Drugs Case: ಕಾಮಿಡಿಯನ್ Bharti Singh ಪತಿ Harsh Limbachiyaaನನ್ನು ಬಂಧಿಸಿದ NCB

ಭಾರತಿ ಸಿಂಗ್ ಅವರನ್ನು NCB ಶನಿವಾರ ವಶಕ್ಕೆ ಪಡೆದುಕೊಂಡಿತ್ತು. ಭಾರತಿ ಸಿಂಗ್ ಮನೆ ಮೇಲೆ ನಡೆಸಲಾಗಿದ್ದ ದಾಳಿಯಲ್ಲಿ NCB ಅಧಿಕಾರಿಗಳು ಗಾಂಜಾ ವಶಕ್ಕೆ ಪಡೆದುಕೊಂಡಿದ್ದರು. ಡ್ರಗ್ಸ್ ಪೆಡ್ಲರ್ ನಿಂದ ಸಿಕ್ಕ ಮಾಹಿತಿಯ ಮೇರೆಗೆ NCB ಭಾರತಿ ಸಿಂಗ್ ಮನೆಯ ಮೇಲೆ ದಾಳಿ ನಡೆಸಿತ್ತು.

Last Updated : Nov 22, 2020, 09:48 AM IST
  • ಹಾಸ್ಯ ಕಲಾವಿದೆ ಭಾರತಿ ಸಿಂಗ್ ಪತಿ ಹರ್ಷ್ ಲಿಂಬಾಚಿಯಾನನ್ನು ಬಂಧಿಸಿದ NCB.
  • ಶನಿವಾರ ಭಾರತಿ ಸಿಂಗ್ ಳನ್ನು ವಶಕ್ಕೆ ಪಡೆದಿದ್ದ NCB.
  • ಭಾರತಿ ಸಿಂಗ್ ಮನೆಯಲ್ಲಿ NCB ದಾಳಿಯ ವೇಳೆ ಗಾಂಜಾ ಪತ್ತೆಯಾಗಿತ್ತು.
Drugs Case: ಕಾಮಿಡಿಯನ್ Bharti Singh ಪತಿ Harsh Limbachiyaaನನ್ನು ಬಂಧಿಸಿದ NCB title=

ಮುಂಬೈ: ಖ್ಯಾತ ಹಾಸ್ಯ ಕಲಾವಿದೆ ಭಾರತಿ ಸಿಂಗ್ (Bharti Singh) ಅವರ ಪತಿ ಹರ್ಷ್ ಲಿಂಬಾಚಿಯಾನನ್ನು ಕೂಡ NCB ಅಧಿಕಾರಿಗಳು ಭಾನುವಾರ ಬಂಧಿಸಿದ್ದಾರೆ. ಭಾರತಿ ಸಿಂಗ್ ಅವರ ಪತಿ ಹರ್ಷ್ ಅವರನ್ನು NCB ಅಧಿಕಾರಿಗಳು ರಾತ್ರಿಯಿಡಿ ವಿಚಾರಣೆಗೆ ಒಳಪಡಿಸಿದ್ದಾರೆ. ಇಂದು ಮುಂಬೈನ NDPS ನ್ಯಾಯಾಲಯದಲ್ಲಿ ಭಾರತಿ ಸಿಂಗ್ ಅವರನ್ನು ಹಾಜರುಪಡಿಸಲಾಗುವುದು. ಇದಕ್ಕೂ ಮೊದಲು ಭಾರತಿ ಸಿಂಗ್ ಅವರ ವೈದ್ಯಕೀಯ ಪರೀಕ್ಷೆ ನಡೆಸಲಾಗುವುದು ಬಳಿಕ ನೇರವಾಗಿ ನ್ಯಾಯಾಲಯಕ್ಕೆ ಕರೆದೊಯ್ಯಲಾಗುವುದು.

ಇದನ್ನು ಓದಿ- ಖ್ಯಾತ Bollywood ನಟ Arjun Rampal ಮನೆ ಮೇಲೆ NCB ದಾಳಿ, ಡ್ರೈವರ್ ಬಂಧನ

ಭಾರತಿ ಸಿಂಗ್ ಅವರನ್ನು NCB ಶನಿವಾರ ವಶಕ್ಕೆ ಪಡೆದುಕೊಂಡಿತ್ತು. ಭಾರತಿ ಸಿಂಗ್ ಮನೆ ಮೇಲೆ ನಡೆಸಲಾಗಿದ್ದ ದಾಳಿಯಲ್ಲಿ NCB ಅಧಿಕಾರಿಗಳು ಗಾಂಜಾ ವಶಕ್ಕೆ ಪಡೆದುಕೊಂಡಿದ್ದರು. ಡ್ರಗ್ಸ್ ಪೆಡ್ಲರ್ ನಿಂದ ಸಿಕ್ಕ ಮಾಹಿತಿಯ ಮೇರೆಗೆ NCB ಭಾರತಿ ಸಿಂಗ್ ಮನೆಯ ಮೇಲೆ ದಾಳಿ ನಡೆಸಿತ್ತು.

ಇದನ್ನು ಓದಿ- ಸುಶಾಂತ್ ಸಿಂಗ್ ರಜಪೂತ್ ಅವರ ಸಹೋದರಿಯ ಟ್ವಿಟರ್, ಇನ್ಸ್ಟಾಗ್ರಾಮ್ ಖಾತೆ ನಿಷ್ಕ್ರಿಯ..!

ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ (Sushant Singh Rajput) ಸಾವು ಪ್ರಕರಣದಲ್ಲಿ ಪ್ರಾರಂಭವಾದ ತನಿಖೆಯಲ್ಲಿ ಡ್ರಗ್ಸ್ ಆಂಗಲ್ ಹೊರಬಂದಾಗಿನಿಂದ ಎನ್‌ಸಿಬಿ ಈ ದಾಳಿಗಳನ್ನು  ನಡೆಸುತ್ತಿದೆ. ಅನೇಕ ಬಾಲಿವುಡ್ ತಾರೆಯರನ್ನು ವಿಚಾರಣೆಗೊಳಪಡಿಸಲಾಗಿದೆ ಮತ್ತು ಈಗ ತನಿಖೆಯ ಕೊಂಡಿಗಳು ಭಾರತಿ ಸಿಂಗ್ ಮತ್ತು ಅವರ ಪತಿ ಹರ್ಷ್ ಲಿಂಬಾಚಿಯಾ ಅವರನ್ನು ತಲುಪಿದೆ.

ಇದನ್ನು ಓದಿ-Drugs Case: ಬಾಲಿವುಡ್ ನಲ್ಲಿ ಡ್ರಗ್ಸ್ ಕುರಿತು ನೋವು ಹೊರಹಾಕಿದ Akshay ಕುಮಾರ್ ಹೇಳಿದ್ದೇನು?

ಕಳೆದ ಒಂದು ತಿಂಗಳಲ್ಲಿ ಎನ್‌ಸಿಬಿ ತಂಡವು 4-5  ದೊಡ್ಡ ದೊಡ್ಡ ಡ್ರಗ್ಸ್ ಪೆಡ್ಲರ್ ಗಳ ಮೇಲೆ ತನ್ನ ಪಟ್ಟು ಬಿಗಿಗೊಳಿಸಿದೆ ಎಂದು ಹೇಳಲಾಗುತ್ತಿದೆ. ಈ ಡ್ರಗ್ಸ್ ಪೆಡ್ಲರ್ ಗಳನ್ನು  ಅಂಧೇರಿ ಮತ್ತು ಬಾಂದ್ರಾ ನಡುವೆ NCB ಬಲೆಗೆ ಸಿಕ್ಕಿಬಿದ್ದಿದ್ದುಅವರಿಂದ ಮಾಹಿತಿ ಪಡೆದ ನಂತರ ಅರ್ಜುನ್ ರಾಂಪಾಲ್ ಅವರನ್ನೂ ಪ್ರಶ್ನಿಸಲಾಗಿದೆ.  ಈ ಡ್ರಗ್ಸ್ ಪೆಡ್ಲರ್ ಗಳ ಜೊತೆಗೆ ಭಾರತಿ ಹಾಗೂ ಹರ್ಷ್ ಯಾವ ರೀತಿ ಸಂಪರ್ಕ ಹೊಂದಿದ್ದಾರೆ ಎಂಬುದರ ತನಿಖೆ NCB ಅಧಿಕಾರಿಗಳು ನಡೆಸಲಿದ್ದಾರೆ.

Trending News