ನಿರ್ಮಾಪಕ ಜ್ಯಾಕ್ ಮಂಜು ಆರೋಗ್ಯದ ಬಗ್ಗೆ ನಟ ಸುದೀಪ್ ಹೇಳಿದ್ದೇನು..?

ಜ್ಯಾಕ್ ಮಂಜುರವರು ತುಂಬಾ ಸಿರಿಯಸ್ ಆಗಿ ಆಸ್ಪತ್ರೆಯಲ್ಲಿ ಮಲಗಿರುವ ಕೆಲವು ಚಿತ್ರಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡಿದ್ದವು.

Written by - K Karthik Rao | Edited by - Puttaraj K Alur | Last Updated : Jun 14, 2022, 05:03 PM IST
  • ನಿರ್ಮಾಪಕ ಜ್ಯಾಕ್ ಮಂಜುರವರ ಆರೋಗ್ಯದಲ್ಲಿ ಚೇತರಿಕೆ
  • ಟ್ವೀಟ್ ಮೂಳಲ ಮಾಹಿತಿ ಹಂಚಿಕೊಂಡ ನಟ ಕಿಚ್ಚ ಸುದೀಪ್
  • ಅಗತ್ಯ ಚಿಕಿತ್ಸೆ ಬಳಿಕ ಜ್ಯಾಕ್ ಮಂಜು ಆರೋಗ್ಯವಾಗಿ ಡಿಸ್ಚಾರ್ಜ್
ನಿರ್ಮಾಪಕ ಜ್ಯಾಕ್ ಮಂಜು ಆರೋಗ್ಯದ ಬಗ್ಗೆ ನಟ ಸುದೀಪ್ ಹೇಳಿದ್ದೇನು..? title=
ಜ್ಯಾಕ್ ಮಂಜು ಆರೋಗ್ಯದಲ್ಲಿ ಚೇತರಿಕೆ

ಬೆಂಗಳೂರು: ‘ವಿಕ್ರಾಂತ್ ರೋಣ’ ಸದ್ಯ ಸಿನಿ ಜಗತ್ತಿನಲ್ಲಿ ಸದ್ದು ಮಾಡುತ್ತಿರುವ ಚಿತ್ರ. ಕಿಚ್ಚ ಸುದೀಪ್ ನಟನೆಯ ‘ವಿಕ್ರಾಂತ್ ರೋಣ’ ಬಿಡುಗಡೆಗೆ ಸಿದ್ಧವಾಗಿದ್ದು, ಸಖತ್ ಸೌಂಡ್ ಮಾಡುತ್ತಿದೆ. ಈ ಚಿತ್ರದ ನಿರ್ಮಾಪಕ ಹಾಗೂ ಸುದೀಪ್ ಆಪ್ತರಾದಂತಹ ಜ್ಯಾಕ್ ಮಂಜು ಅನಾರೋಗ್ಯ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿದ್ದರು.

ಜ್ಯಾಕ್ ಮಂಜು ಆರೋಗ್ಯದಲ್ಲಿ ಚೇತರಿಕೆ

ಜ್ಯಾಕ್ ಮಂಜು ಅವರ ಆರೋಗ್ಯದಲ್ಲಿ ಚೇತರಿಕೆ ಆಗಿದೆ ಎಂದು ತಿಳಿದುಬಂದಿದೆ. ಆರೋಗ್ಯದಲ್ಲಿ ದಿಢೀರ್ ಏರುಪೇರಾಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಜ್ಯಾಕ್ ಮಂಜುರವರಿಗೆ ವೈದ್ಯರು ಅಗತ್ಯ ಚಿಕಿತ್ಸೆ ನೀಡಿದ್ದಾರೆ. ಇದೀಗ ಅವರ ಆರೋಗ್ಯದ ಬಗ್ಗೆ ಸ್ವತಃ ಕಿಚ್ಚ ಸುದೀಪ್ ಅವರೇ ಮಾಹಿತಿ ಹಂಚಿಕೊಂಡಿದ್ದಾರೆ.   

ಇದನ್ನೂ ಓದಿ: ‘777 ಚಾರ್ಲಿ’ ನೋಡಿ ಗಳಗಳನೆ ಅತ್ತ ಸಿಎಂ ಬೊಮ್ಮಾಯಿ..!

‘ಪ್ರೀತಿಯ ಸಹೋದರ ಹಾಗೂ ಸ್ನೇಹಿತ ಜ್ಯಾಕ್ ಮಂಜು ಆರೋಗ್ಯವಾಗಿ ಇಂದು ಡಿಸ್ಚಾರ್ಜ್ ಆಗಿದ್ದಾರೆ. ಮುನ್ನೆಚ್ಚರಿಕೆ ಕ್ರಮವಾಗಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈಗ ಯಾವುದೇ ರೀತಿ ಭಯಪಡುವ ಅಗತ್ಯವಿಲ್ಲ’ವೆಂದು ತಮ್ಮ ಟ್ವಿಟರ್ ಖಾತೆಯಲ್ಲಿ ‘ಅಭಿನಯ ಚಕ್ರವರ್ತಿ’ ಮಾಹಿತಿ ಹಂಚಿಕೊಂಡಿದ್ದಾರೆ.

ಜ್ಯಾಕ್ ಮಂಜುರವರು ತುಂಬಾ ಸಿರಿಯಸ್ ಆಗಿ ಆಸ್ಪತ್ರೆಯಲ್ಲಿ ಮಲಗಿರುವ ಕೆಲವು ಚಿತ್ರಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡಿದ್ದವು. ಇದಕ್ಕೂ ಸಹ ಸುದೀಪ್ ಪ್ರತಿಕ್ರಿಯಿಸಿದ್ದಾರೆ. ‘ಆಸ್ಪತ್ರೆಯಲ್ಲಿ ಜ್ಯಾಕ್ ಮಂಜು ವಿಶ್ರಾಂತಿಗಾಗಿ ಮಲಗಿರುವ ಚಿತ್ರಗಳನ್ನು ಯಾರೋ ಸೋರಿಕೆ ಮಾಡಿದ್ದಾರೆ. ಆ ಫೋಟೋಗಳಲ್ಲಿ ಜ್ಯಾಕ್ ಮಂಜು ಆರೋಗ್ಯ ತುಂಬಾ ಗಂಭೀರವಾಗಿರುವಂತೆ ಕಂಡುಬಂದಿತ್ತು. ಆದರೆ, ಯಾವುದೇ ರೀತಿಯ ಭಯಪಡುವ ಅಗತ್ಯವಿಲ್ಲ. ಅವರು ಆರೋಗ್ಯದಿಂದ ಇದ್ದಾರೆ’ ಎಂದು ಕಿಚ್ಚ ಹೇಳಿದ್ದಾರೆ.

ಇದನ್ನೂ ಓದಿ: ಐಶ್ವರ್ಯಾ ರೈ ಪಾಸ್‌ಪೋರ್ಟ್‌ನಲ್ಲಿರೋ ಫೋಟೋ ಸ್ಪೆಶಾಲಿಟಿ ಏನ್‌ ಗೊತ್ತಾ?

ಒಟ್ಟಿನಲ್ಲಿ ಜ್ಯಾಕ್ ಮಂಜುರವರ ಆರೋಗ್ಯದಲ್ಲಿ ಸುಧಾರಣೆಯಾಗಿದೆ. ಮುಂದಿನ ತಿಂಗಳಲ್ಲಿ ‘ವಿಕ್ರಾಂತ್ ರೋಣ’ ತೆರೆ ಮೇಲೆ ಮಿಂಚಲು ರೆಡಿಯಾಗಿದ್ದು, ಇದರ ಪ್ರಚಾರ ಕಾರ್ಯದಲ್ಲಿ ಅವರು ಭಾಗಿಯಾಗಲಿದ್ದಾರೆ. ದಿಢೀರ್ ಅನಾರೋಗ್ಯದಿಂದ ಆಸ್ಪತ್ರೆ ಸೇರಿದ್ದ ಜ್ಯಾಕ್ ಮಂಜು ಶೀಘ್ರವೇ ಚೇತರಿಕೆ ಕಾಣಲಿ ಎಂದು ಚಿತ್ರರಂಗದ ಅನೇಕರು ಹಾರೈಸಿದ್ದರು.     

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News