Pushpa 2 : ಅಲ್ಲು ಅರ್ಜುನ್ ಅಭಿನಯದ ಪುಷ್ಪ 2 ಬಗ್ಗೆ ಇಲ್ಲಿದೆ ಬಿಗ್ ಅಪ್ಡೇಟ್!

Allu Arjun starrer Pushpa 2 Movie : ಅಲ್ಲು ಅರ್ಜುನ್ ಅಭಿನಯದ 'ಪುಷ್ಪ' ಚಿತ್ರದ ಎರಡನೇ ಭಾಗ 'ಪುಷ್ಪ 2' ಶೀಘ್ರದಲ್ಲೇ ಬಿಡುಗಡೆಯಾಗಲಿದೆ. ಈ ಚಿತ್ರದ ಬಗ್ಗೆ ಅಭಿಮಾನಿಗಳು ತುಂಬಾ ಉತ್ಸುಕರಾಗಿದ್ದಾರೆ ಮತ್ತು ಇದೀಗ ಒಂದು ದೊಡ್ಡ ಅಪ್ಡೇಟ್ ಹೊರಬಂದಿದೆ.   

Written by - Chetana Devarmani | Last Updated : May 22, 2023, 03:44 PM IST
  • ಅಲ್ಲು ಅರ್ಜುನ್ ಅಭಿನಯದ 'ಪುಷ್ಪ 2'
  • ಪುಷ್ಪ 2 ಬಗ್ಗೆ ಇಲ್ಲಿದೆ ಬಿಗ್ ಅಪ್ಡೇಟ್!
  • ಸೌತ್ ಸೂಪರ್‌ಸ್ಟಾರ್ ಅಲ್ಲು ಅರ್ಜುನ್
Pushpa 2 : ಅಲ್ಲು ಅರ್ಜುನ್ ಅಭಿನಯದ ಪುಷ್ಪ 2 ಬಗ್ಗೆ ಇಲ್ಲಿದೆ ಬಿಗ್ ಅಪ್ಡೇಟ್!  title=

Fahadh Faasil Pushpa 2 Villain Photo:  ಸೌತ್ ಸೂಪರ್‌ಸ್ಟಾರ್ ಅಲ್ಲು ಅರ್ಜುನ್ ಅವರ 'ಪುಷ್ಪ' 2021 ರಲ್ಲಿ ಬಿಡುಗಡೆಯಾಯಿತು ಮತ್ತು ಗಲ್ಲಾಪೆಟ್ಟಿಗೆಯಲ್ಲಿ ರೆಕಾರ್ಡ್‌ ಬರೆಯಿತು. ಇದೀಗ ಈ ಚಿತ್ರದ ಎರಡನೇ ಭಾಗವಾದ 'ಪುಷ್ಪ 2' ಬರುತ್ತಿದ್ದು, ಅದರ ಪೋಸ್ಟರ್ ಬಿಡುಗಡೆಯಾಗಿದ್ದು ನಿಮಗೆ ಗೊತ್ತೇ ಇರಬೇಕು. ಚಿತ್ರದಲ್ಲಿ ಅಲ್ಲು ಅರ್ಜುನ್ ಅವರ ಲುಕ್ ಗೆ ಅಭಿಮಾನಿಗಳಿಂದ ಭಾರೀ ಪ್ರಶಂಸೆ ವ್ಯಕ್ತವಾಗಿದ್ದು, ನಾಯಕನ ನಂತರ ಇದೀಗ ಚಿತ್ರದ ವಿಲನ್ ಫೋಟೋ ಕೂಡ ಹೊರಬಿದ್ದಿದ್ದು, ಅಭಿಮಾನಿಗಳಲ್ಲಿ ಚಿತ್ರದ ಬಗ್ಗೆ ಕುತೂಹಲ ಹೆಚ್ಚಿಸಿದೆ. 

ಇದನ್ನೂ ಓದಿ: ಖ್ಯಾತ ಹಿರಿಯ ನಟ ಶರತ್‌ ಬಾಬು ನಿಧನ..!

ಅಲ್ಲು ಅರ್ಜುನ್ ಅವರ ಪುಷ್ಪ 2 ಬಗ್ಗೆ ಬಿಗ್ ಅಪ್ಡೇಟ್!

ನಟ ಅಲ್ಲು ಅರ್ಜುನ್ ಅವರ ಚಿತ್ರ ಪುಷ್ಪ 2 ಬಗ್ಗೆ ಅಭಿಮಾನಿಗಳು ತುಂಬಾ ಉತ್ಸುಕರಾಗಿದ್ದಾರೆ ಮತ್ತು ಪ್ರತಿಯೊಬ್ಬರೂ ಅದರ ಪ್ರತಿ ಅಪ್ಡೇಟ್ ಅನ್ನು ಗಮನಿಸುತ್ತಿರುತ್ತಾರೆ. ನೀವೂ ಕೂಡ ಈ ಸೂಪರ್ ಸ್ಟಾರ್ ನಟ ಅಥವಾ ಚಿತ್ರದ ಅಭಿಮಾನಿಗಳಾಗಿದ್ದರೆ ಚಿತ್ರದಲ್ಲಿ ವಿಲನ್ (ಪುಷ್ಪಾ 2 ವಿಲನ್) ಪಾತ್ರದಲ್ಲಿ ನಟಿಸಲಿರುವ ನಟ, ಅವರ ಫೋಟೋ ಮತ್ತು ಚಿತ್ರದಲ್ಲಿನ ಅವರ ಲುಕ್ ಒಮ್ಮೆ ನೋಡಲೇಬೇಕು. ಚಿತ್ರದಲ್ಲಿ ನಟ ಫಹಾದ್ ಫಾಸಿಲ್ ಖಳನಾಯಕನ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಅವರು ಚಿತ್ರದ ಮೊದಲ ಭಾಗದಲ್ಲಿಯೂ ಕಾಣಿಸಿಕೊಂಡಿದ್ದರು.

Fahadh Faasil

ನಟ ಫಹದ್ ಫಾಸಿಲ್ ಪುಷ್ಪ 2 ನಲ್ಲಿ ವಿಲನ್ ಆಗಿ ನಟಿಸಲಿದ್ದಾರೆ. ಪುಷ್ಪಾಗೆ ಕಠಿಣ ಪೈಪೋಟಿ ನೀಡುವ ಅವರ ಪಾತ್ರದ ಲುಕ್‌ ಹೊರಬಿದ್ದಿದೆ. ಈ ಫೋಟೋವು ಚಿತ್ರದ ಸೆಟ್‌ಗಳಿಂದ ಬಂದಿದೆ, ಇದರಲ್ಲಿ ನಟನು ಮಾನಿಟರ್‌ನಲ್ಲಿ ತನ್ನ ಒಂದು ದೃಶ್ಯವನ್ನು ತುಂಬಾ ಗಂಭೀರವಾಗಿ ವೀಕ್ಷಿಸುತ್ತಿದ್ದಾರೆ. ಈ ಫೋಟೋದೊಂದಿಗೆ ಅಭಿಮಾನಿಗಳಲ್ಲಿ ಚಿತ್ರದ ಉತ್ಸಾಹ ಮತ್ತಷ್ಟು ಹೆಚ್ಚಿದೆ.

ಇದನ್ನೂ ಓದಿ: ʻಕಾಂತಾರʼ ಪದದ ಅರ್ಥವೇನು ಗೊತ್ತಾ? ರಿಷಬ್ ಶೆಟ್ಟಿ ಸಿನಿಮಾಗೆ ಈ ಟೈಟಲ್‌ ಇಟ್ಟಿದ್ದೇಕೆ?

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News