777 Charlie: ಫ್ರಾಕ್ ತೊಟ್ಟು ಮಿರ ಮಿರ ಮಿಂಚುತ್ತಾ ಬಂದಳು ನಮ್ಮ ‘ಚಾರ್ಲಿ’..!

‘777 Charlie’ ಸಿನಿಮಾದ ಸಕ್ಸಸ್ ಮೀಟ್‍ಗೆ ಫ್ರಾಕ್‌ ತೊಟ್ಟು ಬಂದಿದ್ದ ‘ಚಾರ್ಲಿ’ ಪ್ರತಿಯೊಬ್ಬರ ಗಮನ ಸೆಳೆಯಿತು.  

Written by - Malathesha M | Edited by - Puttaraj K Alur | Last Updated : Jul 4, 2022, 08:17 PM IST
  • 25 ದಿನ ಪೂರೈಸಿದ ಹಿನ್ನೆಲೆ ‘777 Charlie’ ಸಿನಿಮಾದ ಸಕ್ಸಸ್ ಮೀಟ್
  • ಫ್ರಾಕ್ ತೊಟ್ಟು ಕಾರ್ಯಕ್ರಮದಲ್ಲಿ ಮಿರ ಮಿರ ಮಿಂಚಿದ ‘ಚಾರ್ಲಿ’
  • 450 ಥಿಯೇಟರ್‌ಗಳಲ್ಲಿ ಯಶಸ್ವಿಯಾಗಿ 25 ದಿನ ಪೂರೈಸಿ ‘777 Charlie’
777 Charlie: ಫ್ರಾಕ್ ತೊಟ್ಟು ಮಿರ ಮಿರ ಮಿಂಚುತ್ತಾ ಬಂದಳು ನಮ್ಮ ‘ಚಾರ್ಲಿ’..! title=
ಫ್ರಾಕ್ ತೊಟ್ಟು ಮಿಂಚಿದ ‘ಚಾರ್ಲಿ’

ನವದೆಹಲಿ: ಕನ್ನಡ ಸಿನಿಮಾಗಳು ಜಗತ್ತಿನಾದ್ಯಂತ ಸದ್ದು ಮಾಡುತ್ತಿದ್ದು, ಭಾರತದ ಮೂಲೆ ಮೂಲೆಯಲ್ಲೂ ಅಬ್ಬರಿಸುತ್ತಿವೆ. ಅದರಲ್ಲೂ ಕೊರೊನಾ ಕಂಟಕದ ಬಳಿಕ ಕನ್ನಡ ಸಿನಿಮಾ ಜಗತ್ತಿನಲ್ಲಿ ಹೊಸ ಮನ್ವಂತರವೇ ಶುರುವಾಗಿದೆ. 'ಜೇಮ್ಸ್', 'ಕೆಜಿಎಫ್‌-2' ಬಳಿಕ ಇದೀಗ '777 ಚಾರ್ಲಿ' ಹೊಸ ದಾಖಲೆ ಬರೆದಿದೆ. 450 ಥಿಯೇಟರ್‌ಗಳಲ್ಲಿ ಯಶಸ್ವಿಯಾಗಿ 25 ದಿನ ಪೂರೈಸಿ 150 ಕೋಟಿ ರೂ. ಕ್ಲಬ್‌ ಸೇರಿದೆ ಸ್ಯಾಂಡಲ್‌ವುಡ್‌ ಸಿನಿಮಾ '777 ಚಾರ್ಲಿ'.

ಅಷ್ಟಕ್ಕೂ ಜಗತ್ತಿನಾದ್ಯಂತ 450 ಥಿಯೇಟರ್‌ಗಳಲ್ಲಿ ಯಶಸ್ವಿಯಾಗಿ 25 ದಿನ ಪೂರೈಸುವುದು ಸಾಮಾನ್ಯ ಮಾತಲ್ಲ. ಅದರಲ್ಲೂ ಕನ್ನಡ ಸಿನಿಮಾ ಇಂತಹ ಸಾಧನೆ ಮಾಡಿರುವುದು ಹೆಮ್ಮೆಯ ಸಂಗತಿ. ಇದೇ ಕಾರಣಕ್ಕೆ '777 ಚಾರ್ಲಿ' ತಂಡ ವಿಶೇಷ ಕಾರ್ಯಕ್ರಮ ಆಯೋಜಿಸಿತ್ತು. ನಟ ರಕ್ಷಿತ್‌ ಶೆಟ್ಟಿ ಮತ್ತು ತಂಡ ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಆದರೆ, ಎಲ್ಲರ ಗಮನ ಮಾತ್ರ '777 ಚಾರ್ಲಿ' ಮೇಲೆ ಇತ್ತು. ಹೌದು, 'ಚಾರ್ಲಿ' ಹೊಸ ಫ್ರಾಕ್‌ ತೊಟ್ಟು ಮಿರ ಮಿರ ಮಿಂಚಿ ಎಲ್ಲರ ಗಮನ ಸೆಳೆದಳು.

ಇದನ್ನೂ ಓದಿ: ಖ್ಯಾತ ಹಾಸ್ಯನಟನಿಗೆ ಸಂಕಷ್ಟ ತಂದ ಒಪ್ಪಂದ: 7 ವರ್ಷಗಳ ಬಳಿಕ ವಿದೇಶದಲ್ಲಿ ಕೇಸ್‌ ದಾಖಲು

'ಚಾರ್ಲಿ'ಗೆ ಫ್ರಾಕ್..!‌

ಅಷ್ಟಕ್ಕೂ 'ಚಾರ್ಲಿ' ವಿಶಿಷ್ಟವಾಗಿ ರೆಡಿ ಮಾಡಿಸಿ ಕರೆದುಕೊಂಡು ಬಂದಿದ್ದ ಸಿನಿಮಾ ತಂಡ ಎಲ್ಲರಿಗೂ ಸರ್ಪ್ರೈಸ್‌ ಕೊಟ್ಟಿತ್ತು. ಅದರಲ್ಲೂ 'ಚಾರ್ಲಿ'ಯ ಫ್ರಾಕ್‌ಗೆ ಎಲ್ಲರೂ ಫಿದಾ ಆಗಿದ್ದರು. ಮತ್ತೊಂದು ಕಡೆ 'ಚಾರ್ಲಿ'ಗೆ ಕೋಟಿ ಕೋಟಿ ಅಭಿಮಾನಿಗಳು ಹುಟ್ಟಿಕೊಂಡಿದ್ದು, ರಕ್ಷಿತ್‌ ಶೆಟ್ಟಿ ಸಿನಿಮಾ ಹೊಸ ಇತಿಹಾಸ ಸೃಷ್ಟಿಸಿದೆ. ಉತ್ತರ ಭಾರತದಲ್ಲಿ '777 ಚಾರ್ಲಿ' ಸಿನಿಮಾ ದೊಡ್ಡ ಹವಾ ಎಬ್ಬಿಸಿದ್ದು, ಕೋಟಿ ಕೋಟಿ ಅಭಿಮಾನಿಗಳಿಗೆ ಸಿನಿಮಾ ಇಷ್ಟವಾಗಿದೆ.

ಕನ್ನಡದಲ್ಲಿ ಡಿಫರೆಂಟ್‌, ಡಿಫರೆಂಟ್‌ ಸಿನಿಮಾಗಳನ್ನು ತೆರೆಗೆ ತರುವಲ್ಲಿ ರಕ್ಷಿತ್‌ ಶೆಟ್ಟಿ ಹೆಸರುವಾಸಿ. ಹೀಗೆ ಡಿಫರೆಂಟ್‌ ಸ್ಟೋರಿಗಳ ಮೂಲಕ ಕನ್ನಡ ಸಿನಿಮಾ ಜಗತ್ತಿನಲ್ಲಿ ಸಂಚಲನ ಸೃಷ್ಟಿಸುತ್ತಿರುವ ರಕ್ಷಿತ್‌ ಶೆಟ್ಟಿ, ಈ ಬಾರಿ ಪಪ್ಪಿಯ ಕಥೆ ಹೇಳಿದ್ದರು. ಪ್ರೀತಿ, ಕಂಬನಿ, ಭಾವನೆಗಳ ಬೆಸುಗೆಯೇ '777 ಚಾರ್ಲಿ' ಆಗಿತ್ತು. ಈ ಮೂಲಕ '777 ಚಾರ್ಲಿ' ದಾಖಲೆಗಳ ಮೇಲೆ ದಾಖಲೆ ಬರೆದಿತ್ತು. ಇದೀಗ ಬಾಕ್ಸ್‌ ಆಫಿಸ್‌ ವಿಚಾರದಲ್ಲೂ '777 ಚಾರ್ಲಿ' ದೊಡ್ಡ ದಾಖಲೆ ನಿರ್ಮಿಸಿದೆ. ಹೀಗೆ ಕನ್ನಡ ಸಿನಿಮಾ ಜಗತ್ತು ಮತ್ತಷ್ಟು ಎತ್ತರಕ್ಕೆ ಬೆಳೆಯುತ್ತಿದ್ದು, ಜಾಗತಿಕ ಮಾರುಕಟ್ಟೆಯಲ್ಲಿ ಕನ್ನಡ ಸಿನಿಮಾಗಳಿಗೆ ಬೇಡಿಕೆ ಹೆಚ್ಚುತ್ತಿದೆ.

ಇದನ್ನೂ ಓದಿ: Liger : ಬೆತ್ತಲಾಗಿ ಟ್ರೋಲ್ಗೆ ಒಳಗಾದ ನಟ ವಿಜಯ್ ದೇವರಕೊಂಡ...!

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News