ಜಸ್ಟ್‌ ಪಾಸ್ʼ ಆದವರ ಬೆಂಬಲಕ್ಕೆ ನಿಂತ ʼಕಾಟೇರʼ ಡಿಬಾಸ್‌..!

Actor Darshan : ನಟ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಅವರು, ಹೊಸ ತಂಡಗಳಿಗೆ ಮತ್ತು ಸ್ನೇಹಿತರಿಗೆ ಯಾವಾಗಲೂ ಬೆನ್ನೆಲುಬಾಗಿ ನಿಲ್ಲುವುದಕ್ಕೆ ಎತ್ತಿದ ಕೈ. ಸಧ್ಯ ʼಜಸ್ಟ್ ಪಾಸ್ʼ ಚಿತ್ರದ ಮೊದಲ ವಿಡಿಯೋ ಸಾಂಗ್ ಒಂದನ್ನು ದರ್ಶನ್ ರವರು 12ನೇ ತಾರೀಕು ಬಿಡುಗಡೆ ಮಾಡುವ ಮೂಲಕ ಸಾಥ್‌ ನೀಡಲಿದ್ದಾರೆ.

Written by - YASHODHA POOJARI | Edited by - Krishna N K | Last Updated : Jan 6, 2024, 04:38 PM IST
  • ʼಜಸ್ಟ್ ಪಾಸ್ʼ ಚಿತ್ರತಂಡ ಈಗಾಗಲೇ ಟೀಸರ್ ಬಿಡುಗಡೆಗೊಳಿಸಿ ಸದ್ದು ಮಾಡುತ್ತಿದೆ.
  • ಜಸ್ಟ್‌ ಪಾಸ್‌ ಚಿತ್ರತಂಡಕ್ಕೆ ಸ್ಯಾಂಡಲ್‌ವುಡ್‌ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಾಥ್‌.
  • ಡಿಬಾಸ್‌ 12ನೇ ತಾರೀಕು ಈ ಸಿನಿಮಾ ಸಾಂಗ್‌ ಬಿಡುಗಡೆ ಮಾಡುವ ಮೂಲಕ ಸಾಥ್‌ ನೀಡಲಿದ್ದಾರೆ.
ಜಸ್ಟ್‌ ಪಾಸ್ʼ ಆದವರ ಬೆಂಬಲಕ್ಕೆ ನಿಂತ ʼಕಾಟೇರʼ ಡಿಬಾಸ್‌..!  title=

Just Pass Kannada movie : ರಾಯ್ಸ್ ಎಂಟರ್ಟೈನ್ಮೆಂಟ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗಿರುವ ಕೆ.ವಿ. ಶಶಿಧರ್ ನಿರ್ಮಾಣದ, ಕೆ ಎಮ್ ರಘು ಆಕ್ಷನ್ ಕಟ್ ಹೇಳಿರುವ ʼಜಸ್ಟ್ ಪಾಸ್ʼ ಚಿತ್ರತಂಡ ಈಗಾಗಲೇ ಟೀಸರ್ ಬಿಡುಗಡೆಗೊಳಿಸಿ ಸದ್ದು ಮಾಡುತ್ತಿರುವಾಗಲೇ ಮತ್ತೊಂದು ಸುದ್ದಿಯನ್ನು ಹಂಚಿಕೊಂಡಿದೆ. 

ಹೌದು.. ಚಾಲೆಂಜಿಂಗ್ ಸ್ಟಾರ್ ದರ್ಶನ್ ಹೊಸ ತಂಡಗಳಿಗೆ ಮತ್ತು ಸ್ನೇಹಿತರಿಗೆ ಯಾವಾಗಲೂ ಬೆನ್ನೆಲುಬಾಗಿ ನಿಲ್ಲುವುದಕ್ಕೆ ಎತ್ತಿದ ಕೈ. ಇದೀಗ ʼಜಸ್ಟ್ ಪಾಸ್ʼ ಚಿತ್ರದ ಮೊದಲ ವಿಡಿಯೋ ಸಾಂಗ್ ಒಂದನ್ನು ದರ್ಶನ್ ರವರು 12ನೇ ತಾರೀಕು ಬಿಡುಗಡೆ ಮಾಡುವ ಮೂಲಕ ಸಾಥ್‌ ನೀಡಲಿದ್ದಾರೆ.

ಇದನ್ನೂ ಓದಿ:ರಾಕಿಂಗ್‌ ಸ್ಟಾರ್‌ ಬರ್ತ್‌ಡೇಗೆ UI ಟೀಸರ್‌ ರಿಲೀಸ್! ಗೆಸ್ಟ್‌ ಯಾರು ಗೊತ್ತೇ?

"ಸಿಂಗಾರ ಸಿರಿಯೇ" ಎಂದು "ಕಾಂತಾರ" ಚಿತ್ರದ ಮೂಲಕ ತಮ್ಮ ಸಾಹಿತ್ಯದ ಕೌಶಲ್ಯವನ್ನು ಮೆರೆದಂತಹ ಪ್ರಮೋದ್ ಮರವಂತೆ ಅವರು ಈ ಹಾಡಿಗೆ ಸಾಹಿತ್ಯ ಬರೆದಿದ್ದಾರೆ. ಹುಕ್ ಸ್ಟೆಪ್‌ಗಳ ಮೂಲಕ ಹೆಚ್ಚು ಸುದ್ದಿಯಾಗುವಂತಹ ಭೂಷಣ್ ಈ ಹಾಡಿಗೆ ಕೋರಿಯೋಗ್ರಫಿ ಮಾಡಿದ್ದಾರೆ.

12ನೇ ವಯಸ್ಸಿಗೆ ಕೀಬೋರ್ಡ್ ನುಡಿಸುವುದರ ಮೂಲಕ ಘಟಾನುಘಟಿ ಮ್ಯೂಸಿಕ್ ಡೈರೆಕ್ಟರ್‌ಗಳ ಜೊತೆ ಕೆಲಸ ಮಾಡಿರುವಂತಹ ಹರ್ಷವರ್ಧನ್ ರಾಜ್ ರವರ ಮ್ಯಾಜಿಕ್ ಸಂಗೀತ ಸಂಯೋಜನೆ ಈ ಚಿತ್ರಕ್ಕಿದೆ. ಹೆಸರಾಂತ ಛಾಯಾಗ್ರಾಹಕ ಸತ್ಯ ಹೆಗಡೆ ಜೊತೆಗೆ ಕೆಲಸ ಮಾಡಿರುವಂತಹ ಅನುಭವಿ ಸುಜಯ್ ಕುಮಾರ್  ಛಾಯಾಗ್ರಹಣ ಈ ಚಿತ್ರಕ್ಕಿದೆ.

ಇದನ್ನೂ ಓದಿ:ಎರಡನೇ ಪತ್ನಿಯಿಂದಲೂ ದೂರವಾದ್ರಾ ನಟ ದುನಿಯಾ ವಿಜಯ್..! ಸತ್ಯ ಬಿಚ್ಚಿಟ್ಟ ಕೀರ್ತಿ

"ಜಸ್ಟ್ ಪಾಸ್" ಚಿತ್ರದ ತಾರಾ ಗಣದಲ್ಲಿ ಶ್ರೀ, ಪ್ರಣತಿ ಹಾಗೂ ಹೊಸ ಯುವಕರ ಜೊತೆಗೆ ರಂಗಾಯಣ ರಘು ಸಾಧು ಕೋಕಿಲ ಸುಚೇಂದ್ರ ಪ್ರಸಾದ್ "ಕಾಂತಾರ" ಫೇಮ್‌ನ ಪ್ರಕಾಶ್ ತುಂಬಿನಾಡು, ದೀಪಕ್ ರೈ, 'ಕಾಮಿಡಿ ಕಿಲಾಡಿ" ಖ್ಯಾತಿಯ ಗೋವಿಂದೇಗೌಡ, ದಾನಪ್ಪ ಹೀಗೆ ಕಲಾವಿದರ ದಂಡೆ ಇದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News