‘ಡಿ ಬಾಸ್’ & ‘ಕಿಚ್ಚ’ ಮತ್ತೆ ಒಂದಾಗ್ತಾರೆ, ಒಂದಾಗ್ಲೇಬೇಕು! ಒಟ್ಟಿಗೆ ಸಿನಿಮಾ ಮಾಡ್ತಾರಾ?

ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ಕಿಚ್ಚ ಸುದೀಪ್ ಇಬ್ಬರೂ ಸೇರಿ ಕುಚಿಕು ಗೆಳೆಯರಂತೆ ಪ್ಯಾನ್ ಇಂಡಿಯಾ ಸಿನಿಮಾ ಮಾಡಿ ಎಂದು ಸೋಶಿಯಲ್ ಮೀಡಿಯಾಗಳಲ್ಲಿ ಅಭಿಮಾನಿಗಳು ಮನವಿ ಪೋಸ್ಟ್‍ಗಳನ್ನು ಹಾಕುತ್ತಿದ್ದಾರೆ.

Written by - YASHODHA POOJARI | Edited by - Puttaraj K Alur | Last Updated : Nov 22, 2022, 02:48 PM IST
  • ಚಾಲೆಂಜಿಂಗ್ ಸ್ಟಾರ್ ಮತ್ತು ಕಿಚ್ಚ ಸುದೀಪ್ ಮುಂದೆ ಬಹುದೊಡ್ಡ ಬೇಡಿಕೆ ಇಟ್ಟ ಅಭಿಮಾನಿಗಳು
  • ಮೊದಲಿನಂತೆ ಒಂದಾಗಿ ಪ್ಯಾನ್ ಇಂಡಿಯಾ ಸಿನಿಮಾ ಮಾಡುವಂತೆ ನೂರಾರು ಅಭಿಮಾನಿಗಳ ಮನವಿ
  • ಅಭಿಮಾನಿಗಳ ಆಸೆ ಈಡೇರಿಸುತ್ತಾರಾ ಡಿ ಬಾಸ್ ದರ್ಶನ್ ಮತ್ತು ಕಿಚ್ಚ ಸುದೀಪ್?
‘ಡಿ ಬಾಸ್’ & ‘ಕಿಚ್ಚ’ ಮತ್ತೆ ಒಂದಾಗ್ತಾರೆ, ಒಂದಾಗ್ಲೇಬೇಕು! ಒಟ್ಟಿಗೆ ಸಿನಿಮಾ ಮಾಡ್ತಾರಾ? title=
ಸ್ಟಾರ್ ನಟರಿಗೆ ಅಭಿಮಾನಿಗಳ ಮನವಿ

ಬೆಂಗಳೂರು: ‘ಡಿ ಬಾಸ್’ ಖ್ಯಾತಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ಕಿಚ್ಚ ಸುದೀಪ್‍ಗೆ ಅಭಿಮಾನಿಗಳ ಬಹುದೊಡ್ಡ ಸಾಗರವೇ ಇದೆ. ಕರುನಾಡಿನ ಕಿಚ್ಚ ಅಭಿಮಾನಿಗಳನ್ನು ಫ್ರೆಂಡ್ಸ್ ಅಂದ್ರೆ, ದರ್ಶನ್ ಅಭಿಮಾನಿ ದೇವರುಗಳನ್ನು ಸೆಲೆಬ್ರಿಟಿಗಳು ಅಂತಾ ಕರೆಯುತ್ತಾರೆ. ಈ ಇಬ್ಬರೂ ಸ್ಟಾರ್‍ಗಳನ್ನು ಅಭಿಮಾನಿಗಳು ದೇವರಂತೆ ಪ್ರೀತಿಸುವುದರ ಜೊತೆಗೆ ಆರಾಧಿಸುತ್ತಾರೆ.

ಈಗ ಏನಪ್ಪಾ ಮ್ಯಾಟರ್ ಅಂದ್ರೆ… ಈ ಇಬ್ಬರೂ ಸ್ಟಾರ್‍ಗಳದ ದೊಡ್ಡ ಅಭಿಮಾನಿ ಬಳಗವು ದರ್ಶನ್ ಮತ್ತು ಸುದೀಪ್ ಮುಂದೆ ಒಂದು ಬೇಡಿಕೆ ಇಟ್ಟಿದ್ದಾರೆ. ಅದೇನಪ್ಪ ಅಂದ್ರೆ, ನೀವು ಇಬ್ಬರೂ ಮೊದಲು ಇದ್ದ ಹಾಗೇ ಮತ್ತೇ ಒಂದಾಗಿ ಅಂತಾ ಮನವಿ ಮಾಡಿಕೊಳ್ಳುತ್ತಿದ್ದಾರೆ. ಅಷ್ಟೇ ಅಲ್ಲ ಇಬ್ಬರೂ ಸೇರಿ ಕುಚಿಕು ಗೆಳೆಯರಂತೆ ಪ್ಯಾನ್ ಇಂಡಿಯಾ ಸಿನಿಮಾ ಮಾಡಿ ಎಂದು ಸೋಶಿಯಲ್ ಮೀಡಿಯಾಗಳಲ್ಲಿ ಮನವಿ ಪೋಸ್ಟ್‍ಗಳನ್ನು ಹಾಕುತ್ತಿದ್ದಾರೆ.

ಇದನ್ನೂ ಓದಿ: ರಿಲೀಸ್‌ಗೂ ಮೊದಲೇ ಸ್ಯಾಂಡಲ್‌ವುಡ್‌ನಲ್ಲಿ ಇಶಾನ್ ಕಮಾಲ್, ಸ್ಟಾರ್ ನಿರ್ದೇಶಕರಿಂದ ಆಫರ್ ಮೇಲೆ ಆಫರ್

‘ಡಿ ಬಾಸ್’ ದರ್ಶನ್ ನಟನೆಯ ಬಹು ನಿರೀಕ್ಷೆಯ ‘ಕ್ರಾಂತಿ’ ಸಿನಿಮಾ ಮುಂದಿನ ವರ್ಷ ಜನವರಿ 26ಕ್ಕೆ ರಿಲೀಸ್ ಆಗುತ್ತಿದೆ. ಈಗಾಗಲೇ ‘ಡಿ ಬಾಸ್’ ಕೂಡ ಸಿನಿಮಾದ ಪ್ರಚಾರದಲ್ಲಿ ಬ್ಯುಸಿ ಆಗಿದ್ದಾರೆ. ಇನ್ನು ಕಿಚ್ಚ ಸುದೀಪ್ ‘ವಿಕ್ರಾಂತ್  ರೋಣ’ ಆದ ಬಳಿಕ ಸ್ವಲ್ಪ ಬಿಡುವು ಮಾಡಿಕೊಂಡಿದ್ದು, ಫ್ಯಾಮಿಲಿ ಜೊತೆ ಕಾಲ ಕಳೆಯುತ್ತಿದ್ದಾರೆ. ಈ ನಡುವೆ ಅಭಿಮಾನಿಗಳು ಬಹುದೊಡ್ಡ ಬೇಡಿಕೆಯನ್ನೇ ಇಬ್ಬರು ನಾಯಕರ ಮುಂದೆ ಇಟ್ಟಿದ್ದಾರೆ.

ಅಭಿಮಾನಿಗಳ ಆಸೆಯನ್ನು ಈಡೇರುಸುವ ಮನಸ್ಸು ಕಿಚ್ಚ ಸುದೀಪ್ ಮತ್ತು ಚಾಲೆಂಜಿಂಗ್ ಸ್ಟಾರ್ ದರ್ಶನ್‍ಗೆ ಆದಷ್ಟು ಬೇಗ ಬರಲಿ. ಈ ಇಬ್ಬರೂ ಸ್ಟಾರ್ ಹೀರೋಗಳು ಒಂದಾದ್ರೆ ಚಂದನವನ ಇನ್ನಷ್ಟು ಎತ್ತರಕ್ಕೆ ಬೆಳೆಯೋದ್ರಲ್ಲಿ ಯಾವುದೇ ಅನುಮಾನವೇ ಇಲ್ಲ. ಆದಷ್ಟು ಶೀಘ್ರವೇ ಕೋಟ್ಯಂತರ ಅಭಿಮಾನಿಗಳ ಆಸೆಯನ್ನು ಈ ಸ್ಟಾರ್ ನಟರು ಈಡೇರಿಸಲಿ ಅನ್ನೋದ ನಮ್ಮ ಅಭಿಲಾಷೆಯಾಗಿದೆ.

ಇದನ್ನೂ ಓದಿ: Raj Kundra: ಈ ನಗರದ ಡೀಲಕ್ಸ್ ಹೋಟೆಲ್‌ಗಳಲ್ಲಿ ಬ್ಲೂಫಿಲಂ ತೆಗೆಯುತ್ತಿದ್ದ ರಾಜ್‌ ಕುಂದ್ರಾ.!

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News