ರಾಕಿಬಾಯ್ ಅಭಿಮಾನಿಗಳಿಗೆ ಗುಡ್‌ ನ್ಯೂಸ್..! 'ಯಶ್19' ಟೈಟಲ್ ಫಿಕ್ಸ್.. ಆದರೆ ಆ ವಿಚಾರದಲ್ಲಿ ಇನ್ನೂ ಸಸ್ಪೆನ್ಸ್

Yash 19 Updates: 'ಕೆಜಿಎಫ್' ಸರಣಿ ಸಿನಿಮಾಗಳ ನಂತರ ಯಶ್ ತಮ್ಮ ಮುಂದಿನ ಸಿನಿಮಾ ಬಗ್ಗೆ ಯಾವುದೇ ಮಾಹಿತಿ ನೀಡಿರಲಿಲ್ಲ.. ಇದೀಗ ಸುದೀರ್ಘ ಗ್ಯಾಪ್ ನಂತರ ಅವರು ತಮ್ಮ 19 ನೇ ಚಿತ್ರದ ಬಗ್ಗೆ ಕ್ರೇಜಿ ಅಪ್‌ಡೇಟ್ ನೀಡಿದ್ದಾರೆ. 

Written by - Savita M B | Last Updated : Dec 5, 2023, 11:44 AM IST
  • ಕನ್ನಡದ ಸ್ಟಾರ್ ಹೀರೋ ಯಶ್ ಬಗ್ಗೆ ಈಗ ವಿಶೇಷ ಪರಿಚಯ ಅಗತ್ಯವಿಲ್ಲ
  • ಸದ್ಯ ಯಶ್ 19 ಚಿತ್ರದ ಅಪ್‌ಡೇಟ್‌ಗಾಗಿ ಎಲ್ಲರೂ ಕಾಯುತ್ತಿದ್ದರು
  • ಒಂದು ವರ್ಷ ತೆಗೆದುಕೊಂಡು ಯಶ್ ಗುಡ್‌ ನ್ಯೂಸ್‌ ನೀಡಿದ್ದಾರೆ.
ರಾಕಿಬಾಯ್ ಅಭಿಮಾನಿಗಳಿಗೆ ಗುಡ್‌ ನ್ಯೂಸ್..! 'ಯಶ್19' ಟೈಟಲ್ ಫಿಕ್ಸ್.. ಆದರೆ ಆ ವಿಚಾರದಲ್ಲಿ ಇನ್ನೂ ಸಸ್ಪೆನ್ಸ್ title=

Yash 19: ಕನ್ನಡದ ಸ್ಟಾರ್ ಹೀರೋ ಯಶ್ ಬಗ್ಗೆ ಈಗ ವಿಶೇಷ ಪರಿಚಯ ಅಗತ್ಯವಿಲ್ಲ. 'ಕೆಜಿಎಫ್' ಚಾಪ್ಟರ್ 1 ಮತ್ತು 2 ರೊಂದಿಗೆ ಇಡೀ ಭಾರತದ ತುಂಬೆಲ್ಲಾ ರಾಕಿ ಬಾಯ್ ಎಂದು ಕ್ರೇಜ್ ಪಡೆದುಕೊಂಡಿದ್ದಾರೆ.. ಆ ಸಿನಿಮಾ ಸೃಷ್ಟಿಸಿದ ಸೆನ್ಸೇಷನ್ ಅವರನ್ನು ಪ್ಯಾನ್ ಇಂಡಿಯಾ ಸ್ಟಾರ್ ಮಾಡಿತು. 

ಸದ್ಯ ಯಶ್ 19 ಚಿತ್ರದ ಅಪ್‌ಡೇಟ್‌ಗಾಗಿ ಎಲ್ಲರೂ ಕಾಯುತ್ತಿದ್ದರು... ಒಂದು ವರ್ಷ ತೆಗೆದುಕೊಂಡು ಯಶ್ ಗುಡ್‌ ನ್ಯೂಸ್‌ ನೀಡಿದ್ದಾರೆ.. ಹೌದು ಇತ್ತೀಚೆಗಷ್ಟೇ ಸಿನಿಮಾದ ಬಗ್ಗೆ ಮಾಹಿತಿ ನೀಡುವುದಾಗಿ ಅಭಿಮಾನಿಗಳಿಗೆ ಭರವಸೆ ನೀಡಿದ್ದರು.. 

ಇದನ್ನೂ ಓದಿ-BBK 10: ಬಿಗ್‌ಬಾಸ್‌ನಲ್ಲಿ ಈ ವಾರ ಯಾರೆಲ್ಲಾ ನಾಮಿನೇಟ್‌ ಆಗಿದ್ದಾರೆ? ಸ್ಪೆಷಲ್‌ ಅಧಿಕಾರ ಪಡೆದ ಸ್ನೇಹಿತ್!

ಅಂದಹಾಗೆ, ಇಂದು ತಮ್ಮ 19ನೇ ಚಿತ್ರದ ಬಗ್ಗೆ ಸಖತ್ ಅಪ್ ಡೇಟ್ ನೀಡಿದ್ದಾರೆ. 19 ಶೀರ್ಷಿಕೆಯನ್ನು ಘೋಷಿಸಲಿದ್ದೇನೆ ಎಂದು ಸ್ವತಃ ಯಶ್ ಇನ್ಸ್ಟಾಗ್ರಾಮ್ನಲ್ಲಿ ಬಹಿರಂಗಪಡಿಸುವುದರ ಜೊತೆಗೆ ದಿನಾಂಕವನ್ನು ನಿಗದಿ ಮಾಡಿದ್ದು...ಡಿಸೆಂಬರ್ 8 ರಂದು ಬೆಳಿಗ್ಗೆ 9:55 ಕ್ಕೆ ಟೈಟಲ್‌ನ್ನು ಪ್ರಕಟಿಸಲಾಗುವುದು ಎಂದು ತಿಳಿಸಲಾಗಿತ್ತು..

ಇದನ್ನೂ ಓದಿ-11 ಮಂದಿ ಜೊತೆ ಡೇಟಿಂಗ್ ಮಾಡಿದರೂ ಕೂಡಿ ಬಂದಿಲ್ಲ ಕಂಕಣ ಭಾಗ್ಯ ! 24ನೇ ವಯಸ್ಸಿನಲ್ಲಿಯೇ ತಾಯಿಯಾದರು ಈ ಖ್ಯಾತ ನಟಿ

ಆದ್ರೆ ಇದ್ದಕ್ಕಿದ್ದಂತೆ ಟೈಟಲ್ ಬಗ್ಗೆ ಅಪ್ಡೇಟ್ ಕೊಟ್ಟ ಯಶ್.. ನಿರ್ದೇಶಕ ಯಾರು? ಉಳಿದ ತಾರಾಗಣ ಮತ್ತು ತಂತ್ರಜ್ಞರ ಬಗ್ಗೆ ಯಾವುದೇ ಅಪ್‌ಡೇಟ್ ನೀಡಿಲ್ಲ. ಈ ನಡುವೆ ಯಶ್ ತಮ್ಮ ಮುಂದಿನ ಪ್ರಾಜೆಕ್ಟ್ ಅನ್ನು ಮಲಯಾಳಂ ಲೇಡಿ ಡೈರೆಕ್ಟರ್ ಗೀತು ಮೋಹನ್ ದಾಸ್ ಅವರಿಗೆ ಹಸ್ತಾಂತರಿಸಿದ್ದಾರೆ ಎಂಬ ಸುದ್ದಿ ಹಬ್ಬಿತ್ತು. ಈ ಬಗ್ಗೆ ಯಾವುದೇ ಅಧಿಕೃತ ಘೋಷಣೆಯಾಗಿಲ್ಲ. 

ಕೆವಿಎನ್ ಪ್ರೊಡಕ್ಷನ್ಸ್ ನಲ್ಲಿ ತಮ್ಮ ಚಿತ್ರ ಮೂಡಿಬರುತ್ತಿದೆ ಎಂದು ಟೈಟಲ್‌ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಆದರೆ ಇತರ ವಿಷಯಗಳು ಸಸ್ಪೆನ್ಸ್ ಆಗಿಯೇ ಉಳಿದಿವೆ. ಸೆನ್ಸೇಷನಲ್ ಡೈರೆಕ್ಟರ್ ಪ್ರಶಾಂತ್ ನೀಲ್ ಕಾಂಬಿನೇಶನ್ 'ಕೆಜಿಎಫ್ 2' ಅತಿ ಹೆಚ್ಚು ಕಲೆಕ್ಷನ್ ಮಾಡಿ ಭಾರತದಲ್ಲಿ ಮೂರನೇ ಅತಿ ಹೆಚ್ಚು ಗಳಿಕೆಯ ಚಿತ್ರವಾಯಿತು. ಹೀಗಾಗಿ ಯಶ್‌ ಮುಂದಿನ ಸಿನಿಮಾ ಆ ಮಟ್ಟದಲ್ಲಿರಲಿದೆಯೇ ಎಂಬುದು ಕುತೂಹಲ ಮೂಡಿಸಿದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://youtu.be/--phA9ji8NM

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News