ಅಭಿನಯ ಚಕ್ರವರ್ತಿ' ಕಿಚ್ಚ ಸುದೀಪ್‌ಗೆ ಬ್ಯಾಟ್‌ ಗಿಫ್ಟ್‌ ಕೊಟ್ಟ ಕ್ರಿಕೆಟರ್‌ ಬಟ್ಲರ್..!‌

'ವಿಕ್ರಾಂತ್‌ ರೋಣ' ರಿಲೀಸ್‌ಗೆ ರೆಡಿಯಾಗಿರುವ ಅಭಿಮಾನಿಗಳ ಪಾಲಿನ ಪ್ರೀತಿಯ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್‌ ಅವರಿಗೆ ಬಿಗ್‌ ಗಿಫ್ಟ್‌ ಸಿಕ್ಕಿದೆ. ಆ ದೊಡ್ಡ ಉಡುಗೊರೆ ನೀಡಿರುವುದು ಬೇರೆ ಯಾರೂ ಅಲ್ಲ, ಇಂಗ್ಲೆಂಡ್ ಕ್ರಿಕೆಟ್ ತಂಡದ ಸ್ಫೋಟಕ ಆಟಗಾರ ಹಾಗೂ ರಾಜಸ್ಥಾನ ರಾಯಲ್ಸ್ ತಂಡದ ಸ್ಟಾರ್‌ ಬ್ಯಾಟ್ಸ್‌ಮನ್‌ ಜೋಸ್ ಬಟ್ಲರ್. ಅಂದಹಾಗೆ ಜೋಸ್‌ ಬಟ್ಲರ್‌ ಅವರು ನಟ ಕಿಚ್ಚ ಸುದೀಪ್‌ ಅವರಿಗೆ ನೀಡಿರುವ ಬಿಗ್‌ ಗಿಫ್ಟ್‌ ಏನಪ್ಪಾ ಅನ್ನೋದರ ಡೀಟೇಲ್ಸ್‌ ಅನ್ನ ತಿಳಿಯೋಣ ಬನ್ನಿ.

Written by - Malathesha M | Edited by - Manjunath Naragund | Last Updated : Jun 9, 2022, 11:03 PM IST
  • ಅಷ್ಟಕ್ಕೂ 2022ರ ಐಪಿಎಲ್‌ ಸೀಸನ್‌ನಲ್ಲಿ ಜೋಸ್ ಬಟ್ಲರ್ ಅವರದ್ದೇ ಹವಾ ಎನ್ನುವಂತಾಗಿತ್ತು.
  • ಯಾಕಂದ್ರೆ ಜೋಸ್ ಬಟ್ಲರ್ ಬ್ಯಾಟ್‌ ಬೀಸಿದರೆ ಸಾಕು ಬಾಲ್‌ ಬೌಂಡರಿ ಗೆರೆಯನ್ನು ದಾಟುತ್ತಿತ್ತು.
ಅಭಿನಯ ಚಕ್ರವರ್ತಿ' ಕಿಚ್ಚ ಸುದೀಪ್‌ಗೆ ಬ್ಯಾಟ್‌ ಗಿಫ್ಟ್‌ ಕೊಟ್ಟ ಕ್ರಿಕೆಟರ್‌ ಬಟ್ಲರ್..!‌ title=

ಬೆಂಗಳೂರು: 'ವಿಕ್ರಾಂತ್‌ ರೋಣ' ರಿಲೀಸ್‌ಗೆ ರೆಡಿಯಾಗಿರುವ ಅಭಿಮಾನಿಗಳ ಪಾಲಿನ ಪ್ರೀತಿಯ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್‌ ಅವರಿಗೆ ಬಿಗ್‌ ಗಿಫ್ಟ್‌ ಸಿಕ್ಕಿದೆ. ಆ ದೊಡ್ಡ ಉಡುಗೊರೆ ನೀಡಿರುವುದು ಬೇರೆ ಯಾರೂ ಅಲ್ಲ, ಇಂಗ್ಲೆಂಡ್ ಕ್ರಿಕೆಟ್ ತಂಡದ ಸ್ಫೋಟಕ ಆಟಗಾರ ಹಾಗೂ ರಾಜಸ್ಥಾನ ರಾಯಲ್ಸ್ ತಂಡದ ಸ್ಟಾರ್‌ ಬ್ಯಾಟ್ಸ್‌ಮನ್‌ ಜೋಸ್ ಬಟ್ಲರ್. ಅಂದಹಾಗೆ ಜೋಸ್‌ ಬಟ್ಲರ್‌ ಅವರು ನಟ ಕಿಚ್ಚ ಸುದೀಪ್‌ ಅವರಿಗೆ ನೀಡಿರುವ ಬಿಗ್‌ ಗಿಫ್ಟ್‌ ಏನಪ್ಪಾ ಅನ್ನೋದರ ಡೀಟೇಲ್ಸ್‌ ಅನ್ನ ತಿಳಿಯೋಣ ಬನ್ನಿ.

ಅಷ್ಟಕ್ಕೂ 2022ರ ಐಪಿಎಲ್‌ ಸೀಸನ್‌ನಲ್ಲಿ ಜೋಸ್ ಬಟ್ಲರ್ ಅವರದ್ದೇ ಹವಾ ಎನ್ನುವಂತಾಗಿತ್ತು. ಯಾಕಂದ್ರೆ ಜೋಸ್ ಬಟ್ಲರ್ ಬ್ಯಾಟ್‌ ಬೀಸಿದರೆ ಸಾಕು ಬಾಲ್‌ ಬೌಂಡರಿ ಗೆರೆಯನ್ನು ದಾಟುತ್ತಿತ್ತು. ಹೀಗೆ 2022ರ ಐಪಿಎಲ್ ಟೋರ್ನಿಯಲ್ಲಿ ಜೋಸ್ ಬಟ್ಲರ್ ಏಕಾಂಗಿಯಾಗಿ ರಾಜಸ್ಥಾನ ರಾಯಲ್ಸ್ ತಂಡವನ್ನು ಫೈನಲ್ ಹಂತಕ್ಕೆ ತಲುಪಿಸಿದ್ದರು. ಇದೀಗ 2022ರ ಐಪಿಎಲ್ ಟೋರ್ನಿಯಲ್ಲಿ ಅತ್ಯಧಿಕ ರನ್‌ ಗಳಿಸಲು ಬಳಸಿದ್ದ ಕ್ರಿಕೆಟ್‌ ಬ್ಯಾಟ್‌ ಅನ್ನೇ ಜೋಸ್ ಬಟ್ಲರ್ ಅವರು ನಟ ಸುದೀಪ್‌ ಅವರಿಗೆ ಗಿಫ್ಟ್‌ ಆಗಿ ನೀಡಿದ್ದಾರೆ.

ಇದನ್ನೂ ಓದಿ : ನಟ ಕಿಚ್ಚ ಸುದೀಪ್‌ ಸಿನಿಮಾಗೆ ಆನೆಬಲ..! ‘ವಿಕ್ರಾಂತ್ ರೋಣ’ನಿಗೆ ‘ಪಿವಿಆರ್‌’ ಸಾಥ್..!‌

ಸುದೀಪ್‌ ಸಂತಸ: 

ನಟ ಸುದೀಪ್‌ ಅವರು ಕೂಡ ಸ್ಟಾರ್‌ ಕ್ರಿಕೆಟರ್.‌ ಈ ಹಿಂದೆ ಇಡೀ ಭಾರತೀಯ ಸಿನಿಮಾ ರಂಗದ ಸ್ಟಾರ್‌ಗಳನ್ನ ಒಂದು ಕಡೆ ಸೇರಿಸಿ, ಬ್ಯಾಟ್‌ ಮತ್ತು ಬಾಲ್‌ ಹಿಡಿಯುವಂತೆ ಮಾಡಿದ್ದವರು ಕನ್ನಡಿಗ ಕಿಚ್ಚ ಸುದೀಪ್‌. ಅಂತಾರಾಷ್ಟ್ರೀಯ ಮಟ್ಟದ ದೊಡ್ಡ ದೊಡ್ಡ ಸ್ಟಾರ್‌ ಆಟಗಾರರನ್ನೂ ಟೂರ್ನಿಗೆ ಕರೆತಂದಿದ್ರು‌ ಕಿಚ್ಚ ಸುದೀಪ್‌ ಅವರು.

ಇದೀಗ ಮತ್ತೆ ಕ್ರಿಕೆಟ್‌ ವಿಚಾರದಲ್ಲೇ ನಟ ಸುದೀಪ್‌ ಅವರು ಸುದ್ದಿಯಲ್ಲಿದ್ದಾರೆ. ಜೋಸ್‌ ಬಟ್ಲರ್‌ ನೀಡಿದ ಬ್ಯಾಟ್‌ ಅನ್ನು ಹಿಡಿದು, ಸೋಷಿಯಲ್‌ ಮೀಡಿಯಾದಲ್ಲಿ ವಿಡಿಯೋ ಪೋಸ್ಟ್‌ ಒಂದನ್ನ ಹಾಕಿದ್ದಾರೆ 'ಅಭಿನಯ ಚಕ್ರವರ್ತಿ' ನಟ ಕಿಚ್ಚ ಸುದೀಪ್‌.

ಇದನ್ನೂ ಓದಿ : Vikrant Rona: ನೀವೂ ರಕ್ಕಮ್ಮನನ್ನು ಭೇಟಿಯಾಗಬಹುದು.. ಎಲ್ಲಿ? ಯಾವಾಗ? ಇಲ್ಲಿದೆ ನೋಡಿ

ಸ್ಪೆಷಲ್ ಬ್ಯಾಟ್‌ ತಮ್ಮ ಕೈಸೇರಲು ಕಾರಣರಾದ ರಾಜಸ್ಥಾನ ರಾಯಲ್ಸ್ ಟೀಂ ಪ್ಲೇಯರ್‌ ಹಾಗೂ ಕನ್ನಡಿಗ ಕೆ.ಸಿ.ಕಾರ್ಯಪ್ಪ ಹಾಗೂ ರಾಜಸ್ಥಾನ ರಾಯಲ್ಸ್ ತಂಡದ ಇತರ ಆಟಗಾರರಿಗೂ ನಟ ಕಿಚ್ಚ ಸುದೀಪ್‌ ಅವರು ಧನ್ಯವಾದ ಅರ್ಪಿಸಿದ್ದಾರೆ. ನಟ ಸುದೀಪ್‌ ಅವರ ವಿಡಿಯೋ ಇದೀಗ ಇಂಟರ್‌ನೆಟ್‌ನಲ್ಲಿ ಸಖತ್‌ ಸದ್ದು ಮಾಡುತ್ತಿದೆ. ಜೊತೆಗೆ ಅಭಿನಯ ಚಕ್ರವರ್ತಿ ಅಭಿಮಾನಿಗಳು ಈ ಸಂತಸವನ್ನ ಎಲ್ಲೆಲ್ಲೂ ಹಂಚಿಕೊಳ್ಳುತ್ತಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

 

Trending News