BiggBoss: ಸಂಗೀತಾ ದೀ ಕೈಬಿಟ್ಟ ಪ್ರತಾಪ್!

BBK 10: ಹಿಂದಿನ ಎಪಿಸೋಡ್‌ನಲ್ಲಿ ನಮ್ರತಾ ಅವರು ವಿನಯ್ ಅವರನ್ನು ಆಟದಿಂದ ಕೈಬಿಟ್ಟಾಗಲೇ ಇಂಥದೊಂದು ಸೂಚನೆ ಕಾಣಿಸಿಕೊಂಡಿತ್ತು. ಈಗ ಅಂಥದ್ದೇ ಇನ್ನೊಂದು ಘಟನೆ ಬಿಗ್‌ಬಾಸ್ ಮನೆಯೊಳಗೆ ನಡೆದಿದೆ. 

Written by - Yashaswini V | Last Updated : Jan 12, 2024, 10:17 AM IST
  • ಬಿಗ್‌ಬಾಸ್ ಸ್ಪರ್ಧೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿಕೊಂಡವರಲ್ಲಿ ಸಂಗೀತಾ ಮತ್ತು ಪ್ರತಾಪ್ ಮಧ್ಯೆ ಪೈಪೋಟಿ ಇತ್ತು.
  • ನಿನ್ನೆ ಒಂದು ಟಾಸ್ಕ್‌ನಲ್ಲಿ ಗೆಲುವು ಕಂಡು ನಮ್ರತಾ ಕೂಡ ರೇಸ್‌ಗೆ ಬಂದಿದ್ದರು.
  • ಮೊದಲ ಕೆಲವು ಟಾಸ್ಕ್‌ಗಳಲ್ಲಿ ಉತ್ತಮವಾಗಿ ಆಡಿದ ವರ್ತೂರು ಸಂತೋಷ್ ಕೂಡ ಇನ್ನೂರರ ಗಡಿ ದಾಟಿದ್ದಾರೆ.
BiggBoss: ಸಂಗೀತಾ ದೀ ಕೈಬಿಟ್ಟ ಪ್ರತಾಪ್! title=

BiggBoss: ಫಿನಾಲೆ ಸಮೀಪಿಸುತ್ತಿದ್ದಂತೆಯೇ ಬಿಗ್‌ಬಾಸ್ ಮನೆಯೊಳಗಿನ ಸಂಬಂಧಗಳ ಬಣ್ಣಗಳೆಲ್ಲ ಮಾಸುತ್ತಿವೆ. ಗೆಲುವಿನ ಗುರಿಯೊಂದೇ ಎಲ್ಲರ ಕಣ್ಣಮುಂದೆ ಹೊಳೆಯುತ್ತಿದೆ. ಹಿಂದಿನ ಎಪಿಸೋಡ್‌ನಲ್ಲಿ ನಮ್ರತಾ ಅವರು ವಿನಯ್ ಅವರನ್ನು ಆಟದಿಂದ ಕೈಬಿಟ್ಟಾಗಲೇ ಇಂಥದೊಂದು ಸೂಚನೆ ಕಾಣಿಸಿಕೊಂಡಿತ್ತು. ಈಗ ಅಂಥದ್ದೇ ಇನ್ನೊಂದು ಘಟನೆ ಬಿಗ್‌ಬಾಸ್ ಮನೆಯೊಳಗೆ ನಡೆದಿದೆ. ಅದರ ಸೂಚನೆ JioCinema ಬಿಡುಗಡೆ ಮಾಡಿರುವ ಪ್ರೋಮೊದಲ್ಲಿ ಕಾಣಿಸಿಕೊಂಡಿದೆ. 

ಬಿಗ್‌ಬಾಸ್ ಸ್ಪರ್ಧೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿಕೊಂಡವರಲ್ಲಿ ಸಂಗೀತಾ ಮತ್ತು ಪ್ರತಾಪ್ ಮಧ್ಯೆ ಪೈಪೋಟಿ ಇತ್ತು. ನಿನ್ನೆ ಒಂದು ಟಾಸ್ಕ್‌ನಲ್ಲಿ ಗೆಲುವು ಕಂಡು ನಮ್ರತಾ ಕೂಡ ರೇಸ್‌ಗೆ ಬಂದಿದ್ದರು. ಮೊದಲ ಕೆಲವು ಟಾಸ್ಕ್‌ಗಳಲ್ಲಿ ಉತ್ತಮವಾಗಿ ಆಡಿದ ವರ್ತೂರು ಸಂತೋಷ್ ಕೂಡ ಇನ್ನೂರರ ಗಡಿ ದಾಟಿದ್ದಾರೆ. 

ಇದನ್ನೂ ಓದಿ- ಅವರ ಜೊತೆ ಮಲಗಿದ್ರೆ ಮಾತ್ರ ಸಿನಿಮಾದಲ್ಲಿ ಚಾನ್ಸ್‌ : ಬಿಗ್‌ಬಾಸ್‌ ಸ್ಪರ್ಧಿ ಶಾಕಿಂಗ್‌ ಹೇಳಿಕೆ

ಈ ಹಂತದಲ್ಲಿ ಪ್ರತಾಪ್ ಅವರಿಗೆ ತಮ್ಮ ಎದುರಾಳಿಗಳನ್ನು ಆಯ್ದುಕೊಳ್ಳುವ ಅಧಿಕಾರವನ್ನು ಬಿಗ್‌ಬಾಸ್ ನೀಡಿದ್ದಾರೆ. ಪ್ರತಾಪ್ ಸಂಗೀತಾ ಅವರನ್ನೂ ಆರಿಸಿಕೊಂಡಿದ್ದಾರೆ. ಆದರೆ ಮೊದಲ ಹಂತದಲ್ಲಿ ಯಾರನ್ನಾದರೂ ಹೊರಗಿಡುವ ಸಂದರ್ಭದಲ್ಲಿ ಸಂಗೀತಾ ಅವರನ್ನೇ ಆಟದಿಂದ ಹೊರಗಿಟ್ಟಿದ್ದು ಅಚ್ಚರಿ ಮೂಡಿಸಿದೆ. 

ಇದನ್ನೂ ಓದಿ- BBK 10 : ಸಂಗೀತಾ ಜೊತೆಗೆ ವಿನಯ್ ಪತ್ನಿ ರಹಸ್ಯ ಮಾತು..! ಗಂಡನ ತಂಟೆಗೆ ಬರ್ಬೇಡ ಅಂತ ವಾರ್ನಿಂಗ್‌ ಕೊಟ್ರಾ..?

ಸಂಗೀತಾ ದೀ ಎಂದು ಯಾವಾಗಲೂ ಜೊತೆಗಿರುತ್ತಿದ್ದ ಪ್ರತಾಪ್ ಅವರೇ ಅವರನ್ನು ಹೊರಗಿಟ್ಟಿದ್ದು ಸಂಗೀತಾ ಅವರನ್ನು ದಿಗ್ಭ್ರಮೆಗೊಳಿಸಿದೆ. "ಇನ್ನೂ ಅವನನ್ನು ಬೆಂಬಲಿಸುತ್ತ ಬಂದೆನಲ್ಲ, ನಾನೆಂಥ ದಡ್ಡಿ" ಎಂದು ಅವರು ತಮ್ಮನ್ನು ತಾವೇ ಹಳಿದುಕೊಂಡಿದ್ದಾರೆ. ಬಿಗ್‌ಬಾಸ್ ಕನ್ನಡ 24 ಗಂಟೆ ನೇರಪ್ರಸಾರವನ್ನು JioCinemaದಲ್ಲಿ ಉಚಿತವಾಗಿ ನೋಡಿ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News