ಜೂನಿಯರ್ ಎನ್‌ಟಿಆರ್ ಬಗ್ಗೆ ನಿಮಗೆ ಗೊತ್ತಿರದ 6 ಕುತೂಹಲಕಾರಿ ಸಂಗತಿಗಳು ಇಲ್ಲಿವೆ

Interesting Facts About Jr NTR: ಜೂನಿಯರ್ ಎನ್‌ಟಿಆರ್ ಅವರಿಗೆ ಅಜ್ಜ ನಂದಮೂರಿ ತಾರಕ್ ರಾಮರಾವ್ ಅವರ ಹೆಸರನ್ನು ಇಡಲಾಗಿದೆ. 

Written by - Chetana Devarmani | Last Updated : May 20, 2024, 08:34 PM IST
  • ಜೂನಿಯರ್ ಎನ್‌ಟಿಆರ್ ಹುಟ್ಟು ಹಬ್ಬ
  • ಜೂ.ಎನ್‌ಟಿಆರ್ ಕುರಿತ ಕುತೂಹಲಕಾರಿ ಸಂಗತಿ
  • ಜೂನಿಯರ್ ಎನ್‌ಟಿಆರ್ ನಿಜವಾದ ಹೆಸರು
ಜೂನಿಯರ್ ಎನ್‌ಟಿಆರ್ ಬಗ್ಗೆ ನಿಮಗೆ ಗೊತ್ತಿರದ 6 ಕುತೂಹಲಕಾರಿ ಸಂಗತಿಗಳು ಇಲ್ಲಿವೆ  title=

happy birthday jr ntr: ಟಾಲಿವುಡ್ ನಟ ಜೂನಿಯರ್ ಎನ್‌ಟಿಆರ್ ಇಂದು ಹುಟ್ಟು ಹಬ್ಬದ ಸಂಭ್ರಮದಲ್ಲಿದ್ದಾರೆ. ಅವರ ಅಭಿಮಾನಿಗಳು ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ಶುಭಾಶಯಗಳನ್ನು ತಿಳಿಸುತ್ತಿದ್ದಾರೆ. 

ಜೂನಿಯರ್ ಎನ್‌ಟಿಆರ್ ಅವರಿಗೆ ಅಜ್ಜ ನಂದಮೂರಿ ತಾರಕ್ ರಾಮರಾವ್ ಅವರ ಹೆಸರನ್ನು ಇಡಲಾಗಿದೆ. ಬಾಲ್ಯದಿಂದಲೂ ಎಲ್ಲರೂ ಅವರನ್ನು ತಾರಕ್ ಎಂದು ಕರೆಯುತ್ತಾರೆ. ಇವರ ಮೊದಲ ಹೆಸರು ತಾರಕ್.  

ಜೂನಿಯರ್ ಎನ್‌ಟಿಆರ್ ಮೊದಲ ಬಾರಿಗೆ ತಾತ ನಂದಮೂರಿ ತಾರಕ ರಾಮರಾವ್ ಅವರ 'ಬ್ರಹ್ಮರ್ಷಿ ವಿಶ್ವಾಮಿತ್ರ' (1991) ನಲ್ಲಿ ಬಾಲ ಕಲಾವಿದನಾಗಿ ಕಾಣಿಸಿಕೊಂಡರು. 'ರಾಮಾಯಣಂ' ನಲ್ಲಿ ಬಾಲ ಕಲಾವಿದನಾಗಿ ನಟಿಸಿದರು. ಇದು ಅತ್ಯುತ್ತಮ ಮಕ್ಕಳ ಸಿನಿಮಾ ವಿಭಾಗದಲ್ಲಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಗೆದ್ದಿತು.

ಇದನ್ನೂ ಓದಿ: HBD Jr NTR: ಯಂಗ್ ಟೈಗರ್ ಜೂನಿಯರ್ ಎನ್ ಟಿಆರ್ ಆಸ್ತಿ ಮೌಲ್ಯ ಎಷ್ಟು ಗೊತ್ತಾ? 

ವಿಶ್ವಾದ್ಯಂತ ಜನರ ಮೆಚ್ಚುಗೆ ಗಳಿಸಿದ ಎಸ್‌ಎಸ್ ರಾಜಮೌಳಿ ಅವರ ಚೊಚ್ಚಲ ನಿರ್ದೇಶನದ 'ಸ್ಟೂಡೆಂಟ್ ನಂ 1' ಜೂನಿಯರ್ ಎನ್‌ಟಿಆರ್ ಅವರ ಕರಿಯರ್‌ ದಿಕ್ಕನೇ ಬದಲಾಯಿಸಿದ ಚಲನಚಿತ್ರವಾಗಿದೆ. ಈ ಚಿತ್ರವು ತಾರಕ್ ಅವರನ್ನು ರಾತ್ರೋರಾತ್ರಿ ಯುವ ಐಕಾನ್ ಆಗಿ ಪರಿವರ್ತಿಸಿತು.  

ಸೂಪರ್‌ಸ್ಟಾರ್ ಜೂನಿಯರ್ ಎನ್‌ಟಿಆರ್ ಜಪಾನ್‌ನಲ್ಲಿ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. 2013 ರಲ್ಲಿ ನಟನ ಹಿಟ್ ಚಿತ್ರ 'ಬಾದ್‌ಶಾ' ಜಪಾನ್‌ನಲ್ಲಿ ಬಿಡುಗಡೆಯಾದಾಗಿನಿಂದ ಅಲ್ಲಿ ಫ್ಯಾನ್ಸ್‌ ಹುಟ್ಟಿಕೊಂಡರು. 

2012 ಮತ್ತು 2016ರಲ್ಲಿ ಎರಡು ಬಾರಿ ಫೋರ್ಬ್ಸ್ ಇಂಡಿಯಾದ ಸೆಲೆಬ್ರಿಟಿ ಲಿಸ್ಟ್‌ನಲ್ಲಿ ಕಾಣಿಸಿಕೊಂಡ ಕೆಲವೇ ಟಾಲಿವುಡ್ ನಟರಲ್ಲಿ ಜೂನಿಯರ್ NTR ಕೂಡ ಒಬ್ಬರು. 

ಜೂನಿಯರ್ ಎನ್‌ಟಿಆರ್ ಬಹುಮುಖ ಪ್ರತಿಭೆ. ತಾರಕ್ ಒಳ್ಳೆಯ ಗಾಯಕ ಕೂಡ ಹೌದು. ಅವರು ತಮ್ಮ ಮೊದಲ ತೆಲುಗು ಹಾಡನ್ನು 2007 ರಲ್ಲಿ 'ಯಮದೊಂಗ' ಚಿತ್ರಕ್ಕಾಗಿ ರೆಕಾರ್ಡ್ ಮಾಡಿದರು. 

ಇದನ್ನೂ ಓದಿ: ಮಗು ಹುಟ್ಟಿದ ಎರಡೇ ತಿಂಗಳಲ್ಲಿ ತುಂಬಾ ನೋವು ಅನುಭವಿಸಿದ್ದೆ: ಕಾಜಲ್ ಶಾಕಿಂಗ್ ಕಾಮೆಂಟ್ಸ್

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News