ಜಾನೆ ಜಾನ್ ಟ್ರೈಲರ್‌ ರಿಲೀಸ್ : ಚೊಚ್ಚಲ OTT ಸಿನಿಮಾದಲ್ಲಿ ಕರೀನಾ ಕಪೂರ್

Jaane Jaan Trailer : ಸುಜೋಯ್‌ ಘೋಷ್‌ ನಿರ್ದೇಶನದಡಿಯಲ್ಲಿ ಮೂಡಿಬಂದಿರುವ ಮಿಸ್ಟರಿ ಥ್ರಿಲ್ಲರ್ ಸಿನಿಮಾ ಜಾನೆ ಜಾನ್ ಮೂಲಕ ಕರೀನಾ ಕಪೂರ್‌ OTT ಅಂಗಳಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ.

Written by - Zee Kannada News Desk | Last Updated : Sep 5, 2023, 04:53 PM IST
  • ಕರೀನಾ ಕಪೂರ್‌ ಅಭಿನಯದ ʼಜಾನೆ ಜಾನ್‌ʼ ಟ್ರೈಲರ್‌ ರಿಲೀಸ್‌.
  • ʼದಿ ಡಿವೋಷನ್‌ ಆಫ್‌ ಸಸ್ಪೆಕ್ಟ್‌ ಎಕ್ಸ್‌ʼ ಎಂಬ ರಹಸ್ಯ ಕಾದಂಬರಿಯಾಧಾರಿತ ಚಿತ್ರ.
  • ಕರೀನಾ ಹುಟ್ಟುಹಬ್ಬದಂದು ಜಾನೆ ಜಾನ್‌ ಬಿಡುಗಡೆ ಮಾಡಲು ನಿರ್ಧಾರ.
ಜಾನೆ ಜಾನ್ ಟ್ರೈಲರ್‌ ರಿಲೀಸ್ : ಚೊಚ್ಚಲ OTT ಸಿನಿಮಾದಲ್ಲಿ ಕರೀನಾ ಕಪೂರ್ title=

Karina Kapoor Khan : ಜಾನ್‌ ಜಾನೇ ಚಿತ್ರದ ಟ್ರೈಲರ್‌ ಇಂದು (ಸೆ. 5) ರಿಲೀಸ್‌ ಆಗಿದೆ. ಈ ಚಿತ್ರವು ದಿ ಡಿವೋಷನ್‌ ಆಫ್‌ ಸಸ್ಪೆಕ್ಟ್‌ ಎಕ್ಸ್‌ ಎಂಬ ರಹಸ್ಯ ಕಾದಂಬರಿಯಾಧಾರಿತ ಚಿತ್ರವಾಗಿದ್ದು, ಸುಜೋಯ್‌ ಘೋಷ್‌ ನಿರ್ದೇಶಿಸಿದ್ದಾರೆ. ಸಿನಿಮಾ ಸೆಪ್ಟೆಂಬರ್‌ 21ರಂದು ನೆಟ್‌ಪ್ಲೀಕ್ಸ್‌ನಲ್ಲಿ ರಿಲೀಸ್‌ ಆಗಲಿದೆ. 

ಕಾಲಿಂಪಾಂಗ್‌ ಗಿರಿಧಾಮದಲ್ಲಿ ನಡೆಯುವ ಈ ಚಿತ್ರದಲ್ಲಿ ಕರೀನಾ ಮಾಯಾ ಡಿಸೋಜಾ ಎನ್ನುವ ಪಾತ್ರದಲ್ಲಿ ನಟಿಸಿದ್ದು, ಮಾಯಾ ಡಿಸೋಜಾ ನೆರೆಹೊರೆಯವರ ಬಗ್ಗೆ ಹೊಂದಿದ್ದ ಸಂಚು, ಆಕೆ ಹೊಂದಿರುವ ದುರದ್ದೇಶಪೂರಿತ ಸಂಬಂಧದ ಕುರಿತು ಈ ಟ್ರೈಲರ್‌ ತಿಳಿಸುತ್ತದೆ.

ಇದನ್ನು ಓದಿ- Nabha Natesh : ವಜ್ರಕಾಯ ಬೆಡಗಿಯ ಟ್ರೆಡಿಷನಲ್‌ ಲುಕ್‌...ಪೋಟೋಸ್‌ ನೋಡಿ

ಅಷ್ಟೇ ಅಲ್ಲದೇ ಚಿತ್ರದಲ್ಲಿ ಜೈದೀಪ್‌ ಚಿತ್ರದಲ್ಲಿ ನರೇನ್ ಪ್ರಮುಖ ಪಾತ್ರದಲ್ಲಿ ನಿರ್ವಹಿಸಿದ್ದಾರೆ ಮತ್ತು ವಿಜಯ್‌ ಪೋಲಿಸ್‌ ಕರಣ್‌ ಪಾತ್ರದಲ್ಲಿ ನಟಿಸಿದ್ದಾರೆ. ಕಾಣೆಯಾದ ಮಾಯಾಳ ಗಂಡನನ್ನು ಹುಡುಕುವಾಗ ಬೆಳೆದ ಸಂಬಂಧದ ಕುರಿತು ತಿಳಿಸುತ್ತದೆ. ಇದು ಎಲ್ಲಾ ನಿಗೂಢ ಘಟನೆಗಳ ಒಂದು ನೋಡವನ್ನು ನೀಡುತ್ತದೆ. ಅಲ್ಲದೇ ಈ ಸಿನಿಮಾ ಪ್ರೀತಿ, ರೋಮಾಂಚನ ಎರಡನ್ನು ಪ್ರಚೋದಿಸುತ್ತದೆ. 

ಅಲ್ಲದೇ ಟ್ರೇಲರ್‌ ಬಿಡುಗಡೆ ಕುರಿತು ಮಾತನಾಡಿದ ಸುಜೋಯ್‌ ಘೋಷ್‌ "ಈ ಚಿತ್ರ ನನ್ನ ಹೃದಯಕ್ಕೆ ಅತ್ಯಂತ ಹತ್ತಿರವಾದ ಸಿನಿಮಾ ಮತ್ತು ಪ್ರೇಕ್ಷಕರ ವೀಕ್ಷಣೆಗಾಗಿ ನಾನು ತುಂಬಾ ಉತ್ಸುಕತೆಯಿಂದ ಕಾಯುತ್ತಿದ್ದೇನೆ. ಮತ್ತು ಈ ಚಿತ್ರ ಪ್ರೇಮಕಥೆ, ಕ್ರಮಿನಲ್‌, ತನಿಖೆ, ಆಕರ್ಷಣೆ, ಸಂಚು ಮತ್ತು ಪ್ರೀತಿಗಾಗಿ ಏನು ಬೇಕಾದರೂ ಮಾಡುವ ಇಚ್ಛೆಯನ್ನು ತೋರಿಸುತ್ತದೆ. ಸೆಪ್ಟೆಂಬರ್‌ 21ರಂದು ಕರೀನಾ ಕಪೂರ್ ಹುಟ್ಟುಹಬ್ಬದಂದು ಜಾನೆ ಜಾನ್‌ ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News