Disha Patani Birthday: 'ಮುದಿ ಹಿರೋಗಳ ಜೊತೆ ಭಯಂಕರ ಕಾಣಿಸುತ್ತಿ, ಕೇವಲ #Tiger ಜೊತೆಗೆ ನಟಿಸು'

Happy Birthday Disha Patani - ಚಿತ್ರ ವಿಮರ್ಶಕ ಹಾಗೂ ನಟ ಕಮಾಲ್ ಆರ್. ಖಾನ್, ಖ್ಯಾತ ಬಾಲಿವುಡ್ (Bollywood) ನಟಿ ದಿಶಾ ಪಾಟ್ನಿಗೆ ಅವಳ ಹುಟ್ಟುಹಬ್ಬಕ್ಕೆ ಶುಭಾಶಯಗಳನ್ನು ಕೋರಿದ್ದಾರೆ. ಜೊತೆಗೆ ಸಹ ಕಲಾವಿದರ ಕುರಿತು ದಿಶಾಗೆ ಸಲಹೆ ನೀಡಿರುವ ಕಮಾಲ್ ಖಾನ್, ಮತ್ತೊಮ್ಮೆ ಪರೋಕ್ಷವಾಗಿ ಸಲ್ಮಾನ್ ಅಭಿನಯದ 'ರಾಧೇ: ದಿ ಮೋಸ್ಟ ವಾಂಟೆಡ್ ಭಾಯಿ' ಚಿತ್ರದ ಕುರಿತು ಟಿಪ್ಪಣಿಯೊಂದನ್ನು ಕೂಡ ಮಾಡಿದ್ದಾರೆ.

Written by - Nitin Tabib | Last Updated : Jun 13, 2021, 02:05 PM IST
  • ಖ್ಯಾತ ಬಾಲಿವುಡ್ ನಟಿ ದಿಶಾ ಪಾಟ್ನಿ ಇಂದು ತಮ್ಮ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ.
  • ನಟಿಗೆ ಶುಭಕೋರಿರುವ ಕಮಾಲ್ ಆರ್. ಖಾನ್, ಸಲಹೆ ಕೂಡ ನೀಡಿದ್ದಾರೆ.
  • 'ಮುದಿ ಹಿರೋಗಳ ಜೊತೆಗೆ ತುಂಬಾ ಭಯಂಕರ ಕಾಣಿಸುತ್ತಿ, ಕೇವಲ ಟೈಗರ್ ಜೊತೆಗೆ ಮಾತ್ರ ನಟಿಸು' ಎಂದ ಕಮಾಲ್.
Disha Patani Birthday: 'ಮುದಿ ಹಿರೋಗಳ ಜೊತೆ ಭಯಂಕರ ಕಾಣಿಸುತ್ತಿ, ಕೇವಲ #Tiger ಜೊತೆಗೆ ನಟಿಸು' title=
Kamal R Khan Controversial Tweet (File Photo)

ಮುಂಬೈ: Happy Birthday Disha Patani - ಖ್ಯಾತ ಬಾಲಿವುಡ್ ನಟಿ ದಿಶಾ ಪಾಟ್ನಿ (Disha Patani) ಇಂದು ತಮ್ಮ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ದಿವಂಗತ ಬಾಲಿವುಡ್ ನಟ ಸುಶಾಂತ್ ಸಿಂಗ್ ರಾಜ್ಪುತ್ ಅಭಿನಯದ 'ಧೋನಿ: ದಿ ಅನ್ಟೋಲ್ಡ್ ಸ್ಟೋರಿ' ಮೂಲಕ ಬಾಲಿವುಡ್ ಗೆ ಪದಾರ್ಪಣೆ ಮಾಡಿದ್ದಾರೆ. ಹುಟ್ಟುಹಬ್ಬದ (Disha Patani Birthday) ಅಂಗವಾಗಿ ನಟಿಗೆ ಎಲ್ಲಾ ಕಡೆಗಳಿಂದ ಶುಭಾಷಯಗಳ ಮಹಾಪೂರವೇ ಹರಿದುಬಂದಿದೆ. ಹಲವು ಸೆಲಿಬ್ರಿಟಿಗಳು ಸಾಮಾಜಿಕ ಮಾಧ್ಯಮಗಳ ಮೂಲಕ ದಿಶಾಗೆ ಶುಭಾಷಯಗಳನ್ನು ಕೋರುತ್ತಿದ್ದಾರೆ. ಚಿತ್ರ ವಿಮರ್ಶಕ ಹಾಗೂ ನಟ ಕಮಾಲ್ ಆರ್. ಖಾನ್ (Film Critic And Actor Kamaal R. Khan), ಖ್ಯಾತ ಬಾಲಿವುಡ್ ನಟಿ ದಿಶಾ ಪಾಟ್ನಿಗೆ ಅವಳ ಹುಟ್ಟುಹಬ್ಬಕ್ಕೆ ಶುಭಾಶಯಗಳನ್ನು ಕೋರಿದ್ದಾರೆ. ಜೊತೆಗೆ ಸಹ ಕಲಾವಿದರ ಕುರಿತು ದಿಶಾಗೆ ಸಲಹೆ ನೀಡಿರುವ ಕಮಾಲ್ ಖಾನ್, ಮತ್ತೊಮ್ಮೆ ಪರೋಕ್ಷವಾಗಿ ಸಲ್ಮಾನ್ ಅಭಿನಯದ 'ರಾಧೇ: ಯುವರ್ ಮೋಸ್ಟ ವಾಂಟೆಡ್ ಭಾಯಿ'  (Radhe: Your Most Wanted Bhai)ಚಿತ್ರದ ಕುರಿತು ಟಿಪ್ಪಣಿಯೊಂದನ್ನು ಕೂಡ ಮಾಡಿದ್ದಾರೆ.

ತನ್ನ ಟ್ವೀಟ್ ನಲ್ಲಿ ಕಮಾಲ್ ರಾಶೀದ್ ಖಾನ, ದಿಶಾ ಪಾಟ್ನಿಗೆ 'ಬಾಗಿ-2' (Baaghi 2) ಸಹ ಕಲಾವಿದ ಹಾಗೂ ರೂಮರ್ಡ್ ಬಾಯ್ಫ್ರೆಂಡ್ ಎನ್ನಲಾಗುವ ಟೈಗರ್ ಶ್ರಾಫ್ (Tiger Shroff) ಕುರಿತು ಕೂಡ ಸಂದೇಶ ಮಾಡಿದ್ದಾರೆ, ಈ ಕುರಿತು ತನ್ನ ಟ್ವೀಟ್ ನಲ್ಲಿ ಬರೆದಿಕೊಂಡಿರುವ ಕಮಾಲ್, 'ಡಿಯರ್ #ದಿಶಾಪತಾನಹಿ @ದಿಶಾ ಪಾಟ್ನಿ, ನಿಮಗೆ ಹುಟ್ಟುಹಬ್ಬದ ತುಂಬಾ ಶುಭಾಷಯಗಳು.  ನೀವು ಮುದಿ ಹಿರೋಗಳ ಜೊತೆಗೆ ತುಂಬಾ ಭಯಂಕರ ಕಾನಿಸುತ್ತಿರಿ. ಹೀಗಾಗಿ ಕೇವಲ ಟೈಗರ್ ಶ್ರಾಫ್ ಜೊತೆಗೆ ಮಾತ್ರ ನಟಿಸಿ' ಎಂದಿದ್ದಾರೆ. ಆದರೆ, ತಮ್ಮ ಈ ಟ್ವೀಟ್ ನಲ್ಲಿ ಕಮಾಲ್ ಆರ್. ಖಾನ್ (Kamal R. Khan), ಟೈಗರ್ ಶ್ರಾಫ್ ಹಾಗೂ ದಿಶಾ ಪಾಟ್ನಿಯನ್ನು ಹೊರತುಪಡಿಸಿ ಬೇರೆ ಯಾವುದೇ ನಟರ ಹೆಸರನ್ನು ಉಲ್ಲೇಖಿಸಿಲ್ಲ.

ಇದನ್ನೂ ಓದಿ-ರಿಲೀಸ್ ಆಗುತ್ತಿದ್ದಂತೆ ಸದ್ದು ಮಾಡುತ್ತಿದೆ ಸುಶಾಂತ್ ಸಿಂಗ್ ರಜಪೂತ್ ಜೀವನಾಧಾರಿತ ಚಿತ್ರ Nyay : The Justice ಟ್ರೇಲರ್

ಆದರೆ ನೆಟ್ಟಿಗರು ಮಾತ್ರ ಪ್ರತಿ ಬಾರಿಯಂತೆ ಈ ಬಾರಿಯೂ ಕೂಡ ಕಮಾಲ್ ಖಾನ್ ಪರೋಕ್ಷವಾಗಿ ಸಲ್ಮಾನ್ ಖಾನ್ (Salman Khan) ಅವರನ್ನು ಗುರಿಯಾಗಿಸಿದ್ದಾರೆ ಎಂದು ಭಾವಿಸುತ್ತಿದ್ದಾರೆ. ಇದಕ್ಕೆ ಕಾರಣ ದಿಶಾ ಪಾಟ್ನಿ ಅವರ ಇತ್ತೀಚೆಗೆ ಬಿಡುಗಡೆಯಾದ 'ರಾಧೇ: ಯುವರ್ ಮೋಸ್ಟ ವಾಂಟೆಡ್ ಭಾಯಿ' ಚಿತ್ರ. ಈ ಚಿತ್ರದಲ್ಲಿ ದಿಶಾ ಸಲ್ಮಾನ್ ಖಾನ್ ಜೊತೆಗೆ ಕಾಣಿಸಿಕೊಂಡಿದ್ದರು. ಈ ಚಿತ್ರದ ಕುರಿತು ವಿಮರ್ಶಾತ್ಮಕ ಟಿಪ್ಪಣಿ ಮಾಡಿದ್ದ ಕಮಾಲ್ ಖಾನ್, ನಟರ ಕುರಿತು ಕೂಡ ಟ್ವೀಟ್ ಮಾಡಿದ್ದರು. ಇದಾದ ಬಳಿಕ ಸಲ್ಮಾನ್ ಖಾನ್, ಕಮಾಲ್ ಖಾನ್ ಅವರ ಮೇಲೆ ಮಾನನಷ್ಟ ಮೊಕದ್ದಮೆ ಹೂಡಿದ್ದರು.

ಇದನ್ನೂ ಓದಿ-The Kapil Sharma show ನಲ್ಲಿ ಮತ್ತೆ ಕಾಣಿಸಿಕೊಳ್ಳಲಿದ್ದಾರೆಯೇ ಸುನಿಲ್ ಗ್ರೋವರ್?

ಇದಕ್ಕೂ ಮೊದಲು ಕೂಡ ಟ್ವೀಟ್ ವೊಂದನ್ನು ಮಾಡಿದ್ದ ಕಮಾಲ್ ಆರ್. ಖಾನ್, ಸುಶಾಂತ್ ಸಿಂಗ್ ರಾಜ್ಪುತ್ (Sushant Singh Rajput) ಅವರನ್ನು ನೆನೆಸಿಕೊಂಡು, ಬಾಲಿವುಡ್ ಮೇಲೆ ಟ್ವೀಟ್ ಮಾಡಿದ್ದರು. ತಮ್ಮ ಟ್ವೀಟ್ ನಲ್ಲಿ ಬರೆದುಕೊಂಡಿದ್ದ ಕಮಾಲ್ ಖಾನ್, 'ಬಾಲಿವುಡ್ ರೌಡಿ ಭಾಯಿ, ನಾನು ಖಂಡಿತ  'ಔಟ್ ಸೈಡರ್' ಆಗಿದ್ದೇನೆ, ಆದರೆ ಎರಡನೇ ಸುಶಾಂತ್ ಸಿಂಗ್ ರಾಜ್ಪುತ್ ಅಲ್ಲವೇ ಅಲ್ಲ, ಇದು 100 ಪರ್ಸೆಂಟ್ ತಿಳಿದುಕೋ. ನಾನು ಸಾಯುವುದು ಇಲ್ಲ, ಬಾಲಿವುಡ್ ಗೆಲ್ಲುವುದು ಇಲ್ಲ. ಈ ಬಾರಿ ಬಾಲಿವುಡ್ ಸೋಲಲಿದೆ. ಏಕೆಂದರೆ ಈ ಬಾರಿ ಬಾಲಿವುಡ್ (Bollywood) ತಪ್ಪು ವ್ಯಕ್ತಿಯ ಜೊತೆಗೆ ಪಂಗಾಗಿಳಿದಿದೆ' ಎಂದಿದ್ದರು.

ಇದನ್ನೂ ಓದಿ-ನಟಿ ಕತ್ರಿನಾ ಕೈಫ್ ಡೇಟಿಂಗ್ ಮಾಡುತ್ತಿರುವ ಆ ನಟ ಯಾರು ಗೊತ್ತಾ?

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News