"ಮಿಚೆಲ್‌ ಮಾರ್ಷ್ ಟ್ರೋಫಿಯ ಮೇಲೆ ಕಾಲುಗಳನ್ನು ಇಡುವುದು ಅಗೌರವವಾಗಿರಲಿಲ್ಲ; ಅದು ಕೇವಲ ಅವರ ವಿಶ್ರಾಂತಿ ಆಗಿತ್ತು": ಚೇತನ್‌ ಅಹಿಂಸಾ!

Chethan Ahimsa: ವಿಶ್ವಕಪ್ ಮೇಲೆ ಕಾಲಿಟ್ಟು ಉದ್ದಟತನ ತೋರಿಸಿದ್ದರ ಬಗ್ಗೆ  ಚೇತನ್ ಅಹಿಂಸಾ ಮಿಚೆಲ್ ಮಾರ್ಷ್ ಪರ ಅಭಿಪ್ರಾಯ ವ್ಯಕ್ತಪಡಿಸಿ ಮತ್ತೆ ಸುದ್ದಿಯಾಗಿದ್ದಾರೆ.

Written by - Zee Kannada News Desk | Last Updated : Nov 22, 2023, 12:55 PM IST
  • ಭಾರತ ತಂಡ ಈ ವರ್ಷ ಟ್ರೋಫಿ ಎತ್ತಿ ಹಿಡಿಯಲಿಲ್ಲ ಎಂದು ಅಸಂಖ್ಯಾತ ಅಭಿಮಾನಿಗಳು ಬೇಸರಗೊಂಡಿದ್ದರು.
  • ಟ್ರೋಫಿಯನ್ನು ಮಿಚೆಲ್ ಮಾರ್ಷ್ ಕಾಲಡಿ ಇಟ್ಟುಕೊಂಡು ವಿಶ್ರಾಂತಿ ಪಡೆಯುವುದು ಸರಿಯಲ್ಲ. ಆ ಟ್ರೋಫಿಗೆ ಗೌರವ ಕೊಡುತ್ತಿಲ್ಲ ಎಂದು ನೆಟ್ಟಿಗರು ಆಕ್ರೋಶಗೊಂಡಿದ್ದಾರೆ.
  • ವಿಶ್ವಕಪ್ ಮೇಲೆ ಕಾಲಿಟ್ಟು ಉದ್ದಟತನ ತೋರಿಸಿದ್ದರ ಬಗ್ಗೆ ಕೂಡ ಚೇತನ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿ ಮತ್ತೆ ಸುದ್ದಿಯಾಗಿದ್ದಾರೆ.
"ಮಿಚೆಲ್‌ ಮಾರ್ಷ್ ಟ್ರೋಫಿಯ ಮೇಲೆ ಕಾಲುಗಳನ್ನು ಇಡುವುದು ಅಗೌರವವಾಗಿರಲಿಲ್ಲ; ಅದು ಕೇವಲ ಅವರ ವಿಶ್ರಾಂತಿ ಆಗಿತ್ತು": ಚೇತನ್‌ ಅಹಿಂಸಾ! title=

Chethan Ahimsa Posts About Mitchell Marsh: ಕ್ರಿಕೆಟ್ ವಿಶ್ವಕಪ್ ಬಹಳ ಪ್ರತಿಷ್ಠಿತ ಕ್ರೀಡಾಕೂಟವಾಗಿದ್ದು, 10 ದೇಶದ ತಂಡಗಳು ಇದರಲ್ಲಿ ಭಾಗಿ ಆಗಿದ್ದವು. ಹಲವು ವರ್ಷಗಳಿಂದ 4 ವರ್ಷಕ್ಕೊಮ್ಮೆ ಈ ಟೂರ್ನಿ ನಡೆಯುತ್ತಿದ್ದು, ವಿಶ್ವಕಪ್ ಗೆಲ್ಲಲು ಸಾಧ್ಯವಾಗದೇ ಸಾಕಷ್ಟು ತಂಡಗಳು ಪರಿತಪಿಸುತ್ತಿವೆ. ಭಾರತ ತಂಡ ಈ ವರ್ಷ ಟ್ರೋಫಿ ಎತ್ತಿ ಹಿಡಿಯಲಿಲ್ಲ ಎಂದು ಅಸಂಖ್ಯಾತ ಅಭಿಮಾನಿಗಳು ಬೇಸರಗೊಂಡಿದ್ದರು. ಆಸ್ಟ್ರೇಲಿಯಾದ ಆಟಗಾರ ಮಿಚೆಲ್ ಮಾರ್ಷ್ ತಮ್ಮ ತಂಡ ಗೆದ್ದ  ಬಳಿಕ ಡ್ರೆಸ್ಸಿಂಗ್ ರೂಮ್‌ನಲ್ಲಿ ಮಾರ್ಷ್, ತನಗೆ ಸಿಕ್ಕ ಮೆಡೆಲ್ ಅನ್ನು ಕೊರಳಿಗೆ ಹಾಕಿಕೊಂಡು ವಿಶ್ವಕಪ್ ಮೇಲೆ ಕಾಲು ಚಾಚಿ ಕುಳಿತ ಫೋಟೊ ವೈರಲ್ ಆಗಿದೆ.

ಅಂತಹ ಟ್ರೋಫಿಯನ್ನು ಮಿಚೆಲ್ ಮಾರ್ಷ್ ಕಾಲಡಿ ಇಟ್ಟುಕೊಂಡು ವಿಶ್ರಾಂತಿ ಪಡೆಯುವುದು ಸರಿಯಲ್ಲ. ಆ ಟ್ರೋಫಿಗೆ ಗೌರವ ಕೊಡುತ್ತಿಲ್ಲ ಎಂದು ನೆಟ್ಟಿಗರು ಆಕ್ರೋಶಗೊಂಡಿದ್ದಾರೆ. ಇದೀಗ ವಿಶ್ವಕಪ್ ಮೇಲೆ ಕಾಲಿಟ್ಟು ಉದ್ದಟತನ ತೋರಿಸಿದ್ದರ ಬಗ್ಗೆ ಕೂಡ ಚೇತನ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿ ಮತ್ತೆ ಸುದ್ದಿಯಾಗಿದ್ದಾರೆ. ನಟ, ಸಾಮಾಜಿಕ ಕಾರ್ಯಕರ್ತ ಚೇತನ್‌ ಅಹಿಂಸಾ ಪ್ರಪಂಚದ ಆಗುಹೋಗುಗಳ ಬಗ್ಗೆ ತಮ್ಮದೇ ಶೈಲಿಯಲ್ಲಿ ಪ್ರತಿಕ್ರಿಯಿಸುತ್ತಿದ್ದು, ತಮ್ಮ ಹೇಳಿಕೆಗಳು, ಸೋಶಿಯಲ್ ಮೀಡಿಯಾ ಪೋಸ್ಟ್‌ಗಳಿಂದ ಕೆಲವೊಮ್ಮೆ ಸಂಕಷ್ಟ ಕೂಡ ಎದುರಿಸಿದ್ದಾರೆ.

ಇದನ್ನೂ ಓದಿ: IND vs AUS: ಟ್ರೋಫಿ ಮೇಲೆ ಕಾಲಿಟ್ಟು ಕುಳಿತ ಆಸಿಸ್‌ ಆಟಗಾರ..‌ ಇದೇನಾ ಸಂಸ್ಕೃತಿ ಎಂದು ನೆಟ್ಟಿಗರ ತರಾಟೆ!?

ಇತ್ತೀಚೆಗೆ ನಡೆದ ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಭಾರತ ತಂಡ ಟ್ರೋಫಿ ಗೆಲ್ಲುವಲ್ಲಿ ವಿಫಲವಾಗಿದ್ದ ಬಗ್ಗೆಯೂ ಈ ನಟ ಮಾಡಿದ್ದ ಪೋಸ್ಟ್‌ ವೊಂದರಲ್ಲಿ"ನಾನು ಮತ್ತೆ ಹೇಳುತಿದ್ದೇನೆ, ಭಾರತಕ್ಕೆ ಕ್ರಿಕೆಟ್‌ನಲ್ಲಿ ಮೀಸಲಾತಿ ಅಗತ್ಯವಿದೆ. ಭಾರತಕ್ಕೆ ಕ್ರಿಕೆಟ್‌ನಲ್ಲಿ ಮೀಸಲಾತಿ ಇದ್ದಿದ್ದರೆ ಭಾರತ ಸುಲಭವಾಗಿ ಈ ವಿಶ್ವ ಕಪ್ಪನ್ನು ಗೆಲ್ಲುತ್ತಿತ್ತು" ಎಂದು ಬರೆದಿದ್ದರು. ಈ ಪೋಸ್ಟ್‌ ವೈರಲ್‌ ಆಗಿ ಇದರ ಬಗ್ಗೆ ಪರ, ವಿರೋಧ ಚರ್ಚೆಗಳು ನಡೀತಿದೆ. 

ಇದೀಗ ನಟ ಚೇತನ್‌  "ವಿಶ್ವಕಪ್ ಟ್ರೋಫಿಯ ಮೇಲೆ ಕಾಲಿಟ್ಟಿರುವ ಚಿತ್ರದೊಂದಿಗೆ ಆಸ್ಟ್ರೇಲಿಯಾದ ಕ್ರಿಕೆಟಿಗನೊಬ್ಬ ಸುದ್ದಿಯಲ್ಲಿದ್ದಾರೆ. ಬಲಗೈ ಮತ್ತು ಎಡಗೈ ಅಥವಾ ತಲೆ ಮತ್ತು ಕಾಲುಗಳಂತಹ ದೇಹದ ಭಾಗಗಳು 'ಶುದ್ಧ ಅಥವಾ ಅಶುದ್ಧವಾಗಿವೆ' ಎಂಬ ಬ್ರಾಹ್ಮಣ್ಯದ ಶ್ರೇಣಿಕೃತ ವ್ಯವಸ್ಥೆಯ ಕಲ್ಪನೆಯು ಭಾರತೀಯ ಬಹುಸಂಖ್ಯಾತ ಸಂಸ್ಕೃತಿಯಾಗಿದೆ. ಪಶ್ಚಿಮದಲ್ಲಿ, ಜನರು ಮನೆಯೊಳಗೆ ಮತ್ತು ಮಲಗುವ ಕೋಣೆಯಲ್ಲಿಯೂ ಶೂಗಳನ್ನು ಧರಿಸುತ್ತಾರೆ. ಆಸ್ಟ್ರೇಲಿಯಾದ ಆಟಗಾರನಿಗೆ, ಟ್ರೋಫಿಯ ಮೇಲೆ ಕಾಲುಗಳನ್ನು ಇಡುವುದು ಅಗೌರವವಾಗಿರಲಿಲ್ಲ; ಅದು ಕೇವಲ ಅವರ ವಿಶ್ರಾಂತಿ ಆಗಿತ್ತು" ಎಂದು ಚೇತನ್ ಪೋಸ್ಟ್ ಮಾಡಿದ್ದಾರೆ. 

ಇದನ್ನೂ ಓದಿ: "ಭಾರತಕ್ಕೆ ಕ್ರಿಕೆಟ್‌ನಲ್ಲಿ ಮೀಸಲಾತಿ ಇದ್ದಿದ್ದರೆ, ಭಾರತ ಈ 2023ರ ವಿಶ್ವಕಪ್ಪನ್ನು ಸುಲಭವಾಗಿ ಗೆಲ್ಲುತ್ತಿತ್ತು": ಚೇತನ್‌ ಅಹಿಂಸಾ!

ನಟ ಚೇತನ್‌ ಅಹಿಂಸಾ ಪೋಸ್ಟ್‌ ಬಗ್ಗೆ ಪರ ವಿರೋಧ ಚರ್ಚೆ ನಡೆಯುತ್ತಿದ್ದು, "ಭಾರತ ಭಾವನಾತ್ಮಕ ಪ್ರಪಂಚ ನಿಮ್ಮ ಪಾಶ್ಚಿಮಾತ್ಯ ಪರಂಪರೆಯ ಅನರ್ಥಗಳನ್ನು ಇಲ್ಲಿ ಹೇರಬೇಡಿ ಚೇತನ್. ಪಾಶ್ವಾತ್ಯರು ತಮ್ಮ ಜೀವಿತಾವಧಿಯಲ್ಲಿ ನಾಲ್ಕಾರು ಸಂಗಾತಿಗಳೊಂದಿಗೆ ಬದುಕುತ್ತಾರೆ ಅಂತಹವುಗಳನ್ನೆಲ್ಲಾ ನಿಮ್ಮಂತಹವರು ಸ್ವೇಚ್ಛಾಚಾರ ಎಂದು ಬಣ್ಣಿಸುತ್ತೀರಿ" ಎಂದು ನೆಟ್ಟಿಗರೊಬ್ಬರು ಕಾಮೆಂಟ್ ಮಾಡಿದ್ದಾರೆ.
 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News