ ಅಂತ ಆ ಸಿನಿಮಾ ನಿಂತು ಹೋಗಿತ್ತು ಎಂದು ಕಳೆದ ವರ್ಷ ಕೋಮಲ್‌ ಹೇಳಿಕೊಂಡಿದ್ದರು. 

ಆದರೆ ನಟ ಕೋಮಲ್‌ ತಮಿಳು ಸಿನಿಮಾದಲ್ಲಿ ಲೆಜೆಂಡ್ರಿ ಆ್ಯಕ್ಟರ್ ಶಿವಾಜಿ ಗಣೇಶನ್ ಪುತ್ರ ಪ್ರಭು ಜೊತೆಗೆ  ನಟಿಸುತಿದ್ದಾರೆ. ಕೋಮಲ್‌ ಈ ಚಿತ್ರಕ್ಕಾಗಿ ಕಪ್ಪು ಲುಂಗಿ, ಹುಲಿ ಕಲರ್ ಶರ್ಟ್ ಧರಿಸಿಕೊಂಡು, ತಮಿಳು ಚಿತ್ರಕ್ಕೆ ಬೇಕಾಗಿರೋ ಹಾಗೆ ಸಖತ್ ರಫ್ ಆಗಿಯೇ ರೆಡಿಯಾಗಿದ್ದಾರೆ. ನಟ ಕೋಮಲ್‌ ಫ್ರಭು ಜೊತೆಗಿರುವ ವಿಡಿಯೋ ಸೋಶಿಯಲ್‌ ಮಿಡಿಯಾದಲ್ಲಿ ಹರಿದಾಡುತ್ತಿದೆ.  

 
 
 
 

 
 
 
 
 
 
 
 
 
 
 

A post shared by Komal Kumar Shivalingappa (@komalkumarshivalingappa)

ಇದನ್ನೂ ಓದಿ: ಸ್ಟಾರ್‌ ನಟ ಅಜಿತ್‌ಗೆ ಬ್ರೈನ್ ಟ್ಯೂಮರ್..!? ಅವರ ಆಪ್ತರು ಹೇಳಿದ್ದೇನು..?

ಹೌದು.. ಹಾಸ್ಯನಟ ಕೋಮಲ್‌ ಸೋಶಿಯಲ್‌ ಮಿಡಿಯಾದಲ್ಲಿ ನಟ ಪ್ರಭು ಜೊತೆಗೆ ಸುಮಾರು ಹೊತ್ತು ಮಾತನಾಡ್ತಿರೋ ಈ ವಿಡಿಯೋವನ್ನು ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಶೇರ್‌ ಮಾಡಿದ್ದಾರೆ. ಈ ನಟ ವಿಡಿಯೋ ಪೋಸ್ಟ್‌ನಲ್ಲಿ ತಮ್ಮ ಮೊದಲ ತಮಿಳು ಸಿನಿಮಾದಲ್ಲಿಯೇ ಪ್ರಭು ಜೊತೆಗೆ ಅಭಿನಯಿಸ್ತಿರೋದು ಸಂತೋಷವಾಗಿದೆ ಆಗಿದೆ ಅಂತಲೇ ಬರೆದುಕೊಂಡಿದ್ದಾರೆ. 

ನಟ ಕೋಮಲ್‌ ಸೋಶಿಯಲ್‌ ಮಿಡಿಯಾದಲ್ಲಿ ಹಂಚಿಕೊಂಡಿರುವ ಸ್ಪೆಷಲ್ ವಿಡಿಯೋವನ್ನು ನೋಡಿದ ಅಭಿಮಾನಿಗಳು ಸೂಪರ್ ಗುರುಗಳೇ ಅಂತಲೂ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.  ಈ ರೀತಿ ನಟ ಕೋಮಲ್‌ ತಮಿಳು ಸಿನಿಮಾದಲ್ಲಿ ಬಣ್ಣ ಹಚ್ಚುತ್ತಿರುವುದು ಅಪ್‌ಡೇಟ್‌ ಅನ್ನು ಕೊಟ್ಟಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

 

Trending News