Jailer 2: ಆಕ್ಷನ್‌ ಎಂಟರ್‌ಟೇನ್‌ಮೆಂಟ್ ʻಜೈಲರ್‌ʼ ಸೀಕ್ವೆಲ್‌ ಫಿಕ್ಸ್‌!

Jailer Sequel: ಸೂಪರ್‌ ಸ್ಟಾರ್‌ ರಜನಿಕಾಂತ್‌ ನಟನೆಯ  ಭರ್ಜರಿ ಎಂಟರ್‌ಟೇನ್‌ಮೆಂಟ್ ಸಿನಿಮಾ 'ಜೈಲರ್' ಕಳೆದವರ್ಷ ತೆರೆಕಂಡು ಭರ್ಜರಿ ಪ್ರದರ್ಶನ ನೀಡಿತ್ತು. ಇದೀಗ ಈ ಚಿತ್ರದ ಸೀಕ್ವೆಲ್‌ ಬರಲಿದೆ. ಇದರ ಕಂಪ್ಲೀಟ್‌ ಡಿಟೇಲ್ಸ್‌ ಇಲ್ಲಿದೆ.  

Written by - Zee Kannada News Desk | Last Updated : Feb 24, 2024, 10:50 AM IST
  • 'ಜೈಲರ್' ಬಗ್ಗೆ ಮಾತಾಡಲು ಕಾರಣವೇ, ಈ ಚಿತ್ರದ ಎರಡನೇ ಭಾಗದ ತಯಾರಿಗಳು ಈಗಾಗಲೇ ಶುರುವಾಗಿದೆ.
  • ಜೈಲರ್' ಸಿನಿಮಾ ಈಗಾಗಲೇ ನಿರ್ಮಾಪಕರಿಗೆ ದೊಡ್ಡ ಲಾಭ ಮಾಡಿಕೊಟ್ಟಿ, ಇದರ ಮುಂದಿನ ಭಾಗ ತೆರೆಗೆ ಬರಲು ಸಜ್ಜಾಗುತ್ತಿದೆ.
  • 'ಜೈಲರ್'ಚಿತ್ರದಲ್ಲಿ ದೊಡ್ಡ ತಾರಂಗಣವೇ ಇದ್ದು, ಅದರಲ್ಲಿ ರಮ್ಯಾ ಕೃಷ್ಣ, ವಸಂತ್ ರವಿ, ಯೋಗಿ ಬಾಬು, ಕಿಶೋರ್, ರೆಡಿನ್ ಕಿಂಗ್ಸ್‌ಲೇ, ಜಾಕಿ ಶ್ರಾಫ್‌ ಮುಂತಾದವರು ನಟಿಸಿದ್ದರು.
Jailer 2:  ಆಕ್ಷನ್‌ ಎಂಟರ್‌ಟೇನ್‌ಮೆಂಟ್ ʻಜೈಲರ್‌ʼ ಸೀಕ್ವೆಲ್‌ ಫಿಕ್ಸ್‌!  title=

Jailer Sequel Update: ಕಾಲಿವುಡ್‌ ಸೂಪರ್‌ ಸ್ಟಾರ್‌ ರಜನಿಕಾಂತ್‌ ನಟನೆಯ  ಭರ್ಜರಿ ಎಂಟರ್‌ಟೇನ್‌ಮೆಂಟ್ ಸಿನಿಮಾ 'ಜೈಲರ್' ಪ್ಯಾನ್‌ ಇಂಡಿಯಾ ಚಿತ್ರವಾಗಿ ತೆರೆಗೆ ಅಪ್ಪಳಿಸಿ ಬಾಕ್ಸ್ ಆಫೀಸ್‌ನಲ್ಲಿ ಕೋಟಿ  ಕೋಟಿ ಲೂಟಿ ಮಾಡಿತ್ತು.  ಈ ಸಿನಿಮಾ ರಜನಿ ಅಭಿಮಾನಿಗಳಿಗಂತೂ  ಭರ್ಜರಿ ಎಂಟರ್‌ಟೇನ್‌ಮೆಂಟ್ ನೀಡಿತ್ತು. ಸದ್ಯ 'ಜೈಲರ್' ಬಗ್ಗೆ ಮಾತಾಡಲು ಕಾರಣವೇ, ಈ ಚಿತ್ರದ ಎರಡನೇ ಭಾಗದ ತಯಾರಿಗಳು ಈಗಾಗಲೇ ಶುರುವಾಗಿದೆ. ಈ ಸಿನಿಮಾದ ನಿರ್ದೇಶಕ ನೆಲ್ಸನ್ ದಿಲೀಪ್ ಕುಮಾರ್ ಸೀಕ್ವೆಲ್‌ಗೆ ಸಿದ್ದತೆ ಮಾಡಿಕೊಳ್ಳುತ್ತಿದ್ದಾರೆ.

'ಜೈಲರ್' ಸಿನಿಮಾ ಈಗಾಗಲೇ ನಿರ್ಮಾಪಕರಿಗೆ ದೊಡ್ಡ ಲಾಭ ಮಾಡಿಕೊಟ್ಟಿ, ಇದರ ಮುಂದಿನ ಭಾಗ ತೆರೆಗೆ ಬರಲು ಸಜ್ಜಾಗುತ್ತಿದೆ. ಸದ್ಯ ಡೈರೆಕ್ಟರ್‌ ನೆಲ್ಸನ್ ದಿಲೀಪ್ ಕುಮಾರ್  'ಜೈಲರ್ 2' ಸಿನಿಮಾದ ಸ್ಕ್ರಿಪ್ಟ್‌ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ ಎನ್ನಲಾಗಿದೆ.   'ಜೈಲರ್' ಸಿನಿಮಾದಲ್ಲಿ ರಜನಿಕಾಂತ್ ಅವರ ಸೊಸೆಯಾಗಿ ನಟಿ ಮಿರ್ನಾ ಮೆನನ್ ಕಾಣಿಸಿಕೊಂಡಿದ್ದವರು, ಒಂದು ಸಂದರ್ಶನದಲ್ಲಿ "ನಾನು ನಿರ್ದೇಶಕ ನೆಲ್ಸನ್ ಬಳಿ ಯಾವಾಗ ಅನೌನ್ಸ್ ಮಾಡುತ್ತೀರಿ ಎಂದು ಕೇಳಿದೆ. ಈ ಪ್ರಾಜೆಕ್ಟ್ ಬಗ್ಗೆ ಅವರು ತುಂಬ ಖುಷಿಯಾಗಿದ್ದು ಮತ್ತು ಸಖತ್ ಎಕ್ಸೈಟ್ ಆಗಿದ್ದಾರೆ. ಯಾವಾಗ ಶುರುವಾಗಲಿದೆ ಎಂಬುದನ್ನು ಅವರೇ ಹೇಳಬೇಕು." ಎಂದಿದ್ದಾರೆ.

ಇದನ್ನೂ ಓದಿ: ಫೆ.28 ರಿಂದ ಕಿರುತೆರೆ ಕಲಾವಿದರ ಕ್ರಿಕೆಟ್ ಪಂದ್ಯಾವಳಿ ಶುರು

ನಟಿ ಮಿರ್ನಾ ಮೆನನ್ " ಅಂದಹಾಗೆ, ನಾನಂತೂ ನನ್ನ ಪಾತ್ರದ ಬಗ್ಗೆ ಅವರ ಬಳಿ ಏನೂ ಕೇಳುವುದಿಲ್ಲ. ನನ್ನನ್ನು ಆಯ್ಕೆ ಮಾಡಿಕೊಳ್ಳಬೇಕಾ? ಬೇಡ್ವಾ ಎಂಬುದು ನಿರ್ದೇಶಕರ ಫ್ರೀಡಂ ಅದು.. ಅದರ ಬಗ್ಗೆ ನಾನು ಮಾತನಾಡುವುದಿಲ್ಲ. ನನ್ನ ಪಾತ್ರವನ್ನು ವಿಸ್ತರಿಸಬೇಕೇ ಅಥವಾ ಬೇಡವೇ ಎಂಬುದು ಕೇವಲ ನಿರ್ದೇಶಕರ ನಿರ್ಧಾರದ ಮೇಲೆ ನಿಂತಿದೆ ಎಂದು ನಾನು ಭಾವಿಸುತ್ತೇನೆ. ಆದರೆ ನನಗೆ ಮತ್ತೆ 'ಜೈಲರ್' ಚಿತ್ರದ ಭಾಗವಾಗಲು ಅವಕಾಶ ಸಿಕ್ಕರೆ, ನಾನು ಅದನ್ನು ಸಂತೋಷದಿಂದ ಒಪ್ಪಿಕೊಳ್ಳುತ್ತೇನೆ" ಎಂದು ಹೇಳುವುದರ ಮೂಲಕ ಜೈಲರ್‌ ಸೀಕ್ವೆಲ್‌ ಬಗ್ಗೆ ಹಂಚಿಕೊಂಡಿದ್ದಾರೆ.

'ಜೈಲರ್'ಚಿತ್ರದಲ್ಲಿ ದೊಡ್ಡ ತಾರಂಗಣವೇ ಇದ್ದು, ಅದರಲ್ಲಿ  ರಮ್ಯಾ ಕೃಷ್ಣ, ವಸಂತ್ ರವಿ, ಯೋಗಿ ಬಾಬು, ಕಿಶೋರ್, ರೆಡಿನ್ ಕಿಂಗ್ಸ್‌ಲೇ, ಜಾಕಿ ಶ್ರಾಫ್‌ ಮುಂತಾದವರು ನಟಿಸಿದ್ದರು. ಇನ್ನೂ ತಮನ್ನಾ ಭಾಟಿಯಾ, ತೆಲುಗು ನಟರಾದ ಸುನೀಲ್, ನಾಗ ಬಾಬು ಕೂಡ  ಗಮನಸೆಳೆದಿದ್ದರು. ಮತ್ತೆ ಅತಿಥಿ ಪಾತ್ರಗಳಲ್ಲಿ ಶಿವರಾಜ್‌ಕುಮಾರ್ ಮತ್ತು ಮೋಹನ್‌ಲಾಲ್ ಕಾಣಿಸಿಕೊಂಡಿದ್ದು, ಸದ್ಯ ಪಾರ್ಟ್ 2ನಲ್ಲೂ ಶಿವಣ್ಣನ ಪಾತ್ರ ಇರಲಿದೆಯಾ, ಇದ್ದರೆ, ಈ ಬಾರಿ ಇನ್ನಷ್ಟು ಜಾಸ್ತಿ ಸೀನ್‌ಗಳಲ್ಲಿ ಬಣ್ಣಹಚ್ಚಲಿದ್ದಾರ ಎಂಬ ಕುತೂಹಲ ಪ್ರೇಕ್ಷಕರಲ್ಲಿ ಮೂಡಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News